ನಿನ್ನ ಕಣ್ಣುಗಳಾಳದಲ್ಲಿ
ಇಣುಕಿ, ಇಣುಕಿ ನೋಡಿದೆ,
ನನ್ನನೇ ನಾ ಕಂಡೆ.....
ಇಣುಕಿ, ಇಣುಕಿ ನೋಡಿದೆ,
ನನ್ನನೇ ನಾ ಕಂಡೆ.....
ನಿನ್ನ ಕಣ್ಣ ಜಲದಲ್ಲಿ ಈಜಾಡಿದೆ
ನಿನ್ನ ಕುಡಿನೋಟದಲ್ಲಿ
ನನ್ನಾಟವ ಆಟವಾಡಿದೆ.....
ನಿನ್ನ ಕುಡಿನೋಟದಲ್ಲಿ
ನನ್ನಾಟವ ಆಟವಾಡಿದೆ.....
ನಿನ್ನ ಮುಂಗುರುಳ
ನೆರಳಲ್ಲಿ ನನ್ನ ವಿಶ್ರಾಂತಿ
ನಿನ್ನ ನಳಿಲ್ದೋಳುಗಳೆ ನನಗೆ ಜೋಕಾಲಿ.
ನೆರಳಲ್ಲಿ ನನ್ನ ವಿಶ್ರಾಂತಿ
ನಿನ್ನ ನಳಿಲ್ದೋಳುಗಳೆ ನನಗೆ ಜೋಕಾಲಿ.
ನೀ ಮುಡಿದ
ಮಲ್ಲಿಗೆ ಮಾಲೆಯ ಕಂಪು
ಕರೆದಿದೆ ನನ್ನ ಕೈ ಬೀಸಿ,
ಮಲ್ಲಿಗೆ ಮಾಲೆಯ ಕಂಪು
ಕರೆದಿದೆ ನನ್ನ ಕೈ ಬೀಸಿ,
ಬದುಕು ಸುಂದರವೆನಿಸಿದೆ
ನಿನ್ನ ಒಲವಿಂದು ನನಗೆ ಸಾಕಾರ,
ನಿನ್ನ ಕೆಂಪೇರಿದ ಕೆನ್ನೆ ನನಗೆ ಬಂಗಾರ.
ನಿನ್ನ ಒಲವಿಂದು ನನಗೆ ಸಾಕಾರ,
ನಿನ್ನ ಕೆಂಪೇರಿದ ಕೆನ್ನೆ ನನಗೆ ಬಂಗಾರ.
ನಿನ್ನ ಬಳಸಿ ಬಂದ ತಂಗಾಳಿ
ನನ್ನನೂ ಬಳಸಿ ಬಂದು
ಪಿಸು ನುಡಿದಿದೆ ಕಿವಿಯಲಿ ನಿನ್ನೊಸಗೆಯ.
ನನ್ನನೂ ಬಳಸಿ ಬಂದು
ಪಿಸು ನುಡಿದಿದೆ ಕಿವಿಯಲಿ ನಿನ್ನೊಸಗೆಯ.
ಎಂದೂ ನಾ ನಿನ್ನವಳು
ಎಂದೂ ನಾ ನಿನ್ನವಳು
ಎಂದೂ ನಾ ನಿನ್ನವಳು,ನೀನೆಂದೂ ನನ್ನವನು ಎಂದು..... :-)
ಎಂದೂ ನಾ ನಿನ್ನವಳು
ಎಂದೂ ನಾ ನಿನ್ನವಳು,ನೀನೆಂದೂ ನನ್ನವನು ಎಂದು..... :-)
No comments:
Post a Comment