Saturday, 3 June 2017

ಸ್ವತಃ ಲೀಡರ್ಸ್ ಆಗುವ ಯೋಗ್ಯತೆ ಇಲ್ಲದವರಿಗೆ
ಲೀಡರ್ಸ್ ಆದವರನ್ನು
ಟೀಕಿಸುವ ಅಧಿಕಾರವಿದೆಯೇ?
ಮನುಷ್ಯನಿಗೆ ಪ್ರೀತಿಸಲೂ
ಯಾರೂ ಸಿಗೋಲ್ಲ, ಸಿಟ್ಟು ಮಾಡಲೂ ಯಾರೂ ಸಿಗೋಲ್ಲ, ಅಂದರೆ ಅವನು ಪರಿತ್ಯಕ್ತನೇ ಸರಿ.
ದೇವರ ಮೂರ್ತಿಯಿರುವ
ಮತ್ತು ದೇವರ ಪೂಜೆ ನಡೆಯುವ
ಸ್ಥಳವನ್ನು "ದೇವಾಲಯ" ಅನ್ನುತ್ತೇವೆ.
ಅದರೆ ಮನುಷ್ಯರು ಶೌಚ ಮಾಡುವ
ಸ್ಥಳವನ್ನು (toilet) "ಶೌಚಾಲಯ" ಅನ್ನುತ್ತೇವೆ.
ಈ ಪದ ಪ್ರಯೋಗ ವಿಚಿತ್ರ ಹಾಗೂ ಸರಿಯಲ್ಲ
ಅನ್ನಿಸುತ್ತದೆ, ಅಲ್ಲವೇ?
ದುಷ್ಟರನ್ನು ದೂರವಿಡ
ಬೇಕೆಂಬುದು ಸಾಮಾನ್ಯ
ಸಲಹೆ. ಆದರೆ, ದುಷ್ಟರಿಂದ
ಪ್ರಭಾವಿತರಾಗದೆ, ಅವರಿಂದಲೂ
ತಮಗೆ ಬೇಕಾದ ಕೆಲಸವಿದ್ದರೆ
ಅದನ್ನು ಮಾಡಿಸಿ ಕೊಳ್ಳಲು
ಪ್ರಯತ್ನಿಸ ಬೇಕೆಂಬುದು
ಜಾಣರ ಸಲಹೆ... :-)
*** ದಾರ್ಶನಿಕ.
ತಮ್ಮ ಮಾತಿನಿಂದ ನಮಗೆ
ನೆಮ್ಮದಿ ಕೊಡದವರು, ಇದ್ದ
ನೆಮ್ಮದಿ ಹಾಳು ಮಾಡುವವರು,
ನಮ್ಮೊಡನೆ ಮೌನವಾಗಿದ್ದರೆ
ಅದೇ ನಮ್ಮ ಸೌಭಾಗ್ಯ... :-)
***** ದಾರ್ಶನಿಕ
ಭಾರತದಲ್ಲಿ, ಮಾತ್ರ , ಇಂಥ ವಿಪರ್ಯಾಸಗಳು ಸಾಧ್ಯ
*******************
ಇದೆಲ್ಲಾ ಕೇವಲ ಭಾರತದಲ್ಲಿ ಮಾತ್ರ 🙂
1) ಮಗಳ ವಿದ್ಯಾಭ್ಯಾಸದ ಖರ್ಚಿಗಿಂತಾ ಮದುವೆ ಖರ್ಚು ಹೆಚ್ಚು
2) ಪೋಲೀಸರನ್ನು ನೋಡಿದ್ರು ಭದ್ರತೆ, ರಕ್ಷಣೆಗಿಂತ ಭಯ ಜಾಸ್ತಿ
3) ಎಲ್ರಿಗೂ ನಾಚಿಕೆ ಜಾಸ್ತಿ, ಆದರೆ ಜನಸಂಖ್ಯೆ ಮಾತ್ರ 125 ಕೋಟಿ
4) ಫೋನ್ ಹಾಳಾಗದಿರಲಿ ಅಂತಾ ಸ್ಕ್ರೀನ್ ಗಾರ್ಡ್ ಹಾಕ್ತಾರೆ, ಆದ್ರೆ ತಲೆ ಒಡೆಯದೇ ಇರಲಿ ಅಂತಾ ಹೆಲ್ಮೆಟ್ ಹಾಕಲ್ಲ.
5). ಆಫೀಸ್ ಗೆ ಹೋಗೋಕೆ ಎಲ್ರಿಗೂ ಅವಸರ. ಆದ್ರೆ ಟೈಮ್ ಕರೆಕ್ಟಾಗಿ ಯಾರೂ ಬರಲ್ಲ.
6). ಪರಿಚಯವೇ ಇರದವನ ಹತ್ರ ಹುಡುಗಿ ಮಾತಾಡಬಾರ್ದು. ಆದರೆ ಮದ್ವೆ ಮಾಡಿಕೊಳ್ಳಬಹುದು
7). ಭಗವದ್ಗೀತೆ ಮೇಲಾ, ಖುರಾನ್ ಮೇಲಾ ಅಂತಾ ಕಚ್ಚಾಡೋರು ಯಾವದನ್ನೂ ಓದಿರೊಲ್ಲ.
8) ಕಾಲಿಗೆ ಹಾಕೋ ಚಪ್ಪಲೀನಾ ಎ.ಸಿ. ರೂಮ್ ಇರೋ ಷಾಪಲ್ಲಿ ಹೊಟ್ಟೆಗೆ ತಿನ್ನೋ ತರಕಾರಿ ನಾ ರೋಡ್ ಸೈಡಲ್ಲಿ ತಗೋತಾರೆ
9) ಮ್ಯಾಜಿಕ ಮಾಡೋವನ ನಂಬ್ತಾರೆ. ಲಾಜಿಕ್ ಹೇಳೋ.ಸೈಂಟಿಸ್ಟ್ ನ ಯಾರೂ ನಂಬೊಲ್ಲ.
(WhatsApp ಸಂಗ್ರಹ)