Thursday, 31 December 2015

ಒಂದು ಸಲಹೆ...
+++++++++++

ನಾವು ಅಧಿಕಾರಿಗಳ/ಮಾಲಕರ ಸ್ಥಾನದಲ್ಲಿ
ಕುಳಿತವರು, ನಮ್ಮ ಕೈಕೆಳಗಿನ
ನೌಕರರನ್ನು ತೀವ್ರವಾಗಿ ಗದರಿಸಿ
ಶಿಕ್ಷಿಸುವಾಗ, ಅವರು ನಮ್ಮಷ್ಟು
ಬುದ್ಧಿವಂತರಲ್ಲ ಎಂಬುದನ್ನು
ನೆನಪಿಟ್ಟು ಕೊಂಡಿರ ಬೇಕು.
ಅಲ್ಲದೆ, ಅವರಲ್ಲಿ ಅಪ್ರಾಮಾಣಿಕತೆ
ಅಥವಾ ಕಪಟತನ ಇದೆಯೆ ಇಲ್ಲವೇ,
ಅವರು ಮಾಡಿದ ತಪ್ಪು ಅಕಸ್ಮಾತ್ತಾಗಿ
ಅದು ತಪ್ಪು ಎಂದು ಅವರಿಗೆ ತಿಳಿಯದೇ
ಆದುದೇ, ಎಂಬುದನ್ನೂ ಅರಿತಿರ ಬೇಕು.
ಹೀಗಿಲ್ಲದೆ, ಭಾವಾವೇಶಕ್ಕೆ ಒಳಗಾಗಿ
ಕ್ರಮ ತೆಗೆದು ಕೊಂಡರೆ, ಪ್ರಾಮಾಣಿಕ
ನೌಕರರನ್ನು ಕಳೆದು ಕೊಳ್ಳುವ
ಪ್ರಸಂಗ ಬರ ಬಹುದು,
ಅಥವಾ, ನಾವು ಶಿಕ್ಷಿಸುವ ವರೆಗೆ ಪ್ರಾಮಾಣಿಕ
ನಾಗಿದ್ದ ನೌಕರ, ನಾವು ವಿನಾ ಕಾರಣ ಶಿಕ್ಷಿಸಿದಾಗ ಸುಮ್ಮನಿದ್ದು,
ನಂತರ ಅಪ್ರಾಮಾಣಿಕನಾಗಿ, ನಮ್ಮಲ್ಲೇ ಮುಂದುವರಿದು
ನಮ್ಮನ್ನೇ ತೊಂದರೆಯಲ್ಲಿ ಸಿಲುಕಿಸಿ
ಸೇಡು ತೀರಿಸಿ ಕೊಳ್ಳ ಬಹುದು.
*****ದಾರ್ಶನಿಕ.
Have you witnessed few things suddenly getting changed in your life only in a span of 1 or 2 decades (Heights of Western & other regional influence)
Curds became Yogurt!
Biscuits became cookies!
Sweet became Dessert!
Washerman became Housekeeper!
Rupees became bucks!
Friends became Pals/buddies!
Housewife became homemaker!
Waiting area became Lobby!
Lift became elevator!
Toilet became rest room!
Husband became Hubby!
Wife became Honey!
Doctor became Doc!
Teacher became Faculty!
Chithranna became Lemon rice!
Thili saru became Rasam!
Dosa became pancake!
Coffee became cappuccino!
Cake became Pastry!
Scent became Perfume!
Taxi became cab!
Building became mall!
Theatre became multiplex!!
Song became number!
Dancer became item girl!!
Man became dude!
Photo became pic!
Biodata became Resume!
Oh God became Omg
ಮೈ ಮುಟ್ಟುವ ಮೊದಲು
ಮನ ಮುಟ್ಟಿರ ಬೇಕು.
*****ದಾರ್ಶನಿಕ
ಬೇಸರಿಸದಿರು ನೀ ಎಂದಿಗೂ ನನ್ನೊಲವೇ
ಆಲಂಗಿಸಲಿ ನಿನ್ನನು ಸದಾ ಸಂತೋಷವೇ
☆ಪೂರ್ಣಿಮ ಪ್ರಶಾಂತ್☆
ಪರರನ್ನು ಹಿಂಸಿಸಲು
ಮನುಷ್ಯನ ನಾಲಗೆಗಿಂತ
ಹರಿತವಾದ ಅಸ್ತ್ರ
ಇನ್ನೊಂದಿಲ್ಲ.
*****ದಾರ್ಶನಿಕ.
Interview........😄 😄 😄
Intrviewr:Tel me opposite words cool
Srdr:hot
Int:girl
Srdr:Boy
Int: india
Srdr: Pakistan
Int: good keep it up
Srdr: bad put it down
Int: stop it
Srdr: start that
Int: idiot getout
Srd: clever come in
Int: oh my god
Srd: Oh ur devil
int: u r rejected
srd: im selected
Int: Yappa sako
Srdr:Yavva beko..
( SMSನಲ್ಲಿ ಬಂದ ಒಂದು ಸರ್ದಾರ್ಜೀ ಜೋಕ್) Goodnight.
ಕೋಪಕ್ಕೆ ಕಡಿವಾಣ ಹಾಕುವುದು ಹೇಗೆ?
ಸಿಂಪಲ್ ಟಿಪ್ಸ್.......
**************************************
ಬೆಳಿಗ್ಗೆ ತಿಂಡಿ ಲೇಟಾಯ್ತು, ಟ್ರಾಫಿಕ್ ನಲ್ಲಿ ಕಿರಿಕಿರಿ, ಮಕ್ಕಳು
ಹೇಳಿದಂತೆ ಕೇಳುತ್ತಿಲ್ಲ.....ಹೀಗೆ ಕೋಪಕ್ಕೆ ಹಲವು
ಕಾರಣಗಳಿರುತ್ತವೆ. ಸಿಟ್ಟು ಎನ್ನುವುದು ಮಾನವ ಸಹಜ
ಗುಣ. ಆದರೆ, ಅದನ್ನು ನಿಯಂತ್ರಿಸಿಕೊಳ್ಳದಿದ್ದರೆ, ನಿಮ್ಮ
ಆರೋಗ್ಯ, ಸಂಬಂಧ ಎರಡೂ ಹಾಳಾಗುತ್ತವೆ. ಕೋಪಕ್ಕೆ
ಕಡಿವಾಣ ಹಾಕುವ ಕೆಲವು ಟಿಪ್ಸ್ ಇಲ್ಲಿವೆ....
1) ಮಾತನಾಡುವ ಮುನ್ನ ಯೋಚಿಸಿ.
===================
ಸಿಟ್ಟಿನ ಸಂದರ್ಭದಲ್ಲಿ ಹೊಳೆದದ್ದನ್ನೆಲ್ಲಾ ಮಾತನಾಡಲು
ಹೋದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.
ಹಾಗಾಗಿ, ಮಾತಾಡುವ ಮೊದಲು ಒಂದು ಕ್ಷಣ
ಯೋಚಿಸಿ. ಆಗ ಅನಪೇಕ್ಷಿತ ಪದಗಳು ನಿಯಂತ್ರಣಕ್ಕೆ
ಬರುತ್ತವೆ.
2) ದೈಹಿಕ ಚಟುವಟಿಕೆ
=============
ಕೋಪ ತಡೆದುಕೊಳ್ಳಲಾಗುತ್ತಿಲ್ಲ ಎಂಬ ಭಾವನೆ ಬಂದಾಗ
ಇತರೆ ಚಟುವಟಿಕೆಗಳತ್ತ ಮುಖಮಾಡಿ.
ದೀರ್ಘ ಉಸಿರಾಟ, ಕೈಕಾಲು ಮುಖ
ತೊಳೆದುಕೊಳ್ಳುವುದು, ಸಣ್ಣದಾಗಿ ವಾಕಿಂಗ್
ಹೋಗುವುದು, ಒಂದರಿಂದ ಹತ್ತರವರೆಗೆ ಎಣಿಸುವುದು
ಇತ್ಯಾದಿಗಳನ್ನು ಮಾಡಿ, ಮನಸ್ಸು ಶಾಂತವಾಗುತ್ತದೆ.
3) ಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳಿ
===============
ಸಕಾರಾತ್ಮಕ ಆಲೋಚನೆಗಳು ನಿಮ್ಮಲ್ಲಿ ಹೆಚ್ಚು ಸಹನೆ
ಬೆಳೆಸುತ್ತವೆ. ಹಾಗಾಗಿ, ಎಲ್ಲ ಪರಿಸ್ಥಿತಿಯನ್ನೂ ಪಾಸಿಟಿವ್
ಆಗಿ ತೆಗೆದುಕೊಳ್ಳಿ. ಕೋಪ ಬಂದರೂ ಹಾಸ್ಯ ಮಾಡುತ್ತಾ
ಅದರ ಬಿಸಿಯನ್ನು ತಗ್ಗಿಸಿ.
4) ಪರಿಹಾರದತ್ತ ಗಮನಕೊಡಿ.
=================
ಕೋಪಕ್ಕೆ ಕಾರಣವೇನು ಎಂಬುದನ್ನಷ್ಟೇ ಯೋಚಿಸುವ
ಬದಲು, ಸಮಸ್ಯೆಯನ್ನು ಪರಿಹರಿಸುವ ಬಗೆಯನ್ನು
ಯೋಚಿಸಿ. ಕೋಪದಿಂದ ಯಾವುದೂ
ಸರಿ ಹೋಗುವುದಿಲ್ಲ ಎಂಬುದನ್ನು ನೆನಪಿಡಿ.
5) ಕ್ಷಮಿಸಿ
======
ಸಿಟ್ಟಿನ ಕೈಗೆ ಮನಸ್ಸು ಕೊಟ್ಟು ಸಂಬಂಧವನ್ನು ಹಾಳು
ಮಾಡಬೇಡಿ. ಕ್ಷಮೆ ಅತ್ಯಂತ ಪರಿಣಾಮಕಾರಿಯಾದುದು.
ತಪ್ಪು ಎಲ್ಲರಿಂದ ಆಗುತ್ತದೆ. ಹಾಗಾಗಿ, ಕ್ಷಮಿಸುವ
ಗುಣವನ್ನು ಬೆಳೆಸಿಕೊಳ್ಳಿ..
+++++++++++++++++++++++++++++++++
(ಇದು ಒಂದು ಮೊಬೈಲ್ ನ್ಯೂಸ್ ಅಪ್ಲಿಕೇಶನ್ ನಲ್ಲಿ
ಸಿಕ್ಕಿದ, ಯಾರೋ ಅನಾಮಿಕರು ಬರೆದ ಒಂದು
ಕಿರು ಲೇಖನ. ಕೋಪ ಶಮನಕ್ಕೆ ತುಂಬಾ ಸರಳ
ಹಾಗೂ ಪರಿಣಾಮಕಾರಿಯಾಗ ಬಹುದಾದ ವಿಧಾನಗಳು
ಅನಿಸಿತು. ಇವುಗಳನ್ನು ಆಚರಿಸಲು ಪ್ರಯತ್ನ ಪಟ್ಟರೆ,
ಕೋಪದಿಂದ ಪಾರಾಗಿ, ಬಂಧುತ್ವ ಹಾಗೂ ಸ್ನೇಹ
ಸಂಬಂಧಗಳನ್ನು ಉಳಿಸಿ ಬೆಳೆಸಿಕೊಳ್ಳ ಬಹುದು
ಅನ್ನಿಸಿತು. ಅದಕ್ಕೇ ಇಲ್ಲಿ ಪೋಷ್ಟ್ ಮಾಡಿದ್ದೇನೆ)
ಇಲ್ಲದ್ದನ್ನು ಇದೆ, ಹಾಗಿದೆ, ಹೀಗಿದೆ
ಬಹಳ ಬಹಳ ಚೆನ್ನಾಗಿದೆ,
ಎಂದೆಲ್ಲ ವರ್ಣಿಸುವವನೇ ಕವಿ? 😄 ?
ಅಯೋಮಯ.
*****************
ಕತ್ತಲಾದಲ್ಲಿ ಬೆಳಕು ಮಾಯ
ಬೆಳಕಾದಲ್ಲಿ ಕತ್ತಲು ಮಾಯ
ಜಗವೆಲ್ಲಾ ಬರೇ ಅಯೋಮಯ,
ಬದುಕು ಕತ್ತಲು ಬೆಳಕಿನ
ಬಯಲು ಚದುರಂಗ,
ಯೋಚಿಸಿ ನಡೆಗಳನ್ನು,
ಎಣಿಸಿ ನಡೆಸ ಬೇಕು ಕಾಯಿಗಳನ್ನು
ಅಡ್ಡಕ್ಕೋ ಉದ್ದಕ್ಕೋ
ದಾರಿ ಇರುವುದು ನಿಶ್ಷಿತ,
ಆದರೆ,ಉದ್ದ, ಅಡ್ಡಗಳು ಬೇಕು
ತಿರುವು, ಮುರುವುಗಳೂ ಬೇಕು
ಗುರಿಯ ಮುಟ್ಟಲು ಬೇಕೇ ಬೇಕು....
ಚದುರಂಗದಾಟದ ಗುಟ್ಟು
ಗೊತ್ತಾಗಲೇ ಬೇಕು....
💥ಪ್ರಶ್ನೆಪತ್ರಿಕೆಯೊಂದರ ಉತ್ತರ💥
*********************************
🎯ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರುಬರೆಯಿರಿ?
✏ಉತ್ರ:- ಮೂಸಂಬಿ, ಕಲ್ಲಂಗಡಿ, ಆಪಲ್
ಮತ್ತು ಒಂದು ಡಜನ್
ಬಾಳೆಹಣ್ಣು
=
🎯ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
✏ಉತ್ರ: - ಪ್ರಪಂಚದಲ್ಲಿ ಇರೋದು ಒಂದೇ ದೇಶ,
ಅದು ಭಾರತ...
ಮಿಕ್ಕಿದ್ದೆಲ್ಲಾ ವಿದೇಶ.
=
🎯ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
✏ಉತ್ರ:- ನನ್ನ ಫೇಲ್ ಮಾಡೋಕ್ಕೆ
=
🎯ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ
ಹೊಂದುವ
ದ್ರವ ಯಾವುದು?
✏ಉತ್ರ: - ಇಡ್ಲಿ, ದೋಸೆ
=
🎯ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
✏ಉತ್ರ: - ಗೆದ್ದವರಿಗೆ
=
🎯ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ
ಬರೆಯಿರಿ
✏ಉತ್ರ:- ಮಳೆ ಬಂದ ಕಾರಣ
ಪಂದ್ಯವನ್ನು ರದ್ದುಗೊಳಿಸಲಾಗಿದೆ
=
🎯ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
✏ಉತ್ರ:- ಈಗಲೂ ಬದುಕಿರುತ್ತಿದ್ದರು.
=
🎯ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ
ಏನಾಗುತ್ತದೆ?
✏ಉತ್ರ:- ಕಾಯುತ್ತದೆ.
=
🎯ಪ್ರಶ್ನೆ:- ಮೊಗಲರು ಎಲ್ಲಿಯವರೆಗೆ ರಾಜ್ಯಭಾರ
ಮಾಡಿದರು?
✏ಉತ್ರ:- ಸುಮಾರು 14ನೇ ಪುಟದಿಂದ
22ನೇ ಪುಟಗಳವರೆಗೆ
=
🎯ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
✏ಉತ್ರ:-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ
ಅಂತ!
=
🎯ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ,
ಕಿವಿ
ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
✏ಉತ್ರ:- ಹೇಗೆ ಬೇಕಾದರೂಕರೆಯಬಹುದು, ಏಕೆಂದರೆ
ಅವರಿಗೆ ಕೇಳಿಸಲ್ಲ.
=
🎯ಪ್ರಶ್ನೆಪತ್ರಿಕೆಯೊಂದರ ಕೊನೆಯ ಪ್ರಶ್ನೆ:-
ಛಾಲೆಂಜ್ ಅಂದರೆ ಏನು?
ಉತ್ತರ:- ಧಮ್ ಇದ್ರೆ ಪಾಸ್ ಮಾಡ
"ವಾಟ್ಸಪ್ ನಲ್ಲಿ ಬಂದದ್ದು..............."

++++++++++++++++++++
😡

ಹೀಗೊಂದು ಸತ್ಯ ಕಥೆ........
***********************

ಹಲವು ವರ್ಷಗಳ ಹಿಂದೆ, ನಾನಿದ್ದ ಊರಿನಲ್ಲಿ ಒಬ್ಬರು LIC Dev. Officer ಇದ್ದರು. (ಭಟ್ ಅಂತ ಹೆಸರು) ಅವರ ಹತ್ತಿರ ಒಂದು bullet motor cycle ಇತ್ತು. ಗಾಡಿಯಲ್ಲಿ ಹೆಂಡತಿಯನ್ನು ಹಿಂದೆ ಕೂಡಿಸಿಕೊಂಡು ಅಲ್ಲಿ ಇಲ್ಲಿ ತಿರಗುತ್ತಿದ್ದರು.
ಅವರ ಹಂಡತಿ ಮನೆ ಬಿಟ್ಟು ಮನೆಗೆ ಬರುವವರೆಗೆ ಒಂದೇ ಸಮನೆ ಮಾತನಾಡುತ್ತಲೇ ಇರುವುದು, ಇವರು ಊಂ..ಊಂ.. ಅನ್ನುತ್ತಿರುವುದು ವಾಡಿಕೆ.
ಒಂದು ದಿನ ಮಾರ್ಕೆಟ್ ನಿಂದ ಬರುವಾಗ ಇದ್ದಕ್ಕಿದ್ದಂತೆ ಹೆಂಡತಿಯ ಮಾತು ನಿಂತಿತು. ಸಧ್ಯ ಸುಮ್ಮನಾದಳಲ್ಲಾ, ಅಂದು ಕೊಂಡು ಭಟ್ಟರು ಸೀದಾ ಗಾಡಿ ಹೊಡೆದುಕೊಂಡು ಮನೆಗೆ ಬಂದರು, ಆದರೆ, ಹಿಂದೆ ನೋಡಿದರೆ ಹೆಂಡತಿ ಇಲ್ಲ....ಭಟ್ಟರು ಕಂಗಾಲಾಗಿ ಗಾಡಿ ಹಿಂದೆ ಓಡಿಸಿದರು.
ಅರ್ಧ km ದೂರವಿದ್ದ police station ಎದುರು ಇವರ ಗಾಡಿಯನ್ನು ಸ್ನೇಹಿತನೇ ಆಗಿದ್ದ PSI ನಿಲ್ಲಿಸಿದ. "ಏನು ಭಟ್ಟರೇ, ವೈನಿಯನ್ನು station ಎದುರು ಕೆಡವಿ ಹೋಗಿದ್ದೀರಲ್ಲ, ಸದ್ಯ, ಪೆಟ್ಟೇನೂ ಆಗಿಲ್ಲ" ಅಂದ.
ಅಷ್ಟರಲ್ಲಿ ದುಮುಗುಡುತ್ತಿದ್ದ ಹೆಂಡತಿ ಬಂದು ಗಾಡಿ ಹತ್ತಿ ಕೂತು, "ನಡೀರಿ" ಎಂದು ಗದರಿದಳು. ಮನೆಗೆ ಬಂದ ನಂತರ ಭಟ್ಟರ ಗತಿ ಏನಾಗಿರ ಬೇಕು ಎಂಬುದನ್ನು ನೀವೇ ಯೋಚಿಸಿ.... 
********************************

smile emoticon
ಅಭಿಮಾನ ಇರಲಿ,
ದುರಭಿಮಾನ ಬೇಡ.
*****ದಾರ್ಶನಿಕ
ರಾತ್ರಿ ಊಟವಾದ ನಂತರ ಮಾಡಲೇ ಬಾರದ ಹತ್ತು ಕೆಲಸಗಳು (ಒಂದು ಸ್ಟಡಿ ರೆಪೋರ್ಟ್ ಪ್ರಕಾರ)
***********************************************************************************************
ಇದನ್ನು ನೋಡಿದರೆ, ಈ ವರೆಗೆ ನಾವು ಮಾಡ ಬೇಕೆಂದು ತಿಳಿದು ಕೊಂಡಿದ್ದ ಕೆಲವು
ಕೆಲಸಗಳನ್ನು ಮಾಡ ಬಾರದು ಅಂತಿದೆ.... ಉ.ದಾ. :- ರಾತ್ರಿ ಊಟವಾದ ಮೇಲೆ
ಹಣ್ಣು ತಿನ್ನುವುದು....... ಬರಹ ಸ್ವಾರಸ್ಯಕರವಾಗಿದೆ. ಆರಾಮವಾಗಿ, ರಾತ್ರಿ ಊಟವಾದ ಮೇಲೇನೇ ಓದಿ........ smile emoticon
***********************************************************************************
1) ನಡಿಗೆಗೆ ಅಥವಾ ವಾಕಿ೦ಗ್‌ಗೆ ಹೊರಡುವುದು:- ಕುತೂಹಲಕಾರಿಯಾದ ಸ೦ಗತಿಯೇನೆ೦ದರೆ, ರಾತ್ರಿಯ ಭೋಜನಾನ೦ತರ ಒ೦ದು ಅಲ್ಪದೂರದ ಅಥವಾ ಸಣ್ಣಮಟ್ಟಿಗಿನ ನಡಿಗೆಯನ್ನು ಕೈಗೊಳ್ಳಬೇಕೆ೦ದು ನಮಗೆಲ್ಲಾ ಚಿಕ್ಕ ವಯಸ್ಸಿನಿ೦ದಲೇ ಕಲಿಸಿಕೊಡಲಾಗಿದೆ. ವಾಸ್ತವವಾಗಿ, ರಾತ್ರಿಯ ಊಟವಾದ ಕೂಡಲೇ ನಡಿಗೆಯನ್ನು ಕೈಗೊಳ್ಳುವುದರಿ೦ದ ರಕ್ತಪರಿಚಲನೆಯು ಕೈಗಳು ಹಾಗೂ ಕಾಲುಗಳೇ ಮೊದಲಾದ ನಡಿಗೆಗೆ ಸ೦ಬ೦ಧಿಸಿದ ಆವಯವಗಳಲ್ಲು೦ಟಾಗಿ ಜೀರ್ಣಕ್ರಿಯೆಯು ತಡವಾಗಿ ಆರ೦ಭಗೊಳ್ಳುವ೦ತಾಗುತ್ತದೆ. ಜೊತೆಗೆ, ಆಹಾರದಲ್ಲಿರಬಹುದಾದ ಸತ್ವಗಳನ್ನು ನಮ್ಮ ಶರೀರವು ಪೂರ್ಣಪ್ರಮಾಣದಲ್ಲಿ ಹೀರಿಕೊಳ್ಳಲೂ ಸಹ ಭೋಜನಾನ೦ತರದ ನಡಿಗೆಯು ಅನುವು ಮಾಡಿಕೊಡುವುದಿಲ್ಲ. ಭೋಜನಾನ೦ತರದ ನಡಿಗೆಯಿ೦ದಾಗಿ, ಕೆಲವರಿಗೆ ಹೊಟ್ಟೆ ಹಿ೦ಡಿದ೦ತಾಗಬಹುದು ಇಲ್ಲವೇ ತಲೆಸುತ್ತು ಬ೦ದ೦ತಾಗಬಹುದು.
2) ಸಿಕ್ಕಾಪಟ್ಟೆ ನೀರನ್ನು ಕುಡಿಯುವುದು:- ಆರೋಗ್ಯವ೦ತ ಶರೀರಕ್ಕಾಗಿ ನೀರನ್ನು ಕುಡಿಯುವುದು ಅಗತ್ಯವೇನೋ ಸರಿ. ಆದರೆ, ಊಟವಾದ ಕೂಡಲೇ ಸಿಕ್ಕಾಪಟ್ಟೆ ನೀರನ್ನು ಕುಡಿಯುವುದರಿ೦ದ ಜೀರ್ಣಕ್ರಿಯೆಗೆ ಅಡಚಣೆಯು೦ಟು ಮಾಡಿದ೦ತಾಗುತ್ತದೆ. ಮಾತ್ರವಲ್ಲ, ಜೀರ್ಣಕ್ರಿಯೆಗೆ ಆರೋಗ್ಯಕರ ಮಟ್ಟದಲ್ಲಿ ಅವಶ್ಯಕವಾಗಿರುವ ಪಿತ್ತರಸದ ಸ್ರವಿಕೆಯ ಮಾರ್ಗದಲ್ಲಿಯೂ ಕೂಡ ಅಧಿಕ ನೀರು ಅಡಚಣೆಯನ್ನು೦ಟು ಮಾಡಬಲ್ಲದು.
3) ಹಣ್ಣುಗಳ ಸೇವನೆ:- ರಾತ್ರಿಯ ಭೋಜನದ ತರುವಾಯ ಅನೇಕ ಭಾರತೀಯ ಮನೆಗಳಲ್ಲಿ ಹಣ್ಣುಗಳನ್ನು ಸೇವಿಸುವುದು ಒ೦ದು ಸ೦ಪ್ರದಾಯ. ಊಟವಾದ ಕೂಡಲೇ ಹಣ್ಣುಗಳನ್ನು ತೆಗೆದುಕೊಳ್ಳುವುದರಿ೦ದ ಹೊಟ್ಟೆಯುಬ್ಬರ ಉ೦ಟಾಗಬಹುದು. ಇದಕ್ಕಿ೦ತಲೂ ಮಿಗಿಲಾಗಿ, ಹೊಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಆಹಾರವು ತು೦ಬಿರುವಾಗ (ಭೋಜನಾನ೦ತರ), ಹಣ್ಣುಗಳನ್ನು ತಿ೦ದರೆ ಅವು ಜೀರ್ಣಗೊಳ್ಳಲು ತೆಗೆದುಕೊಳ್ಳುವ ಕಾಲಾವಧಿಯು ಸುದೀರ್ಘವಾಗುತ್ತದೆ. ಭೋಜನವಾದ ಕೂಡಲೇ ಹಣ್ಣುಗಳನ್ನು ತಿನ್ನುವುದರಿ೦ದ ಜೀರ್ಣಕ್ರಿಯೆಗೆ ಅಡ್ಡಿಪಡಿಸಿದ೦ತಾಗಿ, ಕ್ರಮೇಣ ಜೀರ್ಣಕ್ರಿಯೆಯು ಗುಣಮಟ್ಟದಲ್ಲಿ ಕ್ಷೀಣಿಸುತ್ತಾ ಬರುವುದು.
4) ಹಲ್ಲುಗಳನ್ನು ಉಜ್ಜುವುದು:- ರಾತ್ರಿಯ ಭೋಜನಾನ೦ತರ ಕನಿಷ್ಟ ಪಕ್ಷ ಅರ್ಧ ಘ೦ಟೆಯ ಕಾಲವಾದರೂ ಕಾಯುವುದು ಒಳಿತು. ಭೋಜನವಾದ ಕೂಡಲೇ ಹಲ್ಲುಗಳನ್ನು ಉಜ್ಜುವುದರಿ೦ದ, ಈಗಷ್ಟೇ ನಿಮ್ಮ ಆಹಾರವನ್ನು ಜಗಿದಿರುವ ಹಲ್ಲುಗಳ ಹೊರಪದರವನ್ನು ಘಾಸಿಗೊಳಿಸಿದ೦ತಾಗುತ್ತದೆ. ಆದ್ದರಿ೦ದ, ಬೋಜನಾನ೦ತರ ನಿಮ್ಮ ಹಲ್ಲುಗಳಿಗೆ ಜಗಿತದಿ೦ದು೦ಟಾದ ಹಾನಿಯಿ೦ದ ಸಾವರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶದ ಅಗತ್ಯವಿರುತ್ತದೆ. ಹೀಗಾಗಿ ಭೋಜನವಾದ ಕೂಡಲೇ ಹಲ್ಲುಗಳನ್ನುಜ್ಜಿಕೊ೦ಡರೆ ಅವು ಹಾನಿಗೀಡಾಗುವ ಸ೦ಭವವಿರುತ್ತದೆ.
5) ಧೂಮಪಾನ:- ಮೊದಲನೆಯದಾಗಿ ಹೇಳಬೇಕೆ೦ದರೆ, ನೀವು ಧೂಮಪಾನವನ್ನು ಮಾಡುವುದೇ ತಪ್ಪು. ಆದರೂ ಕೂಡ, ಒ೦ದು ವೇಳೆ ನೀವು ಧೂಮಪಾನಿಯೇ ಆಗಿದ್ದಲ್ಲಿ, ರಾತ್ರಿಯ ಭೋಜನವಾದ ಕೂಡಲೇ ಧೂಮಪಾನವನ್ನು ಕೈಗೊಳ್ಳುವುದು ಖ೦ಡಿತಾ ವಿಹಿತವಲ್ಲ. ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಭೋಜನಾನ೦ತರ ಒ೦ದು ಸಿಗರೇಟಿನ ಸೇವನೆಯು ಹತ್ತು ಸಿಗರೇಟುಗಳ ಸೇವನೆಗೆ ಸಮನಾಗಿರುತ್ತದೆ ಹಾಗೂ ಇದ೦ತೂ ಕ್ಯಾನ್ಸರ್‌ನ ಸಾಧ್ಯತೆಯನ್ನು ನೂರ್ಮಡಿಗೊಳಿಸುತ್ತದೆ.
6) ಚಹಾದ ಸೇವನೆ:- ಚಹಾ ಸೇವನೆಯ ಚಟಕ್ಕ೦ಟಿಗೊ೦ಡವರಿಗೆ, ರಾತ್ರಿಯ ಭೋಜನದ ಅನ೦ತರವೂ ಕೂಡ ಒ೦ದು ಕಪ್ ಚಹಾ ಕುಡಿಯದಿದ್ದರೆ ಅವರಿಗೆ ಸಮಾಧಾನವಿರುವುದಿಲ್ಲ. ಆದರೆ, ರಾತ್ರಿಯ ಭೋಜನವಾದ ಕೂಡಲೇ ಅತಿಯಾದ ಚಹಾದ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಆಗತಾನೇ ಸೇವಿಸಿರಬಹುದಾದ ಆಹಾರದಲ್ಲಿರುವ ಕಬ್ಬಿಣಾ೦ಶದ ಹೀರುವಿಕೆಯ ಪ್ರಮಾಣವನ್ನು ಚಹಾದಲ್ಲಿರುವ ಪಾಲಿಫೆನಾಲ್ ಗಳು ಕಡಿಮೆಮಾಡುತ್ತವೆ. ಜೊತೆಗೆ, ಚಹಾದಲ್ಲಿರುವ ಘಟಕಗಳು ಆಹಾರದ ಪ್ರೋಟೀನ್ ಗಳ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುತ್ತವೆ.
7) ಸ್ನಾನ ಮಾಡುವುದು:- ಸ್ನಾನವನ್ನು ಮಾಡಿದಾಗ, ರಕ್ತ ಸ೦ಚಾರವು ಕೈಗಳಿಗೆ, ಕಾಲುಗಳಿಗೆ, ಹಾಗೂ ಕೈಕಾಲುಗಳ ಇತರ ಭಾಗಗಳಿಗೆ ಹೆಚ್ಚಿ, ಹೊಟ್ಟೆಯೆಡೆಗೆ ಹರಿಯುವ ರಕ್ತದ ಪ್ರಮಾಣವು ಕಡಿಮೆಯಾಗುತ್ತದೆ. ಹೀಗಾದಾಗ, ನಿಮ್ಮ ಜೀರ್ಣಾ೦ಗ ವ್ಯೂಹದ ಕಾರ್ಯಕ್ಷಮತೆಯು ಕ್ಷೀಣಿಸುತ್ತದೆ.
8) ವಾಹನ ಚಾಲನೆ:- ಜೀರ್ಣಕ್ರಿಯೆಗೆ ಒಳಪಡುತ್ತಿರುವ ಆಹಾರವಸ್ತುವಿಗೋಸ್ಕರ, ರಕ್ತದ ಸರಬರಾಜು ಹೊಟ್ಟೆಗೆ ಅತಿಯಾಗಿ ಆಗಬೇಕಾದ ಕಾರಣದಿ೦ದಾಗಿ, ರಕ್ತದ ಹರಿವನ್ನು ಹೊಟ್ಟೆಯಿ೦ದ ಬೇರೆ ಅ೦ಗಾ೦ಗಗಳತ್ತ ವಿಮುಖಗೊಳಿಸುವ ಯಾವುದೇ ಚಟುವಟಿಕೆಯನ್ನೂ ಕೂಡ ಭೋಜನವಾದ ಕೂಡಲೇ ಕೈಗೊಳ್ಳುವುದು ಸರಿಯಲ್ಲ. ವಾಹನ ಚಾಲನೆಯ೦ತಹ ಚಟುವಟಿಕೆಯು ಗಮನವನ್ನು ಹಾಗೂ ಏಕಾಗ್ರತೆಯನ್ನು ಬೇಡುತ್ತದೆ ಮತ್ತು ಭೋಜನವಾದ ಕೂಡಲೇ ನಿಮಗೆ ಏಕಾಗ್ರತೆಯನ್ನು ಸಾಧಿಸಲು ಕಷ್ಟವೆನಿಸಬಹುದು. ಅದೂ ಅಲ್ಲದೇ, ಪೂರ್ಣಪ್ರಮಾಣದ ಭೋಜನಾನ೦ತರ ನಿಮಗೆ ಆಯಾಸವೆ೦ದೆನಿಸಬಹುದು. ಆದ್ದರಿ೦ದ, ಭೋಜನವಾದ ಬಳಿಕ ವಾಹನಚಾಲನೆಗೆ ಮು೦ಚೆ ಕನಿಷ್ಟ ಒ೦ದು ಘ೦ಟೆಯ ಕಾಲವಾದರೂ ಕಾಯುವುದೊಳಿತು.
9) ವ್ಯಾಯಾಮವನ್ನು ಮಾಡುವುದು:- ಬೆಳಗ್ಗೆ ಅಥವಾ ಸ೦ಜೆಯ ವೇಳೆ ಯಾವುದೇ ಭೋಜನವನ್ನು ತೆಗೆದುಕೊಳ್ಳುವ ಸಮಯಕ್ಕೆ ಸಾಕಷ್ಟು ಮು೦ಚಿತವಾಗಿಯೇ ವ್ಯಾಯಾಮವನ್ನಾಚರಿಸುವುದು ಆದರ್ಶಪ್ರಾಯವಾಗಿದೆ. ರಾತ್ರಿಯ ಭೋಜನವಾದ ಕೂಡಲೇ ವ್ಯಾಯಾಮಕ್ಕೆ ಸಿದ್ಧಗೊಳ್ಳುವ ಸ೦ಗತಿಯು, ದಿನದ ವೇಳೆಯಲ್ಲಿ ವ್ಯಾಯಾಮಕ್ಕಾಗಿ ನಿಮಗೆ ಸಾಕಷ್ಟು ಸಮಯಾವಕಾಶವಿಲ್ಲದಿರುವುದನ್ನು ಸೂಚಿಸುತ್ತದೆ. ಊಟವಾದ ಕೂಡಲೇ ವ್ಯಾಯಾಮವನ್ನು ಕೈಗೊಳ್ಳುವುದರಿ೦ದ ರಕ್ತದ ಹರಿವು ವಿಪರೀತಗೊ೦ಡು ನಿಮ್ಮ ಜೀರ್ಣಕ್ರಿಯೆಯ ಹಳಿತಪ್ಪಿಸುತ್ತದೆ ಹಾಗೂ ನಿಮ್ಮ ಶರೀರದ ಚಯಾಪಚಯ ಕ್ರಿಯೆಯನ್ನು ತು೦ಡರಿಸುತ್ತದೆ.
10) ಕೂಡಲೇ ಹಾಸಿಗೆಗೆ ತೆರಳುವುದು:- ರಾತ್ರಿಯ ಭೋಜನವಾದ ಕೂಡಲೇ ನಿದ್ರೆ ಹೋಗುವುದರಿ೦ದ ಅದು ಅನೇಕ ಹೊಟ್ಟೆಯ ಹಾಗೂ ಕರುಳುಗಳ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ ಹಾಗೂ ಜೀರ್ಣಕ್ರಿಯೆಯೂ ಸಹ ಪೂರ್ಣಪ್ರಮಾಣದಲ್ಲಿ ನಡೆಯಲಾರದು. ಜೊತೆಗೆ ಇದು ತೂಕಗಳಿಕೆಗೂ ದಾರಿಮಾಡಿಕೊಡುತ್ತದೆ. ಆದ್ದರಿ೦ದ, ರಾತ್ರಿಯ ಭೋಜನಾನ೦ತರ ಕೈಗೊಳ್ಳಬಹುದಾದ ಅತ್ಯುತ್ತಮ ಕೆಲಸವೆ೦ದರೆ ಸುಮಾರು ಒ೦ದು ಘ೦ಟೆಯ ಕಾಲ ಹಾಯಾಗಿ ಕುಳಿತುಕೊಳ್ಳುವುದು. ಹೀಗೆ ಮಾಡುವುದರಿ೦ದ ನಿಮ್ಮ ಶರೀರಕ್ಕೆ ಆಹಾರವನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಟ್ಟ೦ತಾಗುತ್ತದೆ.

    +++++++
ನನ್ನಂತೆ ವಯಸ್ಸಾದವರಿಗೆ...... smile emoticon ಇದೊಂದು ಸಹೃದಯಿಯ ಸಲಹೆ ಅಷ್ಟೇ, ಉಪದೇಶವಲ್ಲ. ಹಾಗೇನೇ, ಇದು ಪದ್ಯವಲ್ಲ, ಗದ್ಯ. ಸ್ವಲ್ಪ eye catching ಆಗಿರಲಿ ಎಂದು ಹೀಗೆ ಪೋಷ್ಟ್ ಮಾಡಿದ್ದೇನೆ......
***********************************
ನಿಮ್ಮ ಹೆಂಡತಿ ನಿಮ್ಮೊಡನೆ
ನಗು ನಗುತ್ತಾ ಮಾತಾಡದಿದ್ದರೆ
ಚಿಂತಿಸಿ ಕೊರಗ ಬೇಡಿ,
ಅವಳಿಗೆ ಹೆದರಿಕೆ, ಅವಳಿಗಿಂತ
ನೀವು ಬೇಗ ಸತ್ತರೆ ಅಂತ,
ಅದಕ್ಕೇ, ಅವಳ ನಗು ಮಕ್ಕಳ ಕಡೆ.
ನಿಮ್ಮ ಮಗ ಸೊಸೆ ನಿಮ್ಮೊಡನೆ
ನಗುತ್ತಾ ದಿನಕ್ಕೆ ಹತ್ತು ನಿಮಿಷವೂ
ಮಾತಾಡೋಲ್ಲ ಎಂದು ಯೋಚಿಸದಿರಿ,
ಅವರು ನಿಮಗಿಂತ ಎಂದೊ
ಬಹಳ ಬುದ್ಧಿವಂತರಾಗಿದ್ದಾರೆ,
ಅಲ್ಲದೆ ಹಣ ಮಾಡುವುದರಲ್ಲಿ
ಅವರು ಬಹಳ ಬೀಜಿ, ಬಹಳ ಬಿಸಿ.
ಇನ್ನು ಮೊಮ್ಮಕ್ಕಳೋ, ಪಾಪ
ಅವುಗಳು ಸ್ಕೂಲ್, ಹೋಮ್ ವರ್ಕ್,
ಟ್ಯೂಶನ್ ಮುಗಿಯೋದೇ ಇಲ್ಲ,
ಅವರಿಗೆಲ್ಲಿ ಟೈಮ್ ಇದೆ ಈ
ಮುದುಕರೊಡನೆ ಆಟ ಆಡಲು.
ಆದರೆ, ಸಿಡುಕಿ ಸಂಬಂಧಗಳನ್ನು
ಹಾಳು ಮಾಡಿಕೊಳ್ಳ ಬೇಡಿ,
ಅವರವರ ಸಮಯಗಳನ್ನು ಗೌರವಿಸಿ.
ಬೆಳದ ಮಕ್ಕಳ ವೈಯುಕ್ತಿಕ
ವಿಷಯಗಳಲ್ಲಿ ತಲೆ ಹಾಕ ಬೇಡಿ,
ಸಲಹೆಗಳನ್ನು ಕೇಳಿದರಷ್ಟೇ ಕೊಡಿ.
ತಪ್ಪು ದಾರಿಯಲ್ಲಿ ಮಕ್ಕಳು
ನಡೆಯುತ್ತಿದ್ದಾರೆ ಎಂದು ನಿಮಗನಿಸಿದರೆ,
ಎಚ್ಚರಿಸಿ, ಮತ್ತೆ ಸುಮ್ಮನಿರಿ, ಅಷ್ಟೆ.
ನಿಮ್ಮಂತ ನಾಲ್ಕು ಜನ ಸಮ ವಯಸ್ಕರ,
ಸಮ ಮನಸ್ಕರ, ಹತ್ತಿರದಲ್ಲೇ ವಾಸಿಸುವವರ
ಪರಿಚಯ, ಸ್ನೇಹ ಮಾಡಿ ಕೊಳ್ಳಿ.
ವಾಕಿಂಗ್ ಮಾಡಿ, ಹತ್ತಿರದ ಪಾರ್ಕಿನಲ್ಲಿ
ಸೇರಿ ಲೋಕಾಭಿರಾಮ ಶ್ರೀ ರಾಮ
ಮಾತನಾಡಿ, ನಕ್ಕು ನಲಿಯಿರಿ.
ಮತ್ತೊಂದು ಮುಖ್ಯವಾದ ವಿಷಯ.
ನಿಮ್ಮ ದೇಹಾರೋಗ್ಯ ಮತ್ತು
ಮಾನಸಿಕ ಸಂತುಲನವನ್ನು ಕಾದು ಕೊಳ್ಳಿ.
ಹಣಕಾಸಿನ ಸ್ವಾವಲಂಬನೆಯನ್ನು
ಕೊನೆಯವರೆಗೆ ಉಳಿಸಿ ಕೊಳ್ಳಿ.
ಆದರೊಂದು ಕಿವಿ ಮಾತು,
ತಮ್ಮ ತಮ್ಮ ಮನೆಯ ದೋಸೆಗಳ
ತೂತುಗಳನ್ನು ಲೆಕ್ಕ ಮಾಡಬೇಡಿ.
ಅದರಿಂದ ಮಾನಸಿಕ ಹಿಂಸೆ
ಮತ್ತಷ್ಟು ಹೆಚ್ಚಾಗುತ್ತದೆ, ಮರೆಯ ಬೇಡಿ.
ಹೀಗಿದ್ದರೆ, ಮುದುಕರ ಜೀವನವೂ
ಸುಖಮಯವಾಗಿರುತ್ತದೆ,
ಮನೆಯವರಲ್ಲಿ ಗೌರವವೂ ಹೆಚ್ಚುತ್ತದೆ.
ಕಾಲನ ಕರೆ ಬಂದಾಗ ಶಾಂತಿಯಿಂದ
ನಾಲ್ಕು ಮಂದಿಯ ಹೆಗಲೇರುವ
ಮನಸ್ಥೈರ್ಯ ಉಳಿದು ಬೆಳೆದಿರುತ್ತದೆ.
************************
ಹೀಗೊಂದು ಅಭ್ಯಾಸ ಬಲದ ಕತೆ..........
********************************
ಹಿಂದೆ ಒಬ್ಬ ಭಾಷಣಕಾರ ಯಾವುದೇ ವಿಷಯದ ಬಗ್ಗೆ ಗಂಟೆ ಗಟ್ಟಲೆ ಭಾಷಣ ಮಾಡುತ್ತಿದ್ದನಂತೆ. ಅದನ್ನು ನೋಡಿ, ನೋಡಿ, ನನ್ನಂತಹ ಒಬ್ಬ ಕುಹಕಿಗೆ, ಏನಿದರ ರಹಸ್ಯ ಎಂದು ಆಶ್ಚರ್ಯವಾಯಿತಂತೆ.
ಓಮ್ಮೆ ಆತ ನಿರರ್ಗಳವಾಗಿ ಭಾಷಣ ಮಾಡುತ್ತಿರುವಾಗ ತನ್ನ ಶರ್ಟಿನ ಒಂದು ಗುಂಡಿಯನ್ನು (button) ಭಾಷಣ ಮುಗಿಯುವ ವರೆಗೆ ಬೆರಳುಗಳಿಂದ ತಿರುಗಿಸುತ್ತಲೇ ಇರುವುದನ್ನು ಗಮನಿಸಿದನಂತೆ. (ಆಗಿನ ಕಾಲದಲ್ಲಿ ಶರ್ಟಿನ ಗುಂಡಿಗಳು ಈಗಿನಂತೆ ಒಂದು ಸೈಡಿಗೆ fix ಇರುತ್ತಿರಲಿಲ್ಲ, ಎರಡೂ ಬದಿಗೆ holes ಇರುತ್ತದ್ದವು, ಒಂದು ಸೈಡ್ ಚಪ್ಪಟೆ ಇನ್ನೊಂದು ಸೈಡ್ ಗುಂಡಗೆ ಇರುವ ಗುಂಡಿಗಳನ್ನು ಎರಡೂ holes ಗಳಲ್ಲಿ ಹಾಯಿಸಿ ಅಂಗಿಯ ಮುಂಬಾಗವನ್ನು ಮುಚ್ಚಿ ಕೊಳ್ಳುತ್ತಿದ್ದರು)
ಆಗ ಈತ, ಭಾಷಣಕಾರನ assistant ನ್ನು ಒಳಗೆ ಹಾಕಿಕೊಂಡು, ಭಾಷಣಕಾರ ಮುಂದಿನ ಭಾಷಣಕ್ಕೆ ಹೋಗುವ ಮೊದಲು, ಅವನು ತಿರುಗಿಸುತ್ತಿದ್ದ ಗುಂಡಿಯನ್ನು ತೆಗೆಸಿ ಬಿಟ್ಟನಂತೆ. ...ಭಾಷಣಕಾರ ಸ್ಟೇಜ್ ಮೇಲೆ ಹೋಗಿ ಭಾಷಣ ಶುರು ಮಾಡುತ್ತಾ, ಅಂಗಿ ಗುಂಡಿಗೆ ಕೈ ಹಾಕಿದಾಗ ಅಲ್ಲಿ ಗುಂಡಿ ಇಲ್ಲ ಎಂದು ತಿಳಿದು ಗಾಬರಿಯಾರಿ, ತಡಬಡಾಯಿಸಿ, ನಾಲ್ಕು ಶಬ್ದನೂ ಮಾತನಾಡಲಾಗದೆ.....ಈ ದಿನ ನನ್ನ ಆರೋಗ್ಯ ಸರಿಯಿಲ್ಲ, ಸಭಿಕರಿಗೆ ನಮಸ್ಕಾರ ಎಂದು ಹೇಳಿ ಹೊರಟೇ ಹೋದನಂತೆ........
 (ಕೆಲವೊಮ್ಮೆ ನೈಪುಣ್ಯವು ಒಂದು ಚಿಕ್ಕ ಅಭ್ಯಾಸದ ಮೇಲೂ ಅವಲಂಬಿತವಿರುತ್ತದೆ. ಹೀಗೇ ಕೆಲವರು ಒಂದು ದುಂಡನೆಯ paper weight ನ್ನು table ಮೇಲೆ ಕೈಯಲ್ಲಿ ತಿರುಗಿಸುತ್ತಾ ಗಂಟೆ ಗಟ್ಟಲೆ ಮಾತನಾಡುತ್ತಾರೆ. ಅದನ್ನು ಅಲ್ಲಿಂದ ಎತ್ತಿಟ್ಟರೆ ಅವರ ಬಾಯಿಂದ ಮಾತೇ ಹೊರಡೋಲ್ಲ)

+++++++++++
ನಗು ಮುಖದವರೆಲ್ಲ ಸಜ್ಜನರಲ್ಲ,
ಗಂಟು ಮುಖದವರೆಲ್ಲ ದುರ್ಜನರಲ್ಲ.
******ದಾರ್ಶನಿಕ

Sunday, 27 December 2015

ನೋಡಿ, ಜೋಕ್ ಅಂದರೆ ಹೀಗಿರ ಬೇಕು. ಇವತ್ತು ಬೆಳಿಗ್ಗೆ ಎದ್ದವನೇ ಕಾಫಿ ಹೀರುತ್ತಾ ಇದನ್ನು ಒದಿದೆ. ಅಯಾಚಿತವಾಗಿ ನಗು ಉಕ್ಕಿ ಬಂತು. ಇದನ್ನು ಓದಿ, ಈ ದೇವಸ್ಥಾನಕ್ಕೆ ಹೋಗುವವರು
ನಗುನಗುತ್ತಾ ಹೋಗಿ. ಆದರೆ ದಕ್ಷಿಣೆ ಮಾತ್ರ ತೆಗೆದು ಕೊಳ್ಳ ಬೇಡಿ. ಉಳಿದವರು ತಮ್ಮ ತಮ್ಮ ಕೆಲಸಗಳಲ್ಲಿ ನಗು ನಗುತ್ತಾ ತೊಡಗಿಸಿಕೊಳ್ಳಿ. 


"ಆಫೀಸರ್- ನೋಡಿ ರಾಯರೆ ಆಫಿಸನ್ನು ಒಂದು ದೇವಸ್ಥಾನ ಅಂತ ಭಾವಿಸಿಕೊಂಡು ಕೆಲಸ ಮಾಡಬೇಕು.
ರಾಯರು- ಸರಿ ಸಾರ್!.... ಯಾರಾದರೂ ದಕ್ಷಿಣೆ ಕೊಟ್ಟರೆ ಸ್ವಿಕರಿಸಬಹುದಾ?" 😂😂😂😂
ಅಮ್ಮಾ..........
ಅಮ್ಮಾ, ನಿನ್ನ ಮಡಿಲಲ್ಲಿ
ಮತ್ತೊಮ್ಮೆ ಆಡುವಾಸೆ,
ನಿನ್ನ ಮೃದು ತಾಡನವ
ಮತ್ತೊಮ್ಮೆ ಸವಿದೇ
ನಿದ್ರಿಸುವಾಸೆ......
ನಿನ್ನ ಹೂ ಚುಂಬನಕೆ
ನನ್ನ ನೊಸಲು ತವಕಿಸಿದೆ,
ನಿನ್ನ ನೀಳ ತೋಳುಗಳ
ಜೋಕಾಲಿಯಲಿ ಇನ್ನೊಮ್ಮೆ
ಜೀಕಿ ನಲಿಯವ ಆಸೆ......
ಕುಳಿರ್ಗಾಳಿ ಸೋಕದೆ
ನಿನ್ನ ಬೆಚ್ಚನೆಯ ಸೆರಗಿನಡಿ
ಮೈ ಮರೆತು ಮಲಗುವಾಸೆ..
ನಿನ್ನ ಜೋಗುಳದ ಇನಿದನಿ
ಕಿವಿಯ ತವಕದ ಆಸೆ......
ಆಗ, ಭೂ ತಾಯಿ ಕರೆದಳು
ಬಾ ಮಗು, ಏರು ನನ್ನ ತೇರು,
ನಿನ್ನಮ್ಮನೆಡೆಗೊಯ್ಯವೆ ಬಾ ಬೇಗ,
ಬೆಚ್ಚಿ ಬಿದ್ದು ರಥವೇರಿ ಕುಳಿತೆ,
ಕಣ್ಣು ಮುಚ್ಚಿ ಅಮ್ಮನ ಕನಸು ಕಂಡೆ.
ಕಣ್ಣು ತೆರೆದಾಗ ನಾನಿದ್ದೆ
ನನ್ನಮ್ಮನ ಮಡಿಲಲ್ಲಿ,
ಅವಳ ಬೆರಳುಗಳು ಆಡುತ್ತಿದ್ದವು
ನನ್ನ ಅರೆ ನೆರೆತ ಕೇಶದಲ್ಲಿ,
ನನ್ನಾಸೆ ಸಾಕಾರವಾಗಿತ್ತು ಕೊನೆಗೆ,
ನನ್ನ ಕೊನೆಯ ಉಸಿರಿನಲ್ಲಿ...
06.12.2015
ತಾನು ಅಸಹಾಯಕ ಎಂದು
ನಂಬಿಕೊಳ್ಳುವುದೇ
ಮನುಷ್ಯನ ಅತೀ
ದೊಡ್ಡ ಅಸಹಾಯಕತೆ.
****ದಾರ್ಶನಿಕ.
ನಿಜವಾದ ಫೋಟೋದಂತೆ ಕಾಣುವ ಈ ರಂಗೋಲಿ ಆರ್ಟ್ ನೋಡಿ. ಇದು ಮನೋಜ್ ಪಾಟೀಲ್, ವಸೈ ಅವರ ಅದ್ಭುತ ಸುಂದರ, ಸಜೀವ ಸದೃಶವಾದ ರಂಗೋಲಿ ಚಿತ್ರ.
ಗೆಳೆಯ, Narasinga Rao ಅವರು ಮೆಚ್ಚಿ ಅವರ ಗೋಡೆಯಲ್ಲಿ ಶೇರ್ ಮಾಡಿದ್ದರು.
ಅದನ್ನು ಈಗ ನಾನೂ ಮೆಚ್ಚಿ, ನಿಮ್ಮೆಲ್ಲರ ಮೆಚ್ಚಿಗೆಗಾಗಿ ನನ್ನ ವಾಲ್ ನಲ್ಲಿ ಶೇರ್
ಮಾಡುತ್ತಿದ್ದೇನೆ.......ನೀವೂ ಮೆಚ್ಚಿದರೆ, ಈ ಸುಂದರ ಕಲೆ ಮತ್ತು ಅದ್ಭುತ ಕಲಾವಿದನನ್ನು ಹುರಿದುಂಬಿಸಿದಂತೆ..... smile emoticon
ಸೌಜನ್ಯವಿಲ್ಲದ ಸೌಂದರ್ಯ
ಕುರೂಪಕ್ಕಿಂತ ಕೀಳು..
*****ದಾರ್ಶನಿಕ
ಹಾಲು ಕುಡಿಯೋಣ ಬಾ.......ಅಮ್ಮ ಕರೀತಿದ್ದಾಳೇ...........
"ಒಬ್ಬ ಮಹಿಳೆ ಮನೆಯಿಂದ ಹೊರಬಂದು,
ಸಾಧನೆಗೆ ಹೊರಟರೆ ಆಕೆ ರೆಬೆಲ್ ಎನ್ನುತ್ತಾರೆ.
ಆದರೆ, ಪುರುಷನನ್ನು ಕೆರಿಯರ್ ಮೈಂಡೆಡ್
ಎನ್ನುತ್ತಾರೆ."
******ಸಾನಿಯಾ ಮಿರ್ಜಾ (ಒಂದು ಸುದ್ದಿ ಗೋಷ್ಠಿಯಲ್ಲಿ......ಪತ್ರ ಕರ್ತನೊಬ್ಬನ
ವೈಯುಕ್ತಿಕ ಪ್ರಶ್ನೆಯೊಂದರಿಂದ ಮನ ನೊಂದು)
ಮಕ್ಕಳು ಹಿರಿಯರು ಹೇಳಿದ್ದನ್ನು
ಕೇಳಿ ಕಲಿಯುವುದಕ್ಕಿಂತ ಹೆಚ್ಚು,
ಹಿರಿಯರು ಮಾಡುವದನ್ನು
ನೋಡಿ ಕಲಿಯುತ್ತವೆ.
******ದಾರ್ಶನಿಕ
ಮೊನ್ನೆ ಮೊನ್ನೆ ಒಬ್ಬರು ತಿಳಿದವರಿಂದ
"ನವ್ಯಕವಿತೆಗಳು" ಮತ್ತು ಪಾರಂಪರಿಕ
ಕವಿತೆ/ಕವನಗಳಿಗಿರುವ ವ್ಯತ್ಯಾಸ ಗೊತ್ತಾಯ್ತು.
1. ಸಂಗೀತ ಬದ್ಧವಾಗಿ ಹಾಡಲು ಬರುವಂಥವು 
ಪಾರಂಪರಿಕ ಕವಿತೆ/ಕವನಗಳು. ಹಾಡಲು
ಬರದೆ ಬರೇ ಓದಲು/ವಾಚಿಸಲು ಬರುವಂಥವು
ನವ್ಯ ಕವಿತೆಗಳು..... smile emoticon
2. ವಿಷಯಗಳನ್ನು ಮತ್ತು ಬಾವನೆಗಳನ್ನು ನೇರವಾಗಿ
ಬಣ್ಣಿಸುವಂಥವು ಪಾರಂಪರಿಕ ಕವಿತೆಗಳು/ಕವನಗಳು.
ಅವನ್ನೇ ಪ್ರತಿಮೆಗಳನ್ನು ಉಪಯೋಗಿಸಿ ವಿವರಿಸುವುವು
ನವ್ಯ ಕವಿತೆಗಳು.
(ಇಲ್ಲಿ ಪ್ರತಿಮೆಗಳು ಅಂದರೆ ಏನು ಎಂಬುದು ನನಗೆ ಅರ್ಥವಾಗಿಲ್ಲ... 
ಜಗಳ ಕಾಯೋದು ಅಂದರೆ ಹೀಗೆ....... smile emoticon
Jyothi Umesh ಅವರ ಗೋಡೆಯಿಂದ copy & paste...... smile emoticon
****************************************************************
ಗಂಡ ಹೆಂಡತಿಯನ್ನು ಬೆಳಿಗ್ಗೆ ಎಬ್ಬಿಸುತ್ತಾನೆ:
ಗಂಡ: ಬಾರೇ, ಬೆಳಿಗ್ಗೆ ಯೋಗಾ ಮಾಡಿದ್ರೆ ಒಳ್ಳೆಯದು.
ಹೆಂಡತಿ: ನೀವು ಹೇಳೋದು ಏನೂಂತಾ? ನಾನು ದಪ್ಪ ಅಂತಾನ?
ಗಂ: ಇಲ್ಲ. ಯೋಗಾ ಆರೋಗ್ಯಕ್ಕೆ ಒಳ್ಳೆಯದು ಅಂತ.
ಹೆಂ: ಅಂದ್ರೆ ನನ್ನ ಆರೋಗ್ಯ ಸರಿ ಇಲ್ಲ ಅಂತಾನ?
ಗಂ: ಹೋಗ್ಲಿ ಬಿಡು. ಏಳಬೇಡ.
ಹೆಂ: ಅಂದರೆ ನಾನು ಸೋಮಾರಿ ಅಂತ...
ಗಂ: ಹಾಗಲ್ಲ. ನಿನಗೆ ನಾನು ಹೇಳಿದ್ದು ಅರ್ಥ ಆಗಿಲ್ಲ.
ಹೆಂ: ಅಂದ್ರೆ ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿಲ್ಲ ಅಂತ ನಿಮ್ಮರ್ಥ..
ಗಂ: ನಾನು ಹಾಗೆ ಹೇಳಲಿಲ್ಲ
ಹೆಂ: ಅಂದರೆ ನಾನು ಸುಳ್ಳು ಹೇಳ್ತೀನಿ ಅಂತ...
ಗಂ: ಎ.. ಸುಮ್ಮನೆ ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡ..
ಹೆಂ: ಅಂದ್ರೆ ನಾನು ಜಗಳಗಂಟಿ ಅಂತ...
ಗಂ: ಹೋಗ್ಲಿ ಬಿಡು.. ನಾನೂ ಯೋಗಕ್ಕೆ ಹೋಗದಿರೋದೇ ಒಳ್ಳೆದು..
ಹೆಂ: ನೋಡಿ ಅದೇ ನಾನು ಹೇಳಿದ್ದು. ನಿಮಗೂ ಹೋಗಕ್ಕೆ ಮನಸ್ಸಿರಲಿಲ್ಲ.. ಸುಮ್ಮನೆ ನನ್ನ ತಲೆ ಮೇಲೆ ಗೂಬೆ ಕೂರ್ಸೋದು..
ಗಂ: ಸರಿ ಮಹಾತಾಯಿ.. ನೀನು ನಿದ್ದೆ ಮಾಡು.. ನಾನು ಒಬ್ನೇ ಹೋಗ್ತೀನಿ.. ಸರೀನಾ?
ಹೆಂ: ಅದೇ... ನಿಮಗೆ ಎಲ್ಲ ಕಡೆಗೂ ಒಬ್ರೇ ಹೋಗಕ್ಕೆ ಇಷ್ಟ.
ಗಂ: ಅಯ್ಯೋ ಮಹಾತಾಯಿ.. ನಿಲ್ಸು.. ನನ್ನ ತಲೆ ಸುತ್ತುತ್ತಾ ಇದೆ...
ಹೆಂ: ಅದೇ ನೋಡಿ.. ನಿಮಗೆ ಯಾವಾಗ್ಲೂ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚನೆ. ನನ್ನ ಬಗ್ಗೆ ಚೂರೂ ಚಿಂತೆಯಿಲ್ಲ ನಿಮಗೆ... **&*&^^&*^^*()&&)(^%&^$^$^*^&*^*(^*(&()*()*()*()*(*()*()*^&^&*(^&*%&^&%%&
(ಎಲ್ಲಾ ಪುರುಷರಿಗೂ ಸಮರ್ಪಿತ. ವ್ಹಾಟ್ಸಪ್ ನಲ್ಲಿ ಬಂದಿದ್ದು ನಮ್ಮ ಕೃಷ್ಣ ಸಖನ ವಾಲ್ ನಲ್ಲಿ ಇಂಗ್ಲೀಷ್ ನಲ್ಲಿತ್ತು..)...
ನಮ್ಮಿಂದ ಕಷ್ಟ ಹಾಗೂ ದುಃಖದಲ್ಲಿರುವವರಿಗೆ ಪರಿಹಾರ
ಒದಗಿಸಲು ಸಾಧ್ಯವೋ ಇಲ್ಲವೋ ಬೇರೆ ಮಾತು. ಆದರೆ,
"ಚಿಂತಿಸ ಬೇಡಿ, ನಿಮಗೆ ನಾವಿದ್ದೇವೆ..." ಎಂಬ ಒಂದು
ಸಮಾಧಾನದ ಮಾತು ಅವರಲ್ಲಿ ಪರಿಸ್ಥಿತಿಯನ್ನು ಎದುರಿಸಲು
ಆತ್ಮ ವಿಶ್ವಾಸ ತುಂಬ ಬಲ್ಲದು.
******ದಾರ್ಶನಿಕ.
ಹೀಗಿದೆ ಪ್ರಪಂಚ..... smile emoticon
*************************
ಮೊನ್ನೆ ಒಬ್ಬ ಸ್ನೇಹಿತನ ಮಗನ ಮದುವೆಗೆ
ಹೋಗಿದ್ದೆ. ಅವನು ಆಮಂತ್ರಣ ಪತ್ರಿಕೆಯಲ್ಲಿ
"ಆಶೀರ್ವಾದವೇ ಉಡುಗರೆ" ಅಂತ ಹಾಕಿದ್ದರಿಂದ
ನಾನು ಏನೂ ಪ್ರಸೆಂಟೇಶನ್ ತೆಗೆದುಕೊಂಡು
ಹೋಗಿರಲಿಲ್ಲ.
ಆದರೆ, ಅಲ್ಲಿ ತಕ್ಕಷ್ಟು ಜನರು ಪ್ರಸೆಂಟೇಶನ್
ತಂದಿದ್ದರು ಹಾಗೂ "ಆಶೀರ್ವಾದವೇ ಉಡುಗರೆ"
ಅಂದವರು ಅವನ್ನು ತೆಗೆದು ಕೊಳ್ಳುತ್ತಲೂ ಇದ್ದರು.
ನನಗೆ ಮುಜುಗರ ಮತ್ತು ಬೇಸರವಾಗಿ ಕೇಳಿದೆ,
"ಹೀಗೆ ಉಡುಗರೆ ತೆಗೆದು ಕೊಳ್ಳುವವನಾದರೆ
ಆಮಂತ್ರಣ ಪತ್ರಿಕೆಯಲ್ಲಿ ಹಾಗೇಕೆ ಹಾಕ ಬೇಕಿತ್ತ್ತು?"
ಅದಕ್ಕೆ ಮಹಾ ಬುದ್ಧಿವಂತನಂತೆ ಅಂದ, "ಉಡುಗರೆ
ತರಲು, ಬರುವವರಿಗೆ ನೆನಪಾಗಲಿ, ಎಂದು ಹಾಗೆ ಹಾಕಿದ್ದೂ......"
ನನಗೆ ತಡೆಯಲು ಆಗಲಿಲ್ಲ, "ಹೀಗೆ ನಿನ್ನ
ಉದ್ದೇಶವಾಗಿದ್ದರೆ, 'ಉಡುಗರೆಯೇ ಆಶೀರ್ವಾದ'
ಅಂತ ನೇರವಾಗಿ ಪ್ರಿಂಟ್ ಮಾಡಿಸ ಬಹುದಿತ್ತಲ್ಲಾ...smile emoticon "
ಎಂದು ಅಂದೇ ಬಿಟ್ಟೆ...... 
ಅವನ ಮುಖ ಕೋಲು ಕೊಟ್ಟು ಹೊಡೆಸಿ
ಕೊಂಡವನಂತೆ ಹುಳಿ ಹುಳಿಯಾಗಿ ಕೆಂಪೇರಿತು... smile emoticon
ನಾನು ಮರು ಮಾತನಾಡದೆ, ಊಟದ ಕೌಂಟರ್
ಹುಡುಕಿಕೊಂಡು ಜಾಗ ಖಾಲಿ ಮಾಡಿದೆ... smile emoticonsmile emoticon
ವಾಟ್ಸಾಪಲ್ಲಿ ಬಂದ ಜೋಕ್..
ತಗೊಳ್ಳಿ ನಿಮಗಾಗಿ :-
*****************************
ಅವತ್ತು ಸಾಯಂಕಾಲ ಲೈಟಾಗಿ ಮಳೆ ಬರ್ತಿತ್ತು . ಅಶೋಕ ಹೋಟೆಲ್ ಪಕ್ಕದಲ್ಲಿರೋ ಮನೆ ಹೊರಗಡೆ ಪಾರ್ಕಲ್ಲಿ ಇಬ್ಬರು ಕೂತು ಮಾತಾಡ್ತಾ ಇದ್ರು... ಒಬ್ರು ಪೊಲಿಟಿಶಿನ್ ಸಿ.ಎಂ. ರಾಮಸಿದ್ಧಯ್ಯ ಅಂತ ,ಮತ್ತೊಬ್ರು ಕಾರ್ಮೋಡ ಗಿರೀಶ್ ಅಂತ ಜ್ಞಾನದ ಪೀಠ ಹೊತ್ತ ಸಾಹಿತಿ..!
ಕಾರ್ಮೋಡ : ರೀ ರಾಮಸಿದ್ಧಯ್ಯ...ಏನ್ ನಿಮ್ ಪಾರ್ಟಿ ಹನುಮಂತು ಅವ್ರ ಹೆಂಡತಿ ಲಂಚ ತಗೊಂಡ್ ಸಿಕ್ಕಾಕ್ಕೊಂಡ್ರಂತೆ..! ವಿರೋಧ ಪಕ್ಷದವ್ರು ಗಲಾಟೆ ಮಾಡ್ತಾವ್ರೆ. ಏನ್ ಮಾಸ್ಟರ್ ಪ್ಲ್ಯಾನ್ ಮಾಡಿದಿರಿ..?
ರಾಮಸಿದ್ದಯ್ಯ : ಅದೆಲ್ಲಾ ಇರುತ್ತೆ ಬುಡ್ರಿ ಸಾಹಿತಿಗಳೇ. ಐಡಿಯಾ ಮಾಡಿದೀನಿ. ಹತ್ತನೇ ತಾರೀಕು ಟಿಪ್ಪು ಜಯಂತಿ ಮಾಡ್ತೀನಿ. ಹೆಂಗಿದ್ರೂ ಅವತ್ತೇ ಹಬ್ಬ.. ಪಕ್ಕಾ ಬೆಂಕಿ ಹತ್ಕೊಳುತ್ತೆ. ಹನುಮಂತನ ಕೇಸೂ ಮರ್ತೋಗ್ತಾರೆ ಜನ..!
ಕಾರ್ಮೋಡ : ಆದ್ರೆ ಟಿಪ್ಪು ಹುಟ್ಟಿದ್ದು ಇಪ್ಪತ್ತನೆಯ ತಾರೀಖಲ್ವಾ..? ಅದೆಂಗೆ ಹತ್ತನೇ ತಾರೀಖು ಮಾಡ್ತೀರಿ..?
ರಾಮಸಿದ್ದಯ್ಯ : ಅದುಕ್ಕೆ ತಲೆ ಇಲ್ಲ ಅನ್ನೋದು ನಿಮ್ಗೆ. ಅದುನ್ನೆಲ್ಲಾ ಯಾವನ್ ಕೇಳ್ತಾನೆ..? ನಾನ್ ಮಾಡಿದ್ದೇ ಹಬ್ಬ, ನಾನ್ ಹೇಳಿದ್ ದಿನಾನೇ ಜಯಂತಿ..!
ಕಾರ್ಮೋಡ: ಈ ಸತ್ಕಾರ್ಯದಲ್ಲಿ ನಮ್ಗೂ ಏನಾದ್ರೂ ಕೆಲಸ ಕೊಡಿ.. ಟಿವಿ ಪೇಪರ್ರಲ್ಲಿ ಬಂದು ತುಂಬಾ ದಿನ ಆಗಿದೆ..!
ರಾಮಸಿದ್ದಯ್ಯ : ನೀವೇ ಚೀಫ್ ಗೆಸ್ಟ್.. ಏನಾದ್ರೂ ಬೆಂಕಿ ಹಚ್ಚಿ. ನಿಮಗೆ ಏನು ತಲುಪಬೇಕೊ ಅದು ತಲುಪುತ್ತೆ .. ಇಲ್ಲಾಂದ್ರೆ ಮುಂದಿನ ವರ್ಷ ಯಾವ ಅವಾರ್ಡ್ ಬೇಕು ಅಂತ ಹೇಳಿ ಕೊಟ್ಟುಬಿಡ್ತೀನಿ..!
ಕಾರ್ಮೋಡ : ಅಷ್ಟು ಹೇಳಿದ್ರಲ್ಲಾ... ನೋಡ್ತಾ ಇರಿ ಎಂಥಾ ಬೆಂಕಿ ಹಚ್ತೀನಿ ಅಂತ..! ಹತ್ಕೊಂಡ್ ಉರೀಬೇಕು..!
ರಾಮಸಿದ್ದಯ್ಯ : ನಂಗೊತ್ತು ನಿಮ್ ತಾಕತ್ತು... ಹೋದಸಲ ನಾನು ಹೇಳಿದ ಒಂದೇ ಮಾತಿಗೆ ದನ ತಿಂದೋರಲ್ವಾ ನೀವು..! ಮಜಾ ಮಾಡಿ... ನೀವು ಹೇಳೋ ಮಾತಿಗೆ ಹನುಮಂತು ವಿಷಯ ನೆನಪೇ ಇರಬಾರದು... ಸದ್ಯಕ್ಕೆ ಟಿಪ್ಪು ನಮ್ಮ ಅಸ್ತ್ರ..!
ಇದಾಗಿ ವಾರಕ್ಕೆ ಮತ್ತೆ ಇಬ್ಬರೂ ಅದೇ ಜಾಗದಲ್ಲಿ ಕೂತು ಮಾತಾಡ್ತಾ ಇದ್ರು...
ರಾಮಸಿದ್ದಯ್ಯ : ಏನ್ರೀ ಕಾರ್ಮೋಡ, ಪ್ಲ್ಯಾನ್ ಸಕ್ಸಸ್ ತಾನೇ..! ಲಾ ಅಂಡ್ ಆರ್ಡರ್ ಢಮಾರ್ ಆಗೋಯ್ತು..! ಜನ ಹೊಡ್ಕೊಂಡ್ ಸಾಯ್ತಾ ಇದ್ದಾರೆ..!
ಕಾರ್ಮೋಡ : ಅದೇನೋ ಸರಿ, ಆದ್ರೆ ಇದ್ರಿಂದ ನಿಮಗೇನ್ ಲಾಭ ಆಯ್ತು..? ಅದೇ ಅರ್ಥ ಆಗ್ತಿಲ್ಲ..!
ರಾಮಸಿದ್ದಯ್ಯ : ಅಯ್ಯೋ ನಿಮ್ಮ.. ಏನೋ ದಬಾಕ್ತೀನಿ ಅಂಥ ಪರಮಶಿವಯ್ಯ ಹೋಂ ಮಿನಿಸ್ಟರ್ ಆದ. ಹೆಂಗಿಟ್ಟೆ ಬಾಂಬ್. ಅವನು ಬಂದ ಒಂದೇ ವಾರಕ್ಕೆ ಲಾ ಅಂಡ್ ಆರ್ಡರ್ ಸತ್ತೋಯ್ತು ..! ಅವನು ಯಾವತ್ತಿದ್ರೂ ನಂಗೆ ಮುಳ್ಳೇ .. ಅದುಕ್ಕೆ ಒಂದೇ ಕಲ್ಲಲ್ಲಿ ಸಖತ್ ಹಕ್ಕಿ ಹೊಡೆದೆ.. ಮೇಡಂಗೆ ಲೆಟರ್ ಬರೀತೀನಿ. ಪರಮಶಿವಯ್ಯ ವೇಸ್ಟು ಅಂತ..! ಒಟ್ನಲ್ಲಿ ಟಿಪ್ಪು ಹೆಸರಲ್ಲಿ ಸಖತ್ ಲಾಭ ಗುರುವೇ..!
ಅಷ್ಟರಲ್ಲಿ ಯಾರೋ ಕುದುರೆಯಲ್ಲಿ ಬರ್ತಾ ಇರೋ ತರ ಸೌಂಡ್ ಬಂತು. ತಿರುಗಿ ನೋಡಿದ್ರೆ ಟಿಪ್ಪು ಸುಲ್ತಾನ್..! ಕತ್ತಿ ಎತ್ತಿ ರಾಮಸಿದ್ದಯ್ಯನ ಕತ್ತು ಎಗರಿಸಿ ಬಿಟ್ರು ..! ಕಾರ್ಮೋಡ ಫುಲ್ ಶಾಕ್..!
ಕಾರ್ಮೋಡ : ಯಾಕೆ ಟಿಪ್ಪು ಹಿಂಗ್ ಮಾಢ್ಬಿಟ್ರಿ..? ಅವ್ರ್ ನಿಮ್ಗೋಸ್ಕರ ಎಷ್ಟ್ ಒದ್ದಾಡಿದ್ದಾರೆ ಗೊತ್ತಾ..?
ಟಿಪ್ಪು ಸುಲ್ತಾನ್ : ನಾಚಿಕೆ ಆಗ್ಬೇಕು... ಸತ್ತು ನೆಮ್ಮದಿಯಾಗಿದ್ದೆ ಇಷ್ಟ್ ವರ್ಷ.. ಯಾವತ್ತೂ ಇಲ್ದಿರೋ ಜಯಂತಿ ಮಾಡೋಕೆ ಹೋಗಿ ನನ್ನ ಹೆಸರಿಗೆ ಮಸಿ ಬಳೀತೀರಾ..? ಜನಕ್ಕೆ ನನ್ನ ನೆನಪೂ ಇರ್ಲಿಲ್ಲ...ನಿಮ್ಮ ಸ್ವಾರ್ಥಕ್ಕೆ ನಮ್ಮ ಹೆಸರು ಬಳಸ್ಕೋತೀರಾ..? ಇದೇ ಸರಿ ಈ ರಾಮಸಿದ್ದಯ್ಯಂಗೆ..! ನಾನು ಹೋಗ್ತಾ ಇದೀನಿ ... ಹಿಂದೆ ಕೆಂಪೇಗೌಡ್ರು ಬರ್ತಾ ಇದ್ದಾರೆ. ಮೊದ್ಲು ಜಾಗ ಖಾಲಿ ಮಾಡು. ಇಲ್ಲಾಂದ್ರೆ ನಿನ್ ಕತೇನೂ ಇದೆ ಆಗುತ್ತೆ' ಅಂತ ಹೇಳಿ ಟಿಪ್ಪು ಬಂದ ಸ್ಪೀಡಲ್ಲೇ ಹೋದ್ರು..! ಭಯದಲ್ಲಿ ಓಡೋಕೆ ಶುರು ಮಾಡಿದ ಕಾರ್ಮೋಡ ಇನ್ನೂ ಓಡ್ತಾನೇ ಇದ್ದಾರೆ..!
ಅಪ್ಪಟ ಸತ್ಯ......ಅಲ್ಲವೇ?
ಚೆಂದಕ್ಕೆ ಮನ ಸೋತೆ,
ಚೆಂದದ ಹಿಂದಿನ
ಕಾಠಿಣ್ಯಕ್ಕೆ ಸೋತೆ.... frown emoticon
ವಿರಸ ದಾಂಪತ್ಯದ ಪರಮಾವಧಿಯೆಂದರೆ,
ಇಬ್ಬರೂ ತನಗೆ, ತನಗೆ ಇಷ್ಟವಾದ್ದನ್ನು ಮಾತ್ರ ಮಾಡುವುದು.
ಇಬ್ಬರಿಗೂ ಇಷ್ಟವಾದುದ್ದನ್ನು ಮಾಡುವ ಪ್ರಶ್ನೆಯೇ ಇಲ್ಲ,
ಏಕೆಂದರೆ, ಒಬ್ಬರಿಗೆ ಇಷ್ಟವಾದದ್ದು, ಇನ್ನೊಬ್ಬರಿಗೆ
ಯಾವತ್ತಿಗೂ ಇಷ್ಟವಾಗುವುದೇ ಇಲ್ಲ.... smile emoticon
*****ದಾರ್ಶನಿಕ.
ಈ ಜಗತ್ತಿನ ಮೊತ್ತ ಮೊದಲ ಖೈದಿ ದೇವರೇ ಇರಬೇಕು... smile emoticon
ನಂಬಿಕೆಯಂತೆ, ದೇವರು ಭಕ್ತರ ಹೃದಯದಲ್ಲಿ ಬಂದಿಯಾಗಿರುತ್ತಾನೆ.
ಅಲ್ಲದೆ ಪ್ರಾಪಂಚಿಕವಾಗಿ ಹೇಳುವುದಾದರೂ ಸಹ, ದೇವರ ಮೂರ್ತಿ
ಗರ್ಭ ಗುಡಿಯ ಬೀಗ ಹಾಕಿದ ಕಂಬಿ ಬಾಗಿಲುಗಳ ಹಿಂದೆ ಬಂದಿಯಾಗಿರುತ್ತದೆ. smile emoticon
- ದಾರ್ಶನಿಕ
ಹೀಗೂ ಒಂದು ಜೋಕ್.....ನಗು ಬಂದರೆ ನಕ್ಕು ಹಗುರಾಗಿ.....

(ಹೀಗೊಂದು ಮಕ್ಕಳ ಕನ್ನಡ ಪದ್ಯ)
*********************************
ಅಮ್ಮ ಕಲಿಸಿದ ಕನ್ನಡ ಬಾಷೆ
ಕನ್ನಡವೆಂದರೆ ನನಗಾಸೆ!
ಮನೆಯಲಿ ಕನ್ನಡ
ಮನದಲಿ ಕನ್ನಡ
ಕನ್ನಡ ನೆಲದಲೆ ಹಾಡುವೆನು
ಕನ್ನಡ ನೆಲದಲೆ ಆಡುವೆನು!
ಅಮ್ಮ ಕಲಿಸಿದ ಕನ್ನಡ ಭಾಷೆ
ಕನ್ನಡವೆಂದರೆ ನನಗಾಸೆ!
ನಾ ಕುಡಿಯುವ ನೀರು ಕಾವೇರಿ
ನಾ ಹಾಡುವ ರಾಗವು ಸಾವೇರಿ!
ಕನ್ನಡವೆಂದರೆ ಹೊನ್ನುಡಿಯು
ಕನ್ನಡವೆಂದರೆ ಮುನ್ನಡೆಯು!
ಅಮ್ಮ ಕಲಿಸಿದ ಕನ್ನಡ ಬಾಷೆ
ಕನ್ನಡವೆಂದರೆ ನನಗಾಸೆ!
ಗೆಳೆಯರೆ ಬನ್ನಿರಿ ನಲಿಯೋಣ
ಕನ್ನಡ ಪಾಠವ ಕಲಿಯೋಣ
ಕನ್ನಡವನ್ನೆ ನುಡಿಯೋಣ
ಕನ್ನಡ ನಾಡನು ಬೆಳಗೋಣ
ಅಮ್ಮ ಕಲಿಸಿದ ಕನ್ನಡ ಬಾಷೆ
ಕನ್ನಡವೆಂದರೆ ನನಗಾಸೆ!
ಕನ್ನಡದಲೆ ನಾ ಬರೆಯುವೆನು
ಕನ್ನಡ ಗೆಳೆಯರ ಪಡೆಯುವೆನು
ಹಗಲು ಇರುಳು ದುಡಿಯುವೆನು
ಮುಗಿಲನು ಮೀರಿ ಬೆಳೆಯುವೆನು
ಅಮ್ಮ ಕಲಿಸಿದ ಕನ್ನಡ ಬಾಷೆ
ಕನ್ನಡವೆಂದರೆ ನನಗಾಸೆ!
*******************************
(ಗೆಳೆಯ, Krishna Prasad, ಅವರು ಪೋಷ್ಟ್ ಮಾಡಿದ, ಸರಳ ಸುಂದರ ಕನ್ನಡದ
ಹಿರಿಮೆ ಸಾರುವ ಪದ್ಯ, ಚಿಕ್ಕ ಮಕ್ಕಳಿಗಾಗಿ....... ತುಂಬಾ ಚೆನ್ನಾಗಿದೆ ಅನ್ನಿಸಿದ್ದರಿಂದ
ಅವರ ಅನುಮತಿ ಇಲ್ಲದೆ ಇಲ್ಲಿ copy & paste ಮಾಡಿದ್ದೇನೆ. Share ಮಾಡಿದರೆ desktop ನಲ್ಲಿ ಓದಲು ಅಷ್ಟು ಕ್ಲಿಯರ್ ಇರುವುದಿಲ್ಲ)
Queen Elizabeth II visited Bangalore in 1961 - 150th Anniversary of Bible Society of India - Governor Sri Jayachamaraja Wodeyar welcomed her - Flowershow in Lalbagh - Serene Bangalore. Shared post by Jbrswamy Rangaswamy
ಇದೊಂದು ಅಪರೂಪದಲ್ಲಿ ಅಪರೂಪದ ಚಿತ್ರ.
ಬೆಂಗಳೂರಿಗೆ ಬಂದಿದ್ದಳು
ಇಂಗ್ಲೆಂಡಿನ ರಾಜಕುಮಾರಿ ಅಲ್ಲ ಮಹಾರಾಣಿ ಎಲಿಜಬೆತ್! 
ಅಷ್ಟೊಂದು ಜನಜಂಗುಳಿಯಲ್ಲೂ ಬೆಂಗಳೂರು ಎಷ್ಟು ನಿರುಮ್ಮಳವಾಗಿದೆ !
ಅವಿದ್ಯಾವಂತ ಬಡವರೇ ಹೆಚ್ಚಿರುವ ಜಾಗದಲ್ಲಿ
ಪೋಲೀಸರೂ ಹೆಚ್ಚಿಲ್ಲ.
ಮನುಷ್ಯ ತನಗೆ ಬೇಕಾದುದನ್ನು ಪಡೆಯಲು ಪ್ರಯತ್ನ ಶೀಲನಾಗಿರ ಬೇಕು.
ಕೈಗೆಟಕುವುದಿಲ್ಲವೆಂದು, ಕೈಚೆಲ್ಲ ಬಾರದು. ಮೂಕ ಪ್ರಾಣಿಗಳು ಸಹ ಕೊನೆವರೆಗೆ
ತಮ್ಮ ಪ್ರಯತ್ನ ಬಿಟ್ಟು ಕೊಡುವುದಿಲ್ಲ. ಇಲ್ಲಿ ನೋಡಿ, ನಮ್ಮ Rural Talent Friend, Anand Honnaya, ಪೋಷ್ಟ್ ಮಾಡಿದ ಇನ್ನೊಂದು ಅಪರೂಪದ ಫೋಟೋ......