Sunday, 27 July 2014

ನನ್ನಮ್ಮ
 
ಇವತ್ತು ಕೋಟಕ್ಕೆ ಹೋಗ್ತಾ ಇದ್ದೇನೆ. ನನ್ನ ಅಮ್ಮನ ತೊಡೆಯ ಮೂಳೆ ಮುರಿದಾಗ, ನಾಲ್ಕು ತಿಂಗಳ ಹಿಂದೆ ಮಾಡಿದ ಆಪರೇಶನ್ ಸರಿಯಾಗಲಿಲ್ಲ. ಈಗ ಮತ್ತೆ ಮಣಿಪಾಲದಲ್ಲಿ ನಾಳೆ ಆಪರೇಶನ್ ಮಾಡುತ್ತಿದ್ದಾರೆ. ಅವಳ ಆರೋಗ್ಯ ಮತ್ತು ಶೀಘ್ರ ಚೇತರಿಕೆಗೆ ನಿಮ್ಮೆಲ್ಲರ ಶುಭ ಹಾರೈಕೆಗಳಿರಲಿ.

(Today, I am on the way to Kota, my native village. Four months ago, when my aged mother got her thigh bone fractured, the surgey made did not make her fully normal, She was suffering from severe pain and unable to walk. Now, tomorrow, she is going to be operated again. Let all your good wishes be bestowed on her for her
successful operation and speedy recovery.)
 
 
23.07.2014
Photo: ಇವತ್ತು ಕೋಟಕ್ಕೆ ಹೋಗ್ತಾ ಇದ್ದೇನೆ. ನನ್ನ ಅಮ್ಮನ ತೊಡೆಯ ಮೂಳೆ ಮುರಿದಾಗ, ನಾಲ್ಕು ತಿಂಗಳ ಹಿಂದೆ ಮಾಡಿದ ಆಪರೇಶನ್ ಸರಿಯಾಗಲಿಲ್ಲ. ಈಗ ಮತ್ತೆ ಮಣಿಪಾಲದಲ್ಲಿ ನಾಳೆ ಆಪರೇಶನ್ ಮಾಡುತ್ತಿದ್ದಾರೆ. ಅವಳ ಆರೋಗ್ಯ ಮತ್ತು ಶೀಘ್ರ ಚೇತರಿಕೆಗೆ ನಿಮ್ಮೆಲ್ಲರ ಶುಭ ಹಾರೈಕೆಗಳಿರಲಿ.

(Today, I am on the way to Kota, my native village. Four months ago, when my aged mother got her thigh bone fractured, the surgey made did not make her fully normal,  She was suffering from severe pain and unable to walk.  Now, tomorrow, she is going to be operated again. Let all your good wishes be bestowed on her for her
successful operation and speedy recovery.)
ಅಧಿಕಾರಿಗಳು ಮತ್ತು ಸ್ಥಳೀಯ ಭಾಷಾ ಜ್ಞಾನ - ಒಂದು ಅನುಭವ / ಅನಿಸಿಕೆ.

ಯಾವ ಅಧಿಕಾರಿಗಾದರೂ, ಸ್ಥಳೀಯ ಭಾಷೆಯ ಜ್ಞಾನವಿರುವುದು ಅತೀ ಅಗತ್ಯ. ಹಿಂದೆ ನಾನು bank service ನಲ್ಲಿದ್ದಾಗ, ಬಹಳ DC meeting ಗಳನ್ನು attend ಆಗಿದ್ದೆ. Young north indian IAS ಅಧಿಕಾರಿಗಳು DC ಗಳಾಗಿ ಬರುತ್ತಿದ್ದರು. ಅವರು ನಿರರ್ಗಳವಾಗಿ ಕನ್ನಡ ಮಾತನಾಡುತ್ತಿದ್ದರು. ಆಗ ನನಗೆ ತಿಳದು ಬಂದದ್ದೇನಂದರೆ, ಅಂಥಹ ನಿಜವಾದ service minded ಅಧಿಕಾರಿಗಳು, ತಮ್ಮ posting place ಗೊತ್ತಾದ ಕೂಡಲೇ, ಆ ಜಾಗದ ಸ್ಥಳೀಯ ಭಾಷೆಯನ್ನು crash course ಗಳ ಮೂಲಕ ಕಲಿಯುತ್ತಿದ್ದರು. ಇದರಿಂದ ಅವರ ಕರ್ತವ್ಯ ನಿರ್ವಹಣೆ ಜನೋಪಯೋಗಿಯೂ ಆಗಿರುತ್ತಿತ್ತು, ಅಲ್ಲದೆ ಕೆಟ್ಟ ಉದ್ದೇಶವುಳ್ಳ ಸ್ಥಳೀಯ ಜನರು ಅವರನ್ನು ಏಮಾರಿಸುವುದೂ ತಪ್ಪುತ್ತಿತ್ತು. ಕೆಲವು ಅಧಿಕಾರಿಗಳಂತೂ ಅತಿ ಹೆಚ್ಚು ಪ್ರಾದೇಶೀಯ ಭಾಷೆಗಳನ್ನು ಕಲಿಯುವುದನ್ನು ತಮ್ಮ ಗುರಿಗಳಲ್ಲಿ ಒಂದು ಎಂದು ತಿಳಿದು ಕೊಂಡಿರುತ್ತಿದ್ದರು.

ಇದಲ್ಲದೆ, ಜನ ಸಂಪರ್ಕ ಬರದ ಅಧಿಕಾರಿಗಳು ಸಹ ಸ್ಥಳೀಯ ಭಾಷೆ ಕಲಿತರೆ ಖಂಡಿತಾ ತಪ್ಪಿಲ್ಲ. ಅದು ಅಪೇಕ್ಷಣೀಯ.24.07.2014
ನಾಶ

ಆಗಷ್ಟೇ ಅರಳಿದ
ಸುಂದರ ಪುಷ್ಪವನ್ನು
ನೋಡಿ ಆನಂದಿಸದೆ,
ದೇವರ ದಿವ್ಯ ಸೃಷ್ಟಿ
ಎಂದು ಸಂತೋಷಿಸದೆ,
ಕಿತ್ತು ನೆಲಕ್ಕಪ್ಪಳಿಸಿ
ತುಳಿದು ತುಳಿದು
ನಾಶ ಮಾಡಿದರು
ವಿಕೃತ ಪಾಪಿಗಳು.25.07.2014
ಇಹದ ಸವಾರಿ.

ಅಕಾರಾಳ
ವಿಕಾರಾಳ
ಸ್ವರೂಪದ
ಒಂಟಿ ಒಂಟೆ ಸವಾರ,
ಸುಡು ಬಿಸಿಲು,
ಬಿಸಿ ಮರಳ ಗಾಳಿ,
ದಿಗಂತದಂಚಿನವರೆಗಿನ
ಮರಳುಗಾಡಲಿ
ಮರೀಚಿಕೆಯ ಭ್ರಮೆ,
ಎಷ್ಟು ಸವೆಸಿದರೂ
ಸವೆಯದ ದಾರಿಯೇ
ಅಲ್ಲದ ದಾರಿ,
ಪಾರು ಮಾಡೆಂಬ
ಮೊರೆಯನಾರೂ ಕೇಳರು,
ಬದಲಿಗೆ ಆಗೊಮ್ಮೆ ಈಗೊಮ್ಮೆ
ಬಿರು ನುಡಿಗಳ ದಾಳಿ,
ಇಹದಲಿ ಅಶಾಂತಿ
ಪರದ ನಿಶ್ಚಯವಿಲ್ಲ,
ಆದರೂ ನಡೆಯಲೇ
ಬೇಕು ಈ ಸವಾರಿ.
26.07.2014.

Tuesday, 22 July 2014

FB ಯಲ್ಲಿ ಕವನ ಮತ್ತು ಬರಹಗಳ ಬಗ್ಗೆ ಒಂದು ಮಾತು.

ನಾವು fb ಯಲ್ಲಿ ಬರೆಯುವುದು ನಮ್ಮ ಆತ್ಮ ಸಂತೋಷಕ್ಕೆ. ಮನದಲ್ಲಿ ಮೂಡಿದ ಭಾವನೆಗಳನ್ನು ಸಭ್ಯ ರೀತಿಯಲ್ಲಿ ಗದ್ಯ ಅಥವಾ ಪದ್ಯದ ರೂಪದಲ್ಲಿ ಹೊರಹಾಕುವ ಸ್ವಾತಂತ್ರ್ಯ ನಮಗಿದೆ ನನ್ನದೊಂದು ವೈಯುಕ್ತಿಕ ಅಭಿಪ್ರಾಯವೆಂದರೆ, ಬರೆದದ್ದು ಓದುವವರಿಗೆ ಅರ್ಥವಾಗುವಂತಿದ್ದರೆ ಒಳ್ಳೆಯದು.ಯಾಕಂದರೆ ಇಲ್ಲಿಯ ಓದುಗರೆಲ್ಲರೂ ವಿದ್ವಾಂಸರೇ ಆಗಿರುವುದಿಲ್ಲ. ಇನ್ನು ಕಾಮೆಂಟುಗಳು. ಅವನ್ನು ಲೈಟ್ ಆಗಿ ತೊಗೊಳ್ಲ ಬೇಕು. ಯಾರಾದರೂ ಅರ್ಥವಾಗಲಿಲ್ಲವೆಂದರೆ, ಕವನದ ಹಿಂದಿರುವ ನಮ್ಮ ಅರ್ಥ ಮತ್ತು ಇಂಗಿತವನ್ನು ವಿವರಿಸಿ ಹೇಳುವ ತಾಳ್ಮೆ ನಮಗಿರಬೇಕು. ಅಸಭ್ಯವಲ್ಲದ ತಮಾಶೆಯ ಕಾಮೆಂಟುಗಳನ್ನು sportive ಆಗಿ ನಕ್ಕು ಸುಮ್ಮನಾಗಬೇಕು. ಯಾರಾದರೂ ಅಸಭ್ಯವಾದ ಕಾಮೆಂಟುಗಳನ್ನು ಮಾಡುತ್ತಿದ್ದರೆ ಅಂಥವರನ್ನು ನಿರ್ದಾಕ್ಷಿಣ್ಯವಾಗಿ unfriend ಮಾಡಿ block ಸಹ ಮಾಡಬೇಕು. ಬರೇ unfriend ಮಾಡಿದರೆ ಸಾಲದು block ಸಹ ಮಾಡಬೇಕು. ಅತೀ unparliamentary content ನ ಕಮೆಂಟ್ ಮಾಡುವವರಿದ್ದರೆ ಅಂಥವರನ್ನು report ಮಾಡಿ ಅವರ fb account ನ್ನೇ ಸ್ಥಗಿತ
ಗೊಳಿಸ ಬಹುದು. ನಮ್ಮ fb ಗೋಡೆ ನಮ್ಮ property. ಅಶ್ಲೀಲ ಮತ್ತು ಅಸಭ್ಯ, ಹಾಗೂ ಸಮಾಜಿಕ ಮತ್ತು ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಹೊರತು ಪಡಿಸಿ ನಾವು ಬೇಕಾದ್ದು ಬರೆಯ ಬಹುದು.

ಇದು, ಕೆಲವರು ಹಾಕಿದ ಸ್ಟೇಟಸ್ ಗಳನ್ನು ನೋಡಿದಾಗ ನನಗೆ ಅನ್ನಿಸಿದ್ದಷ್ಟೆ.


22.07.2014
ಅತ್ಯಾಚಾರ - ಒಂದು ಅನಿಸಿಕೆ.

ಗಂಡು ಮತ್ತು ಹೆಣ್ಣಿನ ನಡುವೆ ಸಹಜ ಆಕರ್ಷಣೆ ದುಷ್ಟವಾದ ಆಕರ್ಷಣೆ ಎರಡೂ ಮಾನವ ಜಾತಿಯಲ್ಲಿರುತ್ತದೆ. ದುಷ್ಟವಾದ ಆಕರ್ಷಣೆ rape ಇತ್ಯಾದಿಗಳಿಗೆ ಮುಂದುವರಿಯುತ್ತದೆ. ಸಹಜ ಆಕರ್ಷಣೆ ಪ್ರೀತಿ, ಪ್ರೇಮ ಮುಂದೆ ಮದುವೆ ಹೀಗೆ ಪರ್ಯವಸಾನವಾಗ ಬಹುದು. ಯಾರು ಏನೇ ಹೇಳಿದರೂ ಪ್ರಾಯದ ಹೆಣ್ಣಿನ ದೈಹಿಕ ರೂಪು ರೇಷೆ ಈ ಆಕರ್ಷಣೆಯ ಒಂದು ಮುಖ್ಯವಾದ ಮೂಲ. ಪ್ರಾಯದ ಹೆಣ್ಣು ಮೈಕಾಣುವ ಅಥವಾ ಮೈ ಬಿಗಿಯುವ ಬಟ್ಟೆ ಹಾಕಿ ಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ಬೇಕಾ ಬಿಟ್ಟಿ ತಿರುಗಿದರೆ ಸಹಜ ಮನಸ್ಥಿತಿ ಇರುವ ಗಂಡಸರು ಒಮ್ಮೆ ಅತ್ತ ಕಣ್ಣು ಹಾಯಿಸಿ ಸುಮ್ಮನಾಗ ಬಹುದು. ಇನ್ನೂ ಸ್ವಲ್ಪ ಚಂಚಲ ಚಿತ್ಟರು ಬಾಯಿ ಚಪ್ಪರಿಸಿ ಸುಮ್ಮನಿರಬಹುದು. ಆದರೆ, ವಿಕೃತ ಕಾಮಿ ಗಂಡಸರು ಸಮಯ ಕಾದು rape ನಂತಹ ದುಷ್ಕೃತ್ಯಗಳಿಗೆ ಇಳಿಯುತ್ತಾರೆ. ಆದ್ದರಿಂದ ಒಂದು ಮೈ ಮುಚ್ಚುವ ಸುಂದರವೂ ಆಗಿರುವ dress code ನ್ನು ಹುಡುಗಿಯರು ಅನುಸರಿಸುವುದು ಇಂಥ ಅಮಾನವೀಯ ಅಪರಾಧಗಳನ್ನು ತಡೆಯುವಲ್ಲಿ ಪೂರ್ಣವಲ್ಲದಿದ್ದರೂ ಸ್ವಲ್ಪವಾದರೂ ಸಹಕಾರಿ ಆಗಬಹುದು. ಈ ಬಗ್ಗೆ ಪೋಷಕರು ಹುಡುಗಿಯರಿಗೆ ಮೊದಲಿಂದಲೇ ತಿಳಿಸಿ ಹೇಳಿ ಒಪ್ಪಿಸಬೇಕು ಎಂದು ನನ್ನ ಅನಿಸಿಕೆ. ಈ ನನ್ನ ಸಲಹೆಯನ್ನು ಸ್ತ್ರೀ ಸ್ವಾತಂತ್ರ್ಯ ವಿರೋಧಿಯೆಂದು ವಿಮೋಚನವಾದಿಗಳು ತಿಳಿಯುವುದಾದರೆ ಕ್ಷಮೆಯಿರಲಿ. ಇದಲ್ಲದೆ ಸ್ವಭಾವತಹ ವಿಕೃತ ಕಾಮಿಗಳಾಗಿ ಚಿಕ್ಕ ಮಕ್ಕಳ ಮೇಲೂ ದೌರ್ಜನ್ಯವೆಸಗುವ ಪಾಪಿ ಗಂಡಸರನ್ನು, ಕ್ರೂರವಾಗಿ, ಅರಬ್ ದೇಶಗಳಲ್ಲಿರುವಂತೆ, ಶಿಕ್ಷಿಸಿದರೆ ಮಾತ್ರೆ , ಅಂತಹ ಅಪರಾಧಗಳು ಮುಂದೆ ಕಡಿಮೆಯಾಗ ಬಹುದು.ಈ ಪದ್ಧತಿಯ ಶಿಕ್ಷೆ ನಮ್ಮಂತಹ ಪ್ರಜಾತಂತ್ರ ದೇಶದಲ್ಲಿ ಕಷ್ಟವಾದರೂ, ಪ್ರಜೆಗಳೇ ಒಪ್ಪಿದರೆ ಕಷ್ಟವೇನಲ್ಲ .


20.07.2014

Friday, 18 July 2014

ದಯಾ ಮರಣ

ದಯಾ ಮರಣದ ಕುರಿತು ಮತ್ತಷ್ಟು ವಿಚಾರಗಳು
ಮತ್ತು ವಿಶೇಷಗಳು - ಮಹಾತ್ಮಾ ಗಾಂಧೀಜಿ ಸಹ
ದಯಾ ಮರಣದ ಪರವಾಗಿದ್ದರು ಎಂಬುದು ವಿಶೇಷ.
ಇಂದಿನ ವಿಜಯ ಕರ್ನಾಟಕದ ಈ ಪುಟವನ್ನು
ಆಸಕ್ತರು download ( right click -"save image as....")
ಮಾಡಿಕೊಂಡು"micro soft office picture manager" ನಲ್ಲಿ
zoom ಮಾಡಿಕೊಂಡು ಸುಲಭವಾಗಿ ಓದ ಬಹುದು.
ತಮ್ಮ ಪ್ರತಿಕ್ರಿಯೆ ಅಥವಾ ಅಭಿಪ್ರಾಯಗಳನ್ನು fb ನಲ್ಲಿ
ಯುಕ್ತವೆನಿಸಿದರೆ ವ್ಯಕ್ತ ಪಡಿಸ ಬಹುದು.
 
18.07.2014
Photo: ದಯಾ ಮರಣ

ದಯಾ ಮರಣದ ಕುರಿತು ಮತ್ತಷ್ಟು ವಿಚಾರಗಳು 
ಮತ್ತು ವಿಶೇಷಗಳು - ಮಹಾತ್ಮಾ ಗಾಂಧೀಜಿ ಸಹ 
ದಯಾ ಮರಣದ ಪರವಾಗಿದ್ದರು ಎಂಬುದು ವಿಶೇಷ.
ಇಂದಿನ ವಿಜಯ ಕರ್ನಾಟಕದ ಈ ಪುಟವನ್ನು
ಆಸಕ್ತರು download ( right click -"save image as....")
ಮಾಡಿಕೊಂಡು"micro soft office picture manager" ನಲ್ಲಿ
zoom ಮಾಡಿಕೊಂಡು ಸುಲಭವಾಗಿ ಓದ ಬಹುದು.
ತಮ್ಮ ಪ್ರತಿಕ್ರಿಯೆ ಅಥವಾ ಅಭಿಪ್ರಾಯಗಳನ್ನು fb ನಲ್ಲಿ
ಯುಕ್ತವೆನಿಸಿದರೆ ವ್ಯಕ್ತ ಪಡಿಸ ಬಹುದು.

ಕಡಲ ಮೊರೆ.

ಚಂದಿರ ಕರೆದ
ನಸು ನಗುತ
ಏರಿ ಬಾ ನನ್ನ
ಬಳಿ ನಿನಗಾಗಿ
ಕಾಯುತಿಹೆನೆಂದ.
ಕಡಲು ಮೊರೆಯಿತು
ಜಿಗಿ ಜಿಗಿದು
ಕೈ ಮೇಲೆತ್ತಿ,
ನಾ ಬರುವೆನೆಂದು.
ಕಳ್ಲ ಚಂದಿರ
ಮರೆಯಾದ
ಮೋಡಗಳೆಡೆಯಲ್ಲಿ,
ಕಡಲತ್ತಿತು,
ಆಸೆ ಬತ್ತಿತು
ಮೊರೆತ ನಿಂತಿತು,
ಜರಿದು ಚಂದಿರನ
ಕಡೆಗೆ ನುಗ್ಗಿತು
ತನ್ನನ್ನೇ ಸೇರಿದ
ನದಿಗಳಳಿವೆಗಳಲ್ಲಿ,
ಶಾಂತವಾಯಿತು,
ಶಾಂತವಾಯಿತು.

18.07.2014

Monday, 14 July 2014

ಓ ದೇವ ಕರುಣಿಸು ....


ರಾಗ ದ್ವೇಷಗಳ ಸರ ಮಾಲೆ
ಮನದಲ್ಲಿ ತುಂಬಿರುವ ವಂಚನೆಯ
 ಆಲೋಚನೆಗಳು
ಹುಡುಕಿದರೂ ಸಿಗದ ಕಾರುಣ್ಯ
ಎಲ್ಲೋ ಯಾವಾಗಲೋ
ಮರೆಯಾದ  ಮಾನವತೆ ,
ನಾ ಮೇಲು ನೀ ಕೀಳೆಂಬ
ಅಸತ್ಯದ ಅಮಲು ,
ಬರುವ ಸುಖವೆಲ್ಲಾ ನನಗೇ
ಬರಲೆಂಬ ದುರಾಸೆ,
ಹೊಂದಿಕೊಳ್ಳಲಾರದ  ಸ್ವಪ್ರತಿಷ್ಠೆ
ಪೂಜೆಯ ಹೆಸರಲ್ಲಿ ಕಂದಾಚಾರಗಳು,
ಒಂದೇ , ಎರಡೇ
ಎಲ್ಲವನ್ನೂ ಹೆಸರಿಸಲಾರೆ,
ಮನುಷ್ಯನಾಗಿದ್ದಾನೆ
ಮನುಷ್ಯ ಜನ್ಮದ ವಿರೂಪ ,
ದೇವ ನೀನೆ ಕರುಣಿಸು
ಸದ್ಬುದ್ಧಿ, ಸನ್ನಡತೆ, ಸಜ್ಜನಿಕೆಯ ವರವನು
ಒಮ್ಮೆ ಪಾವನವಾಗಲಿ  ಈ ಭೂಮಿ
ಎಲ್ಲ ದುರುಳತೆಯು ತೊಲಗಿ.

15.07.2014


ಮರಣ.

ಆತ್ಮ ಮತ್ತು ಜೀವ ಎರಡೂ ನನ್ನ ದೃಷ್ಟಿಯಲ್ಲಿ ಅಸ್ಪಷ್ಟ. ಆತ್ಮ ಮತ್ತು ಜೀವ/ಜೀವ ಅಥವಾ ಆತ್ಮ ದೇಹ ತೊರೆಯುವಂತೆ ಮಾಡಬಹುದು. ಈ ಕೆಲಸ ಸ್ವತಃ ಸಾಮಾನ್ಯರು ಮಾಡಿಕೊಂಡರೆ ಅದನ್ನು ರೂಢಿಯಲ್ಲಿ ಆತ್ಮಹತ್ಯೆ ಅಂತಾರೆ, ಅದನ್ನೆ ಸ್ವಾಮಿಗಳು ಮಾಡಿಕೊಂಡರೆ ಸಮಾಧಿ ಅಂತಾರೆ, ತಾನಾಗಿಯೆ ಆದರೆ ಸಾವು ಅಂತಾರೆ, ಬೇರೆ ಯಾರಿಂದಾದರೂ ಆದರೆ ಆಗ ಕೊಲೆ ಅಂತಾರೆ. ಹೀಗೆ ಯಾವ ರೀತಿಯಾದರೂ ಪರಿಣಾಮ ಒಂದೇ. ಜೀವ ಮತ್ತು ಆತ್ಮ/ಜೀವ ಅಥವಾ ಆತ್ಮ ದೇಹದಿಂದ ಬೇರೆಯಾಗುವುದು, ಆ ನಂತರ ದೇಹ ನಿಶ್ಕ್ರಿಯವಾಗುವುದು. ಅದೇ "ಮರಣ"


14.07.2014
ಮಳೆ.

ಬಾರದ ಮಳೆಯೇ
ಜೋರಾಗಿ ಬಾ....
ಭೂಮಿ ತಾಯಿಗೆ
ಹಸಿರು ಉಡಿಸಿ
ತಂಪು ಗೈಯಲು ಬಾ..
ರೈತನೆದೆಗೆ ಬಲವ
ತುಂಬಲು ಬಾ....
ಜಲಾಶಯಗಳು ತುಂಬಿ
ಬೆಳಕ ಹರಿಸಲು ಬಾ...
ನಮ್ಮ ಜೋಡಿಯನು
ಛತ್ರಿ ಅಡಿಯಲಿ
ಸನಿಹ ಸನಿಹಕೆ
ಬೆಚ್ಚಗೆ ನಡೆಸಲು ಬಾ......

14.07.2014
Photo: ಮಳೆ.

ಬಾರದ ಮಳೆಯೇ 
ಜೋರಾಗಿ ಬಾ....
ಭೂಮಿ ತಾಯಿಗೆ
ಹಸಿರು ಉಡಿಸಿ
ತಂಪು ಗೈಯಲು ಬಾ..
ರೈತನೆದೆಗೆ ಬಲವ
ತುಂಬಲು ಬಾ....
ಜಲಾಶಯಗಳು ತುಂಬಿ
ಬೆಳಕ ಹರಿಸಲು ಬಾ...
ನಮ್ಮ ಜೋಡಿಯನು
ಛತ್ರಿ ಅಡಿಯಲಿ
ಸನಿಹ ಸನಿಹಕೆ
ಬೆಚ್ಚಗೆ ನಡೆಸಲು ಬಾ......

14.07.2014
FACEBOOK - ಒಂದು ಅನಿಸಿಕೆ


FB ಇರುವುದು ಅನಾವಶ್ಯಕ ವಿವಾದ ಮತ್ತು ಜಗಳಕ್ಕಲ್ಲ. ಕೆಲವರ ವಿವಾದಾತ್ಮಕ ಹೇಳಿಕೆಗಳು, ಕೆಲವೊಮ್ಮೆ ನಮ್ಮನ್ನು react ಮಾಡಲು ಪ್ರಚೋದಿಸುತ್ತವೆ. ಅಂಥ ಸಮಯದಲ್ಲಿ ಜಾಗರೂಕತೆಯಿಂದ ಇರಬೇಕು. ಕೆಲವೊಮ್ಮೆ ಮೌನ, ಕೆಲವೊಮ್ಮೆ ಸರಳವಾದ ಕಾಮೆಂಟ್ ಸರಿ ಇರುತ್ತದೆ.

ಹಿಂದೊಮ್ಮೆ, ಒಬ್ಬರು ನವ್ಯ ಕವಿಗಳು, ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಕವಿತೆ ಓದಿದ ಒಬ್ಬರು ಹಿರಿಯ ಕವಿಗಳನ್ನು ಯಾರೆಂದು ಹೆಸರು ಹೇಳದೆ ಸಿಕ್ಕಾಬಟ್ಟೆ ಟೀಕಿಸುತ್ತಿದ್ದರು. ಆ ಬಗ್ಗೆ ಬಹಳ ಸ್ಟೇಟಸ್ ಹಾಕಿದ್ದರು. ನನಗೆ ಆಗಿನ್ನೂ fb ಹೊಸದು. ನನಗೆ, ನಿಜವಾಗಿ ಅವರು ಯಾರನ್ನು ದೂರುತ್ತಿದ್ದಾರೆಂದು ಗೊತ್ತಾಗಲಿಲ್ಲ. ನಾನು ಯಾರ ಬಗ್ಗೆ ಹೇಳುತ್ತಿದ್ದೀರೆಂದು ಪದೇ ಪದೇ ಕೇಳಿದೆ. ಅಷ್ಟಕ್ಕೇ ಸಿಟ್ಟಿಗೆದ್ದ ಆ ಮಹಾಶಯರು, ನನ್ನದೇ ಬುದ್ಧಿಮತ್ತೆಯ ಅವಹೇಳನಕಾರಿ ದೂಷಣೆಯನ್ನು ಶುರು ಮಾಡಿದರು. ಕೊನೆಗೆ, ಇವರ ಸಹವಾಸವೇ ಬೇಡವೆಂದು, ಅವರನ್ನು unfriend ಮತ್ತು block ಮಾಡಿ ನಿರಾಳವಾದೆ.

ಮತ್ತೊಂದು ಮಜದ ಸಂಗತಿಯೆಂದರೆ, ಅವರ ಸ್ಟೇಟಸ್ ಗಳನನ್ನು ಬರೇ like ಮಾಡಿದ ಬಹಳ ಮಂದಿಯಲ್ಲಿ ಕೆಲವರನ್ನು message box ಮುಖಾಂತರ ವಿಚಾರಿಸಿದೆ, " ಲೈಕ್ ಮಾಡಿದ್ದೀರಲ್ಲಾ, ನಿಮಗೇನಾದರೂ ಗೊತ್ತಾಯಿತಾ? " ಎಂದು. ಬಂದ ಉತ್ತರ ಏನು ಗೊತ್ತೇ, " ನಮಗೂ ಗೊತ್ತಾಗಲಿಲ್ಲ, ಹಾಗೇ ಸುಮ್ಮನೆ like ಒತ್ತಿದ್ದೇವೆ" ಎಂದು. ಹೇಗಿದೆ?
ಈಗ friends ನ್ನು ಮಾಡಿಕೊಳ್ಳುವಾಗ ಸ್ವಲ್ಪ ಅವರ timeline ಮೇಲೆ ಕಣ್ಣು ಹಾಯಿಸುತ್ತೇನೆ. ಬಹಳ ಕ್ರಾಂತಿಕಾರಿ ವಿಚಾರಗಳು, ವ್ಯಕ್ತಿ ನಿಂದನೆ, ಬರೇ (ನನಗೆ) ಅರ್ಥವಾಗದ ಕವಿತೆಗಳು, ನಿಷ್ಠುರವಾದ ರಾಜಕೀಯ ವಾದ, ಇತ್ಯಾದಿಗಳ ಬಗ್ಗೆ ಪೋಸ್ಟ್ ಹಾಕುವವರನ್ನು ಹಾಗು ಅಸಭ್ಯವಾದ ಭಾಷೆ ಬಳಸುವವರನ್ನು ಮೊದಲೇ ದೂರವಿಢುವ ಪ್ರಯತ್ನ ಮಾಡುತ್ತಿದ್ದೇನೆ. ವಿವಾದಿತ ವಿಷಯಗಳ ಬಗ್ಗೆ ಹೆಚ್ಚು ಗಹನವಾದ ಚರ್ಚೆಗೆ ಇಳಿಯುವುದಿಲ್ಲ.

ಹೀಗೆ, ಈಗ ತಕ್ಕ ಮಟ್ಟಿಗೆ fb ಯನ್ನು enjoy ಮಾಡ್ತಿದ್ದೇನೆ ಎನ್ನ ಬಹುದು.

13.07.2014

Friday, 11 July 2014

ಮರೆ.

ಎಲೆ ಮರೆಯ ಮೊಗ್ಗು
ಎಲೆ ಮರೆಯಲ್ಲೇ ಅರಳಿ
ಹೂವಾಯಿತು, ಕಂಪು
ಬೀರಿತು, ದುಂಬಿ ಮಾತ್ರ
ಹುಡುಕಿ ತೆಗೆದು
ಮಧು ಹೀರಿತು.
ಹೂವು ಉರುಳಿ ಆದ
ಕಾಯಿ ಹಣ್ಣಾಯಿತು,
ಅದೂ ಎಲೆ ಮರೆಯಲ್ಲೇ,
ಜಾಣ ಹಕ್ಕಿ ಹುಡುಕಿ
ತನ್ನ ಹಸಿವೆ ಹಿಂಗಿಸಿ
ಕೊಂಡು ಹಾರಿತು.
ಹೀಗೆ ಎಲೆ ಮರೆಯ
ಜೀವನ ಪಾವನವಾಯ್ತು.


11.07.2014

Thursday, 10 July 2014

ಗೆಳತಿ.
ನೀ ಎಲ್ಲಾದರು ಇರು
ಎಂತಾದರೂ ಇರು
ಎಂದೆಂದಿಗೂ
ನನ್ನವಳಾಗಿರು,
ಓ ಗೆಳತಿ,
ನನ್ನ ಮರೆವಿಗೆ
ನೀ ಮದ್ದಾಗಿರು
ನನ್ನ ಕವಿತೆಗೆ
ನೀ ಸಹಿಯಾಗಿರು
ಸಿಹಿಯಾಗಿರು.....

10.07.2014

Sunday, 6 July 2014

ಇದು ಬೇಕೇ? 20 ಸೆಕೆಂಡುಗಳ ಸಮಯದ ಉಳಿತಾಯ ಮಾಡಿ ಏನು ಸಾಧಿಸುತ್ತಾರೆ?
ಸಭೆ ಸಮಾರಂಭಗಳಿಗೆ ಗಂಟೆ ಗಂಟೆ ತಡವಾಗಿ ಬರುವ ಸಚಿವರಂಥ ಅತಿಥಿ ಮಹಾಶಯರಿಗೆ ನಾಡಗೀತೆ 20 ಸೆಕೆಂಡು ಉದ್ದವಿದ್ದರೆ ಏನು ತೊಂದರೆಯೋ ಏನೋ. ಅದಕ್ಕೋಸ್ಕರ ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಯಾಕೆ ಮುಕ್ಕು ಮಾಡಬೇಕು? ನನ್ನ ದೃಷ್ಟಿಯಲ್ಲಿ ಮಹಾಕವಿಗಳ ದಿವ್ಯ ಸೃಷ್ಟಿಯಲ್ಲಿ ಯಾರೇ ಆಗಲಿ, ಯಾಕೆ ಆಗಲಿ, ಕೈ ಆಡಿಸುವುದು ಶುದ್ಧ ತಪ್ಪು.
ಇದನ್ನು ಪ್ರಜ್ಞಾವಂತ ಸಾಹಿತಿಗಳು ಪ್ರತಿಭಟಿಸಬೇಕು.

(ಇದು ಇಂದಿನ ವಿಜಯ ಕರ್ನಾಟಕದಲ್ಲಿನ ಸುದ್ದಿ.)

03.07.2014
Photo: ಇದು ಬೇಕೇ? 20 ಸೆಕೆಂಡುಗಳ ಸಮಯದ ಉಳಿತಾಯ ಮಾಡಿ ಏನು ಸಾಧಿಸುತ್ತಾರೆ?
ಸಭೆ ಸಮಾರಂಭಗಳಿಗೆ ಗಂಟೆ ಗಂಟೆ ತಡವಾಗಿ ಬರುವ ಸಚಿವರಂಥ ಅತಿಥಿ ಮಹಾಶಯರಿಗೆ ನಾಡಗೀತೆ 20 ಸೆಕೆಂಡು ಉದ್ದವಿದ್ದರೆ ಏನು ತೊಂದರೆಯೋ ಏನೋ. ಅದಕ್ಕೋಸ್ಕರ ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಯಾಕೆ ಮುಕ್ಕು ಮಾಡಬೇಕು? ನನ್ನ ದೃಷ್ಟಿಯಲ್ಲಿ ಮಹಾಕವಿಗಳ ದಿವ್ಯ ಸೃಷ್ಟಿಯಲ್ಲಿ ಯಾರೇ ಆಗಲಿ, ಯಾಕೆ ಆಗಲಿ, ಕೈ ಆಡಿಸುವುದು ಶುದ್ಧ ತಪ್ಪು.
ಇದನ್ನು ಪ್ರಜ್ಞಾವಂತ ಸಾಹಿತಿಗಳು ಪ್ರತಿಭಟಿಸಬೇಕು.

(ಇದು ಇಂದಿನ ವಿಜಯ ಕರ್ನಾಟಕದಲ್ಲಿನ ಸುದ್ದಿ.)

03.07.2014
ಹೀಗೊಂದು "PUZZLE". ಇದು ನೀವು ದೊಡ್ಡವರಿಗೆ ಸುಲಭವಾಗಿ ಅರ್ಥವಾಗಬಹುದು. ಅಥವಾ ನಿಮಗೆ ಇದು ಈವಾಗಲೇ ಗೊತ್ತಿರ ಬಹುದು. ಇದನ್ನು ಬಿಡಿಸಲು ನಿಮ್ಮ ಮಕ್ಕಳಿಗೆ ಹೇಳಿ............

"ಒಂದು ನದಿ. ನದಿ ದಡಕ್ಕೆ ಒಬ್ಬ ಮನುಷ್ಯ ಬಂದ. ಅವನ ಹತ್ತಿರ ಒಂದು ಹುಲ್ಲಿನ ಹೊರೆ (BUNDLE OF GRASS), ಒಂದು ಆಕಳು ಮತ್ತು ಒಂದು ಹುಲಿ ಇದ್ದವು. ಅವನಿಗೆ ಈ ಮೂರನ್ನೂ ಸುರಕ್ಷಿತವಾಗಿ ನದಿಯ ಇನ್ನೊಂದು ದಡಕ್ಕೆ ಸಾಗಿಸ ಬೇಕಿತ್ತು. ಅಲ್ಲಿದ್ದದ್ದು ಒಂದೇ ದೋಣಿ (BOAT).
ಅದರಲ್ಲಿ ಒಂದು ಸಲಕ್ಕೆ ಈ ಮೂರರಲ್ಲಿ ಒಂದು ಮತ್ತು ಅವನು ಮಾತ್ರ ಹೋಗ ಬಹುದಿತ್ತು
ಹೀಗಿರುವಾಗ, ಅವನು ಈ ಮೂರನ್ನೂ (ಹುಲ್ಲಿನ ಹೊರೆ, ಆಕಳು ಮತ್ತು ಹುಲಿ} ಯಾವ ರೀತಿಯಲ್ಲಿ ನದಿಯ ಇನ್ನೊಂದು ದಡಕ್ಕೆ ಸುರಕ್ಷಿತವಾಗಿ ಸಾಗಿಸುತ್ತಾನೆ?"

ಬೇಗ ಉತ್ತರ ಹೇಳಿದವರು ಜಾಣರು .

04.07.2014
Friends, Today is the Marriage Anniversary of my son Dr.Kiran and daughter-in-law
Dr.Kavitha. Let your blessings and good wishes bestow on them.

06.07.2014
Photo: Friends, Today is the Marriage Anniversary of my son Dr.Kiran and daughter-in-law 
Dr.Kavitha. Let your blessings and good wishes bestow on them.

06.07.2014
ಆಸೆ

ಗುಳಿ ಬಿದ್ದ ಕಣ್ಣುಗಳು
ಕೆದರಿದ ಬಿಳಿ ಕೂದಲು
ಸುಕ್ಕು ಕಟ್ಟಿದ ಚರ್ಮ
ಹೊರಳದ ನಾಲಿಗೆ
ತುಸುವೇ ಆಡುತ್ತಿದ್ದ ಉಸಿರು,
90 ದಾಟಿ ಮಲಗಿದ ನಮ್ಮಜ್ಜನ
ತುಟಿಗಳಷ್ಟೇ ಅಲುಗಾಡಿದವು,
ಇನ್ನು ಹೆಚ್ಚು ಸಮಯವಿಲ್ಲ
ಎಂದು ಕೊಂಡೆವು ನಾವು.
ಮೆಲ್ಲ ಕೈ ಸನ್ನೆ ಮಾಡಿ
ಕರೆದರು ಹತ್ತಿರ, ಹೋಗಿ
ಅವರ ತುಟಿಗೆ ಕಿವಿಯಾನಿಸಿದೆ,
ಅವರ ಕೊನೆಯಾಸೆ ಕೇಳಿ ದಂಗಾದೆ
ಆದರೂ ಓಡಿದೆ ಜಡಿ ಮಳೆಯಲ್ಲಿ,
ತಂದು ತಿನಿಸಿದೆ ಅಜ್ಜನಿಗೆ
ಉದ್ದಿನ ವಡಾ ಮತ್ತು ಈರುಳ್ಳಿ ಭಜಿಯನ್ನು,
ಗುಳಿ ಬಿದ್ದ ಕಣ್ಣುಗಳು ಮಿನುಗಿದವು,
ತೃಪ್ತಿ ಕಾಣಿಸಿತು ಮುಖದಲ್ಲಿ,
ಮತ್ತೂ ಒಂದು ವರ್ಷ
ಬದುಕಿದ್ದರು ನಮ್ಮಜ್ಜ.

05.07.2014.

Wednesday, 2 July 2014

ವಿರಹ - ಮಿಲನ

ಅರ್ಥವಾಗದ ಕಸಿವಿಸಿ,
ಭಾರವಾದ ಹೃದಯ,
ದೀರ್ಘವಾದ ನಿಟ್ಟುಸಿರುಗಳ
ಕಡಲು ಭೋರ್ಗರೆದರೂ
ಮಿಸುಕಾಡುತ್ತಿಲ್ಲ ಮನ,
ನೀರವ ರಾತ್ರಿಯಲ್ಲಿ
ಜೀರುಂಡೆಗಳ ಸದ್ದು,
ಮತ್ತಷ್ಟು ಜಡಗೊಂಡಿದೆ ದೇಹ,
ಏಕೆ ಹೀಗೆಂದು ಅರ್ಥವಾಗದೆ
ಬಳಲಿದೆ, ತೊಳಲಾಡಿದೆ,
ಕಡೆಗೊಮ್ಮೆ ರಾತ್ರಿ ತಡವಾಗಿ
ಬಂದ ಚಂದಿರ ನಸುನಗುತ
"ನಿನ್ನಳಲು ನಾನಿಲ್ಲದೆ" ಅಂದ.
ಕೇಳಿ ಗರಿ ಕೆದರಿತು ನನ್ನ ಮನ,
ಹೌದೆನಿಸಿ ಹೂವಿನಂತೆ ಹಗುರಾದೆ,
ಇನಿಯನೆದೆಯಲ್ಲಿ ತಲೆಯಿಟ್ಟು ಮೈ ಮರೆತೆ.


02.07.2014
ಮಲ್ಲಿಗೆ.

ನಮ್ಮ ಮನೆಯಂಗಳದಲ್ಲಿ
ಅರಳಿದ ಮಧುರ ಮಲ್ಲಿಗೆ,
ಬೀರಿದೆ ಕಂಪನು ಎಲ್ಲೆಡೆಗೆ,
ಶುಭ್ರ ಬಿಳಿ ವದನಾರವಿಂದ,
ಸಂಜೆಗತ್ತಲಿನ ಇನಿಸಮಯದಲ್ಲಿ
ಸದಾ ಶಾಂತಿಸಂದೇಶವ ಹೊತ್ತು
ಓಲೈಸುವ ತಂಗಾಳಿಗೆ ಮೈ ಮರೆತು
ತೊನೆದಾಡಿದೆ ಆನಂದದಿಂದ.

01.07.2014
5 Star Hospitals.

ದುಡ್ಡಿದ್ದವರಿಗೆ ಆಸ್ಪತ್ರೆಗಳಲ್ಲಿ ಸಹ 5 star ಸೌಕರ್ಯಗಳು ಸಿಗುತ್ತವೆ. ಹೆಚ್ಚಿನ ಒಳ್ಳೆಯ private ಆಸ್ಪತ್ರೆಗಳಲ್ಲಿ charge ಮಾಡುವಾಗ grading system, ಅನುಸರಿಸುತ್ತಾರೆ. ಅಂದರೆ, ಉದಾಹರಣೆಗೆ, ಒಂದೇ operation ಗೆ general ward ನಲ್ಲಿ 10000, semi special ಆದರೆ 15000, super special ಆದರೆ 20000 ಚಾರ್ಜ್ ಮಾಡುತ್ತಾರೆ. ವಿಶೇಷವೆಂದರೆ, ಈ ಎಲ್ಲಾ operations ಒಬ್ಬನೇ surgeon ಒಂದೇ ಒಳ್ಲೆಯ ರೀತಿಯಲ್ಲಿ ಮಾಡಿರುತ್ತಾನೆ. ಎಲ್ಲಾ service ಗಳಿಗೂ ಇದೇ ರೀತಿ ವ್ಯತ್ತಾಸವಿರುತ್ತದೆ. ಈ ಪದ್ದತಿಯ ತತ್ವ ಒಳ್ಳೆಯದು ಅನ್ನಿಸುತ್ತದೆ. ಇದ್ದವರು ಜಾಸ್ತಿ ಕೊಡಲಿ, ಇಲ್ಲದವರಿಗೆ ಸವಲತ್ತು ಸಿಗಲಿ ಅಂತ. Charges ಸ್ವಲ್ಪ higher side ಇರಬಹುದು. ಆಧುನಿಕ ರೀತಿಯ treatment ಗೆ ಇದು ಅವಶ್ಯವಿರ ಬಹುದು. ಆದರೆ ಸುಲಿಗೆಯ ಮಟ್ಟ ತಲುಪ ಬಾರದು. ಅಷ್ಟೆ.

02.07.2014