Tuesday 26 April 2016

ನಾನು ಮೋದೀಜೀಯವರ "ಮನ್ ಕೀ ಬಾತ್" ಈ ನನ್ನ ರೇಡಿಯೋದಲ್ಲೇ ಕೇಳೋದು........ 😊
ನೀವೆಲ್ಲರೂ ಬನ್ನಿ......ನಾವೆಲ್ಲರಾಗಿ, ಒಂದಾಗಿ ಕೇಳೋಣ. .... 😊..(ನನ್ನ ಮಗ, 36 ವರ್ಷಗಳ ಹಿಂದೆ...... smile emoticon )
ಮರ್ಯಾದೆಗೋಸ್ಕರ
ಹಣ ಕಳೆದು ಕೊಂಡರೆ
ಪರ್ವಾಗಿಲ್ಲ...ಆದರೆ,
ಹಣಕ್ಕೋಸ್ಕರ ಮರ್ಯಾದೆ
ಕಳೆದು ಕೊಳ್ಳುವುದು
ಖಂಡಿತಾ ಸರಿಯೆನಿಸದು.
****ದಾರ್ಶನಿಕ
ಇದು ಸುಮಾರು ಮುವತ್ತು ವರ್ಷಗಳ ಹಿಂದಿನ ಫೋಟೋ. ಇವತ್ತು ಮನೆ ಕ್ಲೀನ್ ಮಾಡುವಾಗ ಅಕಸ್ಮಾತ್ ಸಿಕ್ಕಿತು. ನಾನು ರಾಣೆಬೆನ್ನೂರ್ ತಾಲೂಕಿನ ಒಂದು ಹಳ್ಳಿ, "ತುಮ್ಮಿನಕಟ್ಟಿ"ಯಲ್ಲಿ ಸಿಂಡಿಕೇಟ್ ಬ್ಯಾಂಕ್ ನ ಬ್ರ್ಯಾಂಚ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ, ಒಬ್ಬರು ರೈತರಿಗೆ ಟ್ರ್ಯಾಕ್ಟರ್ ತೆಗೆದು ಕೊಳ್ಳಲು ಬ್ಯಾಂಕಿನಿಂದ ಸಾಲ ಸಹಾಯ ಮಾಡಿ, ಆ ಟ್ರ್ಯಾಕ್ಟರ್ ಕೀ ಯನ್ನು ರೈತ ಬಂಧುವಿಗೆ ಹ್ಯಾಂಡ್ ಓವರ್ ಮಾಡುತ್ತಿರುವಾಗ ತೆಗೆದ ಫೋಟೋ........ಬೆಲ್ ಬಾಟಮ್ ಪ್ಯಾಂಟುಗಳ ಕಾಲ....smile emoticon ಇದರಲ್ಲಿ, ರೈತನಿಗೆ ಕೀ ನೀಡುತ್ತಿದ್ದವನೇ ನಾನು...... smile emoticon ಹಳೇ ನೆನಪಿನ ಕುರುಹುಗಳು ಸಿಕ್ಕಿದಾಗ, ಖುಶಿಯಾಗುತ್ತದೆ..... smile emoticon
ಬೊಂಬಾಟ್ ಮಗ, ಮೊಮ್ಮಗ..

Friday 15 April 2016

ಪ್ರೀತಿಯ ಪಿಸು ಮಾತುಗಳು.... smile emoticon (Whispers of Love)
======================
ಅದೆಂಥ ಪ್ರೇಮ ಸುಗಂಧ
ಸೂಸಿ, ಬೀಸಿ ತರುತ್ತಿದೆ
ಈ ಕಂಪಿನ ತಂಗಾಳಿ...
ಸಂಪಿಗೆ ಮೊಗ್ಗಿನ ಮೂಗಿನಲಿ
ಅರೆ ಬಿರಿದ ಕಂಗಳಲಿ ಏನದು,
ಪ್ರೇಮದ ತಾದಾತ್ಮ್ಯ ಭಾವವೇ?
ಹೊಂಬಣ್ಣದ ಹೇ ಸುಂದರಿ
ನಿನ್ನ ಚದುರಿದ ಕೇಶರಾಶಿಯ
ಜತನದಿ ಹಿಡಿದುಕೋ....
ಜೋಪಾನ, ದುಂಬಿಗಳು
ಕದ್ದೊಯ್ದಾವು ಈ ಕೇಶವ
ತಮ್ಮರಮನೆಯ ಶೃಂಗರಿಸಲು,
ಮಂದ ಮಾರುತವೇನು
ಉಸಿರಿತು ನಿನ್ನ ಕಾಣದ
ಕರ್ಣಗಳಲಿ, ಇನಿಯನ ಒಸಗೆಯೇ?
ಬರುವನಂತೇನು ಇನಿಯ?
ಅದಕ್ಕೇನೇ ಈ ಪರಿ
ಖುಶಿಯ ಹರ್ಷೋಲ್ಲಾಸವೇ?
ಚಿಂತಿಸದಿರು ಅಲ್ಲಿರುವನವ
ಚಿಗುರು ಫಲಗಳ ಮರೆಯಲ್ಲಿ,
ಬಂದೀವ ಸವಿ ಮುತ್ತುಗಳ
ಬಿಸಿಯಪ್ಪುಗೆಯ ಬಂಧನದಲ್ಲಿ.
+++++++++++++++++++++

Sunday 10 April 2016

ತಮ್ಮ ಬಾಲ್ಯದಲ್ಲಿ ನಡೆದ
ಘಟನೆಗಳನ್ನು ತಾವು
ದೊಡ್ಡವರಾದ ಮೇಲೆ
ನೆನಪಿಟ್ಟು ಕೊಳ್ಳುವ
ವಯಸ್ಸಿಗೆ ಮಕ್ಕಳು 
ಬೆಳೆದ ನಂತರ, ಅವರನ್ನು
ಒಳ್ಳೆಯದರಲ್ಲಿ ತಿದ್ದಿ
ಬುದ್ಧಿ ಹೇಳದೆ,
ಶಿಸ್ತಿನ ಪಾಠದ ಹೆಸರಿನಲ್ಲಿ
ಅಮಾನವೀಯವಾಗಿ
ಜರಿದು ದಂಡಿಸುವ
ತಂದೆ ತಾಯಂದಿರು,
ವೃದ್ಧಾಶ್ರಮದಲ್ಲಿ ತಮಗೋಸ್ಕರ
ಮೊದಲೇ ಸೀಟುಗಳನ್ನು
ರಿಸರ್ವ್ ಮಾಡಿಸಿಟ್ಟು
ಕೊಳ್ಳುವುದು ಒಳ್ಳೆಯದು... frown emoticon
*****ದಾರ್ಶನಿಕ
ಬುದ್ಧಿ ಸರಿಯಾಗಿದ್ದು,
ಕೈ ಕಾಲುಗಳು
ಗಟ್ಟಿಯಾಗಿರುವಾಗಲೇ
ಬೆಟ್ಟ ಹತ್ತಿ ಬಿಡುವುದು ಲೇಸು..
****ದಾರ್ಶನಿಕ
ಒಂದು ವರ್ಷದ ಹಿಂದೆ ಬರೆದ (ಕವಿತೆ ಎನ್ನ ಬಹುದಾದರೆ) ಒಂದು ಕವಿತೆಯ
ಸಾಲುಗಳು.......ಈಗಲೂ ಕೋಗಿಲೆ ಹಾಗೇನೇ ಕೂಗುತ್ತಿದೆ.....
ಅನಂತದಿಂದ ನಿರಂತರ ಬರುವ, ಕೆಲವೊಮ್ಮೆ ಏಕತಾನದ, ಕೆಲವೊಮ್ಮೆ
ಏರಿಳಿತದ, ಕೆಲವೊಮ್ಮೆ ಮಧುರವೆನಿಸುವ, ಮತ್ತೊಮ್ಮೆ ವಿರಹದ ದುಃಖವೆನಿಸುವ, ಮಗುದೊಮ್ಮೆ ಸಂತೋಷದ ಕೇಕೆ ಎನಿಸುವ ದನಿ smile emoticon...................ಮತ್ತೊಮ್ಮೆ
ನಿಮ್ಮಲ್ಲಿ ಹಂಚಿಕೊಳ್ಳುವ ಅನಿಸಿತು.....smile emoticon ಅದಕ್ಕೇ ಈ copy & paste.
==============================================
ಎಲ್ಲಿರುವೇ...ನೀ ಕೋಗಿಲೆ
**********************
ಎಲ್ಲಿಂದಲೋ
ಮಾಮರದೆಡೆಯಿಂದ
ಕಾಣದ ಕೋಗಿಲೆಯ
ಇಂಚರ ಕೇಳಿಸುತ್ತಿದೆ
ಅದೇನು ಹಾಡೋ
ವಿರಹದ ಕರೆಯೋ
ತಿಳಿಯದು.
ನನಗಂತೂ ಆ
ದನಿ ವಿರಹದ
ವೇದನೆಯ ನೋವಿನ
ಕರೆಯಂತೆ ಕೇಳುತ್ತಿದೆ.
ಆದರೆ ಕವಿಗಳು
ಕೋಗಿಲೆ ಹಾಡುತ್ತದೆ
ಎಂದು ಬರೆಯುತ್ತಾರೆ,
ಗಾಯಕರು "ಕೋಗಿಲೆ
ಹಾಡುತಿದೆ" ಎಂದು
ತಾವೇ ಹಾಡುತ್ತಾರೆ....
ಏನು ನಿನ್ನ ಸಮಸ್ಯೆ
ಎಂದು ಕೇಳೋಣವೆಂದರೆ,
ಅದು ಕಣ್ಣಿಗೇ ಕಾಣುತ್ತಿಲ್ಲವೇ,
ತನ್ನ ಕುರೂಪ ಮುಚ್ಚಿಡಲೋ ಏನೋ
ಅದೆಲ್ಲೋ ಅಡಗಿ ಕುಳಿತಿದೆ
ಬರೇ ದನಿ ಕೇಳಿಸುತ್ತಿದೆ
ಶೂನ್ಯವೆನಿಸುವ
ಕಾಣದ ಅನಂತದಿಂದ.....
ಕಾಣದ ಅನಂತದಿಂದ.....
08.04.2015
ಜಗಳದ ಪರಾಕಾಷ್ಟೆ.
=============
ದಿನಾ ಗಂಡ ಹೆಂಡಿರ ಜಗಳ,
ಕೂತರೆ ಜಗಳ, ನಿಂತರೆ ಜಗಳ.
ಮನೆಯ ಒಳಗೂ ಜಗಳ
ಮನೆಯ ಹೊರೆಗೂ ಜಗಳ
ಹೋದಲ್ಲಿಯೂ ಜಗಳ
ಬಂದಲ್ಲಿಯೂ ಜಗಳ
ಒಂದು ದಿನ ಕಾರಿನಲ್ಲಿ ಪ್ರಯಾಣ
ಬದಿಯಲ್ಲಿ ಕುಳಿತ ಹೆಂಡತಿ
ಜಗಳ ಶುರು ಹಚ್ಚಿ ಕೊಂಡೇ ಇದ್ದಳು
ಹಿಂದರೆಡು ಮಕ್ಕಳು ತಲೆ ಮೇಲೆ
ಕೈ ಹೊತ್ತು ಕುಳಿತಿದ್ದವು
ಗಂಡ ಗೋಗರೆದ, ಡ್ರೈವಿಂಗ್
ಮಾಡುವಾಗಲಾದರು ಸುಮ್ಮನಿರು ಕಣೆ
ಲಕ್ಷ್ಯ ತಪ್ಪಿದರೆ ಆಕ್ಸಿಡೆಂಟ್ ಆಗುತ್ತೇ....
ನೀವೇನು ಬಾಯಲ್ಲಿ ಡ್ರೈವ್ ಮಾಡ್ತೀರಾ
ಕೈಯಲ್ಲಿ ಡ್ರೈವ್ ಮಾಡ್ತಿದ್ದೀರಾ.....ಮತ್ತದೇ ಜಗಳ
ಗಂಡನ ಏಕಾಗ್ರತೆ ತಪ್ಪಿತು,
ಎದುರಿನಿಂದ ಬಂದ ಲಾರಿಯೊಂದು
ಬಲ ಬದಿಗೆ ಗುದ್ದಿತು......
ಡ್ರೈವ್ ಮಾಡುತ್ತಿದ್ದ ಗಂಡ
ಗಂಡನ ಹಿಂದೆ ಕುಳಿತಿದ್ದ ಎರಡು
ಪುಟ್ಟ ಮಕ್ಕಳು ಸೀದಾ ಶಿವನ ಪಾದಕ್ಕೆ..
ಇವಳು ಸಾಯಲಿಲ್ಲ, ಆದರೆ ಬಲಗೈ
ತುಂಡಾಯ್ತು........ಈಗ ಜಗಳವಾಡಲು
ಗಂಡನಿಲ್ಲವಲ್ಲ ಎಂದು ಕೊರಗ್ತಾ ಇದ್ದಾಳೆ.... frown emoticon
ನಾನು ಸೌಂದರ್ಯಾರಾಧಕ,
ಯಾವುದೇ ಸೌಂದರ್ಯವಿರಲಿ
ನನಗದು ಮೆಚ್ಚಿಗೆ, ಇಷ್ಟ.....ಆದರೆ,
ಈ ಸೌಂದರ್ಯೋಪಾಸನೆಯಲ್ಲಿ
ನಾನು ಮೋಸ ಹೋಗಿದ್ದೇ ಹೆಚ್ಚು,
ಸುಖ ಪಟ್ಟಿದ್ದು ಬಹಳ ಕಡಿಮೆ...frown emoticon
***ದಾರ್ಶನಿಕ
ಗುಡ್ಡಕ್ಕೂ ಗಡ್ಡಕ್ಕೂ
ತುದಿಗಳಿವೆ.......
ಒಂದಕ್ಕೆ ಮೇಲೆ,
ಇನ್ನೊಂದಕ್ಕೆ ಕೆಳಗೆ.,
ಗಡ್ಡದ ತುದಿಯನ್ನು
ಏನೂ ಮಾಡದೇ ಖಾಲಿ
ಕುಳಿತು ನೀವಿ ಕೊಳ್ಳ ಬಹುದು,
ಆದರೆ ಗುಡ್ಡದ ತುದಿಯನ್ನು
ನಿಲುಕುವ ಯೋಚನೆ ಮಾಡಲೂ
ಸಹ ಕಷ್ಟ ಪಡಬೇಕು....


ಅಮೃತ ಎನ್ನುವುದೊಂದು
ಇದೆಯೋ ಇಲ್ಲವೋ ಗೊತ್ತಿಲ್ಲ.
ನನಗಂತೂ ನಮ್ಮಾಕೆ
ಬೆಳಿಗ್ಗೆ ಬೈಕೊಂಡಾದರೂ
(ಯಾಕೆ ಇಷ್ಟು ಬೇಗ ಎಬ್ಬಿಸಿದಿರಿ ಎಂದು?)
ಮಾಡಿ ಕೊಡುವ ಒಂದು ಕಪ್
ಬಿಸಿ ಬಿಸಿ ಕಾಫಿಯೇ ಅಮೃತ......

😄 😄 😄
ನನ್ನಮ್ಮ......
============
ಅಮ್ಮ ನಿನ್ನ
ನಳಿಲ್ದೋಳುಗಳ
ಉಯ್ಯಾಲೆ ಇನ್ನೂ ನೆನಪಿದೆ.
ನೀನು ಲೊಚಗುಟ್ಟಿ
ಕೊಡುತ್ತಿದ್ದ ಮುತ್ತುಗಳ
ಸವಿ ಇನ್ನೂ ಸಿಹಿಯಾಗಿದೆ.
ನೀನಿಡುತ್ತಿದ್ದ ಕಚಗಳಿ
ನನ್ನಲ್ಲಿ ಮೂಡಿಸುತ್ತಿದ್ದ
ಕಿಲ ಕಿಲ ನಗು ಇನ್ನೂ ಹಸಿರಾಗಿದೆ
ನಿನ್ನಮೃತವ ಕಣ್ಣರೆ ಮುಚ್ಚಿ
ಹೀರಿ ಸವಿದ ಆನಂದ
ಇನ್ನೂ ನಾ ಮರೆಯಲಾರೆ
ನಿನ್ನ ಕೈತುತ್ತಿನ ಸವಿ ರುಚಿಯ
ನನ್ನೀ ನಾಲಗೆ
ಇನ್ನೂ ಮೆಲುಕಾಡುತ್ತಿದೆ
ನಿನ್ನ ತೋಳ ತಲೆದಿಂಬು,
ನನ್ನ ಬಳಸಿ ತಡವಿ ಬರಿಸಿದ
ನಿದ್ರೆಯಲ್ಲಿ ಅದೆಷ್ಟು ಸುಖವಿತ್ತು.
ನಿನ್ನ ಇನಿದನಿಯ ಜೋಗುಳ
ಆಡಿ, ಆಡಿ ದಣಿದ ನನಗೆ
ಸುಖದ ಸಂಜೀವಿನಿಯಾಗಿತ್ತು
ಅಮ್ಮಾ ನೀ ಬಾಳು ನೂರ್ಕಾಲ,
ನಿನ್ನ ಹರಕೆ ಸ್ಥಿರವಾಗಿರಲಿ
ಎಂದೆಂದಿಗೂ ನನ್ನ ಮೇಲೆ
ಎಂದೆಂದಿಗೂ ನನ್ನ ಮೇಲೆ..... smile emoticon
************************************
(87 ರ ಹರೆಯದ, ಇನ್ನೂ ನಮ್ಮೆಲ್ಲರ
ಸ್ಪೂರ್ತಿಯ ಚಿಲುಮೆ ಯಾಗಿರುವ ನಮ್ಮಮ್ಮ.... smile emoticon )
Like
Comment
ಎಲ್ಲರೂ ತನ್ನನ್ನು ಪ್ರೀತಿಸಲೇ
ಬೇಕೆಂದು ಬಯಸುವುದು ಒಂದು
ರೀತಿಯ ಅಹಂಕಾರದಿಂದ
ಕೂಡಿದ ಕೀಳರಿಮೆ.
*****ದಾರ್ಶನಿಕ
ಇಲ್ಲೊಬ್ಬರಿಗೆ ವಿಚಿತ್ರ ಕಾಯಿಲೆಯೋ, ಮನೋರೋಗವೋ
ಏನೋ. ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳುವ
ಬದಲು, ಅದನ್ನು ಬೇರೇ ಯಾರೋ ಹೇಳಿದರೆಂದು (ಯಾರು ಅಂದರೆ,
ನಮಗೆ ಅವರೊಡನೆ ಈ ವಿಚಾರವನ್ನು cross Check ಮಾಡಲು ಸಾಧ್ಯ
ಇರಬಾರದು, ಅಂಥವರ ಹೆಸರು ತೆಗೆದು) ನಮ್ಮ ಮೇಲೆ ಒತ್ತಡ
ಹೇರಲು ಯತ್ನಿಸುವುದು.
ಈ ಕಾಯಿಲೆಗೇನಾದರೂ ಪರಿಹಾರವಿದೆಯೇ?
ಬಾಹ್ಯ ಸೌಂದರ್ಯದ
ಭ್ರಮೆಯಿಂದ ಕೊನೆಗೂ
ಹೊರ ಬಂದ ಅವನಿಗೆ
ಕಾಲ ಮಿಂಚಿ ಹೋಗಿತ್ತು.
ಅಂತರಂಗದ ನಿಜ
ಸೌಂದರ್ಯವನ್ನು
ಮೆಚ್ಚಿ ಅನುಭವಿಸಲು
ಸಮಯವೇ ಸಿಗಲಿಲ್ಲ....frown emoticon
ಅತಿ ಶಿಸ್ತಿನ ತಂದೆ ತಾಯಂದಿರೇ
ಮಕ್ಕಳು ಸುಳ್ಳು ಹೇಳುವ
ಅಭ್ಯಾಸ ಬೆಳಸಿ ಕೊಳ್ಳಲು
ಮೂಲ ಕಾರಣರು. ಭಯವೇ
ಸುಳ್ಳಿನ ಉಗಮ.
***ದಾರ್ಶನಿಕ.
ಶೈಶವದಲ್ಲಿ
ಕೋಮಲತೆ ಸುಂದರ,
ಬಾಲ್ಯದಲ್ಲಿ
ಮುಗ್ದತೆಯೇ ಸೌಂದರ್ಯ,
ಯೌವನದಲ್ಲಿ
ಆಕರ್ಷಣೆಯೇ ಚೆಂದ,
ವಯಸ್ಕತೆಯಲ್ಲಿ
ಪ್ರಬುದ್ದತೆಯೆ ಭೂಷಣ,
ವೃದ್ಧಾಪ್ಯದಲ್ಲಿ
ಸಂತೃಪ್ತಿಯೇ ಸಾರ್ಥಕತೆ.
****ದಾರ್ಶನಿಕ
ಒಂದು ಕೈ ಯಿಂದ ಚಪ್ಪಾಳೆಯಾಗುವುದಿಲ್ಲ,
ಒಬ್ಬರಿಂದಷ್ಟೇ ಜಗಳವಾಗುವುದಿಲ್ಲ.
*****ದಾರ್ಶನಿಕ.
"ನಾವು ನಮಗಿಂತ ಹಿರಿಯರನ್ನು ಗೌರವಿಸಿದರೆ,
ನಮಗಿಂತ ಕಿರಿಯರು ನಮ್ಮನ್ನು ಗೌರವಿಸುತ್ತಾರೆ"
--ಸುಭಾಷಿತ.
ಒಮ್ಮೊಮ್ಮೆ ಹಾಗೇ ಸುಮ್ಮನೇ ಕುಳಿತಾಗ, ನನ್ನ ಪ್ರಿಯ ಮಿತ್ರ K. ಮಹಾಬಲೇಶ್ವರ ಭಟ್ ಅವರ ಈ ಚುಟುಕು ಬರಹವನ್ನು ನೆನಸಿಕೊಂಡು ಮನಸ್ಸಿನಲ್ಲೇ ಮುಗುಳು ನಗು
ಬರುತ್ತಿರುತ್ತದೆ...... smile emoticon
*****************************************
"ಮನೆಯಲ್ಲಿ ಪೂಜಾಕಾರ್ಯಕ್ರಮ ನಡೀತಾ ಇರೋವಾಗ ಹೆಂಗಸರು sleeveless blouse,ಬೆನ್ನು ತೋರಿಸೋ ರವಿಕೆ,ಇತ್ಯಾದಿ ಹಾಕ್ಕೊಂಡು ಓಡಾಡ್ತಾ ಇದ್ರೆ ಸುತ್ತಮುತ್ತಲಿನವರಿಗೆ ಭಕ್ತಿಭಾವವೇ ರಸಿಕಭಾವವಾಗಿ ವಿಜೃಂಭಿಸುವ ಸಾಧ್ಯತೆ ಹೆಚ್ಚು.(ಅರ್ಚಕರಿಗೆ ಮಂತ್ರ ತಪ್ಪೋ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗದು)"
ಆದರೆ, ಪೂಜೆ ನಡೆಯುವಲ್ಲಿ ಹೆಂಗಳೆಯರು ಹೀಗಿದ್ದರೆ ಭಾವ ಬದಲಾಗದು..... smile emoticon
ಚೆಂದದ ಬೆನ್ನು ಹತ್ತಿ ಹೋದೆ
ಬೆಚ್ಚಿ ಬಿದ್ದೆ ಹಿಂದೆ ಪರ್ಸನಾಲಟಿ
ಮುಂದೆ ಮುನಿಸಿಪಾಲಿಟಿ ನೋಡಿ,
ಬುದ್ಧಿಯ ಬೆನ್ನು ಹತ್ತಿ ಹೋದೆ
ತಾಳ ಮೇಳ ಹೊಂದದೆ
ಬುದ್ದಿ ಶೂನ್ಯನಾಗಿ ಸೋತೆ
ಬೆಳಕೇ ನೀನೇ ದಾರಿ ದೀಪವೆಂದೆ
ದಾರಿಯೇ ಕಾಣದಷ್ಟು ಕತ್ತಲಲ್ಲಿ
ಕಣ್ಣು ಕಣ್ಣು ಪಿಳುಕಿಸಿದೆ
ಹೋಗಲಿ, ವಿದ್ಯೆ ಹಿಂದೆ ಹೋದೆ
ಆದರೆ ಕೊನೇ ಬೆಂಚಿನ
ಕಟ್ಟ ಕೊನೆಯವನಾದೆ
ನಗುವು ನನಗೆ ಖುಶಿಯೆಂದು
ಬೆನ್ನು ಹತ್ತಿದರೆ
ಉರಿ ಮೋರೆಗಳೇ ಎದುರಾದವು
ಕನಸುಗಳ ಬೆನ್ನಟ್ಟಿದೆ.
ಅಯ್ಯೋ ಬೆಪ್ಪೇ, ಇವು ಬರೆ ಕನಸುಗಳು
ಎಂದು ಅಣಕಿಸಿ ಮಾಯವಾದವು.
ಹೋಗಲಿ ನೋಡುವ ಎಂದು
ಮನಸುಗಳ ಹುಡುಕಿದೆ
ನನ್ನ ಮನಸೇ ನನ್ನಿಂದೆ ಮರೆಯಾಯ್ತು....
ಕೊನೇಗೆ ಕಾಣಿಸಿತು ಶೂನ್ಯ
ಇದೇ ಸರಿ ಎಂದು, ಶೂನ್ಯದಲ್ಲಿ
ಶೂನ್ಯನಾಗಿ ಲೀನನಾದೆ.........frown emoticon
ಅಂದು ನಮ್ಮೂರ
ಅಂದವೇ ಅಂದ.
ಮನೆಯಂಗಳದಿ ನಿಂತು
ಮೂಡಣ ದಿಟ್ಟಿಸಿದರೆ
ದಿಗಂತದಂಚಿನವರೆಗೆ
ಭತ್ತದ ಪೈರಿನ
ಹಸಿರು ಹಾಸು,
ಮಾಗಿದ ಮೇಲೆ
ಹೊಂಬಣ್ಣದ ಹೊದಿಕೆಯ
ಹೊಯ್ದಾಟದ ಮೆರುಗು.
ಆದರಿಂದು ನೋಡಿದೆನಲ್ಲಿ
ಬಯಲೂ ಇಲ್ಲ.
ಭತ್ತದ ಪೈರೂ ಇಲ್ಲ.
ಮಾನವನ ಅತಿಕ್ರಮಣ
ಮನೆ ಮಠಗಳ ನಿರ್ಮಾಣ
ಪ್ರಕ್ಟತಿ ಮೇಲೆ ಆಕ್ರಮಣ
ಯಾರೂ ತಡೆಯದ
ಈ ಪ್ರಕೃತಿ ಮರಣ.
ಭಾರತೀಯ ಹೆಂಡತಿ ತನ್ನ ಗಂಡನ ಮೇಲೆ ಪೂರ್ಣ
ಭರವಸೆ ಇಡುವುದು, ಆಕೆ ಗಂಡನ ಹಿಂದೆ ಮೋಟಾರು
ಸೈಕಲ್ ಮೇಲೆ ಕುಳಿತು ಸಂಚಾರ ಹೊರಟಾಗ ಮಾತ್ರ..... smile emoticon
ಚೆಂದವನ್ನು ಪೂರ್ಣ
ಬಿಚ್ಚಿಡ ಬಾರದು.
ಸ್ವಲ್ಪ ಮುಚ್ಚಿಟ್ಟರೆ
ಚೆಂದವಿನ್ನೂ ಚೆಂದ.
****ದಾರ್ಶನಿಕ
ಹೀಗೊಂದು ಹಳೇ ನೆನಪು......
******************************
ಬೆಳಿಗ್ಗೆ ಶೇವ್ ಮಾಡುವಾಗ
ಕನ್ನಡಿ ಬಿದ್ದು ಚೂರು ಚೂರಾಯ್ತು.
ನನ್ನದೇ ಮುಖದ ಹತ್ತಾರು
ತುಣುಕುಗಳು ನನ್ನನ್ನು ಅಣಕಿಸಿದವು
ಹೆಂಡತಿ ಉವಾಚ "ಅಪಶಕುನ,
ಬೆಳಿಗ್ಗೆ, ಬೆಳಿಗ್ಗೆ, ಯಾರ ಮುಖ ನೋಡಿದಿರಿ?"
ಉತ್ತರ ಕೊಡದೆ ಸುಮ್ಮನಿದ್ದು,
ಒಡೆದ ಕನ್ನಡಿ ಚೂರುಗಳನ್ನು
ಒಗೆಯಲು ಒಟ್ಟು ಮಾಡತೊಡಗಿದೆ.
ನೋಡಿದ್ದು ಅವಳದ್ದೇ ಮುಖ ಎಂದು
ಅವಳಿಗೇ ಮರೆತಂತಿತ್ತು.
ನನಗೆ ಹೇಳುವ ಧೈರ್ಯವಾಗಲಿಲ್ಲ.
ಗಂಡ
++++++
ಪ್ರಾಯದಲಿ
ಸೌಂದರ್ಯಯಕೆ 
ಸೋಲುತ್ತಾನೆ
ಮಧ್ಯಮದಲಿ
ಮಕ್ಕಳಿಗಾಗಿ
ಸುಮ್ಮನಾಗುತ್ತಾನೆ
ಮುಪ್ಪಿನಲಿ
ಮರ್ಯಾದೆಗಾಗಿ
ಶರಣಾಗುತ್ತಾನೆ
- ಸಮ್ಮಿಲನ ಸುರೇಶ
(ಕಥೆ ಕವನ ಗುಂಪಿನ Sammilana Suresh ಅವರ ಕಿರು ಕವನ.....ಸತ್ಯಕ್ಕೆ ಬಹಳಾನೇ ಹತ್ತಿರವಾದ ಮಾತು ಅನಿಸಿತು.....ಅದಕ್ಕೇ.....ಈ copy & paste)
ಎಲ್ಲಾ ಮಾಯ.
=========
ಬಾಲ್ಯದ
ಬಾಲಿಶ
ಕೋಮಲತೆ
ಮರೆಯಾಯ್ತು,
ಯೌವ್ವನದ
ಉಬ್ಬು ತಗ್ಗಿನ
ಮಾದಕತೆ
ಮಾಯವಾಯ್ತು
ಈಗ, ಬರೇ
ಮುಪ್ಪಿನ ಸುಕ್ಕುಗಳು
ಕಾಲನ ಕರೆಗೆ
ಕಾಯುತ್ತಿವೆ.....
*********
06.03.2015
ಹಸಿ ಮಾಂಸ.
=============
ಹಸಿ ಮಾಂಸದ ಬಯಕೆಯಿಂದ
ಹಾರಾಡುತ್ತಿವೆ ರಣಹದ್ದುಗಳು
ಕೆಂಪು ದೀಪದ ಸುತ್ತ,
ಬಲಿಗಾಗಿ ಕಾದಿವೆ
ಅರಳದ ಪುಷ್ಪಗಳು
ಕೆಂಪು ಮಂದ ಬೆಳಕಿನಲಿ
ಕೃತಕ ವೈಯಾರ ತೋರುತ.
ಅರಳುವ ಮೊದಲೇ
ಹೊಸಗಿ ಹೋದ ಮೊಗ್ಗುಗಳು,
ಕಾರಿರುಳಿನ ಬಲಿ ಪಶುಗಳು.
ಕಣ್ಣುಗಳ ಮೂಲೆಯಲೆಲ್ಲೋ ಇವೆ
ಎಂದೂ ನನಸಾಗದ ಕನಸುಗಳು,
ಹಗಲೂ ಒಂದೇ ಇರುಳೂ ಒಂದೇ
ಮೃಗಗಳ ತೃಷೆ ತೀರಿಸುವ ಯಂತ್ರಗಳು.
ಹುಟ್ಟುವ ಮುನ್ನವೇ ನಶಿಸಿದ ಬಾಳು,
ಎಂದೂ ಹೊಸತು ಬಾರದ ಪಾಡು,
ಎಂದಿನದೋ ಕೊನೆ,
ಈಗಲೇ ಆಗಿದೆ ಎಲ್ಲೆಡೆ ಕೊನೆ.
ಬಂಧುಗಳೂ ಇಲ್ಲ, ಬಳಗವೂ ಇಲ್ಲ,
ಉಗಿದುಗಿದು ಹಲ್ಲು ಗಿಂಜುವ
ಮಾಮಾಗಳದೇ ರಾಜ್ಯವಿಲ್ಲಿ,
ಎಂದೂ ಕೊನೆಯಿಲ್ಲ ಈ ಬವಣೆಗಿಲ್ಲಿ.
++++++++++++++++++++++
ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ
ಅಂತ ಒಂದು ಗಾದೆ ಇದೆ.
ಯಾರದೋ ಮೇಲಿನ ಸಿಟ್ಟು, ಅಸಹನೆಯನ್ನು
ಮತ್ಯಾರದ್ದೋ ಮೇಲೆ ತೋರಿಸುವುದು
ಕೆಲವರ ಸ್ವಭಾವ.
ಇದಕ್ಕೆ ಕಾರಣ ಏನೆಂದರೆ
ಅವರಿಗೆ ನಿಜವಾಗಿ ಸಿಟ್ಟು ಬೇಸರ ಪಡಿಸಿದವರನ್ನು
ಎದುರಿಸುವ ಶಕ್ತಿ ಇರುವುದಿಲ್ಲ, ಅಥವಾ ಪರಿಸ್ಥಿತಿಯ
ಒತ್ತಡದಿಂದ ಹಾಗೆ ಮಾಡಲು ಆಗುವುದಿಲ್ಲ.
ಅದಕ್ಕೇ ಬೇರೆಯವರ ಮೇಲೆ, ಅದೂ ದುರ್ಬಲರು,
ಹೆಚ್ಚಾಗಿ ಚಿಕ್ಕ ಮಕ್ಕಳ ಮೇಲೆ ಹರಿ ಹಾಯುತ್ತಾರೆ.
ಇದು ಒಳ್ಳೆಯ ನಡವಳಿಕೆ ಅಲ್ಲ. ನಾವು ನಮ್ಮ
ಸಮಸ್ಯೆಗಳನ್ನು ಅದಕ್ಕೆ ಸಂಬಂಧ ಪಟ್ಟವರೊಡನೆಯೇ
ಬಗೆ ಹರಿಸಿಕೊಳ್ಳಬೇಕು, ಅದು ಬಿಟ್ಟು ಬೇರೆಯವರ
ಮೇಲೆ ಆ ಸಿಟ್ಟು, ಆಸಮಾಧಾನ ತೋರಿಸ ಬಾರದು.
ಹಾಗೆ ಮಾಡುವುದರಿಂದ ನಮ್ಮ ಮನಸ್ಸು ಸಹ ಒತ್ತಡಕ್ಕೆ ಒಳಗಾಗುತ್ತದೆ.
*****ದಾರ್ಶನಿಕ
ಮದುವೆಯಾದ ನಂತರ
ಪರಸ್ಪರರಿಗೆ ಗೊತ್ತಾಗುವ
ಪರಸ್ಪರರ ಗುಣ ಸ್ವಭಾವಗಳು
ಮದುವೆಗೇ ಮೊದಲೇ
ಪರಸ್ಪರರಿಗೆ ಗೊತ್ತಾಗಿದ್ದಿದ್ದರೆ
ಅದೆಷ್ಟೋ ಮದುವೆಗಳು
ನಡೆಯುತ್ತಲೇ ಇರಲಿಲ್ಲ... smile emoticon
*****ದಾರ್ಶನಿಕ.
ತಾವೂ ಸಂತೋಷವಾಗಿದ್ದು,
ತಮ್ಮ ಪರಿಸರವನ್ನ್ನೂ
ಸಂತೋಷವಾಗಿಡುವುದೇ
ಎಲ್ಲರ ಜೀವನದ ಉದ್ದೇಶವಾಗಿದ್ದಿದ್ದರೆ,
ನಮ್ಮೆಲ್ಲರ ಜೀವನವೂ
ಅದೆಷ್ಟು ಸುಖಮಯವಾಗಿರುತ್ತಿತ್ತು
ಈ ಭುವಿಯೆಷ್ಟು ಸುಂದರವಾಗಿತ್ತಿತ್ತು....frown emoticon
*****ದಾರ್ಶನಿಕ.
"ಮೌನಮ್ ಸಮ್ಮತಿ ಲಕ್ಷಣಮ್"
ಎನ್ನುವುದು ಸುಭಾಷಿತವಾದರೂ,
ನಮ್ಮ ಅಸಹಕಾರ ಅಸಮ್ಮತಿಯನ್ನು
ಚರ್ಚೆ ಅಥವಾ ಜಗಳ ಮಾಡುವುದಕ್ಕಿಂತ,
ಜಾಣ ಮೌನ ವಹಿಸಿಯೂ ಸೂಚಿಸ ಬಹದು.
*****ದಾರ್ಶನಿಕ
ಮಕ್ಕಳ ನಗು ನಿಶ್ಕಲ್ಮಷ,,
ಮಕ್ಕಳ ಖುಶಿ ಅತಿ ನೈಜ,
ಮಾತೆಯ ಮಡಿಲಲ್ಲಿ
ಸದಾ ತುಂಬ ತುಂಬಿದೆ
ಸಹನೆ ಸುಖ ಶಾಂತಿ, ನೆಮ್ಮದಿ.
ನಾವು ನಮ್ಮ ಕಷ್ಟ, ನೋವುಗಳಿಗೆ
ಇತರರ ಸಾಂತ್ವನ, ಸಹಾನುಭೂತಿಗಳನನ್ನು
ಬಯಸ ಬೇಕಾದರೆ, ನಾವು ಸಹ
ಅವರ ಕಷ್ಟ ನೋವುಗಳಿಗೆ ಸ್ಪಂದಿಸ ಬೇಕು.
***** ದಾರ್ಶನಿಕ
ಈಕೆಯದೇ ಒಂದು ವಿಚಿತ್ರ.
ಅಡುಗೆ ಲೇಟಾದರೆ ಯಾಕೆಂದು
ಕೇಳ ಬಾರದು.....ಅಡುಗೆ
ಆಯಿತೆಂದರೆ ಲೇಟ್ ಮಾಡ ಬಾರದು...smile emoticon
ಏನಾದರೂ ಒಂದೇ ಕೋಪ... smile emoticon
ಹಿರಿಯರೆನಿಸಿ ಕೊಂಡವರು,
ತಮ್ಮ ಮಾತಿಗೆ, ಸಲಹೆ ಸೂಚನೆಗಳಿಗೆ
ಬೆಲೆ ಸಿಗ ಬಹುದಾದಲ್ಲಿ ಮಾತ್ರ
ಅವುಗಳನ್ನು ಕೊಡಲು ಹೋಗ ಬೇಕು.
****ದಾರ್ಶನಿಕ
ಎಂದೆಂದೂ ಬಾಡದಿರಲಿ
ಈ ಮುದ್ದು ಹೂ ನಗು,
ಪ್ರೀತಿಯ ದೋಣಿಯಲಿ
ನಲಿ ನಲಿದು ಸಾಗಲಿ
ಈ ಸುಖದ ಪಯಣ,
ಪ್ರೀತಿಯೆಂಬುದು ಒಂದು
ದಿನವಲ್ಲ, ಅದು ನಿರಂತರ
ಸಂವಾದ, ಜೀವಿ ಜೀವಿಗಳ
ಮನಗಳ ಮಧುರ ಮಿಲನ.
ಪ್ರೀತಿಯ ಬಾಳು ಹಸನಾಗಲಿ,
ಸದಾ ಕಂಪಿನ ಹಸಿರಾಗಲಿ.
ಪ್ರೀತಿಯ ನವಿರು ಅಮರವಾಗಿರಲಿ.
ಹೃದಯ ಹೃದಯಗಳ ಬೆರಸಿ
ಪ್ರೇಮಿಸುವ ನಿಜ ಪ್ರೇಮಿಗಳಿಗೆ
ಸದಾ, ಸದಾ... ಶುಭವಾಗಲಿ.
ಸ್ವಂತ ನಿರ್ಧಾರಗಳನ್ನು ತೆಗೆದು
ಕೊಳ್ಳುವ ಯೋಗ್ಯತೆ ಇಲ್ಲದವರು,
ಇನ್ನೊಬ್ಬರ ನಿರ್ಧಾರಗಳನ್ನು
ಟೀಕಿಸುತ್ತಲೇ ಇರುತ್ತಾರೆ frown emoticon
****ದಾರ್ಶನಿಕ
ಪ್ರೇಮಿಗಳ ದಿನಾಚರಣೆ
++++++++++++++
ಅಲ್ಲಾ, ಎಲ್ಲಾ ದಿನಾಚರಣೆಗಳನ್ನು
ಮಾಡಿದ ಹಾಗೆ, ಪ್ರೇಮಿಗಳ
ದಿನಾಚರಣೆಯನ್ನೂ ಮಾಡಿದರೆ
ತಪ್ಪೇನು? ಬೇಕಾದರೆ, ಅದನ್ನು
ಪ್ರೇಮ, ಪ್ರೀತಿಯ ದಿನಾಚರಣೆ
ಎನ್ನೋಣವೇ?
ಎಲ್ಲಾ ಕಥ, ಕಾವ್ಯ,
ಕವನ, ಸಿನೆಮಾಗಳೆಲ್ಲ ಪ್ರೀತಿ,
ಪ್ರೇಮದ ಸುತ್ತಲೇ ಸುತ್ತುತ್ತಿರುವಾಗ
ಒಂದು ದಿನ ಇದನ್ನು ಸಭ್ಯತೆಯ
ಎಲ್ಲೆ ಮೀರದಂತೆ celebrate
ಮಾಡಿದರೆ ತಪ್ಪೇನು?
ಪ್ರೀತಿ, ಪ್ರೇಮಗಳ ದಿನಾಚರಣೆ ಅಂದ
ಕೂಡಲೇ ಅದನ್ನು ಅಶ್ಲೀಲ
ಅನ್ನುವುದಾದರೆ, ತೆರೆಮರೆಯಲ್ಲಿ
ನಡೆಯುವ ಅಸಭ್ಯತೆ, ಅಶ್ಲೀಲತೆಗೆ
ಯಾರು ಕಡಿವಾಣ ಹಾಕುತ್ತಾರೆ?
ಹಿತ ಮಿತವಾಗಿರಲಿ ಎನ್ನುವುದು
ಅಪೇಕ್ಷಣೀಯ, ಆದರೆ ಪೂರ್ತಿ
ನಿಷೇಧ ಸರಿಯಲ್ಲ ಎಂದು ನನ್ನ
ಅನಿಸಿಕೆ. ಸರಿಯೋ ತಪ್ಫೋ
ನೀವೇ ಹೇಳಬೇಕು......
.*********
12.02.15
(ಕಳೆದ ವರ್ಷ ಪ್ರೇಮಿಗಳ ದಿನಾಚರಣೆಯ ವಿಷಯದಲ್ಲಿ ನನ್ನದೊಂದು ಪೋಷ್ಟ್)

Tuesday 29 March 2016

ನಾನಂತೂ ಜಗಳ ಆಡಲಿಕ್ಕೆ
ಕಲಿತದ್ದೇ ಮದುವೆ ಆದ ನಂತರ..... smile emoticon
ಕಲಿಸಿದವಳು ನಮ್ಮಾಕೆ...... smile emoticon
ನೀವೇನಂತೀರಾ...? smile emoticon
ನಾವು "ಜೀವನ" ವನ್ನು ಪ್ರೀತಿಸಿದರೆ,
"ಜೀವನ" ನಮ್ಮನ್ನು ಪ್ರೀತಿಸುತ್ತದೆ.
*****ದಾರ್ಶನಿಕ

Sunday 7 February 2016

ಮನುಷ್ಯ ಸಾಧ್ಯವಾದಷ್ಟು ಮಟ್ಟಿಗೆ
ಪರೋಪಜೀವಿಯಾಗಿರದೆ,
ಪರೋಪಕಾರಿಯಾಗಿರ ಬೇಕು.
*****ದಾರ್ಶನಿಕ
ಒಬ್ಬ ದುಷ್ಟನೊಡನೆಯ ನಮ್ಮ
ಜಗಳದಿಂದಾಗಿ ಹತ್ತು ಜನ
ಸಜ್ಜನರು ನಮ್ಮಿಂದ ದೂರಾಗುವ
ಸಂಭವವಿದ್ದರೆ, ನಾವು ಆ
ದುಷ್ಟನೊಂದಿಗೆ ಸೋಲೊಪ್ಪಿಕಂಡು
ಜಗಳ ನಿಲ್ಲಿಸುವುದು ಒಳಿತು.
*****ದಾರ್ಶನಿಕ
ಚೆಂದಾ....ಚೆಂದ...smile emoticon
++++++++++++
ಮುತ್ತುಗಳನ್ನು ಪೋಣಿಸಿ
ಮಾಲೆಯಾಗಿ ಧರಿಸಿದರೆ ಚೆಂದ,
ಸವಿಗನಸುಗಳನ್ನು ಎಚ್ಚರದಲಿ
ಮೆಲುಕಿ ಮುಗುಳ್ನಕ್ಕರೆ ಚೆಂದ,
ಕಹಿ ಸ್ವಪ್ನಗಳನು ಮರೆತು
ಮರೆಗುಳಿಯಾದರೇನೇ ಚೆಂದ,
ನಗುವಿರುವ ನಿಮ್ಮದೇ ಮುಖ
ನಿಮಗೇ ಒಂದು ಚೆಂದ,
ಹಸು ಮಗುವಿನ ಗಲ್ಲ ಸವರಿದಾಗ
ಆ ಬೊಚ್ಚು ಬಾಯ ನಗುವಿನ್ನೂ ಚೆಂದ,
ನಲ್ಲೆ ನಗುತ್ತ ಊಟ ಬಡಿಸಿದರೆ
ಆ ಸವಿಯದಿನ್ನೊಂದು ಚೆಂದ,
ದುಃಖಿಯ ಮಖದಲ್ಲಿ
ನಗು ತರಿಸಿ, ಅದಿನ್ನೂ ಚೆಂದ,
ಬಳುಕು ಸಾಗುವ ನೀರೆಗೊಂದು
ಮೆಚ್ಚುಗೆಯ ಕಳ್ಳ ನೋಟವೂ ಚೆಂದ
ತಾಯಿಯ ಹಿಂದೆ ಬಾಲ ನಿಮಿರಿಸಿ
ಕುಣಿವ ಹಸುಕರುವಿನ ಕುಣಿತ ಚೆಂದ
ಹೀಗಿದ್ದರೆ ನಮ್ಮ ಕಣ್ಣುಗಳೇ ಚೆಂದ
ಈ ನಮ್ಮ ನಶ್ವರ ಜೀವನ ಬಲು ಚೆಂದ.
******************
ಸುಖದ ಚಿಂತೆ
==========
ದೃಷ್ಟಿ ಮಂಜಾದಾಗ
ಕೈ ಹಿಡಿದು
ಮುನ್ನಡೆಸಿದ ಮಗ,
ಬೆನ್ನು ತಟ್ಟಿ
ತಲೆ ನೇವರಿಸಿ
ಶಸ್ತ್ರ ಚಿಕಿತ್ಸೆಯಲ್ಲೂ
ಸಹಕರಿಸಿ
ಧೈರ್ಯ ತುಂಬಿದ
ನನ್ನ ಪ್ರಿಯ ಬಹು,
ಬೆಳಗ್ಗೆ ಶಾಲೆಗೆ
ಓಡುವ ಅವಸರದಲ್ಲೂ,
ಓಡಿಬಂದು
ಕುತ್ತಿಗೆ ಬಳಸಿ
ಗಲ್ಲಕ್ಕೆ ಮುತ್ತಿಟ್ಟು
Best of luck, ಅಜ್ಜಾ,
ಎಂದುಸಿರಿದ ಮೊಮ್ಮಕ್ಕಳು,
ಮುಂದೆಲ್ಲಾದರು
ನಾನು ಅಂಧನಾದರೂ
ನನಗೆ ನೋಡಲು
ಹಲವು ಜೋಡಿ
ಪ್ರೀತಿಯ ಕಂಗಳಿವೆ,
ಹಿಡಿದು ನಡೆಸಲು
ಹಲವು ಜೋಡಿ
ಕೈಗಳವೆ, ಎಂಬ
ಸುಖದ ಚಿಂತೆ
ನನ್ನ ಮೈಮರೆಸಿ
ಸಂತೈಸಿ ಓಲೈಸಿತು.
29.01.2015
ಇನ್ನೊಬ್ಬರಿಗೆ ತಮ್ಮ
ಮಾತಿನಿಂದ ಮಾನಸಿಕ
ಹಿಂಸೆ ಕೊಡುವವರು,
ತಮ್ಮ ಮಾತಿನಿಂದ
ಇನ್ನೊಬ್ಬರಿಗೆ ಹಿಂಸೆಯಾಗುತ್ತಿದೆ
ಎನ್ನುವುದನ್ನು ಎಂದೂ
ಒಪ್ಪಿ ಕೊಳ್ಳುವುದಿಲ್ಲ.
***ದಾರ್ಶನಿಕ
"ಗೌರವ ಕೊಟ್ಟು ಗೌರವ ತೆಗೆದುಕೋ"
ಎಂಬುದರ ನಿಜವಾದ ಅರ್ಥ ಹೀಗೆ...
"ನಾವು ನಮಗಿಂತ ಹಿರಿಯರನ್ನು
ಗೌರವಿಸಿದರೆ, ನಮಗಿಂತ ಕಿರಿಯರು
ನಮ್ಮನ್ನು ಗೌರವಿಸುತ್ತಾರೆ"
*****ದಾರ್ಶನಿಕ
ಶುಭೋದಯ.......
ಅನೆಗೂ ಅಂಗಿ ಪ್ಯಾಂಟ್ ಹೋಲಿಸಿ ಹಾಕುವ ಅಂತಃಕರಣವಿರುವ ಮನುಷ್ಯರಿದ್ದಾರೆಂದರೆ ವಿಶೇಷವೇ......... smile emoticon
ಆದರೆ, ಇದನ್ನು ಬರೇ ಸರ್ಕಸ್ ಅಥವಾ ತಮಾಶೆಗಾಗಿ ಮಾಡಿದ್ದಾರೆಯೇ ಎನ್ನುವುದೂ ಒಂದು ಸಂಶಯ....... smile emoticon
ಏನೇ ಇದ್ದರೂ ಚಿತ್ರವಂತೂ ಅಪರೂಪದ ಚಿತ್ರ. ಒಮ್ಮೆ ಕಣ್ಣು ಹಾಯಿಸಲು ತೊಂದರೆ ಇಲ್ಲ.... smile emoticon
ಎಲ್ಲರಿಗೂ ೬೭ ನೇ ಗಣ ರಾಜ್ಯೋತ್ಸವದ ಶುಭಾಶಯಗಳು.
ನನ್ನ ಮೊಮ್ಮಕ್ಕಳು, ಕೌಸ್ತುಭ್ ಮತ್ತು ಕೃತಾರ್ಥ್ ಸಹ ಪಂಜಾಬಿನ ಧೀರನಾಗಿ ಹಾಗೂ ಕೊಡಗಿನ ಕಲಿಯಾಗಿ ದೇಶದ ಏಕತೆಯನ್ನು ಸಾರುತ್ತಾ ನಿಮಗೆಲ್ಲರಿಗೂ ಗಣ ರಾಜ್ಯೋತ್ಸವದ ಈ ದಿನ ಭಾರತದ ಏಕತೆಯ
ಸಂದೇಶವನ್ನು ಬೀರುತ್ತಿದ್ದಾರೆ........
ಮನುಷ್ಯನಿಗೆ ಹಣದ ಸಂಪಾದನೆ
ಹೆಚ್ಚಾಗುತ್ತ ಹೋದಂತೆ ಅಹಂಕಾರವೂ
ಹೆಚ್ಚಾಗುತ್ತದೆ. ನಯ ವಿನಯ
ಶಿಷ್ಟಾಚಾರಗಳು ಮರೆಯಾಗುತ್ತವೆ.
ಗುರು ಹಿರಿಯರಿಗೆ ಬೆಲೆ ಇಲ್ಲವಾಗುತ್ತದೆ.
ಆದರೆ, ದೇವರ ಮೇಲೆ ಭಕ್ತಿ ಹೆಚ್ಚಾಗುತ್ತದೆ.!!!
*****ದಾರ್ಶನಿಕ
ಸುಖದಲ್ಲಿಯೂ ಕಷ್ಟವನ್ನೇ ಕಾಣುವ
ವ್ಯಕ್ತಿಗಳು ಭೂಮಿಗೇ ಭಾರ,
ಹಾಗೇನೇ, ಕಷ್ಟದಲ್ಲೂ
ಸುಖವನ್ನು ಅರಸುವ
ವ್ಯಕ್ತಿಗಳೇ ಈ ಭೂಮಿಗೆ ಆಧಾರ.
*****ದಾರ್ಶನಿಕ.
ಇನ್ನೊಬ್ಬರನ್ನು ಅವಮಾನಿಸುವ
ಯಾವುದೇ ಸಂದರ್ಭವನ್ನು
ಕಳೆದು ಕೊಳ್ಳದಿರುವವನ
ಮನಸ್ಥಿತಿಯೊಂದು ಮನೋವಿಕೃತಿ.
*****ದಾರ್ಶನಿಕ.
ಸತ್ತವರು ದೆವ್ವ, ಪ್ರೇತಗಳಾಗಿ
ಬದುಕಿರುವವರಿಗೆ ಉಪದ್ರವ
ಕೊಡುತ್ತಾರೆಂಬುದು ಸುಳ್ಳು.
ಬದುಕಿರುವವರಿಗೆ ಉಪದ್ರವ
ಕೊಡುವವರು ಬದುಕಿರುವವರೇ..
*****ದಾರ್ಶನಿಕ
ಪ್ರಾರ್ಥನೆ.
**********
ಸಾಮಾನ್ಯವಾಗಿ ನಮ್ಮ ಹಿರಿಯರು ಸರಳವಾಗಿ
ಹೆಚ್ಚಿನ ದುರಾಸೆಯಿಲ್ಲದೆ ದೇವರನ್ನು
ಈ ರೀತಿ ಪ್ರಾರ್ಥಿಸುವುದನ್ನು ನಾವೆಲ್ಲ ಕೇಳಿದ್ದೇವೆ.....
"ದೇವರೇ, ಕೊನೇ ತನಕ ಕಣ್ಣು ಕೈ ಕಾಲುಗಳ
ಸುಖ ಕೊಟ್ಟು ಕಾಪಾಡಪ್ಪಾ"
ಗಮನಿಸಿ, ಈ ಸರಳ ಪ್ರಾರ್ಥನೆಯಲ್ಲಿ "ಕಿವಿ"
ಸೇರಿಲ್ಲ. ಬರೇ ಕಣ್ಣು ಕೈಕಾಲುಗಳ ಸುಖ
ದೇವರಲ್ಲಿ ಬೇಡಲಾಗುತ್ತಿದೆ.
ವೃದ್ಧಾಪ್ಯದಲ್ಲಿ ಕಣ್ಣುಗಳು ಕಾಣದಾದರೆ, ಕೈ ಕಾಲುಗಳು
ಸ್ಢಾಧೀನ ತಪ್ಪಿ ಹಾಸಿಗೆ ಹಿಡಿದರೆ, ಮನುಷ್ಯ
ಪೂರ್ಣವಾಗಿ ಪರಾವಲಂಬಿಯಾಗಿ ಬೇರೆಯವರ
ಹಂಗಿಗೆ ಬಿದ್ದು, ಹೆಚ್ಚಿನ ಸಂದರ್ಭಗಳಲ್ಲಿ
ಅತಿಯಾದ ನಿಕೃಷ್ಟ ಪರಿಸ್ಥಿತಿಗೆ ಸಿಲುಕುತ್ತಾನೆ.
ಆದರೆ, ಕಿವಿ ಕೇಳಿಸದಿದ್ದರೆ ಅಂತಹ ತೊಂದರೆಯೇನೂ
ಆಗದು. ಬದಲಿಗೆ, ಅನುಕೂಲವೇ ಅನ್ನ ಬಹುದು.
ಯಾರು ಏನು ಬೈದರೂ ಕೇಳಿಸೋದೇ ಇಲ್ಲ... smile emoticon
ಹೀಗೆ, ಹಿರಿಯರು ಮಾಡುತ್ತಿದ್ದ ಈ ಸರಳವಾದ
ಪ್ರಾರ್ಥನೆ ಅದೆಷ್ಟು ಅರ್ಥಗರ್ಭಿತವಾಗಿದೆ
ಮತ್ತು ಈಗಲೂ ಅನುಕರಣೀಯವಾಗಿದೆ ನೋಡಿ.
ಮನುಷ್ಯ ಎಷ್ಟೇ ಸಾಧಕನಿರಲಿ,
ಅವನು ಸತ್ತ ನಂತರ ಸಿಗುವ
ಹೊಗಳಿಕೆ ಮತ್ತು ಮೆಚ್ಚಿಗೆಗಳು
ಅವನಿಗೆ ಬದುಕಿರುವಾಗ ಸಿಗುವುದಿಲ್ಲ.
****ದಾರ್ಶನಿಕ