Sunday 12 March 2017

*ಕನಸು - ನನಸು*
============
ಇರುಳು ಸರಿಯಿತು
ಕನಸು ಹರಿಯಿತು
ಕನಸು ನನಸಾಗದೆ
ವಾಸ್ತವ ಎದುರಾಯಿತು
ಕಾಣುವಂತಿಲ್ಲ
ಹಗಲಿನಲಿ ಕನಸು
ಎದುರಿಸಲೇಬೇಕು
ನೈಜದ ನನಸು
ಕಾಯಲೇ ಬೇಕು
ಇರುಳಿನ ನಿದಿರೆಯ
ಕಾಣಲು ಮತ್ತೆ
ಮೋಸದ ಕನಸು
ಸವಿಗನಸುಗಳು
ನನಸಾದರೆಷ್ಟು ಚೆಂದ
ಆ ಭಾಗ್ಯ ಯಾರಿಗೂ
ಇರದು ನೆನಪಿರಲಿ ಎಂದೂ.
*********
ಒಂದು ನಿರುಪದ್ರವಿ ಸುಳ್ಳಿನಿಂದ
ಎಲ್ಲರಿಗೂ ಶಾಂತಿ, ನೆಮ್ಮದಿ
ಸಿಗುವುದಾದರೆ ಆಗ
ಸತ್ಯ ಹೇಳದಿರುವುದೇ ಲೇಸು.
****ದಾರ್ಶನಿಕ
ಈ ಬಂಗಾರ ಎಲ್ಲಾ ಘೋಷಿತ ಆದಾಯದಿಂದ ಬಂದುದಂತೆ.... :-)
ಸರಿಯಾದ ಮಾರ್ಗದರ್ಶನವಿಲ್ಲದೆ ಅತಿಯಾದ ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡುವ ವಯಸ್ಕ ಮಿತ್ರರೇ,
ಈ ಪೋಸ್ಟನ್ನು ತಪ್ಪದೆ ಗಮನಿಸಿ, ಮತ್ತು ನಿಮ್ಮ ವಯಸ್ಕ ಮಿತ್ರರ ಗಮನಕ್ಕೂ ತನ್ನಿ.
-------------------------------------
ಇಲ್ಲಿಯೇ ಹುಬ್ಬಳ್ಳಿಯಲ್ಲಿ ನನ್ನ ಮಿತ್ರರೊಬ್ಬರ ಚಿಕ್ಕಪ್ಪ
ಒಬ್ಬರಿದ್ದರು. ವಯಸ್ಸು 65 ವರ್ಷ. BP ಪೇಷಂಟ್. ಸರಿಯಾದ ಚಿಕೆತ್ಸೇನೂ ತಗೆದು ಕೊಳ್ಳುತ್ತಿರಲಿಲ್ಲ. Uneducated ಏನೂ ಅಲ್ಲ ಮತ್ತೆ. Engineer ಆಗಿ government service ನಲ್ಲಿ ಇದ್ದು ರೆಟೈರ್ ಆದವರು. ಸ್ಲಲ್ಪ ಹಠಮಾರಿ.
ಅವರಿಗೆ ಯೋಗಾಭ್ಯಾಸದ ಹವ್ಯಾಸವೋ,ಹುಚ್ಚೋ, ಬಹಳ. ಇತರ ವ್ಯಾಯಾಮಗಳ ಜತೆಗೆ ದಿನಕ್ಕೆ ಒಂದು ಗಂಟೆ ಯೋಗಾಸನಗಳನ್ನು ಹಾಕುತ್ತಿದ್ದರು. ಸಾಕಷ್ಟು ಪ್ರಾಣಾಯಾಮ ಸಹ ಮಾಡುತ್ತಿದ್ದರು ಅದರಲ್ಲಿ ಅರ್ಧ ಗಂಟೆ ಶಿರ್ಷಾಸನ ಬೇರೆ. "ನಿಮಗೆ ವಯಸ್ಸಾಯಿತು. BP ಬೇರೆ ಇದೆ, ಶಿರ್ಷಾಸನ ಎಲ್ಲ ಮಾಡಬೇಡಿ, ಬೇಕಾದರೆ ಸರಳವಾದ ವ್ಯಾಯಾಮಗಳನ್ನು ಮಾಡಿ" ಎಂದು ಯಾರು ಹೇಳಿದರೂ ಕೇಳುತ್ತಿರಲಿಲ್ಲ. ಯೋಗದಿಂದ ಎಲ್ಲಾ ವ್ಯಾಧಿಗಳು ನಿವಾರಣೆಯಾಗುತ್ತದೆ, ಯಾವ ವ್ಯಾಧಿಯೂ ಬರುವುದಿಲ್ಲ ಎಂಬುದು ಅವರ ಅಚಲವಾದ ನಂಬಿಕೆ.
ಈಗ ನಾಲ್ಕು ದಿನಗಳ ಹಿಂದೆ ಬೆಳಿಗ್ಗೆ ಎಂದಿನಂತೆ ಶೀರ್ಷಾಸನ ಹಾಕಿದರು. ಐದು ನಿಮಿಷಗಳಲ್ಲಿ ಎಚ್ಚರ ತಪ್ಪಿ ಕೆಳಗೆ ಉರುಳಿದರು. ಕೂಡಲೇ ಆಸ್ಪತ್ರೆಗೆ ಸೇರಿಸಿದಾಗ ಗೊತ್ತಾಯಿತು, ಶೀರ್ಷಾಸನ ಹಾಕಿದಾಗ ರಕ್ತ ಅತಿ ವೇಗವಾಗಿ ಮಿದುಳಿಗೆ ನುಗ್ಗಿ ರಕ್ತ ನಾಳಗಳು ಒಡೆದು, immediate brain dead ಆಗಿದ್ದರು. ಏನು ಮಾಡಿದರೂ brain revive ಆಗಲಿಲ್ಲ. ಕೊಂಚವಿದ್ದ ಉಸಿರಾಟವನ್ನು, ventilator ಹಚ್ಚಿ, ಮಗ ಲಂಡನ್ ನಿಂದ ಬರುವವರೆಗೆ ಚಾಲೂ ಇಡಿಸಿ,
ನಿನ್ನೆ ಬೆಳಿಗ್ಗೆ ಮರಣವನ್ನು ಘೋಷಿಸಲಾಯಿತು. ಹೀಗೆ, ಇನ್ನೂ ಹತ್ತು ವರ್ಷ ಬದುಕ ಬಹುದಾಗಿದ್ದ ಜೀವದ ಅಕಾಲಿಕ ಹಾಗೂ ಅಸ್ವಾಭಾವಿಕ ಅಂತ್ಯ ಸ್ವಂತ ನಿರ್ಲಕ್ಷ್ಯದಿಂದ ಆಯಿತು. ಅವರ ಒಬ್ಬನೇ ಮಗ ಲಂಡನ್ ನಲ್ಲಿ settle ಆಗಿದ್ದಾನೆ. ಇಲ್ಲಿರುವುದು ಹೆಂಡತಿ ಮತ್ತು ಮಂದ ಬುದ್ಧಿಯ ಒಬ್ಬಳು ಮಗಳು ಮಾತ್ರ. ಸಾವು ಯಾರನ್ನೂ ಬಿಟ್ಟದ್ದಲ್ಲ ಸರಿ. ಆದರೆ ಇಂಥ ಸಾವು ಸ್ವಯಂಕೃತಾಪರಾಧ ಅನ್ನಿಸುತ್ತದೆಯಲ್ಲವೇ?
ಯೋಗ, ಪ್ರಾಣಾಯಾಮ, ವ್ಯಾಯಾಮ, even walking ಸಹ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಹೌದು. ಆದರೆ ಇವನ್ನೆಲ್ಲ, ಯಾರು, ಎಷ್ಟು, ಹೇಗೆ, ಮಾಡಬೇಕು ಎಂಬುದನ್ನು ಪರಿಣಿತರಿಂದ ತಿಳಿದು ಕೊಂಡು ಮಾಡಬೇಕು. ಆಗಷ್ಟೇ, ಅವುಗಳ ಸದುಪಯೋಗಗಳನ್ನು ಪಡೆದು ಕೊಳ್ಳ ಬಹುದು ಮತ್ತು ಇಂಥಾ ದುಷ್ಪರಿಣಾಮಗಳಿಂದ ತಪ್ಪಿಸಿ ಕೊಳ್ಳ ಬಹುದು.
ನನ್ನ ಮನಸ್ಸು ಬಹಳ ಘಾಸಿಗೊಂಡದ್ದರಿಂದ ಈ ವಿಷಯ ನಿಮ್ಮಲ್ಲಿ ಹಂಚಿಕೊಳ್ಳುವ ಅನಿಸಿತು. ಎಲ್ಲ ವಯಸ್ಸಿನವರಿಗೂ ಇದು ಅನ್ವೈಸುತ್ತದೆಯಾದರೂ, 50 ವರ್ಷ ದಾಟಿದವರು ಈ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು.
ಈ ಪೋಸ್ಟಿನ ವಿಷಯವನ್ನು ದಯವಿಟ್ಟು ನಿಮ್ಮ ಮಿತ್ರರಲ್ಲಿಯೂ ಹಂಚಿಕೊಳ್ಳಿ.
Like
Comment
ಜಾಸ್ತಿ ಪ್ರೀತಿ ಇರುವವರ ಮೇಲೇನೇ ಸಿಟ್ಟು ಜಾಸ್ತಿ ಬರುತ್ತೆ ಎಂದು ಸಿಟ್ಟು ಮಾಡುವವರು ಹೇಳುವ ವಾಡಿಕೆ......ಆದರೆ ನನಗದು ಇಷ್ಟವಿಲ್ಲ.....ಪ್ರೀತಿ ಹೃದಯದಲ್ಲೂ ಇರಬೇಕು, ಮನಸ್ಸಲ್ಲೂ ಇರ ಬೇಕು.....ಹಾಗೇನೇ ಬಾಯಲ್ಲೂ ಇರ ಬೇಕು....... ಇದು ನನ್ನ ಅಪೇಕ್ಷೆ..... :-)
ಎದುರಿಗೆ ಪ್ರೀತಿ ಮತ್ತು ಕಾಳಜಿ
ತೋರಿಸುವ ಕೆಲವರು ಹಿಂದಿನಿಂದ
ನಮ್ಮನ್ನು ಬೈದು ಕೊಳ್ಳುತ್ತಿರುತ್ತಾರೆ,
ಅಂತ ನಮಗೆ ಗೊತ್ತಿದ್ದರೂ, ಅವರೊಡನೆ
ಜಗಳವಾಡಿ ದೂರ ಮಾಡುವುದು 
ಜಾಣತನವಲ್ಲ, ಯಾಕಂದರೆ ಅವರ
ಎದುರಿನ ನಟನೆಯಿಂದ ನಮಗೆ
ಬಹಳ ಪ್ರಯೋಜನವಿರುತ್ತದೆ.
****ದಾರ್ಶನಿಕ.
ರೋಮಾಂಚನ.
ನಿನ್ನನಪ್ಪಿ ಬರಸೆಳದು
ಎದೆಗವಚಿಕೊಳ್ಳುವಾಸೆ,
ನಿನ್ನ ನಲಿವ ಮುಂಗುರಳಲಿ
ಬೆರಳಾಡಿಸಿ ಸುಖಿಸುವಾಸೆ,
ನಿನ್ನ ತುಂಬುಗೆನ್ನೆಗಳನ್ನು,
ಮಲ್ಲಗೆ ಹಿಂಡಿ ನಸುಗೆಂಪು
ಮಾಡುವ ತಡೆಯದ ತವಕ,
ನಿನ್ನ ಎಸಳು ಕಿವಿಗಳಲ್ಲಿ ಪಿಸುಗುಟ್ಟಿ
ಬಿಸಿಯುಸಿರ ಬಿಡುವ ಸವಿ ಬಯಕೆ,
ನಿನಗೆ ಎಲ್ಲೆಂದರಲ್ಲಿ ಕಚಗುಳಿಯಿಟ್ಟು,
ನಿನ್ನ ಕೆಂಪು ಚೆಂದುಟಿಗಳಲ್ಲಿ
ಕಲ್ಮಷವಿಲ್ಲದ ನಗುವರಳಿಸುವಾಸೆ,
ನಿನ್ನ ಗೋದಿಬಣ್ಣದ ಮಿದುಮೈಯ
ನವಿರಾಗಿ ಸವರಿ, ಸವರಿ,
ಹಿತ ರೋಮಾಂಚನಗೊಳ್ಳುವಾಸೆ.
ಮಗುವೇ, ನಿನ್ನ ಮುದ್ದಾದ ಕೆಂಪು
ಪಾದಗಳಿಂದ ಎದೆಗೊದೆಸಿಕೊಂಡು
ಧನ್ಯನಾಗುವೆ, ಬಳಿಗೆ ಬಾ ನನ್ನ ಕಂದ.
ಮದುವೆ ಮುಂತಾದ ಸಮಾರಂಭಗಳಲ್ಲಿ 
ಭೇಟಿಯಾಗುವ ಅಪರಿಚಿತರನ್ನು ಸ್ವತಃ ಪರಿಚಯ
ಮಾಡಿಕೊಂಡು, ಮಿತವಾಗಿ ನಡೆಸುವ 
ಉಭಯ ಕುಶಲೋಪರಿ ಸ್ನೇಹ ಸಂಭಾಷಣೆ 
ಮನಸ್ಸಿಗೆಒಂದು ರೀತಿಯ ಹಿತ ಸಂತೋಷ ನೀಡುತ್ತದೆ.. :-)
ಬದುಕಿದ್ದಾಗ ಅಳಿಸಿ
ಸತ್ತಾಗ ಅಳುವುದೇ
ಈ ಜಗತ್ತಿನ ಒಂದು
ದೊಡ್ಡ ವಿಪರ್ಯಾಸ.
***ದಾರ್ಶನಿಕ
ಬೇಡವಾದವರ
ಸಂಗೀತಕ್ಕಿಂತ
ಹಿತವಾದವರ
ಮೌನವೇ ಇಂಪು.
***ದಾರ್ಶನಿಕ
ಗರ್ಭ ಬರಿದಾಗಿ
ಮಡಿಲಿಗೆ ಬಂದಾಗಿನ
ನಲಿವು ಬಣ್ಣಿಸಲಸದಳ,
ಮಡಿಲೇನಾದರೂ
ಬರಿದಾದರೆ,
ಆ ನೋವು ಸಹಿಸಲಸದಳ.
ಬಾಳಿನ ಕುಡಿಗಳು
ಚಿಗುರದೇ ಮುದುರಿದರೆ
ಮುಂದಿರುವುದು ಶೂನ್ಯ.
ಬರಿದಾಗದಿರಲಿ ಮಡಿಲು
ತುಂಬಿ ಹರಿಯಲಿ ಒಡಲು
ಇಳೆಯಾಗಲಿ ಸುಖದ ಕಡಲು.
ಇಳೆಯಾಗಲಿ ಸುಖದ ಕಡಲು.
==================
ಇಲ್ಲೊಂದು quote ನೋಡಿ. ಬಿಗ್ ಬಜಾರ್ ನಲ್ಲಿ ಒಂದು ಹುಡುಗಿಯ ಗೊಂಬೆಗೆ ಹಾಕಿದ tea shirt ಮೇಲಿತ್ತು. ಅಂಥ ಹಲವಾರು ಶರ್ಟುಗಳನ್ನು ಮಾರಾಟಕ್ಕೂ ಜೋಡಿಸಿಟ್ಟಿದ್ದರು.
"LOVE IS THE MUSIC OF SOUL".... :-)
ತುಂಬಾ ಚೆನ್ನಾಗಿದೆಯಲ್ಲವೇ?.. :-)
ಅಲ್ಲೇ, ಹಾಗೇನೇ ಕಣ್ಣು ಹಾಯಿಸಿದಾಗ ಕಂಡದ್ದು.. :-) ನಾಲ್ಕು ಜನ ಕಾಲೇಜು ಹುಡುಗಿಯರು ಇನ್ನೊಂದು ಅಂಥದ್ದೇ ಶರ್ಟ್ ಹಿಡಿದು ಕೊಂಡು ಅದರ ಮೇಲೆ ಬರೆದಿದ್ದ quote ಓದಿ, ಓದಿ, ಮುಸಿ ಮುಸಿ ನಗುತ್ತಿದ್ದರು..... :-) ಅವರು ಆಚೆ ಹೋದ ಮೇಲೆ, ಕುತೂಹಲದಿಂದ, ಅದರ ಮೇಲೆ ಬರೆದ quote ಓದಿದೆ.... :-)
ಏನಿತ್ತು ಗೊತ್ತೇ?
"GOOD GIRLS GO TO HEAVEN
AND
BAD GIRLS GO EVERYWHERE"... :-)
ಈ ಶರ್ಟನ್ನು ಯಾವ ಗೊಂಬೆಗೂ ಹಾಕಿರದಿದ್ದರಿಂದ ಫೋಟೋ ಇಲ್ಲ..... :-)
ಸಂಪಿಗೆ ನಾಸಿಕಕೆ
ಮೂಗುತಿ ಚೆಂದ,
ಅಂದದ ವದನಕೆ
ಬಿರಿದ ನಗು ಚೆಂದ,
ಚೆಲುವೆ ನಿನ್ನ ಅರೆ ಬಿರಿದ
ಬಾಯಲ್ಲಿ ಮುತ್ತಿನ ಸಾಲು ಚೆಂದ,
ಮುದ್ದು ಸುರಿಯುವ ನುಣಪು
ಗಲ್ಲಗಳ ಗೋದಿ ಬಣ್ಣ ಚೆಂದ
ಕೆಂಪು ಪೇಟ ಮರೆಯಾಗಿಸಿದೆ
ನಿನ್ನ ಮುಂಗುರುಳುಗಳ ಚೆಂದ
ಸಂತೋಷದ ಈ ನೋಟ,
ತುಂಬಲೆಲ್ಲರೆದೆಯಲ್ಲಿ ಆನಂದ.
ಅಮ್ಮನೆಂದು
ಕರೆಸಿಕೊಳ್ಳುವ
ಭಾಗ್ಯವೇ
ಇಲ್ಲದವರಿಗೆ
ಮಕ್ಕಳಿಂದ
ಪರಿತ್ಯಕ್ತರಾಗುವ
ದೌರ್ಭಾಗ್ಯವೂ
ಇರುವುದಿಲ್ಲ.... :-(
***ದಾರ್ಶನಿಕ
ಬರೆ.
ಓಡು ಅಂದರ
ಓಡ ಬಹುದು,
ಹಾಡು ಅಂದರೆ
ಯಾರೋ ಬರೆದ
ಹಾಡನ್ನು ಹೇಗಾದರೂ ಹಾಡಬಹುದು,
ಆದರೆ ಬರೆ ಅಂದರೆ
ಕೂಡಲೇ ಬರೆಯಲಾಗುತ್ತದೆಯೇ?
ವಿಷಯಗಳು ಬೇಕು
ಭಾವಗಳು ಬೇಕು
ಅವು ಭಾವನೆಗಳಾಗಿ
ಮನದಲ್ಲಿ ಮೂಲೆಗಳಲ್ಲಿ ಅರಳಬೇಕು,
ಹಾಗೆ ಅರಳಿದ ಭಾವನೆಗಳು
ಮನದಂಗಳದಲ್ಲಿ ಸೇರಿ
ಒಂದಕ್ಕೊಂದು ಮಿಡಿಯ ಬೇಕು
ಮತ್ತೆ ಪದಪುಂಜಗಳ ಸರದಿ,
ಭಾವನೆಗಳನ್ನು ತರೆದಿಡುವ
ಶಬ್ದಗಳನ್ನು ಹುಡುಕಿ ತಂದು
ಜೋಡಿಸಿ ಸಾಲುಗಳಾಗಿ ಹೆಣೆಯ ಬೇಕು,
ಕೊನೆಯದಾಗಿ ಈ ಶಬ್ದ ಸಂಯೋಜನೆಯನ್ನು
ಅರ್ಥವಾಗಿಯೋ, ಅರ್ಥ ಮಾಡಿಕೊಂಡೆವೆಂದುಕೊಂಡೋ,
ಇಲ್ಲಾ, ಅರ್ಥವಾಗದೆ ಇದ್ದರೂ,
ಆಗಿದೆ ಎಂದು ವ್ಹಾ ವ್ಹಾ ಅಂದುಕೊಂಡೋ
ಓದುವವರಂತೂ ಬೇಕೇ ಬೇಕು.
ಯಾರಾದರೂ, "ಬರೆದದ್ದಕ್ಕೆ ಅರ್ಥವೇ ಇಲ್ಲ"
ಅಂದರೆ ಅದು ನವ್ಯ ಕವಿತೆ, ಅದರ ನವ್ಯಾರ್ಥ
ನಿಮ್ಮಂಥ ಪಾಮರರಿಗೆ ಅರ್ಥ ಆಗಲು
ಸಾಧ್ಯವಿಲ್ಲ ಎನ್ನುವ ಛಾತಿ ಬರೆದವನಿಗೆ ಇರಬೇಕು.
*********
25.12.2014
(ಎರಡು ವರ್ಷ ಹಿಂದಿನ ಈ ದಿನದ ಒಂದು ಪೋಷ್ಟ್ - FB ನೇ ನೆನಪು ಮಾಡಿದ್ದು... :-) )
ಸಾವು
=====
ಅಜ್ಜಾ, ಅಜ್ಜಾ,
ರಸ್ತೆಯಲ್ಲಿ ಆಡುತಿದ್ದ ನಾಲ್ಕು ವರ್ಷದ
ನನ್ನ ಸಣ್ಣ ಮೊಮ್ಮಗ ಜೋರಾಗಿ ಕೂಗಿದ.
ಏನಾಯಿತೆಂದು ಹೆದರಿ ಓಡಿ ಹೋದೆ.
ಅಲ್ಲೊಂದು ನಾಯಿ ಸತ್ತು ಬಿದ್ದಿತ್ತು,
ನಾಲ್ಕು ಕಾಗೆಗಳು ಅದನ್ನು ಕುಕ್ಕಿ ಕುಕ್ಕಿ ತಿನ್ನುತಿದ್ದವು.
ಮೊಮ್ಮಗ ಕೇಳಿದ, " ಅಜ್ಜ, ಕಾಗೆಗಳು ಕುಕ್ಕಿದರೂ
ನಾಯಿ ಸುಮ್ಮನೆ ಇದೆಯಲ್ಲ?"
ನಾನಂದೆ,"ಮಗೂ, ನಾಯಿ ಸತ್ತು ಹೋಗಿದೆ, ಅದಕ್ಕೆ..."
"ಹಾಗಂದರೇನು?" ಮೊಮ್ಮಗನ ಪ್ರಶ್ನೆ.
ಏನು ಹೇಳಲಿ ಉತ್ತರ, ತಲೆ ಕೆರೆದು ಕೊಂಡೆ.
"ಅದನ್ನೆಲ್ಲ ನೋಡಬಾರದು ಕೊಳಕು, ಬಾ ಮಗು"
ಎಂದು ಅವನನ್ನು ಒಳಗೆ ಕರೆದು ತಂದೆ.
ಎಲ್ಲವನ್ನೂ ಎಲ್ಲರಿಗೂ ತಿಳಿಸಿ ಹೇಳಲು ಆಗುವುದಿಲ್ಲ ಅಂದು ಕೊಂಡೆ
ಅಲ್ಲದೆ ಸಾಯುವುದು ಎಂದರೆ ಏನು, ನನಗೇ ಗೊತ್ತಿಲ್ಲ.
=====================================
(ಎರಡು ವರ್ಷ ಹಿಂದಿನ ನನ್ನದೊಂದು ಪೋಷ್ಟ್.....FB ನೇ ನೆನಪಿಸಿದ್ದು)
ಕೆಲವು ಸಿನೆಮಾ ಮತ್ತು ಸೀರಿಯಲ್ dialogue writers ಬರೆಯುವ ಸಂಭಾಷಣೆಗಳು ಒಂಥರಾ ಮಜವಾಗಿಯೂ, witty ಆಗಿಯೂ ಇರುತ್ತವೆ. ಹಾಗೇ ಕಿವಿಯ ಮೇಲೆ ಬಿದ್ದ (ಯಾಕಂದರೆ ನಾನು ಸೀರಿಯಲ್ಸ್ ಹೆಚ್ಚು ನೋಡೋಲ್ಲ) ಒಂದು ಕನ್ನಡ ಸೀರಿಯಲ್ dialogue ತುಣುಕು ಹೀಗಿದೆ ನೋಡಿ...
"ಕಲ್ಲು ಯಾರೋ ಹೊಡೆಯುತ್ತಾರೆ, ಹೊಡೆಯಲಿ.
ಹಣ್ಣು ಬಿದ್ದರೆ ಆರಿಸಿ ಕೊಳ್ಳೋಣ. ಏಟು ಬೀಳುವ ಹಾಗಿದ್ದರೆ, ತಪ್ಪಿಸಿ ಕೊಳ್ಳೋಣ, ಬೇಗ ಬಾ......"
ಹೇಗಿದೆ?
ಹೆದರ ಬೇಡಿ, ನಾನು ರೆಡಿಯಾಗಿರೋದು ಜಿರಳೆ ಹೊಡೆಯೋದಕ್ಕೆ.‌..... :-) :-) :-)
ಹೆದರುವವರನ್ನು
ಹೆದರಿಸಿಕೊಂಡು,
ಹೆದರಿಸುವವರಿಗೆ
ಹೆದರಿಕೊಂಡು,
ಬದುಕುವುದೇ
ಹೆಚ್ಚಿನವರ ಬಾಳು.
***ದಾರ್ಶನಿಕ
ನಿನ್ನ ನಡಿಗೆಯೇ
ನವಿಲ ನಡೆ,
ನಿನ್ನ ಕುಡಿನೋಟವೇ
ನನ್ನದೆಯ ಬೆಳಗುವ
ಬೆಳಕಿನ ಚೆಂಡು,
ಮಂದಸ್ಮಿತ
ಅರೆ ಬಿರಿದ ತುಟಿಗಳು
ನನ್ನೆದೆಯಲ್ಲಿ
ಈಗ ತಾನೇ
ಅರಳಿದ ಕುಸುಮಗಳು,
ಹೀಗೇ ಜಿಗಿಜಿಗಿದು
ಬಾ ನನ್ನ ಒಲವೇ
ನನ್ನೆದೆಯ ಅಂಗಳದಲ್ಲಿ
ನಿನ್ನ ಕೆಂಪು ಪಾದಗಳ
ಗುರುತುಗಳನಿರಿಸು,
ಕಲ್ಮಶ ಕಪಟವಿಲ್ಲದ
ಈ ನಿನ್ನ ಹೂ ನಗೆ
ಎಂದೆಂದೂ ಬಾಡದಿರಲಿ,
ನನ್ನ ಮನವನೆಂದೂ
ನಿಲ್ಲದೆ ಮಿಡಿಯುವ
ಚೆಲುವಿನ ಚಿಲುಮೆಯಾಗಿರಲಿ
ಈ ಹೊಸ ವರ್ಷಕ್ಕೆ
ಶಕ್ತಿಯ ಸೆಲೆಯಾಗಿರಲಿ.... :-)
*************************
Like
Comment
Comments
Rohini Raj Wish you and your family a very happy new year 2017 sir..💐  💐
G Ramachandra Aithal Thank you & wish you the same.
2016 ರ ಕೊನೇ ದಿನವಿಂದು. ಈ ಕಳೆದು ಹೋದ ವರ್ಷದ ಹಿನ್ನೋಟ ನಗೆ ಹೊನಲ ರೂಪದಲ್ಲಿ ಇಲ್ಲಿದೆ. ಓದಿ ಮಜಾ ತೆಗೆದು ಕೊಳ್ಳಿ...... :-)
2016 ಕಣ್ಣುಮುಚ್ಚಿ 2017 ಕಣ್ತೆರೆಯುವ ಹೊತ್ತು ಇದು. ಇಡೀ ವರ್ಷ ಸಂಭವಿಸಿದ, ಜರುಗಿದ ಘಟನೆಗಳ ಪೈಕಿ ಕೆಲವು ಹಿತಾನುಭವ ನೀಡಿದರೆ, ಮತ್ತೊಂದಿಷ್ಟು ಕಹಿ ಮೂಟೆಯನ್ನು ನಮ್ಮ ಮೇಲೆ ಹೊರಿಸಿವೆ. ಅವುಗಳನ್ನೆಲ್ಲ ತಮಾಷೆಯ…
VIJAYKARNATAKA.INDIATIMES.COM
Like
Comment
ಎಲ್ಲರಿಗೂ ಶುಭೋದಯ..... :-)
ಇನ್ನೊಬ್ಬರೊಡನೆ ಮಾತನಾಡುವಾಗ ನಮ್ಮ ದನಿ ಹಿತ ಮಿತ ವಾಗಿರ ಬೇಕು. ಏರಿದ ದನಿಯ ಮಾತು ನಮ್ಮ ದೃಷ್ಟಿಯಲ್ಲಿ ಸಾಮಾನ್ಯವೆನಿಸಿದರೂ, ಕೇಳುವವರಿಗೆ ಅದು ಹೀಗೆ ತಪ್ಪು ತಿಳುವಳಿಕೆ ನೀಡಿ ನಾವು ಅನಾವಶ್ಯಕವಾಗಿ ಜನರ ದೃಷ್ಟಿಯಲ್ಲಿ ಅಪ್ರಿಯರಾಗ ಬಹುದು..... :-)
ಅದಕ್ಕೇ, ಮಾತು ಮುತ್ತು ಸುರಿದಂತಿರ ಬೇಕು ಅಂತಾರೆ.. :-)
Like
Comment
Comments
Manjula Rao
Manjula Rao ಶುಭ ದಿನ
Ashok Nayak Are U not talking while arguing. U should talk while arguing and argue while talking.
Mugali Bhimappa ಸುಪ್ರೀಂ
ವಿವಾಹ ಭೋಜನವಿದು...ವಿಚಿತ್ರ ಭಕ್ಷಗಳಿವು....ಹಹ್ಹಾ...ಹಹ್ಹಾ.... :-) ಭೋಜನ ಮುಂದಿದೆ... :-)ಕಾಣ್ತಾ ಇಲ್ಲ... :-)....ಸುಮ್ಮನೆ ...ಇಲ್ಲೇ ಎಲ್ಲೋ ಸಿಕ್ಕಿದ ಒಂದು ಚಿತ್ರ....ಟೈ ಪಾಸ್ ಗೆ.... :-)
Like
Comment