Sunday 7 February 2016

ಮನುಷ್ಯ ಸಾಧ್ಯವಾದಷ್ಟು ಮಟ್ಟಿಗೆ
ಪರೋಪಜೀವಿಯಾಗಿರದೆ,
ಪರೋಪಕಾರಿಯಾಗಿರ ಬೇಕು.
*****ದಾರ್ಶನಿಕ
ಒಬ್ಬ ದುಷ್ಟನೊಡನೆಯ ನಮ್ಮ
ಜಗಳದಿಂದಾಗಿ ಹತ್ತು ಜನ
ಸಜ್ಜನರು ನಮ್ಮಿಂದ ದೂರಾಗುವ
ಸಂಭವವಿದ್ದರೆ, ನಾವು ಆ
ದುಷ್ಟನೊಂದಿಗೆ ಸೋಲೊಪ್ಪಿಕಂಡು
ಜಗಳ ನಿಲ್ಲಿಸುವುದು ಒಳಿತು.
*****ದಾರ್ಶನಿಕ
ಚೆಂದಾ....ಚೆಂದ...smile emoticon
++++++++++++
ಮುತ್ತುಗಳನ್ನು ಪೋಣಿಸಿ
ಮಾಲೆಯಾಗಿ ಧರಿಸಿದರೆ ಚೆಂದ,
ಸವಿಗನಸುಗಳನ್ನು ಎಚ್ಚರದಲಿ
ಮೆಲುಕಿ ಮುಗುಳ್ನಕ್ಕರೆ ಚೆಂದ,
ಕಹಿ ಸ್ವಪ್ನಗಳನು ಮರೆತು
ಮರೆಗುಳಿಯಾದರೇನೇ ಚೆಂದ,
ನಗುವಿರುವ ನಿಮ್ಮದೇ ಮುಖ
ನಿಮಗೇ ಒಂದು ಚೆಂದ,
ಹಸು ಮಗುವಿನ ಗಲ್ಲ ಸವರಿದಾಗ
ಆ ಬೊಚ್ಚು ಬಾಯ ನಗುವಿನ್ನೂ ಚೆಂದ,
ನಲ್ಲೆ ನಗುತ್ತ ಊಟ ಬಡಿಸಿದರೆ
ಆ ಸವಿಯದಿನ್ನೊಂದು ಚೆಂದ,
ದುಃಖಿಯ ಮಖದಲ್ಲಿ
ನಗು ತರಿಸಿ, ಅದಿನ್ನೂ ಚೆಂದ,
ಬಳುಕು ಸಾಗುವ ನೀರೆಗೊಂದು
ಮೆಚ್ಚುಗೆಯ ಕಳ್ಳ ನೋಟವೂ ಚೆಂದ
ತಾಯಿಯ ಹಿಂದೆ ಬಾಲ ನಿಮಿರಿಸಿ
ಕುಣಿವ ಹಸುಕರುವಿನ ಕುಣಿತ ಚೆಂದ
ಹೀಗಿದ್ದರೆ ನಮ್ಮ ಕಣ್ಣುಗಳೇ ಚೆಂದ
ಈ ನಮ್ಮ ನಶ್ವರ ಜೀವನ ಬಲು ಚೆಂದ.
******************
ಸುಖದ ಚಿಂತೆ
==========
ದೃಷ್ಟಿ ಮಂಜಾದಾಗ
ಕೈ ಹಿಡಿದು
ಮುನ್ನಡೆಸಿದ ಮಗ,
ಬೆನ್ನು ತಟ್ಟಿ
ತಲೆ ನೇವರಿಸಿ
ಶಸ್ತ್ರ ಚಿಕಿತ್ಸೆಯಲ್ಲೂ
ಸಹಕರಿಸಿ
ಧೈರ್ಯ ತುಂಬಿದ
ನನ್ನ ಪ್ರಿಯ ಬಹು,
ಬೆಳಗ್ಗೆ ಶಾಲೆಗೆ
ಓಡುವ ಅವಸರದಲ್ಲೂ,
ಓಡಿಬಂದು
ಕುತ್ತಿಗೆ ಬಳಸಿ
ಗಲ್ಲಕ್ಕೆ ಮುತ್ತಿಟ್ಟು
Best of luck, ಅಜ್ಜಾ,
ಎಂದುಸಿರಿದ ಮೊಮ್ಮಕ್ಕಳು,
ಮುಂದೆಲ್ಲಾದರು
ನಾನು ಅಂಧನಾದರೂ
ನನಗೆ ನೋಡಲು
ಹಲವು ಜೋಡಿ
ಪ್ರೀತಿಯ ಕಂಗಳಿವೆ,
ಹಿಡಿದು ನಡೆಸಲು
ಹಲವು ಜೋಡಿ
ಕೈಗಳವೆ, ಎಂಬ
ಸುಖದ ಚಿಂತೆ
ನನ್ನ ಮೈಮರೆಸಿ
ಸಂತೈಸಿ ಓಲೈಸಿತು.
29.01.2015
ಇನ್ನೊಬ್ಬರಿಗೆ ತಮ್ಮ
ಮಾತಿನಿಂದ ಮಾನಸಿಕ
ಹಿಂಸೆ ಕೊಡುವವರು,
ತಮ್ಮ ಮಾತಿನಿಂದ
ಇನ್ನೊಬ್ಬರಿಗೆ ಹಿಂಸೆಯಾಗುತ್ತಿದೆ
ಎನ್ನುವುದನ್ನು ಎಂದೂ
ಒಪ್ಪಿ ಕೊಳ್ಳುವುದಿಲ್ಲ.
***ದಾರ್ಶನಿಕ
"ಗೌರವ ಕೊಟ್ಟು ಗೌರವ ತೆಗೆದುಕೋ"
ಎಂಬುದರ ನಿಜವಾದ ಅರ್ಥ ಹೀಗೆ...
"ನಾವು ನಮಗಿಂತ ಹಿರಿಯರನ್ನು
ಗೌರವಿಸಿದರೆ, ನಮಗಿಂತ ಕಿರಿಯರು
ನಮ್ಮನ್ನು ಗೌರವಿಸುತ್ತಾರೆ"
*****ದಾರ್ಶನಿಕ
ಶುಭೋದಯ.......
ಅನೆಗೂ ಅಂಗಿ ಪ್ಯಾಂಟ್ ಹೋಲಿಸಿ ಹಾಕುವ ಅಂತಃಕರಣವಿರುವ ಮನುಷ್ಯರಿದ್ದಾರೆಂದರೆ ವಿಶೇಷವೇ......... smile emoticon
ಆದರೆ, ಇದನ್ನು ಬರೇ ಸರ್ಕಸ್ ಅಥವಾ ತಮಾಶೆಗಾಗಿ ಮಾಡಿದ್ದಾರೆಯೇ ಎನ್ನುವುದೂ ಒಂದು ಸಂಶಯ....... smile emoticon
ಏನೇ ಇದ್ದರೂ ಚಿತ್ರವಂತೂ ಅಪರೂಪದ ಚಿತ್ರ. ಒಮ್ಮೆ ಕಣ್ಣು ಹಾಯಿಸಲು ತೊಂದರೆ ಇಲ್ಲ.... smile emoticon
ಎಲ್ಲರಿಗೂ ೬೭ ನೇ ಗಣ ರಾಜ್ಯೋತ್ಸವದ ಶುಭಾಶಯಗಳು.
ನನ್ನ ಮೊಮ್ಮಕ್ಕಳು, ಕೌಸ್ತುಭ್ ಮತ್ತು ಕೃತಾರ್ಥ್ ಸಹ ಪಂಜಾಬಿನ ಧೀರನಾಗಿ ಹಾಗೂ ಕೊಡಗಿನ ಕಲಿಯಾಗಿ ದೇಶದ ಏಕತೆಯನ್ನು ಸಾರುತ್ತಾ ನಿಮಗೆಲ್ಲರಿಗೂ ಗಣ ರಾಜ್ಯೋತ್ಸವದ ಈ ದಿನ ಭಾರತದ ಏಕತೆಯ
ಸಂದೇಶವನ್ನು ಬೀರುತ್ತಿದ್ದಾರೆ........
ಮನುಷ್ಯನಿಗೆ ಹಣದ ಸಂಪಾದನೆ
ಹೆಚ್ಚಾಗುತ್ತ ಹೋದಂತೆ ಅಹಂಕಾರವೂ
ಹೆಚ್ಚಾಗುತ್ತದೆ. ನಯ ವಿನಯ
ಶಿಷ್ಟಾಚಾರಗಳು ಮರೆಯಾಗುತ್ತವೆ.
ಗುರು ಹಿರಿಯರಿಗೆ ಬೆಲೆ ಇಲ್ಲವಾಗುತ್ತದೆ.
ಆದರೆ, ದೇವರ ಮೇಲೆ ಭಕ್ತಿ ಹೆಚ್ಚಾಗುತ್ತದೆ.!!!
*****ದಾರ್ಶನಿಕ
ಸುಖದಲ್ಲಿಯೂ ಕಷ್ಟವನ್ನೇ ಕಾಣುವ
ವ್ಯಕ್ತಿಗಳು ಭೂಮಿಗೇ ಭಾರ,
ಹಾಗೇನೇ, ಕಷ್ಟದಲ್ಲೂ
ಸುಖವನ್ನು ಅರಸುವ
ವ್ಯಕ್ತಿಗಳೇ ಈ ಭೂಮಿಗೆ ಆಧಾರ.
*****ದಾರ್ಶನಿಕ.
ಇನ್ನೊಬ್ಬರನ್ನು ಅವಮಾನಿಸುವ
ಯಾವುದೇ ಸಂದರ್ಭವನ್ನು
ಕಳೆದು ಕೊಳ್ಳದಿರುವವನ
ಮನಸ್ಥಿತಿಯೊಂದು ಮನೋವಿಕೃತಿ.
*****ದಾರ್ಶನಿಕ.
ಸತ್ತವರು ದೆವ್ವ, ಪ್ರೇತಗಳಾಗಿ
ಬದುಕಿರುವವರಿಗೆ ಉಪದ್ರವ
ಕೊಡುತ್ತಾರೆಂಬುದು ಸುಳ್ಳು.
ಬದುಕಿರುವವರಿಗೆ ಉಪದ್ರವ
ಕೊಡುವವರು ಬದುಕಿರುವವರೇ..
*****ದಾರ್ಶನಿಕ
ಪ್ರಾರ್ಥನೆ.
**********
ಸಾಮಾನ್ಯವಾಗಿ ನಮ್ಮ ಹಿರಿಯರು ಸರಳವಾಗಿ
ಹೆಚ್ಚಿನ ದುರಾಸೆಯಿಲ್ಲದೆ ದೇವರನ್ನು
ಈ ರೀತಿ ಪ್ರಾರ್ಥಿಸುವುದನ್ನು ನಾವೆಲ್ಲ ಕೇಳಿದ್ದೇವೆ.....
"ದೇವರೇ, ಕೊನೇ ತನಕ ಕಣ್ಣು ಕೈ ಕಾಲುಗಳ
ಸುಖ ಕೊಟ್ಟು ಕಾಪಾಡಪ್ಪಾ"
ಗಮನಿಸಿ, ಈ ಸರಳ ಪ್ರಾರ್ಥನೆಯಲ್ಲಿ "ಕಿವಿ"
ಸೇರಿಲ್ಲ. ಬರೇ ಕಣ್ಣು ಕೈಕಾಲುಗಳ ಸುಖ
ದೇವರಲ್ಲಿ ಬೇಡಲಾಗುತ್ತಿದೆ.
ವೃದ್ಧಾಪ್ಯದಲ್ಲಿ ಕಣ್ಣುಗಳು ಕಾಣದಾದರೆ, ಕೈ ಕಾಲುಗಳು
ಸ್ಢಾಧೀನ ತಪ್ಪಿ ಹಾಸಿಗೆ ಹಿಡಿದರೆ, ಮನುಷ್ಯ
ಪೂರ್ಣವಾಗಿ ಪರಾವಲಂಬಿಯಾಗಿ ಬೇರೆಯವರ
ಹಂಗಿಗೆ ಬಿದ್ದು, ಹೆಚ್ಚಿನ ಸಂದರ್ಭಗಳಲ್ಲಿ
ಅತಿಯಾದ ನಿಕೃಷ್ಟ ಪರಿಸ್ಥಿತಿಗೆ ಸಿಲುಕುತ್ತಾನೆ.
ಆದರೆ, ಕಿವಿ ಕೇಳಿಸದಿದ್ದರೆ ಅಂತಹ ತೊಂದರೆಯೇನೂ
ಆಗದು. ಬದಲಿಗೆ, ಅನುಕೂಲವೇ ಅನ್ನ ಬಹುದು.
ಯಾರು ಏನು ಬೈದರೂ ಕೇಳಿಸೋದೇ ಇಲ್ಲ... smile emoticon
ಹೀಗೆ, ಹಿರಿಯರು ಮಾಡುತ್ತಿದ್ದ ಈ ಸರಳವಾದ
ಪ್ರಾರ್ಥನೆ ಅದೆಷ್ಟು ಅರ್ಥಗರ್ಭಿತವಾಗಿದೆ
ಮತ್ತು ಈಗಲೂ ಅನುಕರಣೀಯವಾಗಿದೆ ನೋಡಿ.
ಮನುಷ್ಯ ಎಷ್ಟೇ ಸಾಧಕನಿರಲಿ,
ಅವನು ಸತ್ತ ನಂತರ ಸಿಗುವ
ಹೊಗಳಿಕೆ ಮತ್ತು ಮೆಚ್ಚಿಗೆಗಳು
ಅವನಿಗೆ ಬದುಕಿರುವಾಗ ಸಿಗುವುದಿಲ್ಲ.
****ದಾರ್ಶನಿಕ
ಸನಿಹ ಇರುವುದು ಸಂತೋಷ
ಎನ್ನುವ ಅನಿಸಿಕೆ ಮರೆಯಾಗಿ,
ದೂರವಿರುವುದೇ ಸಂತೋಷವೆನಿಸುವ
ಅನಿಸಿಕೆಯೇ ಮೊದಲಿಗೆ ನಿರಾಸಕ್ತಿ,
ನಂತರ ವಿರಕ್ತಿ, ಕೊನೇಗೆ ವೈರಾಗ್ಯ.
****ದಾರ್ಶನಿಕ
ಅತಿಯಾದ ಶಿಸ್ತು,
ಅತಿಯಾದ ಸಲಿಗೆ
ಮಕ್ಕಳಲ್ಲಿ ಅವಿಧೇಯತೆ
ಹಾಗೂ ಸ್ವಚ್ಛಂದತೆ
ಬೆಳೆಯಲು ಕಾರಣಗಳು.
*****ದಾರ್ಶನಿಕ
Helmet made compulsory for pillion rider also. No exemption for anybody. Any "Head" is precious....... smile emoticon Whether Human's or Animal's..... smile emoticon
ಸಂತೋಷ ಅಂದರೆ ಹೀಗಿರ ಬೇಕು. ಸಂಕ್ರಾಂತಿಯ ಹಬ್ಬದ ಶುಭಾಶಯಗಳು.
ನಿಮ್ಮ ಈ ದಿನ, ಅನುದಿನ ಆನಂದಮಯ ವಾಗಿರಲಿ......😊
ಚೆಂದದ ಅಮಲು
===========
ಚೆಂದದ ಅಮಲೇರಿತ್ತು,
ಮರೆತಿದ್ದ ಮುಂದಿನ ಮುಪ್ಪು
ಹಿಂದಿನಿಂದ ಅಣಕಿಸುತ್ತಿತ್ತು,
ಒಣಗಿದ ಸುಕ್ಕುಗಳು ಮರೆಯಲ್ಲಿದ್ದವು
ಕಾಲನ ಕರೆಗೆ ಕಾಯುತ್ತ....
ಈಗಿನ ಅಂದದ ಮುಖ
ಮಸುಕಾಗಲಿತ್ತು, ಆದರೆ
ಈಗಿನ ಚೆಂದದ ಮದ
ಎಲ್ಲವನ್ನೂ ಮರೆ ಮಾಡಿತ್ತು,
ಎಲ್ಲರನ್ನೂ ಮರೆಸಿತ್ತು.
ಕವಿ ಬಣ್ಣಿಸುವ ಈಗಿನ
ಹೂ ನಗೆ ಅಹಂಕಾರದ
ಪ್ರತೀಕವಾಗಿತ್ತು,
ಹಿರಿಯರ ಕಣ್ಣೀರಿಗೆ
ಕಾರಣವಾಗಿತ್ತು
ಕಾಲ, ಕಾಲವನ್ನು
ಕಾದು ಜೀವವನ್ನು
ಹಣ್ಣು ಮಾಡಿತು,
ಚೆಂದದ ಮದ ಇಳಿಸಿತು,
ಕಣ್ಣುಗಳಲ್ಲಿ ಪಶ್ಚಾತ್ತಾಪದ
ಹನಿಗಳನ್ನುರಿಳಿಸಿತು.
*********************
" ಭಯವೇಕೆ ಎನ್ನರಸಿ?
---------------------------------
ವಯಸಾಯ್ತು ನಿನಗೆಂದು ಚಿಂತಿಸಲು ಬೇಡವೇ
ಆಗಿಲ್ಲವೇ ನನಗೆ ನಿನಗಿಂತ ಹೆಚ್ಚು ||
ಮಾಸುತಿದೆ ಸೌಂದರ್ಯ ಎಂದು ಕೊರಗುವೆಯೇಕೆ ?
ಹೇಗೆ ಇರು ನೀ ಎನಗೆ ಅಚ್ಚು ಮೆಚ್ಚು || ೧ ||
ಹೆತ್ತು ನೀ ಕೊಟ್ಟಿರುವೆ ಮುತ್ತಂತ ಮಕ್ಕಳನು
ಸಂಸ್ಕಾರ ಕೊಟ್ಟಿಹೆವು ಜತನದಲ್ಲಿ ||
ಅವರವರ ಬಾಳನ್ನು ಕಟ್ಟಿಕೊಳ್ಳುವರವರು
ದುಗುಡವ್ಯಾತಕೆ ಹೇಳು ನಿನ್ನ ಮನದಲ್ಲಿ ? || ೨ ||
ಮಕ್ಕಳನು ಪ್ರೀತಿಯಲಿ ಬೆಳೆಸುವುದು ಕರ್ತವ್ಯ
ಅದನು ಮಾಡಿಹೆವಲ್ಲ ಶ್ರದ್ಧೆಯಲ್ಲಿ ||
ಬೇಕಿಲ್ಲ ಇನ್ನೇನು ಸಾಕೆನ್ನುವುದೆ ಮಂತ್ರ
ವಿದುರ ಮಾದರಿ ನಮಗೆ ಬದುಕಿನಲ್ಲಿ || ೩ ||
ಈ ದೇಹ ಸೋಲುತಿದೆ ಎಂದೇಕೆ ಮರುಗುವೇ
ಶಾಶ್ವತವು ಯಾವುದಿದೆ ಜಗದ ಒಳಗೆ ||
ಬಂದದ್ದು ಬರುತಿರಲಿ ಎದುರಿಸುವ ಮನವಿರಲಿ
ಹೆಜ್ಜೆ ಇಡು ಧೈರ್ಯದಲಿ ನನ್ನ ಜೊತೆಗೆ || ೪ ||
ಬೆಚ್ಚನೆಯ ಮನೆಯಿಹುದು ವೆಚ್ಚಕ್ಕೆ ಹೊನ್ನಿಹುದು
ಜೊತೆಗಾತಿಯಾಗಿ ನೀ ಜೊತೆಯಲಿರುವೆ ||
ಕಣ್ಣ ರೆಪ್ಪೆಯ ತರದಿ ನಾ ನಿನ್ನ ಕಾಯುವೆನು
ಭಯವೇಕೆ ಎನ್ನರಸಿ ನಾನಿಲ್ಲವೆ || ೫ ||
ನಾಳಿನಾ ಚಿಂತೆಯಲಿ ಇಂದು ಬೆದರುವೆಯೇಕೆ ?
ಆಗಬೇಕೆನ್ನುವುದು ಆಗೆ ಸಿದ್ಧ ||
ಹಣೆಯ ಬರಹವನಂದು ಆ ಬ್ರಹ್ಮ ಬರೆದಾಯ್ದು
ಬದುಕು ಅದರಂತೆಯೇ ಆಗಿ ಬದ್ಧ || ೬ ||
- ಸುರೇಖಾ ಭೀಮಗುಳಿ
07/01/2016
ಹಿಂದಿನ ವರ್ಷಗಳು
ಮುಂದಿನ ವರ್ಷಗಳಿಗಿಂತ
ಹೆಚ್ಚಾದವು ಎಂದು
ಗೊತ್ತಾಗುವ ಸಮಯವೇ
ಮನುಷ್ಯ ತನ್ನ ಜೀವನದ
ಮಧ್ಯಂತರ ಮೌಲ್ಯ ಮಾಪನ
ಮಾಡಿಕೊಳ್ಳಲು ಸಕಾಲ.
******ದಾರ್ಶನಿಕ
ದುಷ್ಟರೊಡನೆ ಸ್ನೇಹ
ಹೇಗೆ ಬೆಳಸ ಬಾರದೋ,
ಹಾಗೇನೇ ಜಗಳವನ್ನೂ
ಮಾಡಬಾರದು.
****** ದಾರ್ಶನಿಕ