Monday 7 October 2019

ಈ ಭ್ರಮೆ‌ ಮತ್ತೆ ನೆನಪಾಗಿ ಕಾಡುತ್ತಿದೆ......🤔🤔
***************************************
ಮೀನಿನಂಥ ಕಣ್ಣುಗಳು,
ಬಿಲ್ಲಿನಂತಹ ಹುಬ್ಬುಗಳು,
ಸಂಪಿಗೆಯಂಥ ನಾಸಿಕ.
ಹರವಾದ ಹಣೆ,
ದುಂಬಿಗಳ ಹಿಂಡಿನಂಥ
ಹಾರುವ ಮುಂಗುರುಳು,
ತುಂಬು ನುಣುಪು ಕೆನ್ನೆಗಳು,
ಕೆನೆ ಹಾಲಿನಂಥ ಮೈಬಣ್ಣ.
ಇವೆಲ್ಲ ಇದ್ದ ದಂತದ
ಬೊಂಬೆಯನ್ನು ಮಾಡಿಕೊಂಡ
ಗುಂಡ ಬಾಳ ಸಂಗಾತಿಯೆಂದು,,
ನಂತರ ನೆನಪಾಯಿತು,
ಬಾದಾಮಿ ಆಕಾರದ ಕೆಂಪು
ಹೃದಯ ಎಲ್ಲಿ ಎಂದು,
ಹುಡುಕಿಯೇ ಹುಡುಕಿದ,
ಹುಡುಕಿಯೇ ಹುಡುಕಿದ,
ಇದ್ದರಲ್ಲವೇ ಸಿಗುವುದು,
ಸಿಗಲೇ ಇಲ್ಲ........ 😪😪
**********

Sunday 6 October 2019

ಹೊಸ ಮಳೆ.
========

ಹೊಸ ಮಳೆ ತುಂತುರು ಹನಿ
ಬಿದ್ದಾಗ ಜುಮ್ಮೆಂದಿತು ಮೈ,
ಪುಳಕಿತಗೊಂಡಿತು ಮನ,
ತಂಗಾಳಿಯ ಓಲೈಕೆಗೆ

ದಣಿವಾರಿಸಿಕೊಂಡಿತು ತನು,
ಹಸಿಯಾದ ಒಣ ಮಣ್ಣಿನ
ವಾಸನೆಯ ಸವಿಯಿತು ನಾಸಿಕ,

ಮುಂಬರುವ ಹಸಿರು ಹಾಸಿಗೆ
ಕಾದು ಕುಳಿತವು ಕಣ್ಣುಗಳು,
ಮನ ತಣಿಯಿತು
ಪ್ರಕೃತಿ ನಲಿಯಿತು,

ಜೀವ ತುಂಬಿದ ಜಗವೆಲ್ಲ
ದೇವ ದೇವ ಎಂದು ನಮಿಸಿತು.
ದೇವ ದೇವ ಎಂದು ನಮಿಸಿತು.

==================

(Repeat)
ಮಳೆ.

ಬಾರದ ಮಳೆಯೇ
ಜೋರಾಗಿ ಬಾ....
ಭೂಮಿ ತಾಯಿಗೆ
ಹಸಿರು ಉಡಿಸಿ
ತಂಪು ಗೈಯಲು ಬಾ..
ರೈತನೆದೆಗೆ ಬಲವ
ತುಂಬಲು ಬಾ....
ಜಲಾಶಯಗಳು ತುಂಬಿ
ಬೆಳಕ ಹರಿಸಲು ಬಾ...
ನಮ್ಮ ಜೋಡಿಯನು
ಛತ್ರಿ ಅಡಿಯಲಿ
ಸನಿಹ ಸನಿಹಕೆ
ಬೆಚ್ಚಗೆ ನಡೆಸಲು ಬಾ......

14.07.2014
ಕೆಲವೊಮ್ಮೆ ಅರೆಜ್ಞಾನಿಗಳು ಅಜ್ಞಾನಿಗಳಿಗಿಂತ ಇತರರಿಗೆ ಹೆಚ್ಚು ತೊಂದರೆ ಕೊಡುತ್ತಾರೆ, ಅಲ್ಲದೆ ತಾವೂ ಸ್ವತಃ ತೊಂದರೆಗೆ ಸಿಲುಕುತ್ತಾರೆ.

****ದಾರ್ಶನಿಕ.
ಮನುಷ್ಯ ಸಮಾಜ ಮುಖಿಯಾಗಿ, ಸಂಘ ಜೀವಿಯಾಗಿದ್ದರೆ, ಎಂಥ ಪರಿಸ್ಥಿತಿಯಲ್ಲೂ ಖಿನ್ನತೆಯಿಂದ ದೂರವಿರ ಬಹುದು.
ಒಂದು ನೀತಿ ಕತೆ. ತಾಳ್ಮೆ ಇದ್ದರೆ ಓದಿ.....🙏🙏
============================
💥💥💥💥💥💥💥*ಕೆಂಡದಂತಿರುತ್ತೇನೆ...... ಇದ್ದಲಾಗಲ್ಲ!* 🌑 🌑🌑🌑🌑🌑 🙏🏼============🙏🏼
ಒಂದು ಊರಿನಲ್ಲಿ *ನಿವೃತ್ತಿ* ಹೊಂದಿದ ಹಿರಿಯರೆಲ್ಲಾ ಸೇರಿ ಒಂದು *ಸಂಘವನ್ನು* ಸ್ಥಾಪಿಸಿಕೊಂಡರು. ಆ ಸಂಘದ ಉದ್ದೇಶವೇನೆಂದರೆ ಸಂಘದ ಸದಸ್ಯರೆಲ್ಲರೂ ಪರಸ್ಪರರ ಕಷ್ಟಸುಖಗಳಲ್ಲಿ ಭಾಗಿಯಾಗಿ ಅವರ ಒಳಿತು ಕೆಡಕುಗಳಿಗೆ ಸ್ಪಂದಿಸುವುದಾಗಿತ್ತು. ಇದರಿಂದಾಗಿ ಬಹಳಷ್ಟು ಮಂದಿಗೆ ಉಪಯೋಗವಾಗಿದ್ದಲ್ಲದೆ, ತಮ್ಮ ಜೀವನದ ಸಂಧ್ಯಾ ಕಾಲವು ಸಾರ್ಥಕವಾಗಿ ನಡೆಯುತ್ತಿದೆ ಎನ್ನುವ ಸಂತೃಪ್ತಿಯೂ ಅವರಲ್ಲಿ ಉಂಟಾಗಿತ್ತು.
ಸಂಘದ ಸದಸ್ಯರು ಪ್ರತಿದಿನ ಸಾಯಂಕಾಲ ಒಂದೆಡೆ ನಿಯಮಿತವಾಗಿ ಸೇರಿ ತಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಿರಲಾಗಿ ಒಂದು ದಿನವೂ ತಪ್ಪದೇ ಸಂಜೆಯ ಕಾರ್ಯಕಲಾಪಗಳಲ್ಲಿ ಭಾಗಿಯಾಗುತ್ತಿದ್ದ ಆ ಸಂಘದ ಕಾರ್ಯದರ್ಶಿ ಸಾಲಾಗಿ ಮೂರು ದಿನಗಳ ಕಾಲ ಬರಲಿಲ್ಲ.
ಇದರಿಂದ ಆತಂಕಗೊಂಡ ಆ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳ ಯೋಗಕ್ಷೇಮದ ಕುರಿತು ತಿಳಿದುಕೊಂಡು ಬರಲು ಒಬ್ಬ ಸದಸ್ಯನನ್ನು ಅವರ ಮನೆಗೆ ಕಳುಹಿಸಿದರು. ಅವನಿಂದ ತಿಳಿದು ಬಂದ ವಿಷಯವೇನೆಂದರೆ, ಕಾರ್ಯದರ್ಶಿಗಳ ಮಗನಿಗೆ ಬೇರೊಂದು ಊರಿಗೆ ವರ್ಗವಾಗಿತ್ತು. ಅವರ ಪತ್ನಿಯೂ ಸಹ ಕೆಲವು ವರ್ಷಗಳ ಹಿಂದೆ ಕಾಲವಾಗಿದ್ದರಿಂದ ದಿಕ್ಕು ತೋಚದಂತಾಗಿ ಒಂಟಿತನದಿಂದ ಅವರು ಖಿನ್ನರಾಗಿದ್ದರು.
ಇದನ್ನು ತಿಳಿದುಕೊಂಡ ಅಧ್ಯಕ್ಷರು ನೇರವಾಗಿ ಕಾರ್ಯದರ್ಶಿಗಳ ಮನೆಗೆ ಹೋದರು. ಹೊರಗಡೆ ಬಹಳ ಚಳಿ ಇದ್ದದ್ದರಿಂದ ಇಬ್ಬರೂ ಅಡಿಗೆ ಮನೆಯಲ್ಲಿದ್ದ ಒಲೆಯ ಬಳಿ ಹೋದರು. ಒಲೆಯಲ್ಲಿದ್ದ ಕಟ್ಟಿಗೆಗಳು ನಿಗಿ ನಿಗಿ *ಕೆಂಡವಾಗಿ ಚೆನ್ನಾಗಿ ಉರಿಯುತ್ತಿದ್ದವು.* ಅಧ್ಯಕ್ಷರು ಒಂದು ಮಾತನ್ನೂ ಆಡದೆ ಒಲೆಯಲ್ಲಿದ್ದ ಉರಿಯುತ್ತಿದ್ದ ಒಂದು *ಕೆಂಡವನ್ನು* ತೆಗೆದು ದೂರದಲ್ಲಿರಿಸಿದರು. ಒಂದೆರಡು ಕ್ಷಣಗಳಲ್ಲಿ ಅದು ಆರಿ *ಇದ್ದಿಲಾಯಿತು* .
ಅಧ್ಯಕ್ಷರು ತಕ್ಷಣವೇ ಎದ್ದು ಹೋಗಿ ಬರುತ್ತೇನೆ ಎಂದು ಹೇಳಿದರು. ಮನೆಯ ಅಂಗಳದವರೆಗೆ ಅವರೊಂದಿಗೆ ಬಂದ ಕಾರ್ಯದರ್ಶಿಗಳು, "ನನಗೆ ಒಳ್ಳೆಯ ಗುಣಪಾಠವನ್ನು ಹೇಳಿದಿರಿ. ನಾಳೆಯಿಂದ ನಾನು ಪ್ರತಿದಿನ ಸಂಜೆ ನಡೆಯುವ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತೇನೆ" ಎಂದರು.
"ಹೌದಾ!" ಎಂದ ಅಧ್ಯಕ್ಷರಿಗೆ ಮಾತಿಗೆ ಪ್ರತಿಯಾಗಿ ಕಾರ್ಯದರ್ಶಿಗಳು, "ಒಲೆಯಲ್ಲಿನ ಇತರೆ *ಕೆಂಡಗಳ* ಜೊತೆಯಲ್ಲಿ ಇದ್ದಾಗ ಒಂದು ಕೆಂಡವು ನಿಗಿ ನಿಗಿಯಾಗಿ ಉರಿದು ಶಾಖ ಮತ್ತು ಬೆಳಕನ್ನು ಕೊಡುತ್ತಿತ್ತು. ಅದನ್ನು *ಪ್ರತ್ಯೇಕಿಸಿ* ಬೇರೆ ಮಾಡಿದಾಗ ಅದು ತನ್ನ ಸ್ವಭಾವವನ್ನು ಕಳೆದುಕೊಂಡು *ಇದ್ದಿಲಾಗಿ* ಮಾರ್ಪಟ್ಟಿತು. ಇದನ್ನು ಕಂಡ ಸಂಘದ ಕಾರ್ಯದರ್ಶಿ, ನಾನು *ಕೆಂಡದಂತಿರುತ್ತೇನೆ* .... *ಇದ್ದಲಾಗಿ* ಮಾರ್ಪಡುವುದಿಲ್ಲ" ಎಂದು ಪಶ್ಚಾತ್ತಾಪ ಪಡುತ್ತಾ ಹೇಳಿದರು.
ವ್ಯಕ್ತಿಯೊಬ್ಬ ಸಮಾಜಮುಖಿಯಾಗಿದ್ದರೆ ಅವನಲ್ಲಿನ *ಶಕ್ತಿ ಪ್ರಜ್ವಲಿಸಿ* ಪ್ರವರ್ಧಮಾನಕ್ಕೆ ಬರುತ್ತದೆ. ಅದೇ ಒಂಟಿಯಾಗಿದ್ದರೆ ಅವನಲ್ಲಿನ *ಕರ್ತೃತ್ವ* ಶಕ್ತಿ ಕ್ಷೀಣಿಸಿ ಅವನು ಕಳಾಹೀನನಾಗುತ್ತಾನೆ.
===============================
(ಆಧಾರ: ಹೈಂದವಿ ಎನ್ನುವವರು ಬರೆದ ಆಕಾಶ ದೀಪಾಲು - ಆಕಾಶ ದೀಪಗಳು ಎನ್ನುವ ( *ತೆಲುಗಿನ ನೀತಿ ಕಥೆಗಳ ಸಂಗ್ರಹದಿಂದ ಆಯ್ದ ಕಥೆ* )
ಇಲ್ಲೇ FB ಯಲ್ಲಿಯೇ ಯಾರೋ ಪೋಷ್ಟ್ ಮಾಡಿದ ಒಂದು ನೀಳವಾದ ಜೋಕ್...  ತಾಳ್ಮೆಯಿಂದ ಪೂರ್ಣ ಓದಿ.....  ನಗುವುಕ್ಕಿ ಹರಿಯದಿರಲು ಸಾಧ್ಯವೇ ಇಲ್ಲ.... 
+++++
ತಲೆ ತಿನ್ನೋದಾದರೆ ಹೀಗೆ ತಿನ್ನ ಬೇಕು...  (Repeat..ಆದರೆ, ಇನ್ನೊಮ್ಮೆ ನಕ್ಕು ಬಿಡಿ ಅಂತ ಪುನರಾವರ್ತನೆ)
***************
ತಾತನ ತಾಪತ್ರಯ
============
‘ತುಂಬಾ ಹೊಟ್ಟೆ ಉರೀತಿದೆ ಡಾಕ್ಟ್ರೆ.’
‘ಡೋಂಟ್ ವರಿ, ಮಾತ್ರೆ ಕೊಡ್ತೀನಿ.’
‘ಬೇಡ. ಉಸಿರಾಡಕ್ಕಾಗಲ್ಲ.’
‘ಯಾಕೆ?’
‘ಕೈ ನಡುಗತ್ತೆ. ಮಾತ್ರೆ ಬಾಯಿಗೆ ಹಾಕ್ಕೊಳಕ್ಕೆ ಹೋಗಿ ಎಷ್ಟೋ ಸಾರಿ ಮೂಗಿಗೆ ಒಳ್ಳೆ ವೆಡ್ಜ್ ಆದ ಹಾಗೆ ಕೂತ್ಬಿಡತ್ತೆ.’
ಔಷಧಿ ಕೊಡ್ತೀನಿ.
‘ಬೇಡ. ಹೆಂಡ್ತಿ ಬೈತಾಳೆ.’
‘ಯಾಕೆ ಬೈತಾರೆ?’
‘ಬ್ರಾಂದೀನ ಎಷ್ಟೋ ವರ್ಷ ಕೊಟ್ಟ ಔಷಧಿಂತ ಅವಳಿಗೆ ಸುಳ್ಳು ಹೇಳಿ ಕುಡೀತಿದ್ದೆ. ಗೊತ್ತಾದಾಗ್ಲಿಂದ ಯಾವ ಡಾಕ್ಟ್ರು ಯಾವ ಬಾಟಲ್ ಕೊಟ್ರೂ ಬ್ರಾಂದೀಂತ ಅವಳ ಭ್ರಾಂತಿ!’
‘ಇಂಜೆಕ್ಷನ್ನು?’
‘ನೋವಾಗತ್ತೆ. ಒಂದ್ಸರ‍್ತಿ ಇಂಜೆಕ್ಷನ್ ತೊಗೊಂಡಿದ್ದೆ, ತಕ್ಷಣ ಟೈರ್ ಅಂಗಡಿಗೆ ಹೋದೆ.’
‘ಯಾಕೆ?’
‘ಆ ನರ್ಸ್ ಮಾಡಿದ ತೂತಿಗೆ ಪಂಕ್ಷರ್ ಹಾಕಿಸ್ಕೊಳಕ್ಕೆ.’
‘ಸರೀ, ಹೊಟ್ಟೆ ಉರಿ ಶುರು ಆಗಿದ್ದು ಯಾವಾಗ?’
‘ಪಕ್ಕದ ಮನೆಯವನು ಹೊಸ ಕಾರ್ ತೊಗೊಂಡಾಗ್ಲಿಂದ!’
‘ನೀವು ಈ ವಯಸ್ಸಲ್ಲಿ ಈ ತರಹ ಹೊಟ್ಟೆ ಉರ‍್ಕೋಬಾರ‍್ದು.’
‘ಹಾಗಾದ್ರೆ ಹೊಟ್ಟೆ ಉರ‍್ಕೊಳಕ್ಕೆ ಸರಿಯಾದ ವಯಸ್ಸು ಯಾವುದು ಡಾಕ್ಟ್ರೆ?’
‘ತಾತಾ... ನನ್ನ ಕ್ಲಿನಿಕ್ ಟೈಂ ವೇಸ್ಟ್ ಮಾಡ್ಬೇಡಿ. ನಿಮಗೆ ನಿಜವಾಗಲೂ ಏನಾಗ್ತಿದೆ ಹೇಳಿ.’
‘ನನ್ನ ಎಡಗಡೆ ಕಾಲು ಬಹಳ ನೋಯುತ್ತೆ.’
‘ಅದು ವಯಸ್ಸಾಗಿರೋದ್ರಿಂದ ಹಾಗೆ.’
‘ಸುಮ್ಮನೆ ಏನೋ ಹೇಳ್ಬೇಡಿ ಡಾಕ್ಟ್ರೆ. ನನ್ನ ಬಲಗಾಲಿಗೂ ಅಷ್ಟೇ ವಯಸ್ಸಾಗಿದೆ, ಅದ್ಯಾಕೆ ನೋಯ್ತಿಲ್ಲ?’
‘ಅದು ಹಾಗಲ್ಲ; ನಾವು ಯಾವುದರ ಮೇಲೆ ಭಾರ ಬಿಡ್ತೀವೋ ಅದು ನೋವು ಬರತ್ತೆ.’
‘ಆದರೆ ನಾನು ಭಾರ ಬಿಡೋದು ವಾಕಿಂಗ್ ಸ್ಟಿಕ್ ಮೇಲೆ. ಅದಕ್ಕೇ ಅಯೋಡೆಕ್ಸ್ ಹಚ್ಚಿಬಿಡ್ಲೇನು?’
‘ತಾತಾ...’
‘ಪೇಷೆಂಟ್ ಬರ‍್ತಾ ಇದ್ದಹಾಗೇ
ತಾ ತಾ ಅಂತ ಬರೀ ಕೈಯೊಡ್ಡೋದೇ ಆಗ್ಹೋಯ್ತು.’
‘ಪ್ಲೀಸ್ ಅಜ್ಜ, ನನ್ನ ತಲೆ ತಿನ್ಬೇಡಿ. ನಿಮ್ಮ ಕಂಪ್ಲೇಂಟ್ ಏನೂಂತ ಹೇಳಿ.’
‘ಬೆಳಗ್ಗೆ ಪಾರ್ಕಲ್ಲಿ ಜೋರಾಗಿ ಓಡಿದಾಗ ಎದೆ ಬಹಳ ಜೋರಾಗಿ ಹೊಡ್ಕೊಳತ್ತೆ.’
‘ಈ ವಯಸ್ಸಲ್ಲಿ ನೀವು ಜೋರಾಗಿ ಓಡ್ತೀರಾ?’
‘ನಾನಲ್ಲ.’
‘ಮತ್ತೆ?’
‘ಸೂಪರ್ ಆಗಿರೋ ಹುಡುಗಿಯರು ಓಡ್ತಾರೆ, ನನ್ನೆದೆ ಹೊಡ್ಕೊಳತ್ತೆ.’
‘ಅಜ್ಜ... ಪ್ಲೀಸ್ ಬಿ ಸೀರಿಯಸ್.’
‘ಯಾಕೆ ಡಾಕ್ಟ್ರೆ, ಸೀರಿಯಸ್ ಆದ್ರೆ ಒಳ್ಳೆ ದುಡ್ ಎಳ್ಕೋಬಹುದು ಅಂತಾನಾ?’
‘ಥೂ, ಆ ತರಹ ಸೀರಿಯಸ್ಸಲ್ಲ ಅಜ್ಜ ನಾ ಹೇಳಿದ್ದು. ಸರಿ, ಈಗ ಇಲ್ಲಿಗೆ ಬಂದಿದ್ದಾದ್ರೂ ಯಾಕೆ ಹೇಳಿ.’
‘ಹೇಳಿದ್ನಲ್ಲ ಡಾಕ್ಟ್ರೇ, ಕಾಲು ಬಹಳ ನೋಯತ್ತೆ ಅಂತ.’
‘ಸರಿ. ಒಬ್ಬ ಸರ್ಜನ್‌ಗೆ ರೆಫರ್ ಮಾಡ್ತೀನಿ, ಅಲ್ಲಿ ತೋರಿಸಿ.’
‘ಸರ್ಜನ್ನಾ? ಬೇಡ.’
‘ಯಾಕೆ?’
‘ಗಾದೆ ಕೇಳಿಲ್ಲವೇನು? ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ, ಸರ್ಜನರ ಸಹವಾಸ ಹೆಜ್ಜೇನು ಕಡಿದಂತೆ.
ನನ್ನ - ಫ್ರೆಂಡ್‌ಗೆ ಆಗಿದ್ದನ್ನ ಕೇಳಿ ಏನೇ ಆದರೂ ಸರ್ಜನ್ ಹತ್ರ ಹೋಗಬಾರದೂಂತ ಡಿಸೈಡ್ ಮಾಡಿದ್ದೀನಿ.’
‘ಏನಾಯ್ತು?’
‘ಹೊಟ್ಟೆ ಆಪರೇಷನ್ ಮೊದಲು ಮಾಡಿದರು. ಇವನಿಗೆ ಬಹಳ ಬಾಯಾರಿಕೆ ಶುರುವಾಯ್ತು.’
‘ಏಕೆ?’
‘ಒಳಗೆ ಸ್ಪಂಜ್ ಬಿಟ್ಬಿಟ್ಟಿದ್ರು. ಮತ್ತೆ ಕೊಯ್ದ್ರು ’
‘ಸರಿಹೋಯ್ತಾ?’
‘ಇಲ್ಲ. ಇದ್ದಕ್ಕಿದ್ದ ಹಾಗೆ ಆಕಡೆಯಿಂದ ಈ ಕಡೆಗೆ ತಿರುಗಿದಾಗಲೆಲ್ಲಾ ಒಳಗೆ ಕಚಕ್ ಅಂತ ಶಬ್ದ ಬರ‍್ತಿತ್ತು.’
‘ಅಯ್ಯೋ, ಯಾಕಂತೆ?’
‘ಒಳಗೆ ಕತ್ತರಿ ಬಿಟ್ಬಿಟ್ಟಿದ್ರು. ಮತ್ತೆ ಹೊಟ್ಟೆ ಕೊಯ್ದಿದ್ದಾಯ್ತು.’
‘ಆಗ ಸರಿಹೋಯ್ತೂನ್ನಿ.’
‘ಇಲ್ಲ. ಒಳಗೇ ಏನೋ ಚುಚ್ಚಿದಹಾಗೆ ಆಗ್ತಿತ್ತು. ನೋಡಿದ್ರೆ ಸೂಜಿ.’
‘ಮತ್ತೆ ಆಪರೇಷನ್ ಆಯ್ತೂನ್ನಿ.’
‘ಇಲ್ಲ.’
‘ಮತ್ತೆ?’
‘ಹೊಟ್ಟೆ ಮೇಲೆ ಒಂದು ಮ್ಯಾಗ್ನೆಟ್ ಕಟ್ಕೊಂಡ್ಬಿಟ್ಟಿದ್ದಾನೆ. ಈಗ ಸೂಜಿ ಅಲ್ಲಾಡದೆ ಒಂದೇ ಜಗದಲ್ಲೇ ಇರೋದ್ರಿಂದ ನೋವಿಲ್ಲ!’
‘ಒಳಗೆ ರಸ್ಟ್ ಆಗ್ಬಿಟ್ರೆ?’
‘ಆಗಲ್ಲ, ಆಗಾಗ್ಗೆ ಹೊಟ್ಟೆಗೆ ಸ್ವಲ್ಪ ಎಣ್ಣೆ ಬಿಟ್ಕೊಳಕ್ಕೆ ಹೇಳಿದ್ದೀನಿ.’
‘ಹಾಗೇ ಇರೋದು ಒಳ್ಳೇದಲ್ಲ. ತೆಗೆಸಿಕೊಂಡುಬಿಡಕ್ಕೆ ಹೇಳಿ.’
‘ಬೇಡ, ಇನ್ನೇನಾದ್ರೂ ಒಳಗೆ ಬಿಡ್ತಾರೆ. ಇದೇ ವಾಸಿ ಅಂದ.’
‘ನೀವೇನಂದ್ರಿ?’
‘ಆಪರೇಷನ್ ಮಾಡಿಸ್ಕೋ, ಆದರೆ ಹೊಲಿಗೆ ಹಾಕಿಸ್ಕೋಬೇಡ ಅಂದೆ.’
‘ಮತ್ತೆ?’
‘ಝಿಪ್ ಹಾಕಿಸಿದೆ. ಏನೇ ಬಿಟ್ಟಿದ್ರೂ ಝಿಪ್ ಝರ್ ಅಂತ ಎಳೆಯೋದು, ತೆಗೆಯೋದು, ಝಿಪ್ ಎಳೆಯೋದು!’
‘ಸೂಪರ್ ಐಡಿಯ ಅಜ್ಜ. ಆದರೂ, ನಿಮ್ಮ ಕಾಲುನೋವಿಗೆ ಒಮ್ಮೆ ಸರ್ಜನ್‌ನ ನೋಡಿಬಿಡಿ.’
‘ಬೇಡ.’
‘ಯಾಕೆ?’
‘ನಮ್ಮ ಮನೆ ಹತ್ತಿರ ಇರೋ ಸರ್ಜನ್ ಬೋರ್ಡ್ ಹಾಕಿದ್ದಾನೆ.’
‘ಏನಂತ?’
‘ನಮ್ಮಲ್ಲಿ ಶಸಚಿಕಿತ್ಸೆ ಮಾಡಿಸಿಕೊಂಡವರಿಗೆ
ಶ್ರಾದ್ಧದ ಖರ್ಚು ಉಚಿತ ಅಂತ!’
‘ಹೋಗಲಿ ಬಿಡಿ. ನಿಮಗೆ ಆಯುರ್ವೇದಿಕ್ ಟ್ರೀಟ್‌ಮೆಂಟೇ ಕೊಡ್ತೀನಿ.’
‘ಇದ್ದಿದ್ರಲ್ಲಿ ಸ್ವೀಟ್ ಆಗಿರೋ ಲೇಹ್ಯಾನೇ ಕೊಡಿ.’
‘ಏನಾದರೂ ಡ್ರಿಂಕ್ಸ್ ಗಿಂಕ್ಸ್ ಅಭ್ಯಾಸ ಇದೆಯೇನು?’
‘ಈಗಿಲ್ಲ ಡಾಕ್ಟ್ರೆ. ನನಗೆ ಡ್ರಿಂಕ್ಸ್ ತೊಗೊಂಡ್ರೆ ಬಹಳ ನೆಗಡಿ ಆಗತ್ತೆ.’
‘ಡಿಂಕ್ಸ್ ತೊಗೊಂಡ್ರೆ ನೆಗಡಿ ಆಗತ್ತಾ?’
‘ಹೂಂ. ಕುಡಿದು ಬಂದಾಗ ಹೆಂಡತಿ ತಲೆಮೇಲೆ ನೀರು ಸುರೀತಾಳಲ್ಲಾ, ಅದರಿಂದ ನೆಗಡಿ ಆಗತ್ತೆ.’
‘ಓಕೆ. ಅಲ್ಲಿಗೆ ನೋ ಡ್ರಿಂಕ್ಸ್ ಅಂತಾಯ್ತು. ಖಾರ ತಿಂತೀರಾ?’
‘ನನ್ನ ಹೆಂಡತಿ ಮಾತಿನ ಮುಂದೆ ಮೆಣಸಿನಪುಡೀನೂ ಸ್ವೀಟ್ ಡಾಕ್ಟ್ರೆ!’
‘ಅಂದರೆ ಹೆಂಡತಿ ಮಾತು ಕೇಳ್ತೀರಾನ್ನಿ.’
‘ಕೇಳದೆ ಇದ್ರೆ ಕಿವಿ ಆಪರೇಷನ್ ಮಾಡಿಸ್ತೀನಿ ಅಂತಾಳೆ ಡಾಕ್ಟ್ರೆ.’
‘ಡ್ರಿಂಕ್ಸು, ಖಾರ ಇಲ್ಲಾಂದ್ಮೇಲೆ ನಿಮ್ಮ ಕಾಲುನೋವಿಗೆ ಕಾರಣ ವಾಯುಬಾಧೆ ಅಲ್ಲ; ನಿಮ್ಮ ನಿದ್ರೆ ಹೇಗಿದೆ?’
‘ರಿಟೈರಾದ ಸ್ವಲ್ಪ ದಿವಸ ನಿದ್ರೇನೇ ಬರ‍್ತಿರಲಿಲ್ಲ.’
‘ಆಮೇಲೆ?’
‘ನಾನು ವರ್ಕ್ ಮಾಡ್ತಿದ್ದ ಸರ್ಕಾರಿ ಕಚೇರಿಯಿಂದ ನಾನು ದಿನಾ ಕೂತು ನಿದ್ರೆ ಮಾಡ್ತಿದ್ದ ಚೇರ್ ತರಿಸ್ಕೊಂಡೆ. ಅದರಲ್ಲಿ ಕೂತ್ರೆ ಸಾಕು, ಹೈ ಕ್ಲಾಸ್ ನಿದ್ರೆ ಬರತ್ತೆ.’
‘ಸರಿ; ನಿದ್ರೆ, ವಾಯು ಪ್ರಾಬ್ಲಂ ಅಲ್ಲಾಂತಾಯ್ತು. ನಿಮಗೆ ಯಾವಾಗ ನೋವು ಜಸ್ತಿ ಇರತ್ತೆ?’
‘ಶನಿವಾರ, ಭಾನುವಾರ.’
‘ಅದೇನು?’
‘ನನ್ನ ಹೆಂಡತಿ ಕಿಟ್ಟಿ ಪಾರ್ಟಿಗೆ ಹೋಗಿರ‍್ತಾಳೆ.’
‘ಅದಕ್ಕೂ ಇದಕ್ಕೂ ಏನು ಸಂಬಂಧ?’
‘ನಮ್ಮ ಮನೆ ಹಿಂಭಾಗದಲ್ಲಿ ಒಂದು ಲೇಡೀಸ್ ಹಾಸ್ಟೆಲ್ ಇದೆ.’
‘ಸರಿ. ಅದಕ್ಕೂ, ಕಿಟ್ಟಿ ಪಾರ್ಟಿಗೂ, ಕಾಲುನೋವಿಗೂ ಏನು ಸಂಬಂಧ?’
‘ಸುಮ್ಮನೆ ಹಾಗೆ ನಿಂತ್ರೆ ಆ ಹಾಸ್ಟೆಲ್‌ನಲ್ಲಿ ಹುಡುಗಿಯರು ಚೆಲ್ಲುಚೆಲ್ಲಾಗಿ ಆಡೋದು ಕಾಣಲ್ಲ.’
‘ಅದಕ್ಕೆ?’
‘ಒಂದು ಏಣಿ ಹಾಕ್ಕೊಂಡು ನಿಲ್ತೀನಿ.’
‘ಹೂಂ?’
‘ಬಲಗಾಲು ಕಾಂಪೌಂಡ್ ಮೇಲಿರತ್ತೆ, ನೋವಿರಲ್ಲ, ಎಡಗಾಲು ಏಣಿ ಮೇಲಿರತ್ತೆ, ನೋವು ಬರತ್ತೆ!’
‘ತಾತಾ... ಈ ವಯಸ್ಸಲ್ಲೀ... ಹುಡುಗೀರ‍್ನ ಕದ್ದು ನೋಡೋದೂಂದ್ರೆ.... ಛೀ!’
‘ಹಾಗೆಲ್ಲಾ ಬಿಡಕ್ಕಾಗತ್ತಾ, ಇದು ನನ್ನ ಗೋಲ್ಡನ್ ಜ್ಯೂಬಿಲಿ ವರ್ಷ ಗೊತ್ತಾ?’
‘ನಿಮಗೆ ಇನ್ನೂ ಐವತ್ತೇನಾ?’
‘ನನಗಲ್ಲ, ಹುಡುಗೀರ‍್ನ ನೋಡಕ್ಕೆ ಶುರು ಮಾಡಿ ಐವತ್ತು ವರ್ಷ. 16ಕ್ಕೆ ಶುರು ಮಾಡ್ದೆ, ಈಗ 66!’
‘ಟ್ರೀಟ್ಮೆಂಟ್ ಬೇಕಾದ್ದು ನಿಮ್ಮ ಕಾಲಿಗಲ್ಲ, ತಲೆಗೆ. ಗೆಟ್ ಔಟ್. ಯಾವುದಾದರೂ ಹುಚ್ಚಾಸ್ಪತ್ರೇಲಿ ಟ್ರೀಟ್ಮೆಂಟ್ ತೊಗೊಳ್ಳಿ, ಸರಿಹೋಗತ್ತೆ.’
‘ಅಲ್ಲೂ ಹೋಗಿದ್ದೆ. ಸೇರಿಸ್ಕೊಳಲ್ಲಾಂದ್ರು.’
‘ಯಾಕಂತೆ?’
‘ಅಲ್ಲಿ ವಾಸಿಯಾಗೋ ಹುಚ್ಚರನ್ನು ಮಾತ್ರ ಸೇರಿಸ್ಕೊಳ್ತಾರಂತೆ!’
‘ಸರಿ ಅಜ್ಜ. ನಿಮಗೇನು ಟ್ರೀಟ್‌ಮೆಂಟ್ ಕೊಡಬೇಕೂಂತ ಗೊತ್ತಾಯ್ತು. ನಿಮ್ಮ ಮನೆಯ ಫೋನ್ ನಂಬರ್ ಏನು?’
‘ಯಾಕೆ?’
‘ಅಜ್ಜಿಗೆ ಕಿಟ್ಟಿ ಪಾರ್ಟಿ ಮನೇಲೇ ಇಟ್ಕೊಳ್ಳಕ್ಕೆ ಹೇಳ್ತೀನಿ, ನಿಮ್ಮ ಆಟ ಕಟ್ ಆಗಿ, ನೋವು ಮಾಯ ಆಗತ್ತೆ.’
‘ಥ್ಯಾಂಕ್ಯೂ ವೆರಿ ಮಚ್. ನನಗೂ ಅದೇ ಬೇಕಾಗಿತ್ತು.’
‘ಯಾಕೆ?’
‘ಇವಳ ಕಿಟ್ಟಿ ಪಾರ್ಟೀಲಿ ಹಾಸ್ಟೆಲ್ ಹುಡುಗೀರಿಗಿಂತ ಚೆನ್ನಾಗಿರೋವ್ರು ಸೇರ‍್ತಾರೆ. ಥ್ಯಾಂಕ್ಸ್ .
ಒಬ್ಬ ಬೇರೆಯವರಿಂದ,
ಪ್ರತಿಕೂಲ ಪರಿಸ್ಥಿತಿಯಿಂದ ಒತ್ತಡಕ್ಕ
ಒಳಗಾಗಿದ್ದ. ಖಿನ್ನತೆಯಿಂದ
ಬಳಲಿ ಕಂಗೆಟ್ಟಿದ್ದ. ಆದರೂ
ಪರಿಹಾರ ಹುಡುಕುತ್ತದ್ದ.
ಒಂದು ಆತ್ಮಹತ್ಯೆ
ಅಯ್ಯೋ, ಅತ್ಮಹತ್ಯೆ ಮಹಾಪಾಪ,
ಎರಡನೇದು ಕೊಲೆ,
ತನ್ನನ್ನು ಒತ್ತಡಕ್ಕೆ
ತಳ್ಳಿದವರನ್ನು ಮುಗಿಸುವುದು?
ಆದರೆ ಕೊಲೆ ಮಾಡಿದವನಿಗೆ
ಗಲ್ಲು ಅಥವಾ ಕಾರಾವಾಸ
ಕಾಯ್ತಾ ಇರುತ್ತಲ್ಲ, ಬೇಡಪ್ಪಾ,
ಮತ್ತೂ ಯೋಚಿಸಿಯೇ ಯೋಚಿಸಿದ,
ಮೂರನೇ ದಾರಿಯನ್ನು ಹುಡುಕಿದ,
ಅದೇ "ಪಲಾಯನ", ಇದೇ ಸರಿಯೆಂದು,
ತನ್ನನ್ನು ಒತ್ತಡಕ್ಕೆ ಒತ್ತಿಟ್ಟವರಿಂದ,
ತನ್ನನ್ನು ಒತ್ತಡಕ್ಕೆ ತಂದ ಪರಿಸರದಿಂದ,
ಜನರಿಂದ, ದೂರ ಓಡಿಯೇ ಓಡಿದ,
ಪಲಾಯನ ಮಾಡಿ ಬದುಕಿಕೊಂಡ,
ತನ್ನದೇ ಪ್ರಪಂಚ ಕಟ್ಟಿಕೊಂದು
ತನಗಿಷ್ಟು ಶಕ್ತಿ ಕೊಟ್ಟ
ದೇವರನ್ನು ಸ್ಮರಿಸುತ್ತ ಸುಖವಾಗಿದ್ದ..
(ಇದು ಕವಿತೆಯಲ್ಲ - ಅಗತ್ಯವಿದ್ದವರಿಗೆ ಒಂದು ಸಲಹೆ ಅಷ್ಟೆ - ಎಲ್ಲರೂ ಇದನ್ನು ಒಪ್ಪದೇನೂ ಇರ ಬಹುದು..... 🙂 )
.
ಟೀಚರ್: You spilled coffee over the table. Translate this in your mother tongue!
ಪುಟ್ಟ: Mother tongue means language of my mom.. Right!
ಟೀಚರ್- Yes
ಪುಟ್ಟ: ನಿನ್ ಕೈ ಮುರ್ದ್ ಹೋಗಿದ್ಯೇನೋ .. ನಾಲಾಯಕ್ ! ಯಾವತ್ತಾದರೂ ಒಂದು ಕೆಲ್ಸ ನೆಟ್ಟಗೆ ಮಾಡಿದ್ದೀಯಾ ? ಯಾವನ್ ಇದನ್ನು ಕ್ಲೀನ್ ಮಾಡ್ತಾನೆ ? ಥೇಟ್ ನಿಮ್ಮಪ್ಪನ ಹಾಂಗೆ ಆಗಿದ್ದೀಯಾ. ನಿಮ್ಮಪ್ಪ ಬರ್ಲಿ.. ಅವ್ರ ಕೈಲೇ ಕ್ಲೀನ್ ಮಾಡಿಸ್ತೀನಿ !
🤣🤣
(Shared)
ಹೀಗೂ ಉಂಟೇ......?😂😂😂
===================
ಮಗಳೊಬ್ಬಳಿಗೆ ವಿದೇಶಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು ಹೋಗಿದ್ದಳು, ಹೋದ ನಂತರ ಅಪ್ಪ-ಅಮ್ಮನಿಗೆ ಒಂದು ಪಾರ್ಸಲ್ ಕಳಿಸಿದ್ದಳು, ಅದರಲ್ಲಿ ಒಂದು ಲೆಟರ್ ಇತ್ತು ಮತ್ತು ಅದರಲ್ಲಿ ಹೀಗೆ ಬರೆದಿತ್ತು:
ಅಮ್ಮ, ನಾನು ಬರುವುದು ಇನ್ನು 10 ವರ್ಷನಾದ್ರು ಆಗಬಹುದು. ನಾನು ಬಂದಾಗ ನಿಮ್ಮ ಮುಖ ಒಣಗಿರುತ್ತದೆ, ಚರ್ಮ ಸುಕ್ಕುಗಟ್ಟಿರುತ್ತದೆ, ಮತ್ತು ನನಗೆ ನಿಮ್ಮನ್ನು ನೋಡಿದರೆ ದುಃಖವಾಗುತ್ತದೆ. ಹಾಗಾಗಿ ಈ ಪಾರ್ಸಲ್ ನಲ್ಲಿ ಒಂದು ಟಾನಿಕ್ ಔಷಧಿ ಇದೆ. ಇದನ್ನ ನೀನು-ಅಪ್ಪ ಇಬ್ಬರೂ ದಿನಾಲೂ ಒಂದು ಹನಿ ಕುಡಿಯಿರಿ. ನಿಮಗೆ ವಯಸ್ಸೇ ಆಗೋದಿಲ್ಲ! ಮತ್ತು ಚಿರಾಯುವಕರಂತೆ ಕಾಣುತ್ತೀರಿ.....
ಮಗಳು ಹತ್ತು ವರ್ಷದ ನಂತರ ವಾಪಸ್ ಬಂದಳು, ಬಂದು ನೋಡಿದರೆ ಅಪ್ಪ ಮನೆಯ ಮುಂದೆ ಪೇಪರ್
ಓದುತ್ತಾ ಕುಳಿತಿದ್ದನು, ಅಮ್ಮ ಕಾಣಲಿಲ್ಲ. ಜಗಲಿ ಕಟ್ಟೆಯ ಮೇಲೆ ಮಗುವೊಂದು ಆಟವಾಡುತ್ತಿತ್ತು. ಮಗಳು ಬಂದವಳೇ ಅಪ್ಪನನ್ನು ಮಾತನಾಡಿಸಿದಳು.
ಮಗಳು:- ಏನಪ್ಪ ಇದು..... ನೀನು ಇಷ್ಟೊಂದು ಮುದುಕನಾಗಿದ್ದಿಯಾ... ಔಷಧಿ ಕುಡಿಲಿಲ್ವಾ ನೀನು?
ಅಪ್ಪ - ಅಯ್ಯೋ ನೀನು ಔಷಧಿ ಕೊಟ್ಟ ದಿನಾನೆ ನಿಮ್ಮವ್ವನೇ ಎಲ್ಲಾ ಕುಂಡ್ಕಂಡ್ಬುಟ್ಳು ಕಣವ್ವಾ🙄🙄
ಮಗಳು :- ಮತ್ತೆ ಅವ್ವ ಎಲ್ಲಿ ಇವಾಗ?😡
ಅಪ್ಪ - ನೋಡಲ್ಲಿ , ಜಗಲಿ ಕಟ್ಟೆ ಮೇಲೆ ಆಡ್ತಾ ಕುಂತೈತಲ್ಲ😠😠😠
===============================
(Shared)
ಪರಸ್ಪರ ಅಪರಿಚಿತರು ಮದುವೆಯಾಗಿ, ಒಂದು ವೇಳೆ ಲವ್ ಆದರೆ ಅದೇ ನಿಜವಾದ ಲವ್...‌🙂


ನೀ ಹರಿಣದಂತೆ ಸುಂದರಿ...
••••••••••••••••••••
ಲಂಗ ದಾವಣಿಯ
ಹುಡುಗಿ,
ನೀ ಸುಂದರಿ,
ಹರಿಣದಂತೆ
ಜಿಗಿಯುವ
ಎಲೆ ಬೆಡಗಿ,
ಬೆಚ್ಚಿ ಬಿದ್ದನಲ್ಲ
ಈ ಹುಡುಗ
ನಿನ್ನ ಗೆಜ್ಜೆಯ
ನಿನಾದಕೆ,
ಹಾರಾಡುವ
ಮುಂಗರುಳು,
ಓಲಾಡುವ
ನೀಳ ಜಡೆ,
ಏ ಬಟ್ಟಲು
ಕಂಗಳ ಚೆಲುವೆ,
ಹೊಳೆಯುವ
ದಂತ ಮುತ್ತಿನ
ಸಾಲುಗಳು
ಮೈ ಮರೆಸಿದವು
ನಮ್ಮೀ ಹಡುಗನ,
ಒಲವಿನ ಮುತ್ತಿನ
ಕರಿಮಣಿ ಹಿಡಿದು
ಕಾದಿಹನವ,
ಇನ್ನು ಬೇಡ ತಡ,
ಕೊರಳೊಡ್ಡಿ
ಬಂದು ಬಿಡು ಬೇಗ,
ಬಂದು ಬಿಡು ಬೇಗ.
*****************.🙂
ಪ್ರಸಿದ್ಧಿಗೆ
ಪ್ರಚಾರ
ಬೇಕೇ
ಬೇಕು...🙂
ನನ್ನನ್ನು ಯಾರೂ ಪ್ರೀತಿಸುವುದಿಲ್ಲ
ಎನ್ನುವವನು ತಾನು ಯಾರನ್ನೂ ಪ್ರೀತಿಸುವುದಿಲ್ಲ.
ನನ್ನನ್ನು ಎಲ್ಲರೂ ದ್ವೇಷಿಸುತ್ತಾರೆ
ಎನ್ನುವವನು ತಾನು ಎಲ್ಲರನ್ನೂ ದ್ವೇಷಿಸುತ್ತಾನೆ..
******ದಾರ್ಶನಿಕ
ಮದುವೆಯ ವಾರ್ಷಿಕೋತ್ಸವವೋ, ಅಥವಾ ಜಗಳದ ವರ್ಷಾಚರಣೆಯೋ.........  (ತಾಳ್ಮೆಯಿಂದ ಪೂರ್ಣ ಓದಿ)
************************
ನಮ್ಮ ಪಕ್ಕದ ಮನೆಯಲ್ಲಿ ಒಬ್ಬರು ವೃದ್ಧ ದಂಪತಿಗಳಿದ್ದಾರೆ. ಗಂಡನಿಗೆ 70 ವರ್ಷ, ಹೆಂಡತಿಗೆ 65 ವರ್ಷವಿರಬಹುದು. ಅವರ ಗಂಡು ಮಕ್ಲಳಿಬ್ಬರು ಬೇರಾವುದೋ ಊರಿನಲ್ಲಿ ಕೆಲಸದಲ್ಲಿದ್ದರು.
ಮತ್ತೊಬ್ಬಳು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು. ತಾವು ಮಾತ್ರ ಯಾವಾಗ ನೋಡಿದರೂ ಏರಿದ ದನಿಗಳಲ್ಲಿ ಜಗಳ ಆಡುತ್ತಲೇ ಇರುತ್ತಿದ್ದರು.
ಒಂದು ದಿನ ನಮ್ಮನ್ನು ಮಧ್ಯಾಹ್ನ ಊಟಕ್ಕೆ ಕರೆದರು. ಯಾಕೆಂದದ್ದಕ್ಕೆ, ಇವತ್ತು ನಮ್ಮ marriage anniversary ಅದಕ್ಕೇ ಬನ್ನಿ ಅಂದರು. ಅವರ ಜಗಳ ಕೇಳಿ ಕೇಳಿ ಬೇಸತ್ತಿದ್ದ ನಾವು, ಹೋಗುವುದೋ ಬೇಡವೋ ಎಂದು ಯೋಚಿಸಿ ಯೋಚಿಸಿ, ಕೊನೆಗೆ, ನೆರೆಹೊರೆಯಲ್ಲ ಅಂದು ಕೊಂಡು ಹೋದೆವು.
ನಾವು ಹೋದಾಗ ಸಹ ಯಾವುದಕ್ಕೋ ಜೋರಾಗಿ ಜಗಳ ನಡೆಯುತಿತ್ತು. ನಾವು ಹೋದ ಕೂಡಲೆ ಸ್ವಲ್ಪ ಶಾಂತವಾಯಿತು. ಅವರ ಮದುವೆಯ 40ನೇ ವಾರ್ಷಿಕೋತ್ಸವಕ್ಕೆ Best wishes ಹೇಳಿದೆವು. ಅಂತೂ ಇಂತೂ ಊಟನೂ ಮುಗಿಯಿತು.
ಆಗ ನಾನು ಆ ಅಜ್ಜನನ್ನು ಕೇಳಿದೆ, "ಅಲ್ಲಾ, ಮದುವೆಯಾಗಿ 40 ವರ್ಷ ಆಯಿತು ಅಂತೀರಾ, ಇನ್ನೂ ಯಾಕೆ ಹೀಗೆ ಜಗಳ ಆಡ್ತೀರಾ? ರಾಮ ಕೃಷ್ಣ ಅಂದುಕೊಂಡು ಹಾಯಾಗಿರ ಬಾರದೇ?"
ಆಗ ಅವರು ಜೋರಾಗಿ ನಕ್ಕು, "ರಾಯರೇ, ಇವತ್ತು ಬರೇ ನಮ್ಮ ಮದುವೆಯ 40 ನೇ ವಾರ್ಷಿಕೋತ್ಸವ ಅಲ್ಲ, ನಮ್ಮ ಜಗಳದ್ದೂ ಕೂಡ 40ನೇ ವಾರ್ಷಿಕೋತ್ಸವ' ಎಂದರು. ಕುತೂಹಲದಿಂದ "ಅದು ಹೇಗ, ರಾಯರೇ?" ಎಂದೆ.
"ನೋಡಿ, ನಮ್ಮ ಮದುವೆ ಆದದ್ದು ನಮ್ಮೂರಿಗೆ 25 kms ದೂರದ ಒಂದು ದೇವಸ್ಥಾನದಲ್ಲಿ. ಗೋಧೂಳಿ ಲಗ್ನ. ಊಟವೆಲ್ಲ ಮುಗಿಯುವಾಗ ರಾತ್ರಿ 9.30 ಗಂಟೆಯಾಯಿತು. ಮದುಮಗಳನ್ನು ಕೈ ಎತ್ತಿ ಕೊಡುವ ಶಾಸ್ತ್ರವೂ ಮುಗಿದು, ಎಲ್ಲರೂ ನಮ್ಮ ಮನೆ ಮುಟ್ಟುವಾಗ ರಾತ್ರಿ 10.30 ಗಂಟೆ. ಬಂದು ನೋಡಿದರೆ, ಮದುಮಗಳ ಬಟ್ಟೆಬರೆ ಇತ್ಯಾದಿಗಳಿದ್ದ ಪೆಟ್ಟಿಗೆ ಇಲ್ಲ. !!!!
ಈಕೆ ಕೂಡಲೇ ಹಿಂದೆ ಮುಂದೆ ನೋಡದೆ ಜಗಳವೇ ಶುರು ಮಾಡಿದಳು. "ಈಗಲೇ ನನ್ನ ಬಗ್ಗೆ ಇಷ್ಟು ನಿಷ್ಕಾಳಜಿ ಮಾಡುವ ನೀವು ಮತ್ತು ನಿಮ್ಮ ಮನೆಯವರು, ಮುಂದೆ ನನ್ನನ್ನು ಏನು ಮಾಡೀರೀ, ಹಾಗೆ ಹೀಗೆ ....." ಅಂತ.
ನಾವು ಈಗಲೇ ಹೋಗಿ ಪೆಟ್ಟಿಗೆ ತರುತ್ತೇವೆಂದು ಹೊರಟರೂ ಈಕೆ ಎಲ್ಲರ ಮೇಲೆ ಒದರಾಡುವುದನ್ನು ನಿಲ್ಲಿಸಲಿಲ್ಲ. ಆ ರಾತ್ರಿಗೆ ಒಂದು taxi ಮಾಡಿಕೊಂಡು ಹೋಗಿ ಅರ್ಚಕರು ಎತ್ತಿಟ್ಟಿದ್ದ ಪೆಟ್ಟಿಗೆ ತಂದದ್ದಾಯಿತು. ಈಕೆ ಈ ತರ ಜಗಳಗಂಟಿ ಎಂದು ಆವತ್ತೇ ಗೊತ್ತಾಗಿ ಹೋಯಿತು. ಆದರೇನು ಮಾಡುವುದು, ಮದುವೆ ಆಗಿ ಹೋಗಿತ್ತು... !! ಅಂದು ಶರುವಾದ ಜಗಳ ಇನ್ನೂ ನಡೆದೇ ಇದೆ. ಅದು ಹೇಗೋ ಈ ಜಗಳದಲ್ಲೇ ಮೂರು ಮಕ್ಕಳೂ ಆದವು...." ಎಂದು ಮುಸಿ ಮುಸಿ ನಕ್ಕರು.
ಅಷ್ಟೊತ್ತಿಗೆ, ಅದುವರೆಗೆ ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದ ಅಜ್ಜಿ ಸೊಂಟಕ್ಕೆ ಸೆರಗು ಸಿಕ್ಕಸಿಕೊಂಡು ಬಂದೇ ಬಿಟ್ಟರು. "ಏನು, ಹಳೇ ಪುರಾಣ ಎಲ್ಲ ಹೇಳಿ, ಬಂದವರ ಎದುರಿಗೆ ನನ್ನನ್ನು ಜಗಳಗಂಟಿ ಎಂದು ಮರ್ಯಾದೆ ಕಳೀತೀರಾ, ಏನನ್ನ ಬೇಕು ನಿಮ್ಮ ಮುಖಕ್ಕೆ?" ಎಂದು ಏರಿದ ದನಿಯಲ್ಲಿ ಜಗಳ ಶುರು ಮಾಡಿಯೇ ಬಿಟ್ಟರು. "ನೀನು ಜಗಳಗಂಟಿ ಅಲ್ಲವೇನು ಮತ್ತೆ? ಇದ್ದುದನ್ನು ಇದ್ದ ಹಾಗೆ ಹೇಳಿದರೆ, ಏನು ಭಾಳಾ ಹಾರಾಡ್ತೀ" ಎಂದು ಮುದುಕ ಶುರು ಮಾಡಿದರು.
ನಾವು ದಂಗಾಗಿ, "ರಾಯರೇ, ನಾವಿನ್ನು ಬರುತ್ತೇವೆ, ಇನ್ನೊಮ್ಮೆ ನಿಮಗೆ ಮದುವೆಯ ದಿನದ ಶುಭಾಶಯಗಳು," ಎಂದು, ಮನಸ್ಸಿನಲ್ಲಿ "ಜಗಳದ ದಿನದ್ದೂ ಶುಭಾಶಯಗಳು(?)" ಎಂದುಕೊಂಡು ಎದ್ದು ಬಂದು ಬಿಟ್ಟೆವು.
***************
WhatsApp ಜೋಕುಗಳು.......ಈಗಾಗಲೇ ಓದಿರದವರು ಓದಿ ನಗಲಿ ಅಂತ.... :-)ನಾವು ಈಗಾಗಲೇ ಓದಿದ್ದೇವೆ, ಸ್ಟೇಲ್, ಅನ್ನುವವರಿಗಾಗಿ ಅಲ್ಲ... 
********
ಹುಡ್ಗ : ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ
ಹುಡ್ಗಿ : ವ್ಹಾವ್.!! ಆಮೇಲ್ ಏನಾಯ್ತು.?
ಹುಡ್ಗ : ಆಗೋದೇನು.? ಮೆಲ್ಲಗೆ ಹೇಳಿದ್ರಿಂದ ಯಾರಿಗೂ ಕೇಳಿಸ್ಲಿಲ್ಲ.. ಬಚಾವಾಗ್ಬಿಟ್ಟೆ.
😂😝😜😂😝😜
ಗುಂಡ:ಅಪ್ಪಾ ಗುಲಾಬಿ ಗಿಡ ನೆಟ್ಟು ಒಂದು ತಿಂಗಳಾದ್ರೂ ಬೇರು ಬಿಟ್ಟೇ ಇಲ್ಲ?
ಅಪ್ಪ:ಅದು ನಿಂಗೆ ಹೇಗೆ ಗೊತ್ತು?
ಗುಂಡ:ಹೌದಪ್ಪಾ ನಾನು ದಿನಾ ಕಿತ್ತು ಕಿತ್ತು ನೋಡ್ತಿದ್ದೀನಿ..****😉😜😜😝😛😂😂😂
*ಡಾಕ್ಟರ್*: ಬನ್ನಿ ಉಮೇಶ್.. ಏನ್ ಸಮಾಚಾರ?
*ಉಮೇಶ್*: ಸ್ವಲ್ಪ ಹುಷಾರಿಲ್ಲಾ ಡಾಕ್ಟ್ರೇ... ಯಾಕೋ ತಲೆ ಭಾರ..
*ಡಾಕ್ಟರ್*: ಡ್ರಿಂಕ್ಸ್ ಮಾಡ್ತೀರಾ?
*ಉಮೇಶ್*: ಹೂಂ... ಆದ್ರೆ ಗ್ಲಾಸ್ ತಂದಿಲ್ಲಾ ಡಾಕ್ಟ್ರೇ.. ನಿಮ್ ಗ್ಲಾಸ್ ನಲ್ಲೇ ಸ್ವಲ್ಪ ಹಾಕ್ಕೊಡಿ...😜
ಹೆಂಡ್ತಿ : ರೀ ಈ ಸರಿ ವರಲಕ್ಷ್ಮಿ ಹಬ್ಬಕ್ಕೆ ಹೆಣ್ಮಕ್ಕಳಿಗೆ ಅರಿಶಿಣ ಕುಂಕುಮದ ಜೊತೆ ಇನ್ನೇನು ಕೊಡಲಿ..
ಗಂಡ : ನನ್ ನಂಬರ್ ಕೊಡು
😂😜😝😜
ಶಿಕ್ಷಕರು :- ಗಾಳಿಪಟ ಎಷ್ಟೇ ದೂರಕ್ಕೆ ಹೊದ್ರೂ ದಾರ ನಮ್ಮ ಕೈಯಲ್ಲೇ ಇರುತ್ತೆ..
ಇದಕ್ಕೆ ಒಂದು ಉದಾಹರಣೆ ಕೊಡು?
ವಿದ್ಯಾರ್ಥಿ :- ಮೆಸೇಜ್ ಎಷ್ಟೇ ದೂರ ಹೊದ್ರೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ..‌..😀😀😀😀😀😀😀😀😀😀
ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ
ಕುರ್ ಕುರ್
ಕುರ್ ಕುರ್
ಮೊಬೈಲ್ ಟಾರ್ಚ್ ಮೂಲಕ
ನೋಡಿದಾಗ ಹತ್ತಿರದ
ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ
ಚಿಪ್ಸ್ ತಿನ್ನುತ್ತಿದ್ದ..
ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ
*ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..*
ಎಂಚಿ ಸಾವು ಮಾರೆ😃😃
ಇಬ್ಬರು ಹುಚ್ಚರು ಟೆರೇಸ್ ಮೇಲೆ ಮಲಗಿದ್ದರು.ಮಳೆ ಬರಲಾರಂಬಿಸಿತು,
ಮೊದಲ ಹುಚ್ಚ :- ನಡಿ ಕೆಳಗೆ ಹೋಗಿ ಮಲಗೋಣ, ಆಕಾಶ ತೂತಾಗಿದೆ.
(ಅಷ್ಟರಲ್ಲಿ ಆಕಾಶ ಮಿಂಚತೋಡಗಿತು)
ಎರಡನೇ ಹುಚ್ಚ :-ಇಲ್ಲೇ ಮಲಗೋ ವೆಲ್ಡಿಂಗ್ ಮಾಡೋರುಬಂದ್ರು,,,,,,,,!
😂😂😂😀😀😀
ಟೀಚರ್: 1869ರಲ್ಲಿ ಏನಾಯ್ತು?
ವಿದ್ಯಾರ್ಥಿ: ಗಾಂಧೀಜಿ ಹುಟ್ಟಿದರು.
ಟೀಚರ್:very gud.. 1873ರಲ್ಲಿ ಏನಾಯ್ತು?
ವಿದ್ಯಾರ್ಥಿ: ಗಾಂಧೀಜಿಗೆ ನಾಲ್ಕು ವರ್ಷ ತುಂಬಿತು😂😂😂😂😂
ಹೆಡ್ಮಾಸ್ಟರ್ : ಐನ್ಸ್ಟೀನ್ ಯಾರು ?
ಸ್ಟೂಡೆಂಟ್: ಗೊತ್ತಿಲ್ಲ ಸರ್ .
ಹೆಡ್ಮಾಸ್ಟರ್ : ಗಮನ ಸ್ಟಡೀಸ್ ಕಡೆ ಇರ್ಲಿ , ಆಗ ಎಲ್ಲಾ ಗೊತ್ತಾಗುತ್ತೆ .
ಸ್ಟೂಡೆಂಟ್ : ನಿಮಗೆ ರಮೇಶ ಯಾರು ಅಂತ ಗೊತ್ತಾ ?
ಹೆಡ್ಮಾಸ್ಟರ್ : ಗೊತ್ತಿಲ್ಲ .
ಸ್ಟೂಡೆಂಟ್ : ಗಮನ ನಿಮ್ಮ ಮಗಳ ಕಡೆನೂ ಇರ್ಲಿ . ಆಗ ಎಲ್ಲಾ ಗೊತ್ತಾಗುತ್ತೆ😂😂😂😂
ಟೀಚರ್ : ಎಲೆಕ್ಟ್ರಿಸಿಟಿ ಇಲ್ಲದೆ ಹೋಗಿದ್ರೆ , ಏನಾಗುತ್ತಿತ್ತು ?
ಪಪ್ಪು : ರಾತ್ರಿಯಲ್ಲಿ ಕ್ಯಾಂಡಲ್ ಹಿಡ್ಕೊಂಡು ಟಿವಿ ನೋಡಬೇಕಾಗಿತ್ತು😂😂😂😂
ಬಸ್ ಸ್ಟಾಂಡಲ್ಲಿ ಕಾಲೇಜು ಹುಡುಗಿ ksrtcಬಸ್ ಗೆ ಹತ್ತಿ ಡ್ರೈವರ್ ಹತ್ತಿರ ಸ್ಟೈಲಾಗಿ ಕೇಳುತ್ತಾಳೆ "ಈ ಡಬ್ಬ ಯಾವಗ ಹೊರಡುವುದು "
ಡ್ರೈವರ್ "ಕಸ ಎಲ್ಲಾ ತುಂಬಿದ ಮೇಲೆ "
😜😜😜😜😜😜😜
ಬಾಯ್ : ಹಲೋ📞, ಪಮ್ಮಿ ಡಾರ್ಲಿಂಗ್ 💋... ಹೇಗಿದ್ದೀಯಾ ? ..............................
ಗರ್ಲ್ : ಯಾರಿದು .
ಬಾಯ್ : ನಾನು ನಿನ್ ನ ಪ್ರಣಯಕಾಂತ!!..................
ಗರ್ಲ್ : ನೀನು ದಿವ್ಯರಾಜ್ ತಾನೆ...
ಬಾಯ್ : ಹೌದು, ನಿನಗೇಗೆ ಗೊತ್ತು ?
ಗರ್ಲ್ : ನೀನು ನಾರಾಯಣ ಹೆಗ್ಡೆ ಮಗ ತಾನೆ......,??
ಬಾಯ್ : ನಿನಗೆ ಹೆಗೋತ್ತು ??
ಗರ್ಲ್ : ನೀನು ರಂಗ ನ ಮೊಮ್ಮಗ ತಾನೆ....?
ಬಾಯ್ : ಯಸ್ !! ಆದರೆ ಜಾನು , ನಿಂಗೆ ಏಗೆ ನನ್ನ ಬಗ್ಗೆ ಇಷ್ಟೆಲ್ಲ ಗೊತ್ತಾಯ್ತು....😱?
ಗರ್ಲ್ : ಕಚ್ಡಾ ನನ್ನ ಮಗನೇ.... ನಿನ್ನಮ್ಮ ಕಣೋ ನಾನು 😡!!..
ನೀನು ಕುಡಿದು🍺🍻 'ಪಮ್ಮಿ' ಗೆ ಅಲ್ಲ, 'ಮಮ್ಮಿ' ಗೆ ಫೋನ್ ಮಾಡಿದಿಯಾ 😂😂😉😉
ಗುಂಡ ಕುಡಿದು ಮನೆಗೆ ಬಂದ...
ಅಪ್ಪನಿಗೆ ಅನುಮಾನ ಬರದಿರಲಿ ಎಂದು ಲ್ಯಾಪ್'ಟಾಪ್ ತೆರೆದು ಓದುತ್ತಾ ಕುಳಿತಂತೆ ನಟಿಸಿದ...
ಅಪ್ಪ: ಕುಡಿದು ಬಂದಿದ್ದೀಯೇನೋ?
ಗುಂಡ: ಇಲ್ಲ ಅಪ್ಪ..!
ಅಪ್ಪ: ಮತ್ತೆ ಆ ಸೂಟ್'ಕೇಸ್ ಓಪನ್ ಮಾಡಿ ಏನೋ ಓದ್ತಾ ಇದೀಯಾ..?😂😂😂😂😂😂😂😂😂😂😂😂
ಟೀಚರ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು.
ಗು0ಡ : Birla Cement ಮೇಡಮ್.
ಟೀಚರ : ಯಾಕೆ.
ಗು0ಡ : ಇದರಲ್ಲೀ ಜೀವ ಇದೆ.
ಪುಂಡ : ನನ್ ಫೋನಿಗೆ ಬ್ಲ್ಯಾಕ್ ಮೇಲ್ ಕರೆಗಳು ಬರ್ತಾ ಇವೆ ಸರ್ ?
ಪೋಲೀಸ್ : ಏನಂತ ?
ಪುಂಡ : ರೀಚಾರ್ಜ್ ಮಾಡಿಸಿಲ್ಲ ಅಂದ್ರೆ ಕನೆಕ್ಷನ್ ಕಟ್ ಮಾಡ್ತೀವಿ ಅಂತಾ..!
😆😆😬😁😬😆😆😬😁😬
ರಾತ್ರಿ ೨ ಗಂಟೆಗೆ ಕುಡಿದು ಬಂದ🥃ಗಂಡನನ್ನು ನೋಡಿದ ಹೆಂಡತಿ👩🏻😡 ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲತ್ತಾಳೆ.
ಆಗ ಗಂಡ-ಎಷ್ಟು ಅಂತ ಕೆಲಸ ಮಾಡ್ತೀಯೆ ಸಾಕು ಮಲಗು ಹೋಗು🤣🤣🤣