Sunday 28 September 2014

ಬಲಿದಾನ - ಇತ್ತೀಚೆಗೆ ಇಲ್ಲಿ ನಡೆದ ನಿಜ ಘಟನೆ.

ಒಂದು ಬಡ ಕುಟುಂಬ. ತವರುಮನೆ ಗಂಡನ ಮನೆ (ಒಂದೆರಡು ರೂಮಿನ ಚಿಕ್ಕ ಮನೆಗಳು)ಅಕ್ಕ ಪಕ್ಕದಲ್ಲಿ.
ಅವಳಿಗೆ ಮೂರು ಚಿಕ್ಕ ಮಕ್ಕಳು. ಆ ಮನೆ ಈ ಮನೆ ಕೂಡಿಯೇ ಇರುತಿದ್ದವು.
ಒಂದು ತಡ ಸಂಜೆ ಅವಳು ತಾಯಿಯ ಮನೆಯಲ್ಲಿದ್ದಳು.. ಅವಳ ಮೂರು ಮಕ್ಕಳೂ
ಅಲ್ಲ್ಲೆ ಆಡುತಿದ್ದರು.
ಆಗ current ಹೋಯಿತು. ತಾಯಿ ಅಡಿಗೆ ಮನೆಗೆ ಹೋಗಿ ಮೊಂಬತ್ತಿ ಹಚ್ಚಿದಳು.
ಆದರೆ, ಅಡಿಗೆ ಮನೆಯಲ್ಲಿ ಆಗಾಗಲೇ ಲೀಕ್ ಆಗುತಿದ್ದ ಗ್ಯಾಸ್ ಹರಡಿ ಕೊಂಡಿತ್ತು.
ಕಡ್ಡಿ ಕೀರಿದ ಕೂಡಲೇ ಎಲ್ಲ ಕಡೆ ಬೆಂಕಿ ಹತ್ತಿ ಕೊಂಡಿತು. ಹೊರಗಿನ ರೂಮಿನಲ್ಲಿದ್ದ ಅವಳು,
ಅವಳ ತಮ್ಮ (16 - 17 ವರ್ಷದ ಹುಡುಗ) ಒಳ್ಗೆ ಓಡಿದರು. ಸಿಲಿಂಡೆರ್ ಸ್ಟೋವ್ ಹೊತ್ತಿ
ಉರಿಯುತಿದ್ದವು. ಅವಳ ತಮ್ಮ, ತನ್ನ ಜೀವ ಲೆಕ್ಕಿಸಿದೆ, ಉರಿ ಹತ್ತಿದ ಸಿಲಿಂಡೆರ್ ಮತ್ತು ಸ್ಟೋವ್
ಎತ್ತಿ ತಂದು ರಸ್ತೆಗೆ ಒಗೆದುರುಳಿಸಿ, ಸಿಲಿಂಡೆರ್ ಮನೆಯೊಳಗೆ ಸ್ಪೋಟವಾಗುವುದನ್ನು ತಪ್ಪಿಸಿದ.
ಆದರೆ ಅಷ್ಟರಲ್ಲಿ, ತಾನು ತಕ್ಕಷ್ಟು ಸುಟ್ಟುಕೊಂಡಿದ್ದ. ತಾಯಿಗೂ ಬಹಳ ಸುಟ್ಟ ಗಾಯಗಳಾಗಿದ್ದವು.
ಮಗಳು ಮುಖ ಹುಬ್ಬು ಕೂದಲು ಸುಟ್ಟುಕೊಂಡಿದ್ದಳು. ಮಕ್ಕಳು ಏನೂ ಅಪಾಯವಿಲ್ಲದೆ
ಪಾರಾಗಿದ್ದವು.
ಬಹಳ ಜಾಸ್ತಿ ಸುಟ್ಟುಕೊಂಡಿದ್ದ ಅವಳ ತಮ್ಮ ಈಗ ಎರಡು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದ.
ಅಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಗಳು ಗುಣ ಮುಖಳಾಗುತಿದ್ದಾಳೇ.
ಸಮಯ ಪ್ರಜ್ಞೆಯಿಂದ ತನ್ನ ಪ್ರಾಣದ ಪರಿವೆಯಿಲ್ಲದೆ ಸಿಲಿಂಡರ್ ಹೊರಗೆಸೆದು, ಅದು ಮನೆಯಲ್ಲಿ
ಸ್ಪೋಟ ಗೊಳ್ಳುವುದನ್ನು ತಪ್ಪಿಸಿ ಕುಟುಂಬದ ಎಲ್ಲರ ಪ್ರಾಣ ಕಾಪಾಡಿದ ಹುಡುಗ ಪಾಪ ಆಸು ನೀಗಿ
ಹುತಾತ್ಮನಾದ.
****************
28.09.2014
ಹತ್ತಿರವಿದ್ದೂ ದೂರ.

ನಾನು ನಿನ್ನಲ್ಲಿ
ನೀನು ನನ್ನಲ್ಲಿ
ಒಂದಾಗಲೆಂದು
ಬಯಸಿದೆ, ಆದರೆ
ತಂತಿ ಮೀಟಲಿಲ್ಲ
ಹೃದಯ ಮಿಡಿಯಲಿಲ್ಲ.
ಮನದ ತರಂಗಗಳು
ಮನವ ತಲುಪಲಿಲ್ಲ,
ಬೇಕು ಬೇಡಗಳು
ಹೊಂದಲೇ ಇಲ್ಲ
ಕತ್ತಲೆಯ ಮೌನದಲ್ಲಿ
ಯೌವನದ ಕಾವಿನಲ್ಲಿ
ದೇಹಗಳಷ್ಟೇ ಬೆಸದವು
ಮನಗಳೆಂದೂ ಬೆಸೆಯಲಿಲ್ಲ.
ಈಗ ನೀರಸ ಮೌನ
ಒಂದೇ ಸೂರಿನಡಿಯಲ್ಲಿ
ಮೌನದ ರಣರಂಗ.
ಆದರೂ, ಬ್ರಹ್ಮನೋ,
ಅಪ್ಪ ಅಮ್ಮನೋ,
ಅಥವಾ ಭಟ್ಟರೋ
ಹಾಕಿದ ಕಗ್ಗಂಟು
ಬಿಡಿಸಿಕೊಳ್ಲುವ ಮನವಿಲ್ಲ.
ಕಾಯುತಿದೆ ಕಾಲ
ನಿಂತ ನೀರೆಂದು
ಹರಿಯುವುದೋ ಎಂದು,
ಬದುಕಬೇಕೆಂಬ ಆಸೆಗಳು
ನೂರು, ಆದರೆ ಯಾರು
ಯಾರಿಗಾಗಿ ಯಾಕಾಗಿ?
ತೊಳಲಾಟವೊಂದೇ ಇಂದು.
28.09.2014

Saturday 27 September 2014

ಸ್ತ್ರೀ ಇಂದ ಸ್ತ್ರೀ ಶೋಷಣೆಯ ಒಂದು ನೈಜ ಉದಾಹರಣೆ.
ಒಂದೂರಿನಲ್ಲಿ ಇಬ್ಬರು ಅಣ್ಣ ತಮ್ಮ ಇರುವ ಒಂದು ಕುಟುಂಬ. ಅಣ್ಣ ಊರಲ್ಲಿ ಹೊಲ, ಬೇಸಾಯ ನೋಡಿಕೊಂಡಿರುವುದಲ್ಲದೆ ಒಂದು junior college ನಲ್ಲಿ lecturer ಸಹ ಆಗಿದ್ದು ತಕ್ಕ ಮಟ್ಟಿಗೆ ಸ್ಥಿತಿವಂತರೆ ಆಗಿದ್ದರು. ತಮ್ಮ ಪರ ಊರಿನಲ್ಲಿ ಏನೋ business ಮಾಡಿಕೊಂಡು ತುಂಬಾ ಹಣ, ಆಸ್ತಿ, ಬಂಗಾರ ಮಾಡಿಕೊಂಡಿದ್ದರು. ತಮ್ಮನಿಗೆ ಸಾಧಾರಣ 60 ವರ್ಷ ಹತ್ತಿರವಾಗುತಿದ್ದಾಗ, ಏನೋ ಗುಣವಾಗದ ಕಾಯಿಲೆ ಬಂದು ತೀರಿ ಹೋದನು. ಪಾಪ, ಅವರಿಗೆ ಮಕ್ಕಳೂ ಇರಲಿಲ್ಲ.
ಆಗ, ಅಣ್ಣ ಮತ್ತು ಅಣ್ಣನ ಹೆಂಡತಿ ಹೋಗಿ ತಮ್ಮನ ಹೆಂಡತಿಯನ್ನು ಅವರ ಸಕಲ ಸಂಪತ್ತಿನೊಂದಿಗೆ ತಮ್ಮ ಜೊತೆ ಇರಿ ಎಂದು ಕರೆದು ಕೊಂಡು ಬಂದರು. ಕೆಲವು ವರ್ಷಗಳು ಚೆನ್ನಾಗಿಯೇ ಉರುಳಿದವು. ಆಮೇಲೆ ಅಣ್ಣನ ಹೆಂಡತಿ ನಿಧಾನವಾಗಿ, ತಮ್ಮನ ಹೆಂಡತಿಯನ್ನು ಪುಸಲಾಯಿಸಿ, "ನಿಮಗೂ ವಯಸ್ಸಾಯಿತು, ನೀವು ನೂರ್ಕಾಲ ಬಾಳಿ, ಅದಕ್ಕಲ್ಲ. ಅಕಸ್ಮಾತ್ ನಿಮಗೇನಾದರೂ ಆದರೆ, ನಿಮ್ಮ ಆಸ್ತಿಗೆ ಹತ್ತು ಹಲವು ಹಕ್ಕುದಾರರು ಹುಟ್ಟಿ ಕೊಳ್ಳುತ್ತಾರೆ., ಆದ್ದರಿಂದ ನಿಮ್ಮ ಆಸ್ತಿಯನ್ನೆಲ್ಲ ನಮ್ಮ ಮಕ್ಕಳ ಹೆಸರಿಗೆ ಬರೆದು ಬಿಡಿ, ನಿಮ್ಮನ್ನು ಕೊನೆ ತನಕ ನಾವು ಚೆನ್ನಾಗಿಯೇ ನೋಡಿಕೊಳ್ಳುತ್ತೇವೆ" ಅಂದಳು. ಮುದುಕಿ ಸತ್ಯ ನಂಬಿ ಹಾಗೇ ಮಾಡಿತು. ಬಂಗಾರವಂತೂ ಮನೆಯಲ್ಲೇ ಇತ್ತಲ್ಲ.
ಸ್ವಲ್ಪ ದಿನದ nantara ತಮ್ಮನ ಹೆಂಡತಿಯ ಆರೋಗ್ಯ ಹದಗೆಟ್ಟಿತು. ಆಗಾಗ ಹಾಸಿಗೆ ಹಿಡಿಯುವುದು, ಏಳುವುದು ನಡೆಯ ತೊಡಗಿತು. ಅಣ್ಣನ ಹೆಂಡತಿ ಗಟ್ಟಿಯಾಗಿಯೇ ಇದ್ದಳು. ಅವಳಿಗೆ ಈ ತಂಗಿಯ ಸೇವೆ ಮಾಡುವುದು ಅಸಹನೀಯ ಮತ್ತು ಅಸಹ್ಯವೆನಿಸಿತು. ಅಣ್ಣನ ಹೆಂಡತಿ ಮತ್ತು ಅಣ್ಣ (ಅವನು henpecked ಇದ್ದ.) ಮಸಲತ್ತು ಮಾಡಿ, ಮುದುಕಿಯನ್ನು ನಿನ್ನನ್ನು ದೊಡ್ಡ ಆಸ್ಪತ್ರೆಗೆ ಸೇರಿಸಿ ಗುಣ ಮಾಡಿಸುತ್ತೇವೆ ಎಂದು ನಂಬಿಸಿದರು. ಪಕ್ಕದ ದೊಡ್ಡ ಊರಿನ ವೃದ್ಧಾಶ್ರಮಕ್ಕೆ ಕರೆದು ಕೊಂಡು ಹೋಗಿ ಸೇರಿಸಿ ಬಂದರು. ನಂತರ ಅಲ್ಲಿನ ನಿಯಮದ ಪ್ರಕಾರ ಸ್ವಲ್ಪ ಹಣ ಕಳಿಸುವುದನ್ನು ಬಿಟ್ಟರೆ, ಆ ಕಡೆ ತಿರುಗಿಯೂ ನೋಡಲಿಲ್ಲ.
ಆ ಮೇಲೆ ಒಂದು ದಿನ ಅವಳು ಸತ್ತ ಸುದ್ದಿ ಬಂದಾಗ, ಹೋಗಿ ಹೆಣ ತೆಗೆದು ಕೊಂಡು ಬಂದು, ಬೊಜ್ಜ ಮಾಡಿ ಒಂದಿಷ್ಟು ಜನರಿಗೆ ಊಟ ಹಾಕಿಸಿ ಕೈ ತೊಳೆದು ಕೊಂಡರು.
ಇದು ಒಂದು ನೈಜ ಶೋಷಣೆಯ ಕತೆ. ಆದರೆ ಸೂಚ್ಯವಾಗಿದೆ. ಸೂಚಕವಾಗಿಲ್ಲ.
****************

25.09.2014
ಹೀಗಿದೆ.....
ಮಧ್ಯಮ ವರ್ಗದ ಮನೆಯಾಕೆ 70 ರೂಪಾಯಿ ಕೊಟ್ಟು ಒಂದು Monkey Brand ಕಸಬರಿಕೆ ತಂದಳು. ಕಸಬರಿಕೆಯ ರೇಟ್ ನೋಡಿ ಅವಳಿಗೆ ತಲೆ ಬಿಸಿಯಾಯಿತು. ಮನೆ ಕೆಲಸದವಳಿಗೆ
ಅಂದಳು, "ನೋಡಮ್ಮ, ಕಸಬರಿಕೆ ಬಹಳ ದುಬಾರಿಯಾಗಿದೆ. ಕಸಬರಿಕೆ ಹಾಳಾಗದಂತೆ ನೆಲ ಗುಡಿಸು." ಯಜಮಾನಿ ಕಡೆ ಒಂದು ಓರೆ ನೋಟ ಬೀರಿದ ಕೆಲಸದವಳು, ಆ ದಿನದ ಕೆಲಸ ಮುಗಿಸಿ ಹೋಗುವಾಗ, "ಅಮ್ಮವರೇ, ನಾನು ನಾಳೆಯಿಂದ ನಾನು ಕೆಲಸಕ್ಕೆ ಬರೋದಿಲ್ಲ" ಎಂದು ಹೇಳಿ ಲೆಕ್ಕಾಚಾರ ಮಾಡಿಸಿಕೊಂಡು ಮರು ಮಾತಿಗೆ ಅವಕಾಶ ಕೊಡದೆ ಹೋಗೇ ಬಿಟ್ಟಳು.
ಮನೆಯಾಕೆ ಸುಸ್ತೋ ಸುಸ್ತು..... 
(ಇದಕ್ಕೆ ಏನನ್ನಬೇಕು, ಕೆಲಸದವಳ ಸ್ವಾಭಿಮಾನವೇ, ಅಥವಾ ಮಧ್ಯಮ ವರ್ಗದ ಮನೆಯಾಕೆಯ ಅತಿ ಕಾಳಜಿಯ ವಿಪರೀತ ಪರಿಣಾಮವೇ? ನೀವೇ ಹೇಳಬೇಕು.)

25.09.2014
ಅನ್ನ ಭಾಗ್ಯ.
"ಅನ್ನ ಭಾಗ್ಯ" ಯೋಜನೆಯನ್ನು ರದ್ದು ಮಾಡಬೇಕು, ಅದರ ಫಲಾನುಭವಿಗಳಿಗೆ ಅದರ ಉಪಯೋಗವಾಗದೆ, ಉಳ್ಳವರೇ
ಅದನ್ನು ಉಪಯೋಗಮಾಡಿಕೋತಿದ್ದಾರೆ" ಎಂದು ಯಾರೋ ಧುರೀಣರು ಹೇಳಿದರೆಂದು, ಇತ್ತೀಚೆಗೆ ಒಂದು ಸುದ್ದಿ ಓದಿದ್ದೆ.
ಆಗ ನೆನಪಿಗೆ ಬಂದದ್ದು ಅದಕ್ಕೆ ಸಂಬಂಧಿಸಿದ ಈ ಜೋಕ್.......
"ಗುಂಡ ದಿನಾ ಒಂದು quarter brandy ಕುಡೀತಿದ್ದ. ಅವನ ದಿನದ ಸಂಪಾದನೆ ಅವನ ಕುಡಿತಕ್ಕೆ ಸಾಕಾಗುವಷ್ಟೇ ಇತ್ತು.
ಅವನ ಗೆಳಯ ತಿಂಮ ಕೇಳಿದ, 'ಅಲ್ಲಾ, ದುಡಿದದ್ದೆಲ್ಲ ಕುಡಿದು ಹಾಳು ಮಾಡುತ್ತಿದಿಯಲ್ಲಾ, ಹೊಟ್ಟೆಗೇನು ತಿಂತಿಯಾ?'
ಅದಕ್ಕೆ ಗುಂಡನ ಉತ್ತರ 'ಒಂದು ಖಾಲಿ qwarter bottle ಮಾರಿದರೆ ಒಂದು ರುಪಾಯಿಯಂತೆ, ತಿಂಗಳಿಗೆ 30 ರುಪಾಯಿ ಸಿಗುತ್ತದೆ. ಅದರಲ್ಲಿ, ಸಿದ್ರಾಮಣ್ಣನ ಒಂದು ರುಪಾಯಿಗೆ ಒಂದು kg ಅಕ್ಕಿಯ ಅನ್ನ ಭಾಗ್ಯ ಯೋಜನೆಯಲ್ಲಿ, 30 kg ಆಕ್ಕಿ ಖರೀದಿ ಮಾಡಿ ಅದನ್ಮು ಮನೆ ಮಂದಿಯೆಲ್ಲಾ ಊಟ ಮಾಡುತ್ತೇವೆ' ಅಂದ".
ಹೇಗಿದೆ ನೋಡಿ ಅನ್ನಭಾಗ್ಯ ಯೋಜನೆಯ ಉಪಯೋಗ?

24.09.2014
ಯಾರೋ ಇತ್ತೀಚೆಗೆನನ್ನ ಮಹಿಳಾ ಮಿತ್ರರೊಬ್ಬರು (ಯಾರಂತ ನೆನಪಾಗ್ತಾ ಇಲ್ಲ) "ಬೆಳಿಗ್ಗೆಯಿಂದ ಬಹಳ ತಲೆ ನೋವು.......ಏನಾದರೂ remedy ಸೂಚಿಸಿ " ಪೋಸ್ಟ್ ಹಾಕಿದ್ದರು. ಅದಕ್ಕೆ ನೂರಕ್ಕಿಂತ ಹೆಚ್ಚು ಲೈಕುಗಳು,
50 ಕ್ಕಿಂತ ಹೆಚ್ಚು ಕಮೆಂಟುಗಳು ಬಂದಿದ್ದವು
ಅದಕ್ಕೆ ನನಗೂ ಸಿಕ್ಕಿದ ಒಂದು ಹಳೇ ಕಾಮೆಂಟು...... 
Most Wonderful Time in a Human Life.
Our time in our mothers’ wombs was a wonderful time. We did not have to worry about food or drink. We were protected from heat and cold. We did not have to do homework or housework. Protected in our mothers’ wombs, we felt quite safe. We did not have to worry about anything at all. “No worry “ is always “ Wonderful”. I believe many of us still remember that time spent in our mothers’ wombs. Many people have the impression that they were once in a safe and wonderful paradise and now they have lost that paradise. We think somewhere out there is a beautiful place without worry or fear, and we long to get back there. Paradise was inside of our mothers.
--Thich Nhat Hanh.
( I feel this is a great and really wonderful thinking)

20.09.2014
ವಾಸ್ತು ಶಾಸ್ತ್ರದ ನಂಬಿಕೆ/ಮೂಢ ನಂಬಿಕೆ.
ಇತ್ತೀಚೆಗೆ ವಾಸ್ತು ಶಾಸ್ತ್ರದ ಬಗ್ಗೆ ಜನರ ಆಕರ್ಷಣೆ ಜಾಸ್ತಿ ಆಗಿದೆ,
ಅಥವಾ ಜೋತಿಷಿಗಳು ಮತ್ತು ವಾಸ್ತು ಶಾಸ್ತ್ರಜ್ಜರು ಜನರಲ್ಲಿ ಈ
ಬಗ್ಗೆ ವಿಪರೀತವಾದ ನಂಬಿಕೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ.
ಎಷ್ಟೋ ಹಿಂದೆ ಕಟ್ಟಿದ ಮನೆಗಳನ್ನು ಕಲವರು ಕೋಣೆಗಳನ್ನು ಜಾಗ ಬದಲಾವಣೆ ಮಾಡುವುದು, ಅಥವಾ ಸರಳ ವಾಸ್ತು ಪ್ರಕಾರ ಪಿರಮಿಡ್, ಕನ್ನಡಿ ಇತ್ಯಾದಿ ಕೂಡಿಸುವುದು ಮಾಡುತ್ತಾರೆ. ಇದೇನು ನಂಬಿಕೆಯೋ ಮೂಢ ನಂಬಿಕೆಯೋ
ಗೊತ್ತಾಗುವುದಿಲ್ಲ.
ಇಲ್ಲಿ ನಮ್ಮ ಮನೆ ಎದುರು ಒಂದು ಮನೆ. ರಿಟೈರ್ಡ್ SBI officer. 30 ವರ್ಷ ಹಿಂದಿನ ಮನೆ. ಇದ್ದಕ್ಕಿದ್ದ ಹಾಗೆ ವಾಸ್ತುವಿನ ಹುಚ್ಚು ಅವರಿಗೆ ಹಿಡಿಯಿತು. ಸರಳ ವಾಸ್ತುವಿನವರು ವ್ಯಾನಿನಲ್ಲಿ ಬಂದು ಏನೇನೋ ಹೇಳಿ ಹೋದರು. ಅದರಂತೆ ಏನೇನೋ ಬದಲಾವಣೆಗಳು ಆದವು. ಮೆಟ್ಡಲುಗಳು ಸ್ಥಾನ ಬದಲಾಯಿಸಿದವು. ಮನೆ ಒಳಗಡೆಯಲ್ಲಾ ಕನ್ನಡಿಗಳು, ಪಿರಮಿಡ್ಗಳು ಕೂತವು. ಕೋಣೆಗಳು ಸ್ಥಾನ ಪಲ್ಲಟವಾದವು.
ಇದೆಲ್ಲಾ ಹೋಗಲಿ ನಮಗೇನು ಅಂದರೆ, ನಮಗೂ irritation ಆಗುವಂಥ ಒಂದು ಕೆಲಸ ವಾಸ್ತುನವರ ಸಲಹೆಯಂತೆ ಮಾಡಿದ್ದಾನೆ. ಅವನ ಮನೆ ಬಾಗಿಲ ಮೇಲೆ ಒಂದು red light 24 ತಾಸು ಉರಿಯುವಂತೆ ಹಾಕಿಸಿದ್ದಾನೆ. ಅವನ ಜನ್ಮ ನಕ್ಷತ್ರ ಪ್ರಕಾರ ಅದು 24 ತಾಸು ಉರಿತಾನೇ ಇರಬೇಕಂತೆ. ಈಗ ನಮ್ಮ ಮನೆ ಕಿಡಕಿ ತೆಗೆದ ಕೂಡಲೇ ಆ ಕೆಂಪು ಲೈಟ್ ಹಗಲಿರುಳು ಕಣ್ಣಿಗೆ ಹೊಡೆಯುತ್ತಿರುತ್ತದೆ.
ನನಗೇನೋ ಬಹಳ ವಿಚಿತ್ರ ಅನ್ನಿಸುತ್ತದೆ. ನಾನು ನೋಡಿದ ಹಾಗೆ ಅಸ್ಪತ್ರೆಗಳ operation theatre ಹೊರಗೆ, ಒಳಗೆ operation ನಡೆಯುತ್ತಿರುವಾಗ, ಬಾಗಿಲ ಮೇಲೆ ಒಂದು ಕೆಂಪು ಲೈಟ್ ಉರಿಯುತ್ತಿರುತ್ತದೆ. Operation ಮುಗಿದ ಕೂಡಲೇ ಅದನ್ನು ಆರಿಸುತ್ತಾರೆ. ಬೇರೆಲ್ಲಿಯೂ ಈ ರೀತಿ 24 ಗಂಟೆ ಕೆಂಪು ಲೈಟ್ ಹಚ್ಚಿಡುವುದನ್ನು ನಾನಂತೂ ನೋಡಿಲ್ಲ..... !!!!!!!!!
ಈ ರೀತಿ ಮನೆಯ ಹೊರಗಡೆ ಕೆಂಪು ಲೈಟ್ ಹಾಕಿ ಎದುರಿನವರಿಗೆ irritate ಮಾಡುವ ಈ ತರಹದ ವಾಸ್ತು
ಸಹ ನಾನು ನೋಡುತ್ತರುವುದು ಇದೇ ಮೊದಲು.
ಜನ ಮರುಳೋ ಜಾತ್ರೆ ಮರುಳೋ ತಿಳಿಯದಾಗಿದೆ, ಈ ಮೂಢ ನಂಬಿಕೆಯ ಪರಮಾವಧಿಯನ್ನು ನೋಡಿ. ಏನಾದರೂ ಮೈಕ್ ಸೆಟ್ ಹಾಕಿ ಕೂಗಿಸಿದರೆ complaint ಮಾಡಬಹುದು, ಆದರೆ ಹೀಗೆ red light ಹಚ್ಚಿ irritate ಮಾಡಿದರೆ ಏನು ಮಾಡುವುದು? ಗೊತ್ತಗ್ತಾ ಇಲ್ಲ. ಲೈಟ್ ಅವನದ್ದು, ಕಣ್ಣು ಹಾಳು ನಮ್ಮದು. ಹೇಗಿದೆ ವಾಸ್ತು?
******--********-----********
ಮನಸ್ಸು ಗಟ್ಟಿ ಮಾಡಿಕೊಂಡರೆ
ಪಾಪಗಳಿಂದ ಸುಲಭವಾಗಿ ಪಾರಾಗಬಹುದು.
ಆದರೆ ಪಾಪಿಗಳಿಂದ ಪಾರಾಗುವುದು
ಮನಸ್ಸು ಮಾಡಿದರೂ ಬಹಳ ಕಷ್ಟ,
ಕಲವೊಮ್ಮೆ ಅಸಾಧ್ಯ ಕೂಡ.
**********ನುಡಿ ಮುತ್ತು.

19.09.2014
ಪ್ರೀತಿಯ ದಾಸ್ಯ
"ನಾನು ನಿನ್ನನ್ನು ಬಹಳ
ತುಂಬಾ ಪ್ರೀತಿಸುತ್ತೇನೆ"
ಎನ್ನುವುದೂ ಸಹ 
ಕೆಲವೊಮ್ಮೆ ಒಂದು
ರೀತಿಯ ಅಹಂಕಾರ,
ಕೆಲವೊಮ್ಮೆ ಒಂದು
ತರಹದ ಕನಿಕರ.
ಈ ಅಹಂಕಾರದ
ಪ್ರೀತಿಯ ಹೆಸರಿನಲ್ಲಿ
ಒತ್ತಡದ ದಾಸ್ಯಕ್ಕೆ
ಸಿಲುಕಿ ನರಳುವುದಕ್ಕಿಂತ
ಪಾರತಂತ್ರ್ಯ ಇಲ್ಲದ
ಒಂಟಿತನವೇ ಲೇಸು.
15.09.2014
ಒಂದು ನೀತಿ ಪದ್ಯ
ನಾಗರ ಹಾವು
ಬಾಯಲ್ಲೇ ವಿಷ
ಆ ವಿಷ ಹಾವಿನ
ಹೊಟ್ಟೆ ಸೇರದು,
ಸೇರಿದರೂ
ಹಾವು ಸಾಯದು
.
ಹಾಗೇ ದುರ್ಜನರು,
ಪರರ ಕಾಡುವರು
ಪೀಡಿಸಿ ಕೊಲ್ಲುವರು
ತಾವು ಬದುಕಿ ಸುಖದಿ
ಭಂಡರಂತೆ ಬಾಳುವರು.

15.09.2014
ಗೆಳೆಯರೇ ನಮಸ್ಕಾರ........
ನಮ್ಮ ಪಕ್ಕದ ಮನೆ ಅಜ್ಜಿಯೊಬ್ಬರು ಹೇಳುವ ಮಾತು ಹೀಗಿದೆ ನೋಡಿ :-
"ಹೆಣ್ಣು ಮಕ್ಕಳಿಗೆ ಮದುವೆಯಾಗುವ ವರೆಗೆ ನಾಚಿಕೆ ಇರುತ್ತದೆ, ಮದುವೆ ಆದ ಕೂಡಲೇ ನಾಚಿಕೆ ಹೋಗುತ್ತದೆ. ಮಕ್ಕಳಾಗುವವರೆಗೆ ಹೇಸಿಗೆ ಇರುತ್ತದೆ, ಮಕ್ಕಳಾದ ಕೂಡಲೇ ಹೇಸಿಗೆ ಹೋಗುತ್ತದೆ.
ಮೊಮ್ಮಕ್ಕಳಾದ ಕೂಡಲೇ ನಾಚಿಕೆ ಮತ್ತು ಹೇಸಿಗೆ ಎರಡೂ ಹೋಗಿಬಿಡುತ್ತದೆ....  "
(ಇದು ನನ್ನ ಮಾತಲ್ಲ. ಪಕ್ಕದ ಮನೆಯ ಅಜ್ಜಿ ನಮ್ಮಾಕೆಯೊಡನೆ ಯಾವಾಗಲೂ ಹೇಳುವ ಮಾತು.
ಆದ್ದರಿಂದ ಹೆಣ್ಣುಮಕ್ಕಳು ಯಾರೂ ಬಯ್ಯುವುದಿದ್ದರೆ ನನ್ನನ್ನು ಬಯ್ಯ ಬೇಡಿ...  )

Friday 12 September 2014

ಇವತ್ತಿನ ನುಡಿಮುತ್ತು (?) - ಒಂದು ಸಂದೇಹ.

"ಮನುಷ್ಯನಿಗೆ ಬಡತನ
ಒಂದು ವರದಾನವಿದ್ದಂತೆ,
ಅದು ಜೀವನದ ಎಲ್ಲ ಪಾಠಗಳನ್ನು
ಕಲಿಸಿ, ವ್ಯಕ್ತಿಯಲ್ಲಿ ನೈತಿಕ ಸ್ಥೈರ್ಯ
ತುಂಬುತ್ತದೆ"

--ಈ ಮಾತನ್ನು ಹೇಳಿದವರು, ಪ್ರೊ.ಎಚ್.ಬಿ.ವಾಲಿಕಾರ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ.

ಸಂದರ್ಭ :- ವಿದ್ಯಾರ್ಥಿ ಕಲ್ಯಾಣ ವಿಭಾಗದಿಂದ ಆಯೋಜಿಸಿದ್ದ 2014-15ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಷಣ ಮಾಡುವಾಗ.

ಉಳಿದೆಲ್ಲ ಮಾತುಗಳು ವಿದ್ಯಾರ್ಥಿಗಳು ಮತ್ತು ವಿದ್ಯಾಭ್ಯಾಸದ ಬಗ್ಗೆ ಸಂದರ್ಭೋಚಿತವಾಗಿದ್ದವು. ಆದರೆ ಮೇಲೆ ಕಾಣಿಸಿದ ಬಡತನದ ಬಗೆಗಿನ ವ್ಯಾಖ್ಯಾನದ ಸಾಂದರ್ಭಿಕತೆ ಮತ್ತು ಅರ್ಥ ನನಗಾಗಲಿಲ್ಲ.

ಅಂದರೆ ಬಡತನವೇ ಎಲ್ಲ ಔನ್ನತ್ಯ ಹಾಗೂ ಸಾಧನೆಗೆ ಮೂಲವೇ? ಬಡತನ ಒಂದು ವರದಾನ ಅಂದರೆ ಏನು?
ಬಡತನದಿಂದಲೇ ಅವರಂದ ಸಿದ್ದಿ ಸಿಗುವುದಾದರೆ ಎಲ್ಲರೂ
ಒಮ್ಮೆ ಬಡವರಾಗಿರಬೇಕೇ? "ಬಡತನ ಒಂದು ಶಾಪ" ಎನ್ನುವುದು ಮಾಮೂಲಿ ಮಾತು, ಆದರೆ ಅದನ್ನು ವರದಾನ ಎನ್ನುವುದು, ಏನೋಪ್ಪಾ, ಗೊತ್ತಾಗ್ತಾ ಇಲ್ಲ.

ಆದರೆ ಈ ಮಾತು ಹೇಳಿದವರು ಮಹಾ ವಿದ್ವಾಂಸರಾಗಿರುವುದರಿಂದ, ತಿಳಿದವರು ಈ ಮಾತನ್ನು ಅರ್ಥೈಸಿ ಹೇಳ್ತೀರಾ?

(ಇದು ಇಂದಿನ ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ ಆವೃತ್ತಿಯ ಎರಡನೇ ಪುಟದಲ್ಲಿರುವ "ಬಡತನ ಮನುಷ್ಯನಿಗೆ ದೊರೆತ ವರದಾನ" ಎಂಬ ತಲೆ ಬರಹದಲ್ಲಿ ಪ್ರಕಟವಾದ ವರದಿ ಆಧಾರಿತ)


12.09.2014
ಊರ್ಮಿಳೆ.

ಕಾಡು ಮೇಡು
ದಂಡಕಾರಣ್ಯದಲ್ಲಿ
ಲಕ್ಷ್ಮಣನಿಗಾಯಿತು
ರಾಮ ಸೀತೆಯರ
ಜೊತೆ ಹದಿನಾಲಕು
ವರುಷ ವನವಾಸ.

ಆದರೆ ಊರ್ಮಿಳೆ
ಪಾಪ ಅನುಭವಿಸಿದಳು
ಅರಮನೆಯಲ್ಲಿದ್ದೂ
ಹದಿನಾಲಕು ವರ್ಷದ
ಆಜೀವ ಕಾರಾವಾಸ

ಭ್ರಾತೃ ಪ್ರೇಮದೆದುರು
ಸತಿ ಸೋತಳು,
ಕಳೆದಳು ವಿರಹದ
ಜೀವನ, ತನ್ನ ದೈವವನು
ನೆನೆ ನೆನೆದು ಬಿಸು ಸುಯ್ದು.

12.09.2014
ಅಗಲಿದ ಚುಕ್ಕಿ
ರಾತ್ರಿಯ ಕಪ್ಪು
ಆಗಸದಲ್ಲಿ
ಮಿನುಗುವ 
ಲಕ್ಷಾಂತರ
ಬೆಳ್ಳಿ ಚುಕ್ಕಿಗಳು

ಅವ ಕಣ್ಣಗಲಿಸಿ
ಮೇಲೆ ದಿಟ್ಟಿಸಿ
ನೋಡಿಯೇ ನೋಡಿದ,
ಅಗಲಿದ ತನ್ನರಸಿಯ
ಚುಕ್ಕಿಯಾವುದೆಂದು,

ಎಲ್ಲ ಚುಕ್ಕಿಗಳು
ಒಂದೇ ತರ,
ಇಲ್ಲಿಂದ ಹೇಗೆ
ಹುಡುಕಲಿ ನಿನ್ನ
ಅಲ್ಲೇ ಬರುವೆ
ನಿಲ್ಲು ಎಂದು
ತಾನೂ ಚುಕ್ಕಿಯಾಗಿ
ಹೊರಟೇ ಬಿಟ್ಟ.

11.09.2014
ಗೋಧೂಳಿ ಸಮಯದ ಸೊಬಗು
ಸೂರ್ಯಾಸ್ತದ ಕ್ಷಣಗಳ ಬೆರಗು
ಆವರಿಸುವ ತವಕ ಕತ್ತಲಿಗೆ......

(ಚಿತ್ರ ಮತ್ತು ವರ್ಣನೆ ಕೃಪೆ - "ಪ್ರಜಾವಾಣಿ")

Photo: ಗೋಧೂಳಿ ಸಮಯದ ಸೊಬಗು
ಸೂರ್ಯಾಸ್ತದ ಕ್ಷಣಗಳ ಬೆರಗು
ಆವರಿಸುವ ತವಕ ಕತ್ತಲಿಗೆ......

(ಚಿತ್ರ ಮತ್ತು ವರ್ಣನೆ ಕೃಪೆ - "ಪ್ರಜಾವಾಣಿ")
ಕತ್ತಲು - ಬೆಳಕು

ಕತ್ತಲಾಯಿತೆಂದು
ಬೇಸರಿಸಿ ಕುಗ್ಗ ಬೇಡ,
ಬೆಳಕಾಯಿತೆಂದು
ಹಿರಿದು ಹಿಗ್ಗ ಬೇಡ
ಕತ್ತಲು ಬೆಳಕು
ಬೆಳಕು ಕತ್ತಲು
ಎರಡೂ ತಾತ್ಕಾಲಿಕ
ಆದರೆ ನಿಶ್ಚಿತ.

ಕತ್ತಲಲಿ ಕಾಯು
ಬೆಳಕಿಗಾಗಿ,
ಬೆಳಕಿನಲಿ ಅವಸರಿಸು
ಕತ್ತಲು ಮುಂದಿದೆಯೆಂದು,
ಹೊಂದಿಸು ಬದುಕನ್ನು
ಈ ನಶ್ವರ ಕತ್ತಲು
ಬೆಳಕಿನ ಆಟದಲ್ಲಿ,
ಇದು ಜೀವನದ ತಿರುಳು.
ಇಹದ ಬದುಕಿನ ಅರಿವು

ಆದರೆ ನೆನಪಿರಲಿ ಚಿರ ಸತ್ಯ,
ಹುಟ್ಟೇ ದೀರ್ಘ ಹಗಲು,
ಸಾವೇ ಈ ಹಗಲ ಕೊನೆ,
ಶಾಶ್ವತ ಕತ್ತಲು.

09.09.2014
ಮಾತು - ಮೌನ

ಮಾತು ಹೆಚ್ಚಾದರೆ ಜಗಳ
ಮೌನ ಹೆಚ್ಚಾದರೆ ಅಸಹನೆ,
ಮಾತು ಕಡಿಮೆಯಾದರೆ
ಕೆಲವೊಮ್ಮೆ ಬಹಳ ನಷ್ಟ
ಮೌನ ಕಡಿಮೆಯಾದರೆ
ಮತ್ತೆ ಪುನಃ ಅದೇ ಜಗಳ.

ಆದರೆ ಮತ್ತೆ ಮಾತು,
ಮತ್ತದೇ ಮರು ಮೌನ
ಇಲ್ಲದೆ ಇಹದ ಬದುಕಿಲ್ಲ.
ಈ ಮಾತು ಮೌನಗಳ
ಸೀಮಾರೇಖೆಯ ಅರಿವೇ
ಸುಖದ ಬದುಕೆಂಬ ಶಾಂತಿ,
ಈ ಸಾಧನೆಯೇ ಆಗಬೇಕು
ನಮ್ಮೀ ಜನ್ಮದ ಪರಮ ಗತಿ.

++++++

07.09.2014

Monday 8 September 2014

ಈ ಮದುವೆಗೆ ತಪ್ಪದೆ ಬನ್ನಿ........ 

Photo: ಈ ಮದುವೆಗೆ ತಪ್ಪದೆ ಬನ್ನಿ........  :-)