Thursday 3 September 2015

Good morning to All Friends....... smile emoticon
Look at these very beautiful and divine lines by Sri Ganesh Prasad, a member of Sharavati Group.
I liked this message very much.
Instead of listening to hours of sermons on life, if one follows these simple principles, life will be definitely be a blissful pleasure.
Very nice words indeed.
***********************************
ಜೀವನವೊಂದು ಕೊಡುಗೆ-
ಶ್ರದ್ಧೆಯಿಂದ ಸ್ವೀಕರಿಸು;
ಜೀವನವೊಂದು ದುರಂತ-
ಸಹನೆಯಿಂದ ಎದುರಿಸು;
ಜೀವನವೊಂದು ಆಟ-
ಆನಂದದಿಂದ ಆಡು;
ಜೀವನವೊಂದು ಯಾತ್ರೆ-
ಸಂಯಮದಿಂದ ಪೂರ್ಣಗೊಳಿಸು.....!
************************************
ಹೀಗೇ ಹೇಳುವುದಾದರೆ, "ಎಮ್ಮೆ ನಿನಗೆ ಸಾಟಿಯಿಲ್ಲ......." ಎಮ್ಮೆ ನೀನು ಸಹನೆಯ ಪ್ರತಿರೂಪ....... smile emoticon ಎಮ್ಮೆ ಸಹನಾ ಮೂರ್ತಿಯಷ್ಟೇ ಅಲ್ಲ, ಸ್ಥಿತ ಪ್ರಜ್ಞೆ ಸಹ. ನಮ್ಮ ಅಜ್ಜ ಒಂದು ಕಥೆ ಹೇಳುತ್ತಿದ್ದರು. ಒಂದು ಎಮ್ಮೆ ಸರಿಯಾಗಿ ಮೇದು ಹೊಟ್ಟೆ ತುಂಬಿಸಿಕೊಂಡು, ಕೆಸರು ಹೊಂಡದಲ್ಲಿ ಜಲ ವಿಹಾರ ಮಾಡುತ್ತಿತ್ತಂತೆ. ಅದರ ಮಾಲಕ ಅದಿನ್ನೂ ಮನೆಗೆ ಬಂದಿಲ್ಲ ಎಂದು ಹುಡುಕಿ ಕೊಂಡು ಬಂದ. ಆರಾಮವಾಗಿ ಕೆಸರಿನಲ್ಲಿ ಹೊರಳಾಡುತ್ತಿದ್ದ ಎಮ್ಮೆಯನ್ನು ನೋಡಿ ಸಿಟ್ಟಿಗೆದ್ದು ಕೈಯಲ್ಲಿದ್ದ ಕೋಲಿನಿಂದ ಅದಕ್ಕೆ ಜೋರಾಗಿ ಒಂದೇಟು ಹೊಡೆದ.
ಎಮ್ಮೆ ಒಮ್ಮೆ ಹೊರಳಿ ಯೋಚಿಸಿತಂತೆ.....ಎಲ್ಲೋ ಯಾರೋ ಯಾರಿಗೋ ಹೊಡೀತಿದ್ದಾರೆ ಎಂದು ಕೊಂಡು ತನ್ನ ಆಟ ಮುಂದುವರೆಸಿತಂತೆ. ಅದರಿಂದ ಮತ್ತಷ್ಟು ಸಿಟ್ಟಿಗೆದ್ದ ಅದರ ಮಾಲಕ ಇನ್ನೊಂದು ಪೆಟ್ಟು ಕೊಟ್ಟ. ಆಗ ಎಮ್ಮೆ ಮತ್ತೆ ಯೋಚಿಸಿತು..."ಇಲ್ಲೇ ಹತ್ತಿರದಲ್ಲಿ, ಯಾರಿಗೋ ಹೊಡೆದ ಶಬ್ದವಾಗುತ್ತಿದೆ, ನನಗೇನು?" ಎಂದು ಕೊಂಡು ತನ್ನ ಆಟ ಮುಂದುವರೆಸಿತು.
ಆಗ ಮಾಲಕ ಮತ್ತಷ್ಟು ಸಿಟ್ಟಿಗೆದ್ದು, ಇನ್ನೊಂದು ಸಲ ಜೋರಾಗಿ ಬಾರಿಸಿದ. ಆಗ, ಎಮ್ಮೆಗೆ ಜ್ಞಾನೋದಯವಾಗಿ "ಅಯ್ಯೋ, ನನಗೇ ಹೊಡೀತಿದ್ದಾರೆ" ಎಂದು ಕೊಂಡು ಎದ್ದು ಓಡಿತು.
ಹೀಗಿದೆ ಎಮ್ಮೆಯ ಕತೆ. ಅದಕ್ಕೇ ಅಣ್ಣಾವ್ರು ಎಮ್ಮೆಯ ಮೇಲೆ ಸವಾರಿ ಮಾಡುತ್ತ..."ಎಮ್ಮೇ ನಿನಗೆ ಸಾಟಿ ಇಲ್ಲ......," ಎಂದು ಹಾಡಿದ್ದಿರ ಬೇಕು.......smile emoticon


ಈಗಿನ ಹುಡುಗಿಯರು ತುಂಬಾ intelligent ಅನ್ನೋದು
ಸುಳ್ಳಲ್ಲವೇನೋ..... smile emoticon ಈ ತರಾ Luggage Bag
ಸಾಗಿಸುವ idea ಇವರಿಗಲ್ಲದೆ ಯಾರಿಗಾದರೂ 
ಹೊಳೆಯಲು ಸಾಧ್ಯವೇ?...... smile emoticon smile emoticon (ಫೋಟೋ ಕೃಪೆ: Jaikiran's Nanu Nanna Kanasu, Member of Kannada Bhumi Group)
ಕರ್ನಾಟಕದ ಜನತೆಗೆ ಸಂತಸದ ಸುದ್ದಿ!!!!
*********************************************
ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ
12 ಗಂಟೆಯವರೆಗೆ, ಹಾಗೂ ಮಧ್ಯಾಹ್ನ 3
ಗಂಟೆಯಿಂದ ಸಂಜೆ 5 ಗಂಟೆಯವರೆಗೆ,
ಹಾಗೂ ರಾತ್ರಿ 8 ರಿಂದ ರಾತ್ರಿ 11 ಗಂಟೆಯ
ವರೆಗೆ ನೀವು ಯಾವುದೇ ಭಯ-ಅಂಜಿಕೆ
ಯಿಲ್ಲದೆ ಧಾರಾಳವಾಗಿ ನಿಮ್ಮ ಮನೆಯ
ಬಟ್ಟೆಗಳನ್ನು ಕರೆಂಟ್ ಲೈನ್ ಗಳ ಮೇಲೆ
ಒಣಗಿಸಿಕೊಳ್ಳಬಹುದು....... smile emoticon
ಸರ್ಕಾರದ ಹೊಚ್ಚ ಹೊಸ ಯೋಜನೆ
"ಕತ್ತಲೆ ಭಾಗ್ಯ"
ಜೈ ಸಿದ್ರಾಮೇಶ್ವರಾ...... smile emoticon smile emoticon
********************************** (


ಹೆಂಡತಿ, ಊಟ ಮಾಡಿದ ಗಂಡನಿಗೆ
"ಅಡಿಗೆ ಹೇಗಿದೆ?" ಎಂದು ಕೇಳಿದರೆ, ಅದಕ್ಕೆ
ಅವಳು ಗಂಡನಿಂದ ಬಯಸುವ ಉತ್ತರ
ಅಡಿಗೆ ಚೆನ್ನಾಗಿದ್ದಿರಲಿ ಅಥವಾ ಇಲ್ಲದಿರಲಿ,
"ಆಹಾ....ಅಡಿಗೆ ಚೆನ್ನಾಗಿದೆ" ಎಂದೇ ಇರುತ್ತದೆ.... smile emoticon
ಸುಖ ಪಡುವ ಯೋಗವಿದ್ದರೂ,
ಮನುಷ್ಯನಿಗೆ ಸುಖ ಪಡಲು
ಯೋಗ್ಯತೆಯೂ ಇರಬೇಕು.
*****ದಾರ್ಶನಿಕ.
ಬರೆದದ್ದು ಯಾರಿಗೂ
ಸುಲಭವಾಗಿ ಅರ್ಥವಾಗಬಾರದು..,
ಅದೇ ಕವಿತೆಯೇ?..... smile emoticon
ಅರ್ಥವಾಗದಿದ್ದರೂ ಸೂಪರ್,
ವಾವ್, ಎನ್ನುವುದೇ
ಬರೆದದ್ದಕ್ಕೆ ಮೆಚ್ಚಿಗೆಯೇ?
ಅಥವಾ, ಅರ್ಥವಾಗದವರು
ಏನಿದರ ಅರ್ಥ ಎಂದು
ಕೇಳಿದಾಗ, ಸಿಟ್ಟಿಗೇಳುವವರೇ
ಕವಿಗಳೇ?..........smile emoticon
ಏನೋಪಾ....ಗೊತ್ತಿಲ್ಲ.... smile emoticon
ಹೀಗೂ ಒಂದು ಟ್ರೈನಿಂಗ್......😄 
ಅತಿಕ್ರಮಣ ಒಂದು ಸಾಮಾಜಿಕ ಪಿಡುಗು. ಪಕ್ಕದ ಸೈಟಿನ ಮಾಲಕರು ಪರ ಊರಲ್ಲಿದ್ದರೆ, ಒಂದೆರಡು ಅಡಿ ಒಳಗೆ ಹಾಕಿ ಕಂಪೌಂಡ್ ಕಟ್ಟಿ ಕೊಳ್ಳುವುದು ಸಾಮಾನ್ಯ. ಇನ್ನು ದೊಡ್ಡವರು(?) ಎಕರೆಗಟ್ಟಲೆ ಸರಕಾರಿ ಜಮೀನು ಒಳ ಹಾಕುವುದು ಬೇರೆ ವಿಷಯ....
ಹಾಗೇ ಇಲ್ಲೊಂದು ವಿನೂತನ ಅತಿಕ್ರಮಣ ನೋಡಿ. ಇದು ನಮ್ಮ ಕಾಲನಿಯಲ್ಲೇ ಒಬ್ಬರು ಮಾಡಿದ ಕೆಲಸ. ಕಾಪೌಂಡ್ ಹೊರಗೆ ಕಾರು ನಿಲ್ಲಿಸುವುದು ಎಲ್ಲರೂ ಮಾಡುತ್ತಾರೆ. ಆದರೆ ಅಲ್ಲೊಂದು ಶೆಡ್ ಸಹ ಕಟ್ಟಿದರೆ? ಈ ಫೋಟೋ ನೋಡಿ. ಹೊರಗೆ ರಸ್ತೆಯಲ್ಲಿ ಗಾಡಿ ನಿಲ್ಲಿಸಲು ಒಂದು ಶೆಡ್. ಬಹಳ ಜಾಣ ಅತಿಕ್ರಮಣ. ಕಾಂಪೌಡ್ ಗೋಡೆಗೆ ಎರಡು ಕಬ್ಬಿಣದ L shape angles ಫಿಕ್ಸ್ ಮಾಡಿ ಮೇಲೆ ಗಾಡಿಗೆ ನೆರಳು ಸಿಗುವಷ್ಟು ಶೀಟ್ಸ್ ಹಾಕಿದ್ದಾರೆ. ರಸ್ತೆಯಲ್ಲಿ ಏನೂ ಕಂಬ ಹುಗಿದಿಲ್ಲ.
ಆದ್ದರಿಂದ, ಯಾರಾದರೂ ತಕರಾರು ಮಾಡಿದರೆ ಜಬರಿಸಲೂ ಬಹುದು....!!!!
ನೀವ್ಯಾರಾದರೂ, ಗಾಡಿಯನ್ನು ಮಳೆ ಬಿಸಿಲಿನಿಂದ ರಕ್ಷಿಸಿಡಲು ಜಾಗ ಇಲ್ಲದಿದ್ದರೆ, ಈ ಪ್ರಯೋಗ ಮಾಡುವ ಧೈರ್ಯ ಮಾಡುತ್ತೀರಾ ನೋಡಿ....😄 😄 😄 (ಫೋಟೋ ನಾನೇ ತೆಗೆದದ್ದು....ಹೆದರಿ, ಹೆದರಿ...)
ಸ್ವತಃ ಶಾಂತಿ, ಸಮಾಧಾನದಿಂದ,
ಯಾವ ಕೆಲಸವನ್ನೂ ಮಾಡಲಿಕ್ಕಾಗದವರು,
ತಮ್ಮ ಸುತ್ತ ಮುತ್ತ ಇರುವವರ ಶಾಂತಿ
ಹಾಗೂ ನೆಮ್ಮದಿಯನ್ನೂ ಕೆಡಿಸುತ್ತಾರೆ.
******ದಾರ್ಶನಿಕ.
ಸೌಂದರ್ಯವನ್ನು
ಇತರರು ನೋಡಿ
ಮೆಚ್ಚಿದರಷ್ಟೇ
ಸೌಂದರ್ಯಕ್ಕೆ ಬೆಲೆ.
ಆದರೆ ಯಾವ್ಯಾವ
ಸೌಂದರ್ಯವನ್ನು
ಯಾರ್ಯಾರು ನೋಡಿ
ಮೆಚ್ಚ ಬೇಕು
ಎನ್ನುವುದನ್ನು
ಆಯ್ಯಾಯ
ಸೌಂದರ್ಯವೇ
ವಿವೇಚನೆಯಿಂದ
ನಿರ್ಧರಿಸ ಬೇಕು.
***ದಾರ್ಶನಿಕ