Friday, 28 November 2014

ಇನಿಯ ಬಾರನು ಇಂದು.

ಆಕಾಶಮಲ್ಲಿಗೆಗಳು
ಅರಳಿ ಮಿನುಗುತಿದ್ದವು
ಗಗನದ ಉದ್ದಗಲಕ್ಕೂ
ಕಪ್ಪು ಹಾಸಿನ,
ಬಾನಂಗಳದಲ್ಲಿ ರಂಗೋಲಿಯ.
ಬಿಳಿ ಚಿತ್ತಾರ ಬಿಡಿಸಿ
ನೈದಿಲೆ ಹುಡುಕುತಿದ್ದಳು
ಕಣ್ಣರಳಿಸಿ ಕೈಹಿಡಿದು
ತನ್ನಿನಿಯ ಕಾಣನೆಂದು
ಮರೆತೇ ಹೋಗಿದೆಯವಳಿಗೆ
ಅಂದು ಚಂದಿರನಿಗೆ ರಜೆ
ಇನಿಯ ಬಾರನು ಎಂದು.
**************
28.11.2014

Thursday, 27 November 2014

ಮುಪ್ಪು 

"ನೆಮ್ಮದಿ, ತೃಪ್ತಿ ಹಾಗೂ ಸಂತೋಷವಿಲ್ಲದ ಜೀವನದಿಂದ
ಮುಪ್ಪು ಬಹಳ ಬೇಗ ಆವರಿಸುತ್ತದೆ"
***ದಾರ್ಶನಿಕ
(ಆದುದರಿಂದ, ಇದ್ದುದರಲ್ಲಿ ನೆಮ್ಮದಿ ಮತ್ತು ತೃಪ್ತಿ,
ಲಭ್ಯವಿದ್ದುದರಲ್ಲಿ ಸಂತೋಷ ಕಂಡುಕೊಂಡು, ಮುಪ್ಪನ್ನು ಆದಷ್ಟು ದೂರವಿಡಲು ಪ್ರಯತ್ನಿಸೋಣ.)

27.11.2014
ರಾಜಕಾರಿಣಿಯ ಜೋಕ್ .

26.11.2014
ನಮ್ಮ ಪ್ರಾಮಾಣಿಕತೆ ಬಗ್ಗೆ
ನಮಗೆ ಖಾತ್ರಿ ಇರುತ್ತದೆ.
ಆದರೆ, ಇತರರು ನಮ್ಮ
ಪ್ರಾಮಾಣಿಕತೆಯನ್ನು
ಶಂಕಿಸಿದಾಗ ಬೇಸರವಾದರೂ
ಅವರ ಶಂಕೆ ಸಹಜ. ಅವರಿಗೇನು
ಗೊತ್ತು ನಾವು ಪ್ರಾಮಾಣಿಕರೆಂದು?
***ದಾರ್ಶನಿಕ

26.11.2014
Love and Wisdom

Heart is empty without Love,
Mind is empty without wisdom"
******

26.11.2014
Santa  Banta Joke


ಸರ್ದಾರ್ ಸಂತಾ ಸಿಂಗ್ ನ ನೆಟ್ ಬ್ಯಾಂಕಿಂಗ್ ನ password ಈ ರೀತಿ ಇತ್ತು 
ram-sita-laxman-hanuman-ravan-delhi-kejrival
ಬಂತಾ ಸಿಂಗ್ ಕೇಳ್ದ: ಉತ್ನ ಲಂಬೀ ಕ್ಯೊ ?
ಸಂತಾ ಸಿಂಗ್:ಬ್ಯಾಂಕ್ ವಾಲೆ ಕಹ್ತೆ ಹೈಪಾಸ್ ವರ್ಡ್ ಮೇ 5 ಕ್ಯಾರಾಕ್ಟರ್ ಔರ್ ಏಕ್ ಕ್ಯಾಪಿಟಲ್ ಹೋನ ಚಾಹಿಯೇ
ಬಂತಾ ಸಿಂಗ್ :ವಹ್ ಸಬ್ ಟೀಕ್ ಹೈ ಲೇಕಿನ್ 'ಕ್ರೇಜಿ' ಅಂಕಲ್ ಕ್ಯೊ ?
ಸಂತಾ ಸಿಂಗ್ :ಏಕ್ ಸ್ಪೆಷಲ್ ಕ್ಯಾರಕ್ಟರ್ ಭೀ ಜರೂರ್ ಹೈ


***********

25.11.2014
ಬತ್ತಳಿಕೆಯಲ್ಲಿರುವ ಬಾಣಗಳನ್ನೆಲ್ಲ
ಒಂದೇ ಸಲ ಖಾಲಿ ಮಾಡಿ ಬಿಡಬಾರದು.
ಮುಂದಿನ ಸಂದರ್ಭಕ್ಕಾಗಿ
ಕೆಲವನ್ನಾದರೂ ಉಳಿಸಿ ಕೊಳ್ಳಬೇ
ಕು.
*****ದಾರ್ಶನಿಕ.

25.11.2014
ನಿಸರ್ಗದ ರಮಣೀಯತೆಯ ನಡುವೆ ದೋಣಿಯ ಮೇಲೆ
ಯಕ್ಷಗಾನದ ಕಲಾತ್ಮಕ ವಿನೂತನ ಪ್ರಯೋಗ.........
....
(ಇಂದಿನ ವಿಜಯಕರ್ನಾಟಕದಲ್ಲಿನ ಚಿತ್ರ)

25.11.2014
ಈ ಪ್ರಪಂಚದಲ್ಲಿ ಅತೀ
ಕೆಟ್ಟ ಜಗಳವೆಂದರೆ ಅದು
ಗಂಡ ಹೆಂಡತಿಯರು
ಉಂಡು ಮಲಗಿದ ನಂತರ
ಆಡುವ ಜಗಳ....... 
***ದಾರ್ಶನಿಕ

25.11.2014
ಇಂದಿನ "ವಿಜಯವಾಣಿ" ಯಲ್ಲಿ - ಅತ್ಯಂತ ವಾಸ್ತವಿಕವಾದ ಹೋಲಿಕೆ ಮತ್ತು ಸಂದೇಶ.

24.11.2014
ಕುವೆಂಪುರವರ ಜನಪ್ರಿಯ ಕವನ. (ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಾಶಿತ)

23.11.2014
Stay Dog Corner
A cowboy orders a beer at a bar. When he is ready to leave, he finds his horse missing.He shouts, “If I don't get my horse back after my next beer I am gonna do what I did in Georgia.“ He finishes his beer, goes out and sees his horse there. He gets on it and is about to leave when the bartender shouts out from the window, “But what did you do in Georgia?“ The cowboy replies, “I had to walk home.“
(Stray humour, author unknown)

23.11.2014
ಬೇರೆಯವರಿಗೆ ಉಪದೇಶ
ಮಾಡುವ ವ್ಯಕ್ತಿಯ ಸ್ವಂತ
ಚಾರಿತ್ರ್ಯ ಸರಿಯಾಗಿರಬೇಕು
ಹಾಗಿದ್ದರಷ್ಟೇ ಉಪದೇಶಕ್ಕೆ
ಬೆಲೆ ಇರುತ್ತದೆ.
***ದಾರ್ಶನಿಕ

Saturday, 22 November 2014

ನನ್ನ ನಲ್ಲೆ ಹೀಗಿರ ಬೇಕು....
*************************
ಅವಳ ಕಡೆಗಣ್ಣ ನೋಟ
ಬೆಚ್ಚಿ ಬೀಳಿಸಿತು ಅವನ,
ಅವಳು ಕಣ್ಣು ಮಿಟುಕಿಸಿದಾಗ
ಬವಳಿಯೆ ಬಂದಿತು ಅವನಿಗೆ.
ಅವಳ ಮುಡಿಯ ಮಲ್ಲಿಗೆಯ
ಪರಿಮಳ ಮತ್ತೇರಿಸಿತು,
ಬಳುಕಿ ಅವಳು ಬರುತಿರೆ
ನವಿಲು ನೆನಪಾಯಿತು,
ಸೀರೆಯ ಹೊಳಪಿನ ನಿರಿಯಲ್ಲಿ
ಮಿಂಚಿ ಮಿನುಗಿ ಮಿನುಗಿ
ಮರೆಯಾಗುವ ಕೆಂಪು ಪಾದಗಳು
ಕಮಲ ದಳಗಳ ನೆನಪಿಸಿದವವನಿಗೆ
ನನ್ನ ನಲ್ಲೆಯೂ ಹೀಗಿರಬೇಕು
ಅವಳಲ್ಲಿ ಒಲುಮೆಯ ಕೊಡವೂ
ತುಂಬಿ ಹರಿದಿರ ಬೇಕು
ಎಂದು ಕನಸುಗಳ ಕಂಡ ನಿಂತಲ್ಲೇ.....  
++++++++
21.11.2014
ಸಿಟ್ಟಿಗೆದ್ದು, ವಿರೋಧಿಸಬೇಕೆಂದು
ವಿರೋಧಿಸುವ ಬದಲು, ನಮ್ಮ
ತಪ್ಪಿದ್ದಲ್ಲಿ ಒಪ್ಪಿಕೊಂಡು, ಅಥವಾ ಎದುರಾಳಿಯ
ತಪ್ಪಿದ್ದಲ್ಲಿ ತಿಳಿಸಿ ಹೇಳಿ, ಸನ್ನಿವೇಶವನ್ನು
ತಿಳಿಗೊಳಿಸಿಕೊಂಡರೆ, ಸಂಬಂಧಗಳನ್ನು
ಉಳಿಸಿ ಕೊಳ್ಳ ಬಹುದು.
*******ದಾರ್ಶನಿಕ
ಮನುಷ್ಯ ಕಾಯಿಲೆಯಿಂದ
ಹಾಸಿಗೆ ಹಿಡಿದು ಮಲಗಿದಾಗ
ಬೇಸರಿಸದೆ, ಸಂತೋಷದಿಂದ
ಅವನ/ಅವಳ ಸೇವೆ ಮಾಡುವುದೇ
ನಿಜವಾದ ಪ್ರೀತಿ.
*** ದಾರ್ಶನಿಕ.

Sunday, 16 November 2014

Who is Normal person?

A journalist goes to a Mental Hospital to interview the doctor there.
.
He asks the doctor: How do you determine whether to admit a mental patient or not?
Doctor: Well, we'd fill a bathtub with water and then give a teaspoon, a glass and a bucket to the patient and ask them to empty the bathtub.
Journalist: Oh, obviously a normal person would use the bucket because it's bigger.
Doctor: No, a normal person would pull the drain plug! Please go to bed No.39. We will start further investigations on you!
( Stray humour, author unknown)
(P.S.:- How many of us are normal persons, of course, sincerely,. .......  ?)
Like16.11.2014

Friday, 14 November 2014

ಗಾಳಿ ಪಟ
ಸೂತ್ರ ಹರಿದ
ಗಾಳಿ ಪಟ,
ಗಾಳಿ ಒಯ್ದತ್ತ
ಪಯಣ.
ಎತ್ತಲೋ ಏನೋ
ಗೊತ್ತೂ ಇಲ್ಲ
ಗುರಿನೂ ಇಲ್ಲ,
ಬರೀ ಶೂನ್ಯ ಆಗಸ
ಬಿರುಸು ಉರಿ ಬಿಸಿಲು
ಹಾರುತಿದ್ದ ಹಕ್ಕಿಗಳು
ಕೇಳಿದವು
ಎಲ್ಲಿಗೆ ಪಯಣ?
ಹಾರಿತು ಪಟ
ಉತ್ತರಿಸಲೆನಗೆ
ಸಮಯವಿಲ್ಲವೆಂದು.
ಚೆದುರಿದ ಮೋಡಗಳು
ಕೇಳಿದವು ಎತ್ತ
ಹಾರಿ ಹೊರಟಿ ಎಂದು,
ಮಾತನಾಡದೆ ಹಾರಿತು
ಗಾಳಿಯ ಹೆಗಲನೇರಿ
ಸಮಯವಿಲ್ಲವೆಂದು.
ಸೂತ್ರವೂ ಇಲ್ಲ,
ಸೂತ್ರಧಾರನೂ ಇಲ್ಲ,
ಗೊತ್ತು ಗುರಿ
ಮೊದಲೇ ಇಲ್ಲ
ಹಾರಿ ಹಾರಿ
ನೀಲಾಕಾಶದ
ಶೂನ್ಯಾನಂತದಲ್ಲಿ
ಮರೆಯಾಗಿ ಹೋಯಿತು.
14.11.2014
LikeLike ·  · 

Tuesday, 11 November 2014

ಕಾಯಿಲೆ ಮಲಗಿದರೆ
ನೋಡುವವರು ಬೇಕು,
ಸತ್ತು ಮಲಗಿದರೆ
ಹೊತ್ತೊಯ್ಯವವರು ಸಾಕು.
***ದಾರ್ಶನಿಕ
ಬುಗುರಿ
ತಿರುಗ್ತಾ ಇದೆ ಬುಗುರಿ,
ಆದರೊಮ್ಮೆ ನಿಂತೇ ನಿಲ್ಲತ್ತ,
ಕಳೆದು ಕೊಂಡು ಗತಿ ಒರಗಿ
ಮತ್ತೆ ತಿರುಗಲು ಬೇಕೇ ಬೇಕು,
ಸೂತ್ರಧಾರನ ಕೈಚಳಕ,
ಅವನೇ ಈ ಜಗದ ದಂಡನಾಯಕ.
04.11.2014
ಹೃದಯ ಸೌಂದರ್ಯ.

ಸುಂದರವಾದ ಹುಡುಗಿ
ಸುಂದರವಾದ ಹುಡುಗ
ಎನ್ನುತ್ತಾರೆ, ಆದರೆ
ಸುಂದರವಾದ ಮುದುಕಿ
ಅಥವಾ ಮುದುಕ ಅನ್ನುವುದಿಲ್ಲ.
ಹೀಗೇಕೆ? ವಯಸ್ಸಾದಂತೆ
ಸೌಂದರ್ಯ ಮಾಸಿ ಹೋಗುತ್ತದೆಯೇ?
ಕಣ್ಣಿಗೆ ಕಾಣುವ ಸೌಂದರ್ಯ
ಮಸುಕಾದರೂ, ಮಾಸದ
ಹೃದಯ ಸೌಂದರ್ಯ
ಇನ್ನೊಂದು ಹೃದಯಕ್ಕೂ ಕಾಣದೊಲ್ಲದೆ?
05.11.2014
ಸಾಲುಗಳು ಚೆನ್ನಾಗಿಯೂ ಇವೆ, ತಮಾಷೆಯಾಗಿಯೂ ಇವೆ.
ಆದರೆ, ಕೊನೆಯ ಸಾಲಿನಲ್ಲಿರುವ "ದಾನ" ವನ್ನು ಸಜ್ಜನರಿಗೆ/ಅಗತ್ಯವಿರುವವರಿಗೆ
ಮಾಡಿದ ದಾನವೆಂದು ಅರ್ಥೈಸಿಕೊಳ್ಳ ಬೇಕು.........
ಶಿಕ್ಷಕರಿಗೆ ಇಷ್ಟೊಂದು ಕೆಲಸಾನಾ......
"ಒಂದು ಕತೆ ಹೇಳ್ತೀರಾ ಟೀಚಾ...."
"ಸ್ವಲ್ಪ ತಡಿಯೇ, .....ಇವತ್ತು ಬೇರೆ ಕೆಲಸ ಇದೆ
ಅವನ್ನೆಲ್ಲ ಮುಗಿಸಿದ ನಂತ್ರ ಹೇಳ್ತೇನೆ...ಆಯ್ತಾ...."
......
.......
........
:ಇವತ್ತು ಹೇಳ್ತೀರಾ ಟೀಚಾ......?"
"ಇವತ್ತೂ ಆಗುವುದಿಲ್ಲ ಮಗೂ.....ನಾಳೆ ನೋಡುವ"
.......
.......
"ಇವತ್ತು....?"
"ಸಾರಿ ಮಗು. ಇನ್ನೂ ಕೆಲಸ ಮುಗ್ಡಿಲ್ಲ"
"ನಿಮ್ಮ ಕೆಲಸ ಮುಗಿಯುವುದು ಯಾವಾಗ ಟೀಚಾ......?"
"ಈ ಪಟ್ಟಿಯಲ್ಲಿರುವ ಕೆಲಸಗಳೆಲ್ಲಾ ಮುಗಿದ ಬಳಿಕ ಮಗೂ...."
"ಯಾವ ಪಟ್ಟಿ ಟೀಚಾ.....?"
"ಈ ಪಟ್ಟಿ ಮಗೂ
ಅಕ್ಷರ ದಾಸೋಹ
ಕ್ಷೀರ ಭಾಗ್ಯ
ಸುವರ್ಣ ಆರೋಗ್ಯ ಚೈತನ್ಯ
ಸೈಕಲ್ ವಿತರಣೆ
ಪಟ್ಯ ಪುಸ್ತಕ ವಿತರಣೆ
ಬ್ಯಾಗ್ ವಿತರಣೆ
ಚಿಣ್ಣರ ಅಂಗಳ
ಕೂಲಿಯಿಂದ ಶಾಲೆಗೆ
ಶಾಲಾ ಪ್ರಾರಂಭೋತ್ಸವ
ದಾಖಲಾತಿ ಆಂದೋಲನ
ಶಾಲೆ ಬಿಟ್ಟ ಮಕ್ಕಳ ಮನೆ ಭೇಟಿ
ಎಸ್.ಡಿ.ಎಂ.ಸಿ ರಚನೆ
ಕಟ್ಟಡ ಕಾಮಗಾರಿ
ಸಮುದಾಯದತ್ತ ಶಾಲೆ
ಶಾಲಾ ವಾರ್ಷಿಕೋತ್ಸವ
ಪ್ರಗತಿಪತ್ರ ತುಂಬುವುದು
ಪಾಠ ಯೋಜನೆ
ಪಾಠ ಬೋಧನೆ
ಕ್ರಿಯಾ ಯೋಜನೆ
ಕ್ರಿಯಾ ಸಂಶೋಧನೆ
ಶೈಕ್ಷಣಿಕ ಯೋಜನೆ
ದಾಖಲೆ ನಿರ್ವಹಣೆ
ಡಾಟಾ ಎಂಟ್ರಿ
ಮಕ್ಕಳಿಗೆ ಬ್ಯಾಂಕ್ ಖಾತೆ ತೆರೆಯುವುದು
ವಿದ್ಯಾರ್ಥಿ ವೇತನ
ಸಮನ್ವಯ ಶಿಕ್ಷಣ
ಜನಗಣತಿ
ಜಾತಿ ಗಣತಿ
ಚುನಾವಣಾ ಕಾರ್ಯ
ಬಿ.ಎಲ್.ಓ. ಕೆಲಸ
ಗುಳಿಗೆ ಹಂಚಿಕೆ
ಸಮಾಲೋಚನ ಸಭೆ
ಎಸ್.ಡಿ.ಎಂ.ಸಿ. ಸಭೆ
ಪಾಲಕರ ಸಭೆ
ಶಿಕ್ಷಕರ ಸಭೆ
ಪುನಶ್ಚೇತನ ತರಬೇತಿ
ಬ್ರಿಟಿಷ್ ಕೌನ್ಸಿಲ್ ತರಬೇತಿ
ಹೊರ ಸಂಚಾರ
ಕ್ಷೇತ್ರ ಸಂದರ್ಶನ
ಶೈಕ್ಷಣಿಕ ಪ್ರವಾಸ
ಜಿಲ್ಲಾ ದರ್ಶನ
ಸೇತುಬಂಧ
ಪರಿಹಾರ ಬೋಧನೆ
ಪೂರಕ ಬೋಧನೆ
ನಲಿ ಕಲಿ
ಕಲಿ ನಲಿ
ಚೈತನ್ಯ ಮಾದರಿ
ಟಿ.ಎಲ್.ಎಂ. ತಯಾರಿ
ಚಿಣ್ಣರ ಚುಕ್ಕಿ
ಚುಕ್ಕಿ ಚಿಣ್ಣ
ಕೇಳಿ ಕಲಿ
ಕ್ರೀಡಾ ಮೇಳ
ಪ್ರತಿಭಾ ಕಾರಂಜಿ
ಕಲಿ ಕೋತ್ಸವ
ಮೆಟ್ರಿಕ್ ಮೇಳ
ವಿಜ್ಞಾನ ಮೇಳ
ಸಾಂಸ್ಕೃತಿಕ ಕಾರ್ಯಕ್ರಮ
ಸೈನ್ಸ್ ಇನ್ಸ್ಪೈರ್ ಅವಾರ್ಡ್
ಪೂರಕ ಪರೀಕ್ಷೆ
ನೈದಾನಿಕ ಪರೀಕ್ಷೆ
ಸಿ ಸಿ ಇ ಪರೀಕ್ಷೆ
ಘಟಕ ಪರೀಕ್ಷೆ
ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
ಕಸ್ತೂರಿ ಬಾ ಬಾಲಿಕಾ ವಿದ್ಯಾಲಯ ಪ್ರವೇಶ ಪರೀಕ್ಷೆ
ನವೋದಯ ಪ್ರವೇಶ ಪರೀಕ್ಷೆ
ಎಸ್,ಟಿ.ಎಸ್. ಪರೀಕ್ಷೆ
ಎನ್.ಎಮ್.ಎಮ್.ಎಸ್. ಪರೀಕ್ಷೆ
ಗಣರಾಜ್ಯೋತ್ಸವ
ಸ್ವಾತಂತ್ರ್ಯೋತ್ಸವ
ಹೈ.ಕ. ವಿಮೋಚನಾ ದಿನಾಚರಣೆ
ಯುವಕರ ದಿನಾಚರಣೆ
ಶಿಕ್ಷಕರ ದಿನಾಚರಣೆ
ಪರಿಸರ ದಿನಾಚರಣೆ
ಸಾಕ್ಷರತಾ ದಿನಾಚರಣೆ
ವಿಜ್ಞಾನಿಗಳ ದಿನಾಚರಣೆ
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಭೂ ದಿನಾಚರಣೆ
ಗಾಂಧಿ ಜಯಂತಿ
ಕನಕ ಜಯಂತಿ
ಬಸವ ಜಯಂತಿ
ಅಂಬೇಡ್ಕರ್ ಜಯಂತಿ
ಕನ್ನಡ ರಾಜ್ಯೋತ್ಸವ
ಬಾಬು ಜಗಜ್ಜೀವನ್ ರಾಂ ದಿನಾಚರಣೆ
ವನ ಮಹೋತ್ಸವ
ಮಕ್ಕಳ ದಿನಾಚರಣೆ
ಬಿಸಿಯೂಟ
ಶೌಚಾಲಯ ನಿರ್ವಹಣೆ.
........
...........
..........
"ನನಗೆ ನಿಮ್ಮ ಕತೆಯೆಲ್ಲ ಬೇಡ ಟೀಚಾ......."
***************
(ಇದು ಇಂದಿನ ಪ್ರಜಾವಾಣಿಯಲ್ಲಿ ಬಂದ ಒಂದು ಬರಹ. ಇದನ್ನು ಗ್ಯಾಲಕ್ಸೀ ಟಾಬ್‌ನಲ್ಲಿ newshunt
application ನಲ್ಲಿ ಓದಿದೆ. ಎರಡು ಕಾರಣಕ್ಕೆ ತಲೆ ಬಿಸಿಯಾಯಿತು. ಒಂದು - ಶಿಕ್ಷಕರಿಗೆ ಇಷ್ಟೊಂದು ಕೆಲಸವಾದರೆ ಮಕ್ಕಳ ಗತಿಯೇನು ಅಂತ, ಎರಡು - ಇಷ್ಟೊಂದು items ನ್ನ ಒಟ್ಟು
ಮಾಡಿ ಬರೆದ ಪುಣ್ಯಾತ್ಮನ ತಲೆಯಲ್ಲಿ ಅದೆಷ್ಟು ತಾಳ್ಮೆ ಇರಬಹುದು ಅಂತ...........
ಹಾಗೇನೇ, ನೀವುಗಳು ಸಹ ತಾಳ್ಮೆಯಿಂದ ಓದಿ.......ಯೋಚಿಸುವಷ್ಟರಲ್ಲಿ ಬೆಳಗೂ ಆಗ ಬಹುದು...
ಆದ್ದರಿಂದ, ಎಲ್ಲರಿಗೂ ಈಗಿನ ಶುಭರಾತ್ರಿ........ಮತ್ತು ನಾಳೆ ಬೆಳಗಿನ ಶುಭೋದಯ......ಒಂದೇ ಸಲ ಹೇಳುತ್ತೇನೆ.....  )
ನಗು.
ಹೃದಯದಲ್ಲಿ ಅದೆಷ್ಟು ದು:ಖ, ದುಗುಡ,
ದುಮ್ಮಾನಗಳಿದ್ದರೂ, ಮುಖವಾಡದ ನಗು ಮುಖ
ಸಹ, ನಮ್ಮ ನಮ್ಮ ಆರೋಗ್ಯಕ್ಕೆ ಒಳ್ಳೆಯದಂತೆ.
ಹಾಗೆಂದು ನಗಲು ಸಮಯ ಸಂದರ್ಭ
ನೋಡಿಕೊಳ್ಳಿ. ರಸ್ತೆಯಲ್ಲಿ ಒಬ್ಬರೇ ಹೋಗುವಾಗ
ಸಹ, ಏನಾದರೂ ನೆನಸಿಕೊಂಡು ನಗ ಬೇಡಿ
ನೋಡಿದ ಜನರು, ಬೇರೆ ಏನಾದರೂ ಹೆಸರು ಇಟ್ಟಾರು....... 

*ದಾರ್ಶನಿಕ.

11.11.2014

Thursday, 6 November 2014

ಮೋಸ ಹೋಗುವವರು ಇರುವವರೆಗೂ
ಮೋಸ ಮಾಡುವವರು ಇರುತ್ತಾರೆ.
-----ಸುಭಾಷಿತ.

24.10.2014

Saturday, 1 November 2014


Intelligent Husband.

Use your brains and Laugh....... 
"A woman was arrested for shop lifting. In court Judge asked her, 'what did you steel?'. She replied, 'A can of peaches'.
The judged asked 'how many peaches were there in the can?'. She replied 'five'
Then the Judge said, 'I will give you 5 days in jail'.
Just then, woman's husband spoke up: 'Your honour, she also stole a can of peas' "
**----**

01.11.2014
Face Book Postings.


ಫೇಸ್ ಬುಕ್ ಚಿಕ್ಕ ತಮಾಷೆಯ ವಿಷಯಗಳನ್ನು
ಹಿಡಿದುಕೊಂಡು ಹರಟೆ ಹೊಡೆಯಲು ಹೆಚ್ಚಾಗಿ
ಉಪಯೋಗ ಆಗುತ್ತಿದೆ ಅನ್ನಿಸುತ್ತದೆಯಲ್ಲವೇ?
ಎದುರು ಬದುರು ಕೂತು ಹರಟೆ ಹೊಡೆಯಲು
ಆಗದವರು, ಎಲ್ಲೆಲ್ಲೋ ಕೂತು ಈ ಮಾಧ್ಯಮದ
ಮೂಲಕ ಹರಟೆ ಹೊಡೆದು ಟೈ ಪಾಸ್ ಮಾಡಲು
ಸಾಧ್ಯವಾಗಿರುವುದು ವಿಶೇಷವಲ್ಲವೇ? ಇದು
ತಪ್ಪೇನೂ ಅಲ್ಲ. ಆರೋಗ್ಯಕರವಾದ ಹರಟೆ ಸಹ ಖುಶಿ ಕೊಡುತ್ತೆ.


31.10.2014
ಈ ಹಸನ್ಮುಖಿ ಸೌಂದರ್ಯ ರಾಶಿಯನ್ನು ಮರೆಯುವಂತಿಲ್ಲ....... 
ನೀನೆಲ್ಲಿರುವೆ......
ನಿನ್ನ ಮುತ್ತು ಕದಡಿದ ಜೇನು
ಹೃದಯದಲಿ ಇಳಿಯುತಿದೆ
ಹನಿ ಹನಿಯಾಗಿ,
ಬಿಸಿಯಾದ ಎದೆ
ತಂಪಾಗಿ ಪಿಸು ನುಡಿಯುತಿದೆ
ನೀನೆಂದು ಬರುವಿಯೆಂದು
ನೀನಿಲ್ಲದೆ ಸವಿಯ ಲಾರೆ
ನಾ ಸವಿ ಜೀನ ಸವಿಯ,
ಇನ್ನೇಕೆ ತಡ
ಇನ್ನೂ ಕಾಯಿಸಬೇಡ,
ನನ್ನೆದೆ ಪೂರ್ತಿ
ತಣ್ಣಗಾಗುವ ವರೆಗೂ.
ಬಾಳು ಬಲು ಕಿರಿದು,
ಸುಖಿಸುವ ಆಸೆ ಮಾತ್ರ
ಬಲು ಹಿರಿದು,
ಅದಕ್ಕೇ ಕಾಲ ಹರಣ ಬೇಡ,
ಕಾಲ ಕಾಯುವುದಿಲ್ಲ,
ಬಾ, ಜೋಡಿಯಾಗಿ
ಬದುಕೋಣ, ನೀನೇ
ನವಿಲಾಗಿರು ನನ್ನೆದೆಯ
ಮಂದಿರದಲ್ಲಿ, ಬಂದಿಯಾಗಲ್ಲ
ನನ್ನರಸಿಯಾಗಿ ಎಂದೆಂದೂ.
************

29.10.2014

ಬೇಂದ್ರೆಯವರ ನುಡಿ ಮುತ್ತು 

"ಇದು ನಿಜವಾಗಿಯೂ ಹೊಂಗಿರಣ.
ವರಕವಿ ಬೇಂದ್ರೆಯವರ ಈ ಸರಳ ನುಡಿ ಮುತ್ತು,
ಕೂಡಿ ಬಳಿದರೆ ಸ್ವರ್ಗ ಸುಖ ಎನ್ನುವ
ಸಂದೇಶವನ್ನು ಸಾರುತ್ತದೆ.ಒಗ್ಗಟ್ಟಿನಲ್ಲಿ
ಬಾಳಿನ ಸುಖವಿದೆ, ಬಲವಿದೆ.ವಿಘಟನೆ
ಮನುಷ್ಯನನ್ನು ಸುಖ ನೆಮ್ಮದಿಯ
ಜೀವನದಿಂದ ವಂಚಿತನನ್ನಾಗಿ ಮಾಡುತ್ತದೆ."
ನನ್ನ ಸ್ನೇಹಿತರೆಲ್ಲರಿಗೂ ನನ್ನ ನಮಸ್ಕಾರ, ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.

29.10.2014
ಬಾರಿಗೆ ಹೋಗ್ತೀರಾ 

ಒಮ್ಮೆ ಹುಬ್ಬಳ್ಳಿಯಿಂದ ರಾತ್ರಿ ಬಸ್ಸಿನಲ್ಲಿ ಕೋಟಕ್ಕೆ ಬರುತ್ತಿದ್ದೆವು. ರಾತ್ರಿ 4 ಗಂಟೆ ಇರ ಬಹುದು. ಬಸ್ ಕೋಟದ ಹತ್ತಿರ ಬರುತ್ತಿತ್ತು. ಕೋಟದಲ್ಲಿ "ಅಮೃತ್ ಬಾರ್" ಹತ್ತಿರ ನಿಲ್ಲಿಸು ಅಂತ ಕಂಡಕ್ಟರನಿಗೆ ಅಂದೆ. ಅವನು ಏಕ್ ದಂ ದಂಗಾಗಿ, ಅಮೃತ್ ಬಾರಿಗಾ, ಇಷ್ಟೊತ್ನಲ್ಲಿ, ಎಂದು ಆಶ್ಚರ್ಯ ಪಟ್ಟ. ಆಗ ನಾನು ಬಾರಿಗಲ್ಲೋ ಮಾರಾಯ, ಆ ಬಾರಿನ ಮಗ್ಗುಲಿಗೆ ನಮ್ಮ ಮನೆಗೆ ಹೋಗುವ ಕಿರು ರಸ್ತೆ ಇದೆ, ಅದಕ್ಕೇ, ಎಂದೆ. ಆಗ, ಆತ ಒಮ್ಮೆ ಜೋರಾಗಿ ನಕ್ಕು ನಮ್ಮನ್ನು ಅಲ್ಲಿ ಇಳಿಸಿ ಹೋದ.... 
ಅವೇಳೆಯಲ್ಲಿ ಏನು ಅನ್ನುವುದಾದರೂ ಯೋಚಿಸಿಯೇ ಅನ್ನ ಬೇಕು..


28.10.2014
ಸುಜ್ನಾನ
ತಾಯಿ ಎಂದೂ ಮಗುವನ್ನು ಶಪಿಸುವುದಿಲ್ಲ.
ಭೂಮಿಗೆ ಯಾವ ದೋಷವೂ ಅಂಟುವುದಿಲ್ಲ.
ಸಾಧುವಾದವನು ಎಂದೂ ಹಿಂಸಿಸುವುದಿಲ್ಲ
ದೇವರು ಸೃಷ್ಟಿಸಿರುವುದನ್ನು ನಾಶಪಡಿಸಲ್ಲ
***ಸುಭಾಷಿತ
(ಸುಭಾಷಿತವೇನೋ ಚೆನ್ನಾಗಿದೆ. ಆದರೆ, ಎಲ್ಲದಕ್ಕೂ ಅಪವಾದವಿರುವ ಹಾಗೆ, ಇದಕ್ಕೂ
ಅಪವಾದವಿದೆ.
ನಮ್ಮ ಪಕ್ಕದ ಮನೆಯಲ್ಲೊಂದು ಒಂದು ಸಂಸಾರವಿದೆ. ತಾಯಿ, ಮಗ, ಮಗನ ಹೆಂಡತಿ ಮತ್ತು ಮದುವೆಯಾಗದ ಒಬ್ಬಳು ಮಗಳು.
ಹೇಗಿದ್ದರೆಂದರೆ, ದಿನ ಬೆಳಗಾದರೆ ಜಗಳ.
ಅತ್ತೆಗೂ ಸೊಸೆಗೂ ಹಣಾಹಣಿ. ಮಗ ಒಂದು ಶಬ್ಬ ಹೆಂಡತಿಯ ಪರ ಮಾತನಾಡಿದರೆ ಸರಿ, ತಾಯಿಂದ ಮಗನಿಗೆ ಹಿಡಿ ಶಾಪ, "ತಾಯಿಯ ಹೊಟ್ಟೆ ಉರಿಸುವ ನೀನು ಹಾಳಾಗಿ ಹೋಗ್ತಿ, ನಿನ್ನ ಸರ್ವನಾಶವಾಗಲಿ " ಅಂತೆಲ್ಲ ಹೆತ್ತ ತಾಯಿಯ ಶಾಪ ಮಗನಿಗೆ.
ಇದು ನಾನು ಸ್ವತ: ಕಿವಿಯಲ್ಲಿ ಕೇಳಿದ್ದು. ಏನೇನೂ ಉತ್ಪ್ರೇಕ್ಷೆಯಿಲ್ಲ. ಈಗ ಆ ಪಾಪದ ಮಗನಿಗೆ ಎದೆ ನೋವು. ಮೊನ್ನೆ ಮೊನ್ನೆ bye pass surgery ನೂ ಆಯ್ತು. ಹೇಗಿದೆ?
ಹಾಗೆಂದು ಎಲ್ಲಾ ತಾಯಂದಿರು ಹೀಗಂತಲ್ಲ. ಮಕ್ಕಳಿಗೋಸ್ಕರ ತನ್ನ ಜೀವ ತೇದ ತಾಯಂದಿರು ಲಕ್ಷಾಂತರವಿರ ಬಹುದು. ಇಂಥ ಕೇಸುಗಳು ಅಪವಾದವಿರ ಬಹುದು..
ಇನ್ನು ಭಗವಂತ. ನಂಬಿಕೆಯಂತೆ ಭಗವಂತ, ಭೂಭಾರ ಜಾಸ್ತಿಯಾದಾಗ, ಪ್ರಪಂಚದಲ್ಲಿ ಪಾಪ ಹೆಚ್ಚಾದಾಗ ಅವನ್ನು ಕಡಿಮೆ ಮಾಡಲು ತನ್ನ ಸೃಷ್ಟಿಯನ್ನೇ ನಾಶ ಮಾಡುತ್ತಾನಂತೆ

27.10.2014
A shocking Joke


A man received a message from his neighbour, "Sorry sir, I have been using your wife, especially when you are not at home. I am confessing now as I feel guilty. Please accept my sincere apologies."
The man almost had a heart attack when he got another message from the neighbour. "Sorry sir, spelling mistake...it's not wife but wifi".
(Straydog Corner of today's TOI) If you have a domestic wifi, make it password protected....Otherwise, you may also receive this type of messages..... 
66 ನೇ ವಯಸ್ಸಲ್ಲೂ ಈ ಸೌಂದರ್ಯದ ಗುಟ್ಟೇನು ಎಂದು ಕೇಳ ಬೇಡವೇ?
ಕತ್ತಲು - ಸೌಂದರ್ಯ
ಕತ್ತಲು ಕವಿದರೆ
ಕಣ್ಣಿಗೆ ಕಾಣುವ
ಎಲ್ಲ ಸೌಂದರ್ಯಗಳು
ಮರೆಯಾಗಿ ಹೋಗುತ್ತವೆ
ಕತ್ತಲಲ್ಲಿ ಕಾಣುವ
ಸೌಂದರ್ಯವೇ
ನಮ್ಮ ಅಂತರಂಗದ
ಸೌಂದರ್ಯ, ಮತ್ತು
ಸ್ನೇಹಿತರ, ಬಂಧುಗಳ
ಸದ್ಗುಣ ಸೌಂದರ್ಯ.
****ಅನುಭವಾಮೃತ.
ಕಾಲವನ್ನು ಕಾಯುತ್ತಾ....
ಒತ್ತಡ ಅನ್ನಿಸುತ್ತಾ ಇದೆ ಅವನಿಗೆ,
ಸಂತೈಸಿ ಬದುಕೆಂದು ಅದರಿಸುವವರಿಲ್ಲ
ಬೀದಿಯ ಕಸವಾದ,
ಆದರೂ ಅದನ್ನೂ ಗುಡಿಸಿ ಹಾಕುವವರಿಲ್ಲ,
ಗಾಳಿಗೆ ಸಿಲುಕಿದ ತರಗಲೆ ಆದ.
ಗಾಳಿಗೂ ಬೇಜಾರು, ಅವನನ್ನೊಯ್ಯಲಿಲ್ಲ,
"ನನ್ನ ಓರಗೆಯವರೆಲ್ಲ ಒಬ್ಬೊಬ್ಬರಾಗಿ ಮರೆಯಾಗುತಿದ್ದಾರೆ,"
ಎಂದು ಹೆಂಡತಿಗಂದ,
"ಆಯುಸ್ಸು ಮುಗಿದವರು ಸಾಯುತ್ತಾರೆ,ಅದಕ್ಕೇನು ಮಾಡುವುದು?"
ಎಂದ ಹೆಂಡತಿಯ ಮುಖ ನೋಡಿ ದಂಗಾದ.
ನಿಜವೇ ಆದರೂ, ಒಂದು ಸಾಂತ್ವನದ ಮಾತಿಲ್ಲವಲ್ಲ ಎಂದುಕೊಂಡು ಬೇಜಾರಾದ.
ವಯಸ್ಸಾದ ನಂತರ ಆತ್ಮೀಯರೆನಿಸಿ ಕೊಂಡವರೂ ಎಷ್ಟು practical ಆಗುತ್ತಾರಲ್ಲಾ
ಎಂದು ಅಚ್ಚರಿ ಪಟ್ಟು ಕೊಂಡು ಪೆಚ್ಚು ಮುಖ ಹಾಕಿ ಕೊಂಡ,
"ಪ್ರಪಂಚವೇ ಹಾಗಲ್ಲವೇ" ಎಂದುಕೊಂಡು ಸಮಾಧಾನವೂ ಪಟ್ಟು ಕೊಂಡ...
ಕಾಲವನ್ನು, ಸಾವನ್ನು ತಡೆಯುವವರಿಲ್ಲ,
ಆದರೆ ಒತ್ತಾಯದ ಬರವಿಲ್ಲ......
ಬರಬಾರದೇ ಎಂದರೂ ಬರದು, ಬರ ಬೇಡ ಎಂದರೂ ಬಾರದೆ ಇರದು,
ಕಾಯುತ್ತಲಿರ ಬೇಕು ಅವರವರ ಕಾಲಕ್ಕಾಗಿ,
ಮುಂದೊಂದು ದಿನ ಬರಲಿದೆ, ಆ ಅಳಿಗಾಲ.
**********************
25.10.2014