Sunday, 30 April 2017

ನಿಷ್ಕಲ್ಮತೆಯ ಪ್ರತಿರೂಪ
ಈ ಸುಮ ಬಾಲೆಯ ರೂಪ.
ನೋಡಿದರೆ, ಮುಂದಲೆಗೆ
ಮುದ್ದಿಡ ಬೇಕೆನಿಸುವ
ಈ ಅಕಳಂಕ ಚೆಲುವು.
ಮುಡಿದ ಮಲ್ಲಿಗೆಯೇ
ತುಟಿಗಳಿಗೂ ಮುತ್ತಿಟ್ಟಿತೋ
ಎನಿಸುವ ಮುಗ್ದ ಮುಗುಳು ನಗು.
ಮನವ ಮುದ ಗೊಳಿಸುವ,
ತಿರುಗಿ, ತಿರುಗಿ ನೋಡಬೇಕೆನಿಸುವ
ನಗುವ ಕಿರುಗಣ್ಣುಗಳ ನೋಟ.
ಆ ಭಗವಂತ ಮನ ಕೊಟ್ಟು
ಕಡೆದ ಕಿರು ಗೊಂಬೆ ನೀನು,
ನಿನ್ನ ಮುಂದಲೆಗೆ ಇನ್ನೊಮ್ಮೆ
ಮುತ್ತಿಟ್ಟು ಧನ್ಯನಾದೆ ನಾನು... :-)
***********************

Saturday, 29 April 2017

ಇಲ್ಲೊಂದು ಹಳೆಯ ಡೆಂಟಿಸ್ಟ್ ಜೋಕ್ ಇದೆ....
ಒಬ್ಬ ಹಲ್ಲು ಕೀಳಿಸಲು ಹೋಗಿದ್ದ. ನೋವಿನಿಂದ ಸಿಕ್ಕಾಪಟ್ಟೆ ಚೀರಾಡಿದ.
ಹಲ್ಲು ಕಿತ್ತಾದ ಮೇಲೆ, ಡೆಂಟಿಷ್ಟ್ 400 ರುಪಾಯಿ ಕೇಳಿದರು. ಈತ, ಹೊರಗೆ ಒಂದು ಹಲ್ಲು ಕೀಳಲು 100 ರುಪಾಯಿ ಎಂದು ಬೋರ್ಡ್ ಹಾಕಿದ್ದಿರಲ್ಲ, ನನಗ್ಯಾಕೆ 400 ಕೇಳ್ತಿದ್ದೀರಾ ಅಂದನಂತೆ.
ಅದಕ್ಕೆ, ಡಾಕ್ಟರ್, ನೀವು ಚೀರಾಡೋದು ಕೇಳಿ ಹೆದರಿ ಹೊರಗೆ ಕೂತಿದ್ದ ಮೂರು ಮಂದಿ ಓಡಿ ಹೋದರು, ಅವರದ್ದು 300 ರುಪಾಯಿ ಮತ್ತು ನಿಮ್ಮದು, ಒಟ್ಟು ನಾಲ್ಕು ನೂರು ಕೋಡ ಬೇಕು ಅಂದಾಗ ಆತ ಸುಸ್ತು...... :-)

Thursday, 27 April 2017

ಒಮ್ಮೊಮ್ಮೆ
ಹೀಗೇ ಅನ್ನಿಸುತ್ತೆ...
ನಡೆದು ಬಂದ
ದಾರಿ ಎಷ್ಟು,
ಇನ್ನುಳಿದ ದೂರವೆಷ್ಟು...
ಅದೆಷ್ಟು ಮುದ್ದುಗಳು
ಅದೆಷ್ಟು ಲಾಲನೆ
ಪಾಲನೆಗಳು.

ಅದೆಂಥ ಗದರಿಕೆ
ಬೆದರಿಕೆಗಳು.
ಓಡಿದರೆ
ಅದೇಕೆ ಅಷ್ಟು ಜೋರು,
ನಡೆದರೆ ಅದಕ್ಕೂ
ಅಷ್ಟು ಜೋರು.....

ಕೊನೆಗೊಮ್ಮೆ ಬಂತು
ಸ್ವಂತದ ಪರ್ವಕಾಲ,
ನೀನೆಂದರೆ ನಿಮ್ಮಪ್ಪ
ಎನ್ನುವ ನನ್ನ ಕಾಲ.

ಆಸೆ ಆಮಿಷಗಳು
ಉಕ್ಕಿ ಹರಿದವು
ಹಾಗೆಯೇ ತಣಿದು
ತಳ ಸೇರಿದವು......

ಸಾಧನೆಗಳಂತೆ..
ಏನು ಸ್ವಾದವೂ ಇಲ್ಲ,
ಸಾಧನೆಗಳೂ ಇಲ್ಲ
ಬರೀ ಅಂಕಿಗಳ
ಎಣಿಕೆ ಇದೆ,
ಹೊಟ್ಟೆಯ ಹಸಿವಿದೆ,
ದೇಹದ ಉಸಿರಿದೆ..
ಕಾಲ ಕಾದಿದೆ.....
ಕಾಲ ಕಾದಿದೆ....

(ಹಳೇ ನೆನಪು)

.

Wednesday, 26 April 2017

ಇಲ್ಲವೆನಬೇಡ,
ಇದ್ದುದೂ ಇಲ್ಲವಾದೀತು,

ಒಲ್ಲೆ ಎನಬೇಡ,
ಸಿಗುವುದೂ ಸಿಗದಿದ್ದೀತು,

ತಿಳಿಯದೇನ ಬೇಡ
ಅರಿವು ಕಳೆದೇ ಹೋದೀತು,

ತಲ್ಲಣಿಸಬೇಡ,
ಭರವಸೆ ಮಾಯವಾದೀತು,

ದಾರಿಕಾಣದೆನಗೆನ ಬೇಡ,
ಗುರಿ ಕಾಣದೇ ಹೋದೀತು,

ಜೀವನ ಕಷ್ಟವೆನಬೇಡ,
ಬದಕೆಲ್ಲ ಬವಣೆಯೇ ಆದೀತು,

ನಗುಬಾರದೆನಗೆನಬೇಡ,
ಸುಖ ಸನಿಹ ತೊರೆದೀತು,

ಹಂಚು ಪ್ರೀತಿ, ಹರವು ಪ್ರೇಮ,
ಜೀವನದ ಸವಿಯೇ ನಿನ್ನದಾದೀತು.
ಜೀವನದ ಸವಿಯೇ ನಿನ್ನದಾದೀತು.

Tuesday, 25 April 2017

ಬಾನಂಚಿನ ಹೊಂಗಿರಣದಿಂದ
ಪೂರ್ಣ ಕಡಲೇ ಹೊನ್ನಾಯಿತು,
ಹೊನ್ನೀರ ಅಲೆಗಳು ತಡಿಗೆ ಬಡಿದು
ಮರಳೂ ಬಂಗಾರವಾಯಿತು.

+++++++++++++++++++++++

ಹಗಲು ಸೂರಪ್ಪ
ಕಾಣುವ ಸೂರು,
ಇರಳು ತಾರಕ್ಕ
ಇಣುಕು ಮಾಡು.

ಹಗಲಿರಲಿ ಇರುಳಿರಲಿ
ಏರು ಇಳಿಯಿಲ್ಲದ
ಏಕತಾನದ ಓಟ,
ಬದುಕಿನ ಆಟ.

ಇರುಳ ಕನಸುಗಳೆಂದೂ
ಹಗಲು ನನಸಾಗಲಿಲ್ಲ,
ತಾರಕ್ಕ, ಸೂರಪ್ಪ
ಮರೆಯಾದುದೊಂದೆ ಸತ್ಯ.

ನೋಡಲು ಇನಿತೇ ಎನಿಸಿದ
ಸನಿಹ ಇದೆ ಬಲು ದೂರ,
ಆ ದೂರ ಮುಟ್ಟುವುದೇ
ಎಂದೆಂದಿನ ಆತಂಕ..

ಆದರೂ ಕಸುವಿದೆ ಮೈಯಲ್ಲಿ,
ಛಲವಿದೆ ಮನದಲ್ಲಿ,
ಮುಟ್ಟುವೆನೊಂದು ದಿನ
ಶುಭ್ರ ನಿರ್ಮಲ ಬಯಲನು.

ಅಲ್ಲಿ ಸೂರಪ್ಪ ಬರುವ
ತೂರಿ ಎಲೆಗಳೆಡೆಯಲ್ಲಿ,
ಚಂದ್ರಮನಿಣುಕುವ
ರಾತ್ರಿಯ ತಂಬೆಳಕಿನಲಿ.
  ನಮ್ಮ ಕನ್ನಡದ ಕೆಲವು ಪ್ರಥಮಗಳು..... :-)
  *********************
  ಕನ್ನಡದ ಮೊದಲ ದೊರೆ – ಕದಂಬ ವಂಶದ ಮಯೂರವರ್ಮ.
  ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪ
  ಮೊದಲ ಕೆರೆ – ಚಂದ್ರವಳ್ಳಿ ( ಚಿತ್ರದುರ್ಗ )
  ಮೊದಲ ಶಾಸನ – ಹಲ್ಮಿದಿ ಶಾಸನ ( ಕ್ರಿ.ಶ. ೪೫೦ )
  ಮೊದಲ ಕೋಟೆ – ಬಾದಾಮಿ ( ಕ್ರಿ. ಶ. ೫೪೩)
  ಮೊದಲ ಕನ್ನಡ ಕೃತಿ – ಕವಿರಾಜ ಮಾರ್ಗ (ಕ್ರಿ.ಶ.೯ನೇ ಶತಮಾನ- ಶ್ರೀವಿಜಯ)
  ಕನ್ನಡದ ಮೊದಲ ನಾಟಕ – ಸಿಂಗರಾಯನ ಮಿತ್ರ- ವಿಂದಾಗೋವಿಂದ
  ಕನ್ನಡದ ಮೊದಲ ದಿನ ಪತ್ರಿಕೆ – ಸೂರ್ಯೋದಯ ಪ್ರಕಾಶಿಕ
  ಕನ್ನಡದ ಮೊದಲ ವಚನಕಾರ್ತಿ – ಅಕ್ಕಮಹಾದೇವಿ
  ಕನ್ನಡದ ಮೊದಲ ರಾಷ್ಟ್ರಕವಿ – ಗೋವಿಂದ ಪೈ
  ಕನ್ನಡದ ಮೊದಲ ಪತ್ರಿಕೆ – ಮಂಗಳೂರು ಸಮಾಚಾರ ಸ್ಥಾಪಕ -ಫಾದರ್ ಹರ್ಮನ್ ನೊಗ್ಲಿಂಗ್ -೧೮೪೨
  ಮೊದಲ ಗದ್ಯ ಕೃತಿ – ವಡ್ಡಾರಾಧನೆ.
  ಮೊದಲ ಕಾವ್ಯ – ಆದಿಪುರಾಣ.
  ಮೊದಲ ಪಂಪ ಪ್ರಶಸ್ಥಿ ವಿಜೇತ ಕವಿ – ಕುವೆಂಪು
  ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಸರ್. ಎಂ. ವಿಶ್ವೇಶ್ವರಯ್ಯ.
  ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ
  ಶ್ರೀ ರಾಮಾಯಣ ದರ್ಶನಂ ( ಕುವೆಂಪು )
  ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ – ಬೇಡರ ಕಣ್ಣಪ್ಪ
  ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ – ಶಿವಮೊಗ್ಗ ಸುಬ್ಬಣ್ಣ
  ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ – ಜಯದೇವಿತಾಯಿ ಲಿಗಾಡೆ ( ೧೯೮೪ )
  ಕನ್ನಡದ ಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ
  ಕನ್ನಡ ಕೆಲಸಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲಿಗ – ಫರ್ಡಿನೆಂಡ್ ಕಿಟ್ಟೆಲ್ (ಕನ್ನಡ -ಇಂಗ್ಲೀಷ್ ನಿಘಂಟು)
  ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿ – ಎಲ್ಲೂಬಾಯಿ ಗುಳೇದಗುಡ್ಡ.
  ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರ – ಮೃಚ್ಛಕಟಿಕ
  ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ – ಉದಯವಾಣಿ
  ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ – ರಾಮಗಾಣಿಗ.
  ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ – ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ.
  ಕನ್ನಡದ ಮೊದಲ ನವೋದಯ ಕವಿತ್ರಿ – ಬೆಳಗೆರೆ ಜಾನಕಮ್ಮ
  (ಸಂಗ್ರಹ)
  ಚೆಂದದ ಬೆನ್ನು ಹತ್ತಿ ಹೋದೆ
  ಬೆಚ್ಚಿ ಬಿದ್ದೆ ಹಿಂದೆ ಪರ್ಸನಾಲಟಿ
  ಮುಂದೆ ಮುನಿಸಿಪಾಲಿಟಿ ನೋಡಿ,
  ಬುದ್ಧಿಯ ಬೆನ್ನು ಹತ್ತಿ ಹೋದೆ...
  See More

  Like
  Comment
  ಕೋಟಿ ಗಟ್ಟಲೆ ಹಣ ನುಂಗಿ ಜೀರ್ಣಿಸಿ ಕೊಳ್ಳುವ ತಿಮಿಂಗಿಲಗಳೇ ಇರುವಾಗ, ಇಲ್ಲೊಬ್ಬ ಬಡಪಾಯಿ, ಹೆದರಿ, ಲಂಚ ತೆಗೆದು ಕೊಂಡ ಬರೇ ಐನೂರರ ನಾಲ್ಕು ನೋಟುಗಳನ್ನು
  ನುಂಗಿ ಸಿಕ್ಕಿ ಬಿದ್ದ ಕತೆ ಓದಿ..... :-)

  Like
  Comment
  ಆನೆ ಲದ್ದಿ ಕಾಫಿ... :-) ಎಲ್ಲಾದರೂ ಕೇಳಿದ್ದೀರಾ... :-)
  ಈ ರೋಚಕ ಸುದ್ದಿ ಓದಿ..... :-)

  ಕಾಡಾನೆಗಳು ಕಾಫಿ ತಿನ್ನುವ ಹವ್ಯಾಸ ಬೆಳೆಸಿಕೊಂಡಿದ್ದು, ಅವು ತಿಂದ ನಂತರ ಹಾಕುವ ಲದ್ದಿಯಲ್ಲಿರುವ ಕಾಫಿ ಬೀಜಕ್ಕೆ ಭಾರಿ ಬೇಡಿಕೆ ಹಾಗೂ ಬೆಲೆ ಲಭ್ಯವಾಗುತ್ತಿದೆ.
  VIJAYKARNATAKA.INDIATIMES.COM

  Like
  Comment
  ಹೀಗಿದೆ ರಾಜಕೀಯ....ಪಕ್ಷಾಂತರ ಪರ್ವ... :-)

  ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
  VIJAYKARNATAKA.INDIATIMES.COM

  Like
  Comment
  Comments
  Sripada Rao Manjunath ಇದೆಲ್ಲದರ ನಡುವೆಯೂ ಜನರಿಗೆ ಮುಂದೆಂದೊ ಓಂದು ದಿನ ಒಳ್ಳೆಯ ದಿನ ಬರಲೂಬಹುದೆಂಬ ಆಸೆಯಿದೆಯೆಲ್ಲ, ಆ ಭರವಸೆಯ ಚೈತನ್ಯಕ್ಕೆ ನಮಸ್ಕರಿಸುವೆ.
  Parthasarathy Narasingarao ಏನೆಲ್ಲ ನಡೆದರು ನನಗೆ ಆಶ್ಚರ್ಯ ಆಗುತ್ತಿಲ್ಲಪ್ಪ 
  ಕಡೆಗೊಮ್ಮೆ ಸೋನಿಯಾ ಕುಟುಂಬ ವು ಬಿಜೆಪಿ ಸೇರುವುದು ಆಶ್ಚರ್ಯ ಏನಿಲ್ಲ. ಅಂತಹ ರಾಜಕೀಯ ವ್ಯವಸ್ಥೆ ನಮ್ಮದು. 
  ಕಡೆಗೆ ಜನರಿಗೆ ದೇಶಕ್ಕೆ ಒಳಿತಾದರೆ ಸರಿ
  Bhaskar Rao Manninagode. Karagutha ide. Yavaga bilutho gothilla.
  ಕರ್ನಾಟಕದ ಕರಾವಳಿ ಹಳ್ಳಿಗಳ ಪ್ರಕೃತಿಯ ಅತಿ ಸುಂದರ ಫೋಟೋಗಳು..... :-) ಪರಿಸರದ ಸಹಜ
  ಸುಂದರ ನೋಟಗಳು......:-) ನನಗೆ ತುಂಬಾ ಇಷ್ಟವಾಗಿ ಸಂತೋಷ ಕೊಟ್ಟಿವೆ.
  ನೀವೂ ನೋಡಿ ಆನಂದಿಸಿ...... :-)
  Divya Shetty added 23 new photos.Follow
  ಈ ಹಳ್ಳಿಯ ಸೊಬಗಿನ ಚಿತ್ರಕ್ಕೆ ನಿಮ್ಮ ಮೆಚ್ವುಗೆ ಇರಲಿ..
  Share ಮಾಡಿ..
  ನೀವು ನೊಡಲೇಬೇಕಾದ ಚಿತ್ರ..

  Like
  Comment
  Comments

  1. ನಮ್ಮ ಕನ್ನಡದ ಕೆಲವು ಪ್ರಥಮಗಳು..... :-)