Sunday 6 October 2019

ಒಬ್ಬ ಬೇರೆಯವರಿಂದ,
ಪ್ರತಿಕೂಲ ಪರಿಸ್ಥಿತಿಯಿಂದ ಒತ್ತಡಕ್ಕ
ಒಳಗಾಗಿದ್ದ. ಖಿನ್ನತೆಯಿಂದ
ಬಳಲಿ ಕಂಗೆಟ್ಟಿದ್ದ. ಆದರೂ
ಪರಿಹಾರ ಹುಡುಕುತ್ತದ್ದ.
ಒಂದು ಆತ್ಮಹತ್ಯೆ
ಅಯ್ಯೋ, ಅತ್ಮಹತ್ಯೆ ಮಹಾಪಾಪ,
ಎರಡನೇದು ಕೊಲೆ,
ತನ್ನನ್ನು ಒತ್ತಡಕ್ಕೆ
ತಳ್ಳಿದವರನ್ನು ಮುಗಿಸುವುದು?
ಆದರೆ ಕೊಲೆ ಮಾಡಿದವನಿಗೆ
ಗಲ್ಲು ಅಥವಾ ಕಾರಾವಾಸ
ಕಾಯ್ತಾ ಇರುತ್ತಲ್ಲ, ಬೇಡಪ್ಪಾ,
ಮತ್ತೂ ಯೋಚಿಸಿಯೇ ಯೋಚಿಸಿದ,
ಮೂರನೇ ದಾರಿಯನ್ನು ಹುಡುಕಿದ,
ಅದೇ "ಪಲಾಯನ", ಇದೇ ಸರಿಯೆಂದು,
ತನ್ನನ್ನು ಒತ್ತಡಕ್ಕೆ ಒತ್ತಿಟ್ಟವರಿಂದ,
ತನ್ನನ್ನು ಒತ್ತಡಕ್ಕೆ ತಂದ ಪರಿಸರದಿಂದ,
ಜನರಿಂದ, ದೂರ ಓಡಿಯೇ ಓಡಿದ,
ಪಲಾಯನ ಮಾಡಿ ಬದುಕಿಕೊಂಡ,
ತನ್ನದೇ ಪ್ರಪಂಚ ಕಟ್ಟಿಕೊಂದು
ತನಗಿಷ್ಟು ಶಕ್ತಿ ಕೊಟ್ಟ
ದೇವರನ್ನು ಸ್ಮರಿಸುತ್ತ ಸುಖವಾಗಿದ್ದ..
(ಇದು ಕವಿತೆಯಲ್ಲ - ಅಗತ್ಯವಿದ್ದವರಿಗೆ ಒಂದು ಸಲಹೆ ಅಷ್ಟೆ - ಎಲ್ಲರೂ ಇದನ್ನು ಒಪ್ಪದೇನೂ ಇರ ಬಹುದು..... 🙂 )
.

No comments:

Post a Comment