Thursday 13 August 2015

ಮನುಷ್ಯನ ಭಾವನಾತ್ಮಕ ಗುಣಗಳನ್ನು ವಿಶ್ಲೇಷಿಸಲು ಅವನ ಕಣ್ಣಿಗೆ ಕಾಣದ ಮೂರು
ಅಂಗಗಳನ್ನು ಗಮನಿಸುತ್ತೇವೆ. ಅವೇ ಹೃದಯ, ಬುದ್ಧಿ ಮತ್ತು ಮನಸ್ಸು. ಒಬ್ಬನ ಹೃದಯ ಕಠಿಣ ಅಥವಾ ಮೃದುವಾಗಿದೆ ಅಂತೇವೆ. ಇನ್ನೊಬ್ಬನ ಮನಸ್ಸು ಚಂಚಲ ಅಥವಾ ದೃಢವಾಗಿದೆ ಅಂತೇವೆ. ಮತ್ತೊಬ್ಬನ ಬುದ್ಧಿ ಸರಿಯಾಗಿದೆ ಅಥವಾ ಅವನಿಗೆ ಬುದ್ದೀನೇ ಸರಿಯಾಗಿಲ್ಲ ಅನ್ನುತ್ತೇವೆ. ಈ ಮೂರು ಅದೃಶ್ಯ
ಅಂಗಗಳೇ ಮನುಷ್ಯ ಜೀವನವನ್ನು ರೂಪಿಸುವ ಮುಖ್ಯ ಅಂಶಗಳು. ಇವುಗಳನ್ನು ಸರಿದಾರಿಯಲ್ಲಿ
ಅಳವಡಿಸಿಕೊಂಡು ಬದುಕುವುದೇ ಜೀವನದ ಸಾರ್ಥಕತೆ.
*****ದಾರ್ಶನಿಕ.

No comments:

Post a Comment