Thursday 13 August 2015

ಸ್ನೇಹಿತರೆಲ್ಲರಿಗೂ ನಮಸ್ಕಾರ...... ನನಗೆ ಅನಿಸಿದಂತೆ ಎಲ್ಲರಿಗೂ ಉಪಯೋಗವಾಗ ಬಹುದಾದ ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ....
ಈಗ ನಕಲಿ ಕರೆಂನ್ಸಿ ನೋಟುಗಳ ಹಾವಳಿ ತಂಬಾ ಹೆಚ್ಚಾಗಿದೆ. ಅಸಲಿ ನೋಟುಗಳು ಹೇಗಿರುತ್ತವೆಂಬುದರ ಬಗ್ಗೆ ಸಾಮಾನ್ಯ ಜ್ಞಾನ ವಿಲ್ಲದಿದ್ದರೆ, ಈ ನಕಲಿ ನೋಟುಗಳು ನಮಗೆ ಅಸಲಿ ನೋಟುಗಳಂತೆ ಕಾಣ ಬರುತ್ತವೆ. ಅಂಥ ನೋಟುಗಳನ್ನು ನಾವು ಗೊತ್ತಿಲ್ಲದೆ ತೆಗೆದು ಕೊಂಡು,ಬ್ಯಾಂಕಿಗೆ ತುಂಬಲು ಹೋದಾಗ ಅವರು ಅದನ್ನು seize ಮಾಡಿ ನಾವು ನಮ್ಮ ತಪ್ಪಿಲ್ಲದೇ ಕಷ್ಟದಲ್ಲಿ ಸಿಗುವ ಸಂದರ್ಭ ಬಂದರೂ ಬರಬಹುದು. 500/- ಮತ್ತು 1000/- ದ ನೋಟುಗಳೇ ಈಗ ಹೆಚ್ಚು ಚಲಾವಣೆಯಲ್ಲಿವೆ. ನಕಲಿ ನೋಟುಗಳಿರುವುದು ಸಹ ಈ denomination ಗಳಲ್ಲಿಯೇ ಜಾಸ್ತಿ.
ನಕಲಿ ನೋಟುಗಳನ್ನು ಸ್ವಲ್ಪ ತೀಕ್ಷ್ಣವಾದ ದೃಷ್ಟಿ ಮತ್ತು ಸ್ಪರ್ಶದಿಂದ ಗುರುತಿಸ ಬಹುದು.
ಅಂದರೆ, ಅಸಲಿ ನೋಟುಗಳು ಹೇಗಿರ ಬೇಕೆಂಬ ಬಗ್ಗೆ ನಮಗೆ ಸರಿಯಾದ ಜ್ಞಾನವಿರಬೇಕು. ಇದಕ್ಕೆ ಯಾವುದೆ electronic gadget ಬೇಕಾಗಿಲ್ಲ. ಈ ಕೆಳಗಿನ ಫೋಟೋಗಳಲ್ಲಿರುವ ಅಸಲಿ ನೋಟುಗಳ ಸರಳ ಲಕ್ಷಣಗಳನ್ನು ಮನನ ಮಾಡಿಕೊಂಡರೆ,ಅಸಲಿ ನೋಟುಗಳ್ಯಾವುವು, ನಕಲಿ ನೋಟುಗಳು ಯಾವುವು ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚ ಬಹುದು.
ನೋಡಿ, ಜಾಗ್ರತೆ ಮಾಡಿ....ಹಣ ಮತ್ತು ಮರ್ಯಾದೆಯ ಪ್ರಶ್ನೆ....

No comments:

Post a Comment