Thursday 3 September 2015

ಅತಿಕ್ರಮಣ ಒಂದು ಸಾಮಾಜಿಕ ಪಿಡುಗು. ಪಕ್ಕದ ಸೈಟಿನ ಮಾಲಕರು ಪರ ಊರಲ್ಲಿದ್ದರೆ, ಒಂದೆರಡು ಅಡಿ ಒಳಗೆ ಹಾಕಿ ಕಂಪೌಂಡ್ ಕಟ್ಟಿ ಕೊಳ್ಳುವುದು ಸಾಮಾನ್ಯ. ಇನ್ನು ದೊಡ್ಡವರು(?) ಎಕರೆಗಟ್ಟಲೆ ಸರಕಾರಿ ಜಮೀನು ಒಳ ಹಾಕುವುದು ಬೇರೆ ವಿಷಯ....
ಹಾಗೇ ಇಲ್ಲೊಂದು ವಿನೂತನ ಅತಿಕ್ರಮಣ ನೋಡಿ. ಇದು ನಮ್ಮ ಕಾಲನಿಯಲ್ಲೇ ಒಬ್ಬರು ಮಾಡಿದ ಕೆಲಸ. ಕಾಪೌಂಡ್ ಹೊರಗೆ ಕಾರು ನಿಲ್ಲಿಸುವುದು ಎಲ್ಲರೂ ಮಾಡುತ್ತಾರೆ. ಆದರೆ ಅಲ್ಲೊಂದು ಶೆಡ್ ಸಹ ಕಟ್ಟಿದರೆ? ಈ ಫೋಟೋ ನೋಡಿ. ಹೊರಗೆ ರಸ್ತೆಯಲ್ಲಿ ಗಾಡಿ ನಿಲ್ಲಿಸಲು ಒಂದು ಶೆಡ್. ಬಹಳ ಜಾಣ ಅತಿಕ್ರಮಣ. ಕಾಂಪೌಡ್ ಗೋಡೆಗೆ ಎರಡು ಕಬ್ಬಿಣದ L shape angles ಫಿಕ್ಸ್ ಮಾಡಿ ಮೇಲೆ ಗಾಡಿಗೆ ನೆರಳು ಸಿಗುವಷ್ಟು ಶೀಟ್ಸ್ ಹಾಕಿದ್ದಾರೆ. ರಸ್ತೆಯಲ್ಲಿ ಏನೂ ಕಂಬ ಹುಗಿದಿಲ್ಲ.
ಆದ್ದರಿಂದ, ಯಾರಾದರೂ ತಕರಾರು ಮಾಡಿದರೆ ಜಬರಿಸಲೂ ಬಹುದು....!!!!
ನೀವ್ಯಾರಾದರೂ, ಗಾಡಿಯನ್ನು ಮಳೆ ಬಿಸಿಲಿನಿಂದ ರಕ್ಷಿಸಿಡಲು ಜಾಗ ಇಲ್ಲದಿದ್ದರೆ, ಈ ಪ್ರಯೋಗ ಮಾಡುವ ಧೈರ್ಯ ಮಾಡುತ್ತೀರಾ ನೋಡಿ....😄 😄 😄 (ಫೋಟೋ ನಾನೇ ತೆಗೆದದ್ದು....ಹೆದರಿ, ಹೆದರಿ...)

No comments:

Post a Comment