Saturday 9 May 2015

ಒಂದು ಉತ್ತಮ ಬರಹ ಅನಿಸಿತು. ಕನ್ನಡ ಭೂಮಿ ಗುಂಪಿನಲ್ಲಿ ಶ್ರೀಮತಿ ಪ್ರಮೀಳಾ ಮಂಜುನಾಥ್ ಅವರು ಪೋಷ್ಟ್ ಮಾಡಿದ್ದು. ತಾಳ್ಮೆಯಿಂದ ಓದಿ....ನಿಜವಾಗಿ ಚೆನ್ನಾಗಿದೆ.
________________________________________________________
ಒಂದು ಹಣತೆ : ಒಂದು ಸಣ್ಣ ಕಥೆ!
ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.
ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.
ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು
ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು
ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿರುತ್ತಿತ್ತು
.
” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನ್ನಿಧ್ಯವಿಲ್ಲ ”
ಆ ಭರವಸೆಯ ಬೆಳಕು ನಿಮ್ಮದಾಗಲಿ ಯುದ್ಧ ಭಾರತದಲ್ಲಿ...
ದ್ರೋಣಾಚಾರ್ಯರು ಯುದ್ಧದಲ್ಲಿ ಮಡಿದ ಮೇಲೆ
"ಸೇನಾಪತಿಯ ಪಟ್ಟ"
ಕರ್ಣನ ಹೆಗಲೇರುತ್ತದೆ....
ಕರ್ಣ.....
ತಾತ ಭೀಷ್ಮನ ಆಶೀರ್ವಾದ ಪಡೆಯಲು ರಣರಂಗಕ್ಕೆ
ಬರುತ್ತಾನೆ...
ಭೀಷ್ಮ ಶರಶಯ್ಯೆಯಲ್ಲಿ ಮಲಗಿರುತ್ತಾನೆ....
ಆತನ ಪಾದಗಳಿಗೆ ಭಕ್ತಿಯಿಂದ ನಮಿಸುತ್ತಾನೆ....
"ತಾತಾ ನನ್ನನ್ನು ಆಶೀರ್ವದಿಸಿ....."....
ಚುಚ್ಚುವ ಬಾಣಗಳ ಮೇಲೆ ಮಲಗಿದ್ದ ಭೀಷ್ಮನಿಗೆ ...
ಕರ್ಣನ ಕಂಡು ಮತ್ತಷ್ಟು ನೋವಾಗುತ್ತದೆ...
ಮನಸ್ಸು ಘಾಸಿಯಾಗುತ್ತದೆ...
"ಕರ್ಣಾ...
ಕೊಡಲಿಕ್ಕೆ ನನ್ನ ಬಳಿ ಏನೂ ಇಲ್ಲ...
ನಿನಗೆ ಆಶೀರ್ವಾದ ಮಾಡಲಿಕ್ಕೆ ನನ್ನ ಬಳಿ ಶಬ್ಧಗಳಿಲ್ಲ...."
"ತಾತ
ನನಗೆ ಗೊತ್ತು...
ನಾನು ಹೀನ
ಕುಲದವನೆಂದು ಬದುಕಿನುದ್ದಕ್ಕೂ ಪೆಟ್ಟು ತಿಂದಿದ್ದೇನೆ...
ನೋವು ಉಂಡಿದ್ದೇನೆ...
ನನ್ನ ಹುಟ್ಟು..
ನನ್ನ ಕುಲ..
ಜಾತಿ ನನಗೆ ಶಾಪವಾಗಿದೆ....
ಬಂಧು..
ಬಾಂಧವರು ಎಲ್ಲರೂ ನನ್ನನ್ನು ಜರೆದಿದ್ದಾರೆ..
ತೆಗಳಿದ್ದಾರೆ.. ಹೀಯಾಳಿಸಿದ್ದಾರೆ....
ಪ್ರತಿ ಕ್ಷಣ ಕ್ಷಣವೂ ನನ್ನನ್ನು ತುಳಿದಿದ್ದಾರೆ...."
ಚುಚ್ಚಿದ
ಬಾಣಗಳ ನೋವಿನಲ್ಲೂ ಭೀಷ್ಮ ನಗುತ್ತಾನೆ...
"ಕರ್ಣಾ..
ನಿನ್ನನ್ನು ಕೀಳು ಜಾತಿಯವ ಎಂದು ಜರೆದವರು ಯಾರು ?...."
"ಇನ್ಯಾರು... ?
ಎಲ್ಲರೂ...
ಪಾಂಡವರು..
ಗುರು ದ್ರೋಣರು.... ಒಬ್ಬರೂ ಬಿಡಲಿಲ್ಲ...."ಸೂತ ಪುತ್ರ"
ಎಂದು ತುಳಿದಿದ್ದಾರೆ ...
ನನ್ನ ಜಾತಿಯಿಂದಾಗಿ ...
ನನಗೆ ಕಲಿಸಿದ ಗುರುವೂ ನನ್ನನ್ನು ಶಪಿಸಿದರು...."
"ಕರ್ಣಾ...
ನಿಜಕ್ಕೂ ನೀನೊಬ್ಬ ಹುಚ್ಚ...
ಪಾಂಡವರು
ನಿನ್ನ ಬಿಲ್ಲು ವಿದ್ಯೆಯ ಪ್ರತಿಭೆಯನ್ನು ನೋಡಿ ...
ನಿನ್ನ ಜಾತಿಯನ್ನು ಹುಡುಕಿ ತೆಗೆದು ಜರೆದಿದ್ದಾರೆ....
ಗುರು ದ್ರೋಣರಿಗೆ
ಅರ್ಜುನನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಬೇಕಿತ್ತು...
ಹಾಗಾಗಿ ಅವರು ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿಲ್ಲ...
ಅಲ್ಲಿ ನಿನ್ನ ಜಾತಿಯನ್ನು ನೆಪವನ್ನಾಗಿಟ್ಟುಕೊಂಡರು...
ಕರ್ಣಾ...
ಅವರೆಲ್ಲ ಜರೆದದ್ದು ನಿನ್ನ ಜಾತಿಯನ್ನಲ್ಲ....
ನಿನ್ನ ಪ್ರತಿಭೆಯನ್ನು...!
ಅವರೆಲ್ಲರಿಗೂ ನಿನ್ನ ಸಾಮರ್ಥ್ಯವನ್ನು ತುಳಿಯಬೇಕಾಗಿತ್ತು....!
ನೀನೊಬ್ಬ ಹುಚ್ಚಾ ಕರ್ಣಾ...."
"ತಾತಾ...
ನಿಮ್ಮ ಮಾತನ್ನು ನಾನು ಹೇಗೆ ಒಪ್ಪಲಿ ?
ಕ್ಷಣ ಕ್ಷಣಕ್ಕೂ ನನ್ನ ಜಾತಿ..
ಕುಲದ ಹೆಸರಿನಲ್ಲಿ ತುಳಿಸಿಕೊಂಡವನು ನಾನು...
ಆ ನೋವು ನನಗೆ ಗೊತ್ತು....
ನಾನು ಸೂತ ಪುತ್ರನಾಗಿರದಿದ್ದರೆ
ನಾನು ಈ ಮಾತುಗಳನ್ನು ಕೇಳುವ ಅವಶ್ಯಕತೆ ಇಲ್ಲವಾಗಿತ್ತು...
ನನ್ನ ಕುಲ ನನ್ನನ್ನು ತುಳಿದಿದೆ ತಾತಾ..."
ಭೀಷ್ಮ ಆ ನೋವಿನಲ್ಲೂ ಮತ್ತೆ ನಕ್ಕ....
" ಹುಚ್ಚಪ್ಪಾ..
ವೇದವ್ಯಾಸರು ನಿನ್ನದೇ ಜಾತಿಯಲ್ಲವೆ ?
ಋಷಿ ವಾಲ್ಮೀಕಿ... ಕೀಳು ಜಾತಿಯರಲ್ಲವೆ ?
ಅಷ್ಟೇಕೆ ?
ಜಗತ್ತೇ ಪೂಜಿಸುತ್ತಿರುವ ಶ್ರೀಕೃಷ್ಣ ಯಾವ ಜಾತಿಯವನು ?...
ಕರ್ಣಾ..
ನಿನಗೊಂದು ಮಾತು ಹೇಳುತ್ತೇನೆ ಕೇಳು...
ಈ ಜಗತ್ತಿನ ಪ್ರತಿಯೊಂದೂ ಪ್ರತಿಭೆಗೂ ಕಷ್ಟಗಳಿವೆ..
ಪ್ರತಿಯೊಂದೂ
ಪ್ರತಿಭೆಯ ಸುತ್ತಲೂ...
ಅದನ್ನು ತುಳಿಯಲು ಕಾದಿರುವ
ದ್ವೇಷ...
ಅಸೂಯೆ.. ಈರ್ಷ್ಯೆ.. ಹೊಟ್ಟೆಕಿಚ್ಚು ಸಮಯ ಕಾಯುತ್ತಿರುತ್ತವೆ...
ಅವುಗಳು ಪ್ರತಿಭೆಯನ್ನು ತುಳಿಯಲು ನೆಪಗಳನ್ನು ಹುಡುಕುತ್ತವೆ...
ಕೃಷ್ಣನ ಬದುಕನ್ನು ನೋಡು...
ಅವನ ಹುಟ್ಟು...
ಬಾಲ್ಯ.. ಯೌವ್ವನದ ಪ್ರತಿ
ಕ್ಷಣದಲ್ಲೂ ಅವನನ್ನು ತುಳಿಯಲು ಹೊಟ್ಟೆಕಿಚ್ಚುಗಳಿರಲಿಲ್ಲವೆ ?
ಪ್ರತಿಭೆಯ ಜೊತೆಗೆ ವಿವೇಕವಿರಬೇಕು...
ಹಠದ ಜೊತೆ ತಪ್ಪು ದಾರಿ ತುಳಿಯದ
ಸತ್ಯ ನಡತೆಯಿರಬೇಕು...
ಶ್ರೀಕೃಷ್ಣ..
ತನ್ನ ಕುಲವನ್ನೇ ಶ್ರೇಷ್ಠ ಕುಲನ್ನಾಗಿ ಮಾಡಲಿಲ್ಲವೆ ?"
ಕರ್ಣ ತಲೆ ತಗ್ಗಿಸಿ ನಿಂತಿದ್ದ...
"ಕರ್ಣಾ...
ನೀನು
ನಿನ್ನನ್ನು "ಸೂತ ಪುತ್ರ" ಎಂದು ಜರೆದ ಜನರನ್ನಷ್ಟೇ ನೋಡಿದೆ..
ಅವರಾಡಿದ ಮಾತಿನ ಮರ್ಮದ ಹಿಂದಿನ ಅರ್ಥವನ್ನು ಹುಡುಕುವ ಪ್ರಯತ್ನ
ಮಾಡಲಿಲ್ಲ...
ನಿನ್ನ ಬದುಕಿನಲ್ಲಿ
ನಿನಗಾದ ಅನ್ಯಾಯವನ್ನು ಸರಿ ಪಡಿಸಲು ನೀನು ಮಾಡಿದ್ದೇನು ?
ದುಷ್ಟ..
ದುರುಳ ಕೌರವನ ಸ್ನೇಹ ಮಾಡಿದೆ...
ಅವನ ಕೆಟ್ಟ ಕೆಲಸಗಳಲ್ಲಿ ಭಾಗಿಯಾದೆ...
ನಿನಗೆ
ಪ್ರತಿ ಕ್ಷಣದಲ್ಲೂ ನಿನಗೆ ಸಹಾಯ ಮಾಡಲು..
ಮಾರ್ಗದರ್ಶನ ಮಾಡಲು ನಿನ್ನ ತಂದೆ ಸೂರ್ಯದೇವನಿದ್ದ...
ಜಗತ್ತಿಗೆ ಬೆಳಕು ಕೊಡುವ ಸೂರ್ಯನ ಮಾರ್ಗದರ್ಶನ
ನೀನು ಪಡೆಯಬಹುದಾಗಿತ್ತು...
ಕರ್ಣಾ..
ವಾಲ್ಮೀಕಿಯಂತೆ...
ವ್ಯಾಸರಂತೆ..
ಶ್ರೀಕೃಷ್ಣನಂತೆ ....
ನೀನು ನಿನ್ನ ಕುಲದ ಶ್ರೇಷ್ಠನಾಗಿ...ಹೆಮ್ಮೆಪಡಬಹುದಾಗಿತ್ತು...
ನಿನ್ನ ಪ್ರತಿಭೆಯನ್ನು...
ನಿನ್ನ ಬದುಕನ್ನು ನೀನೇ ಕೈಯ್ಯಾರೆ ಹಾಳುಮಾಡಿಕೊಂಡೆ...
ನಿನ್ನ ಇಂದಿನ ದುರಂತಕ್ಕೆ ಜಾತಿಯನ್ನು ಹಳಿಯಬೇಡ...
ನಿನ್ನ ನಿರ್ಧಾರಗಳನ್ನು ಹಳಿದುಕೊ....
ಜಗತ್ತಿನ
ಯಾವ ಪ್ರತಿಭೆಯೂ ಸುಲಭದಲ್ಲಿ ಪ್ರಖರವಾಗುವದಿಲ್ಲ...
ಪ್ರತಿಭೆಗಳು ಕಷ್ಟ ಪಡಲೇಬೇಕು....
ಬೆಂಕಿಯಲ್ಲಿ ಬೆಂದರೆ ಮಾತ್ರ ಬಂಗಾರವಾಗಲು ಸಾಧ್ಯ...."
:::::::::::::::::::::::::::::
ಪ್ರತಿಭೆ ಇದ್ದರೆ ಸಾಲದು....
ಅದರ ಜೊತೆಗೆ ವಿವೇಕವಿರಬೇಕು...
ಹಠವಿರಬೇಕು... ಸಾಧನೆ ಇರಬೇಕು....
ಸತ್ಯ ನಡತೆಯಿರಬೇಕು....
ಅಂಥಹ ಪ್ರತಿಭೆಗಳು ಮಾತ್ರ ಪ್ರಜ್ವಲಿಸುತ್ತವೆ.

09.05.15

No comments:

Post a Comment