Sunday 10 April 2016

ನನ್ನಮ್ಮ......
============
ಅಮ್ಮ ನಿನ್ನ
ನಳಿಲ್ದೋಳುಗಳ
ಉಯ್ಯಾಲೆ ಇನ್ನೂ ನೆನಪಿದೆ.
ನೀನು ಲೊಚಗುಟ್ಟಿ
ಕೊಡುತ್ತಿದ್ದ ಮುತ್ತುಗಳ
ಸವಿ ಇನ್ನೂ ಸಿಹಿಯಾಗಿದೆ.
ನೀನಿಡುತ್ತಿದ್ದ ಕಚಗಳಿ
ನನ್ನಲ್ಲಿ ಮೂಡಿಸುತ್ತಿದ್ದ
ಕಿಲ ಕಿಲ ನಗು ಇನ್ನೂ ಹಸಿರಾಗಿದೆ
ನಿನ್ನಮೃತವ ಕಣ್ಣರೆ ಮುಚ್ಚಿ
ಹೀರಿ ಸವಿದ ಆನಂದ
ಇನ್ನೂ ನಾ ಮರೆಯಲಾರೆ
ನಿನ್ನ ಕೈತುತ್ತಿನ ಸವಿ ರುಚಿಯ
ನನ್ನೀ ನಾಲಗೆ
ಇನ್ನೂ ಮೆಲುಕಾಡುತ್ತಿದೆ
ನಿನ್ನ ತೋಳ ತಲೆದಿಂಬು,
ನನ್ನ ಬಳಸಿ ತಡವಿ ಬರಿಸಿದ
ನಿದ್ರೆಯಲ್ಲಿ ಅದೆಷ್ಟು ಸುಖವಿತ್ತು.
ನಿನ್ನ ಇನಿದನಿಯ ಜೋಗುಳ
ಆಡಿ, ಆಡಿ ದಣಿದ ನನಗೆ
ಸುಖದ ಸಂಜೀವಿನಿಯಾಗಿತ್ತು
ಅಮ್ಮಾ ನೀ ಬಾಳು ನೂರ್ಕಾಲ,
ನಿನ್ನ ಹರಕೆ ಸ್ಥಿರವಾಗಿರಲಿ
ಎಂದೆಂದಿಗೂ ನನ್ನ ಮೇಲೆ
ಎಂದೆಂದಿಗೂ ನನ್ನ ಮೇಲೆ..... smile emoticon
************************************
(87 ರ ಹರೆಯದ, ಇನ್ನೂ ನಮ್ಮೆಲ್ಲರ
ಸ್ಪೂರ್ತಿಯ ಚಿಲುಮೆ ಯಾಗಿರುವ ನಮ್ಮಮ್ಮ.... smile emoticon )
Like
Comment

No comments:

Post a Comment