Sunday, 10 April 2016

ಒಂದು ವರ್ಷದ ಹಿಂದೆ ಬರೆದ (ಕವಿತೆ ಎನ್ನ ಬಹುದಾದರೆ) ಒಂದು ಕವಿತೆಯ
ಸಾಲುಗಳು.......ಈಗಲೂ ಕೋಗಿಲೆ ಹಾಗೇನೇ ಕೂಗುತ್ತಿದೆ.....
ಅನಂತದಿಂದ ನಿರಂತರ ಬರುವ, ಕೆಲವೊಮ್ಮೆ ಏಕತಾನದ, ಕೆಲವೊಮ್ಮೆ
ಏರಿಳಿತದ, ಕೆಲವೊಮ್ಮೆ ಮಧುರವೆನಿಸುವ, ಮತ್ತೊಮ್ಮೆ ವಿರಹದ ದುಃಖವೆನಿಸುವ, ಮಗುದೊಮ್ಮೆ ಸಂತೋಷದ ಕೇಕೆ ಎನಿಸುವ ದನಿ smile emoticon...................ಮತ್ತೊಮ್ಮೆ
ನಿಮ್ಮಲ್ಲಿ ಹಂಚಿಕೊಳ್ಳುವ ಅನಿಸಿತು.....smile emoticon ಅದಕ್ಕೇ ಈ copy & paste.
==============================================
ಎಲ್ಲಿರುವೇ...ನೀ ಕೋಗಿಲೆ
**********************
ಎಲ್ಲಿಂದಲೋ
ಮಾಮರದೆಡೆಯಿಂದ
ಕಾಣದ ಕೋಗಿಲೆಯ
ಇಂಚರ ಕೇಳಿಸುತ್ತಿದೆ
ಅದೇನು ಹಾಡೋ
ವಿರಹದ ಕರೆಯೋ
ತಿಳಿಯದು.
ನನಗಂತೂ ಆ
ದನಿ ವಿರಹದ
ವೇದನೆಯ ನೋವಿನ
ಕರೆಯಂತೆ ಕೇಳುತ್ತಿದೆ.
ಆದರೆ ಕವಿಗಳು
ಕೋಗಿಲೆ ಹಾಡುತ್ತದೆ
ಎಂದು ಬರೆಯುತ್ತಾರೆ,
ಗಾಯಕರು "ಕೋಗಿಲೆ
ಹಾಡುತಿದೆ" ಎಂದು
ತಾವೇ ಹಾಡುತ್ತಾರೆ....
ಏನು ನಿನ್ನ ಸಮಸ್ಯೆ
ಎಂದು ಕೇಳೋಣವೆಂದರೆ,
ಅದು ಕಣ್ಣಿಗೇ ಕಾಣುತ್ತಿಲ್ಲವೇ,
ತನ್ನ ಕುರೂಪ ಮುಚ್ಚಿಡಲೋ ಏನೋ
ಅದೆಲ್ಲೋ ಅಡಗಿ ಕುಳಿತಿದೆ
ಬರೇ ದನಿ ಕೇಳಿಸುತ್ತಿದೆ
ಶೂನ್ಯವೆನಿಸುವ
ಕಾಣದ ಅನಂತದಿಂದ.....
ಕಾಣದ ಅನಂತದಿಂದ.....
08.04.2015