Sunday 10 April 2016

ಹಸಿ ಮಾಂಸ.
=============
ಹಸಿ ಮಾಂಸದ ಬಯಕೆಯಿಂದ
ಹಾರಾಡುತ್ತಿವೆ ರಣಹದ್ದುಗಳು
ಕೆಂಪು ದೀಪದ ಸುತ್ತ,
ಬಲಿಗಾಗಿ ಕಾದಿವೆ
ಅರಳದ ಪುಷ್ಪಗಳು
ಕೆಂಪು ಮಂದ ಬೆಳಕಿನಲಿ
ಕೃತಕ ವೈಯಾರ ತೋರುತ.
ಅರಳುವ ಮೊದಲೇ
ಹೊಸಗಿ ಹೋದ ಮೊಗ್ಗುಗಳು,
ಕಾರಿರುಳಿನ ಬಲಿ ಪಶುಗಳು.
ಕಣ್ಣುಗಳ ಮೂಲೆಯಲೆಲ್ಲೋ ಇವೆ
ಎಂದೂ ನನಸಾಗದ ಕನಸುಗಳು,
ಹಗಲೂ ಒಂದೇ ಇರುಳೂ ಒಂದೇ
ಮೃಗಗಳ ತೃಷೆ ತೀರಿಸುವ ಯಂತ್ರಗಳು.
ಹುಟ್ಟುವ ಮುನ್ನವೇ ನಶಿಸಿದ ಬಾಳು,
ಎಂದೂ ಹೊಸತು ಬಾರದ ಪಾಡು,
ಎಂದಿನದೋ ಕೊನೆ,
ಈಗಲೇ ಆಗಿದೆ ಎಲ್ಲೆಡೆ ಕೊನೆ.
ಬಂಧುಗಳೂ ಇಲ್ಲ, ಬಳಗವೂ ಇಲ್ಲ,
ಉಗಿದುಗಿದು ಹಲ್ಲು ಗಿಂಜುವ
ಮಾಮಾಗಳದೇ ರಾಜ್ಯವಿಲ್ಲಿ,
ಎಂದೂ ಕೊನೆಯಿಲ್ಲ ಈ ಬವಣೆಗಿಲ್ಲಿ.
++++++++++++++++++++++

No comments:

Post a Comment