Sunday 28 September 2014

ಹತ್ತಿರವಿದ್ದೂ ದೂರ.

ನಾನು ನಿನ್ನಲ್ಲಿ
ನೀನು ನನ್ನಲ್ಲಿ
ಒಂದಾಗಲೆಂದು
ಬಯಸಿದೆ, ಆದರೆ
ತಂತಿ ಮೀಟಲಿಲ್ಲ
ಹೃದಯ ಮಿಡಿಯಲಿಲ್ಲ.
ಮನದ ತರಂಗಗಳು
ಮನವ ತಲುಪಲಿಲ್ಲ,
ಬೇಕು ಬೇಡಗಳು
ಹೊಂದಲೇ ಇಲ್ಲ
ಕತ್ತಲೆಯ ಮೌನದಲ್ಲಿ
ಯೌವನದ ಕಾವಿನಲ್ಲಿ
ದೇಹಗಳಷ್ಟೇ ಬೆಸದವು
ಮನಗಳೆಂದೂ ಬೆಸೆಯಲಿಲ್ಲ.
ಈಗ ನೀರಸ ಮೌನ
ಒಂದೇ ಸೂರಿನಡಿಯಲ್ಲಿ
ಮೌನದ ರಣರಂಗ.
ಆದರೂ, ಬ್ರಹ್ಮನೋ,
ಅಪ್ಪ ಅಮ್ಮನೋ,
ಅಥವಾ ಭಟ್ಟರೋ
ಹಾಕಿದ ಕಗ್ಗಂಟು
ಬಿಡಿಸಿಕೊಳ್ಲುವ ಮನವಿಲ್ಲ.
ಕಾಯುತಿದೆ ಕಾಲ
ನಿಂತ ನೀರೆಂದು
ಹರಿಯುವುದೋ ಎಂದು,
ಬದುಕಬೇಕೆಂಬ ಆಸೆಗಳು
ನೂರು, ಆದರೆ ಯಾರು
ಯಾರಿಗಾಗಿ ಯಾಕಾಗಿ?
ತೊಳಲಾಟವೊಂದೇ ಇಂದು.
28.09.2014

No comments:

Post a Comment