Sunday 7 February 2016

ಚೆಂದದ ಅಮಲು
===========
ಚೆಂದದ ಅಮಲೇರಿತ್ತು,
ಮರೆತಿದ್ದ ಮುಂದಿನ ಮುಪ್ಪು
ಹಿಂದಿನಿಂದ ಅಣಕಿಸುತ್ತಿತ್ತು,
ಒಣಗಿದ ಸುಕ್ಕುಗಳು ಮರೆಯಲ್ಲಿದ್ದವು
ಕಾಲನ ಕರೆಗೆ ಕಾಯುತ್ತ....
ಈಗಿನ ಅಂದದ ಮುಖ
ಮಸುಕಾಗಲಿತ್ತು, ಆದರೆ
ಈಗಿನ ಚೆಂದದ ಮದ
ಎಲ್ಲವನ್ನೂ ಮರೆ ಮಾಡಿತ್ತು,
ಎಲ್ಲರನ್ನೂ ಮರೆಸಿತ್ತು.
ಕವಿ ಬಣ್ಣಿಸುವ ಈಗಿನ
ಹೂ ನಗೆ ಅಹಂಕಾರದ
ಪ್ರತೀಕವಾಗಿತ್ತು,
ಹಿರಿಯರ ಕಣ್ಣೀರಿಗೆ
ಕಾರಣವಾಗಿತ್ತು
ಕಾಲ, ಕಾಲವನ್ನು
ಕಾದು ಜೀವವನ್ನು
ಹಣ್ಣು ಮಾಡಿತು,
ಚೆಂದದ ಮದ ಇಳಿಸಿತು,
ಕಣ್ಣುಗಳಲ್ಲಿ ಪಶ್ಚಾತ್ತಾಪದ
ಹನಿಗಳನ್ನುರಿಳಿಸಿತು.
*********************

No comments:

Post a Comment