Sunday, 7 February 2016

ಚೆಂದಾ....ಚೆಂದ...smile emoticon
++++++++++++
ಮುತ್ತುಗಳನ್ನು ಪೋಣಿಸಿ
ಮಾಲೆಯಾಗಿ ಧರಿಸಿದರೆ ಚೆಂದ,
ಸವಿಗನಸುಗಳನ್ನು ಎಚ್ಚರದಲಿ
ಮೆಲುಕಿ ಮುಗುಳ್ನಕ್ಕರೆ ಚೆಂದ,
ಕಹಿ ಸ್ವಪ್ನಗಳನು ಮರೆತು
ಮರೆಗುಳಿಯಾದರೇನೇ ಚೆಂದ,
ನಗುವಿರುವ ನಿಮ್ಮದೇ ಮುಖ
ನಿಮಗೇ ಒಂದು ಚೆಂದ,
ಹಸು ಮಗುವಿನ ಗಲ್ಲ ಸವರಿದಾಗ
ಆ ಬೊಚ್ಚು ಬಾಯ ನಗುವಿನ್ನೂ ಚೆಂದ,
ನಲ್ಲೆ ನಗುತ್ತ ಊಟ ಬಡಿಸಿದರೆ
ಆ ಸವಿಯದಿನ್ನೊಂದು ಚೆಂದ,
ದುಃಖಿಯ ಮಖದಲ್ಲಿ
ನಗು ತರಿಸಿ, ಅದಿನ್ನೂ ಚೆಂದ,
ಬಳುಕು ಸಾಗುವ ನೀರೆಗೊಂದು
ಮೆಚ್ಚುಗೆಯ ಕಳ್ಳ ನೋಟವೂ ಚೆಂದ
ತಾಯಿಯ ಹಿಂದೆ ಬಾಲ ನಿಮಿರಿಸಿ
ಕುಣಿವ ಹಸುಕರುವಿನ ಕುಣಿತ ಚೆಂದ
ಹೀಗಿದ್ದರೆ ನಮ್ಮ ಕಣ್ಣುಗಳೇ ಚೆಂದ
ಈ ನಮ್ಮ ನಶ್ವರ ಜೀವನ ಬಲು ಚೆಂದ.
******************