Thursday 22 January 2015

ಕಾಗೆ ಪ್ರಸಾದ
ಕಾವಿಯುಟ್ಟು
ಸ್ವಾಮಿಯಾದೆನೆಂದು
ಕಾಡಿಗೆ ನಡೆದ.
ಕಂದ ಮೂಲ ತಿಂದ
ಮರದ ಕೆಳಗೆ ಕೂತು
ಕಣ್ಣು ಮುಚ್ಚಿ
ಧ್ಯಾನ ಮಾಡಿದ
ತಾನೇ ವಿಶ್ವಾಮಿತ್ರ
ಮೇನಕೆ ಬರುವಳೆಂದು
ಕಾದೇ ಕಾದ,
ಮೇನಕೆ ಬರಲಿಲ್ಲ
ಆದರೆ ಕಾಗೆ ಬಂತು
ಮರದ ಮೇಲೆ ಕೂತು
ತಲೆ ಮೇಲೆ ಹಾಕಿತು
ಪ್ರಸಾದ.....
ತಲೆ ಮೇಲೆ ಕೈಯಾಡಿಸಿ
ತಿಕ್ಕಿ, ಛೀ ಥೂ ಎಂದು
ಮಾಡಬಾರದ್ದನ್ನೂ ಮಾಡಿ
ಎದ್ದು ಕಾವಿ, ಕಾಲು
ಎರಡೂ ಝಾಡಿಸಿದ
ಮನೆಯಲ್ಲಿರುವ
ತನ್ನಾಕೆಯೇ ತನ್ನ
ಮೇನಕೆ ಎಂದು ಕೊಂಡು
ತಿರುಗಿ ನೋಡದೆ
ಓಡಿದ, ಹಿಡಿದು
ಊರ ದಾರಿ.....
17.01.2015
Like ·  · 

No comments:

Post a Comment