Sunday 6 July 2014

ಆಸೆ

ಗುಳಿ ಬಿದ್ದ ಕಣ್ಣುಗಳು
ಕೆದರಿದ ಬಿಳಿ ಕೂದಲು
ಸುಕ್ಕು ಕಟ್ಟಿದ ಚರ್ಮ
ಹೊರಳದ ನಾಲಿಗೆ
ತುಸುವೇ ಆಡುತ್ತಿದ್ದ ಉಸಿರು,
90 ದಾಟಿ ಮಲಗಿದ ನಮ್ಮಜ್ಜನ
ತುಟಿಗಳಷ್ಟೇ ಅಲುಗಾಡಿದವು,
ಇನ್ನು ಹೆಚ್ಚು ಸಮಯವಿಲ್ಲ
ಎಂದು ಕೊಂಡೆವು ನಾವು.
ಮೆಲ್ಲ ಕೈ ಸನ್ನೆ ಮಾಡಿ
ಕರೆದರು ಹತ್ತಿರ, ಹೋಗಿ
ಅವರ ತುಟಿಗೆ ಕಿವಿಯಾನಿಸಿದೆ,
ಅವರ ಕೊನೆಯಾಸೆ ಕೇಳಿ ದಂಗಾದೆ
ಆದರೂ ಓಡಿದೆ ಜಡಿ ಮಳೆಯಲ್ಲಿ,
ತಂದು ತಿನಿಸಿದೆ ಅಜ್ಜನಿಗೆ
ಉದ್ದಿನ ವಡಾ ಮತ್ತು ಈರುಳ್ಳಿ ಭಜಿಯನ್ನು,
ಗುಳಿ ಬಿದ್ದ ಕಣ್ಣುಗಳು ಮಿನುಗಿದವು,
ತೃಪ್ತಿ ಕಾಣಿಸಿತು ಮುಖದಲ್ಲಿ,
ಮತ್ತೂ ಒಂದು ವರ್ಷ
ಬದುಕಿದ್ದರು ನಮ್ಮಜ್ಜ.

05.07.2014.

No comments:

Post a Comment