Sunday 19 October 2014

ಕೆಂಗುಲಾಬಿ
ಮುಂಜಾವಿನ ರಂಗೋಲಿ. !
ಹಸಿರಾದ ಗಿಡದೊಳಗೆ
ಶುಭ್ರ ಪರಿಸರದೊಳಗೆ
ಸವಿ ನಾದ, ನಿನ್ನ ಉಲಿ!
ತಂಪಾದ ಸುಳಿಗಾಳಿ
ರೋಮಾಂಚನವ ನೀಡಿ
ಸೊಂಪಾದ ನಿನ ಮೈಗೆ
ಕೆಂಪೆರೆದಿದೆ. !
ಘನತೆ ಇಹ ನಿನ ಕಾಯ
ಪೂರ್ಣತೆಯ ಬಿಂಬಿಸಿದೆ
ಆಗಸದ ಹನಿಮುತ್ತು
ಗಲ್ಲವನು ಚುಂಬಿಸಿದೆ. !
ಹೊಂಬಿಸಿಲ ಹೊಂಗಿರಣ
ಮುಖಕೆ ಕನ್ನಡಿಯಾಗಿ
ಭೂತಾಯಿಯಾಸೆಯಾ
ಉಡಿಯ ತುಂಬಿಸಿದೆ. !
ಮೃದುವಾದ ಪಕಳೆಗಳು
ನಿನ್ನೊಡಲ ಮುಚ್ಚಿಹವು
ಕುಸುಮದೀ ಸೌಮ್ಯತೆಗೆ
ನಯ ರಕ್ಷೆಯಾಗಿ. !
ಪರಿಮಳವು ಪುಲಕಿಸಿದೆ
ಮಾದಕತೆ ಉಕ್ಕುತ್ತಿದೆ
ರಸಿಕಕವಿಯಾ ಕನಸ
ನಿಜಮೂರ್ತಿಯಾಗಿ.
(ಇದು ನಾನು ಬರೆದ ಕವಿತೆ ಅಲ್ಲ. ಯಾರೋ ಅನಾಮಧೇಯ ಕವಿ ಬರೆದ ಕವಿತೆ. ಹೇಗಿದೆ ಎಂದು ನೀವೇ ಹೇಳ ಬೇಕು)
(ಈ  ಕವನ ಇಂಗ್ಲಿಷ್ ಮೀಡಿಯಂ  CBSE   3 ನೇ ತರಗತಿಯ ಕನ್ನಡ  ಟೆಕ್ಸ್ಟ್ ಬುಕ್  ನಲ್ಲಿ ಇದೆ )  

No comments:

Post a Comment