Tuesday, 14 October 2014

ತ್ಯಾಗ.
ಇದ್ದಕ್ಕಿದ್ದಂತೆ ಒಂದು ಯೋಚನೆ ಬಂತು,
ನಿಜವಾದ ತ್ಯಾಗ ಜೀವಿಗಳು ಯಾರು ಅಂತ.
ಜೀವ ಇರುವ ತ್ಯಾಗಿಗಳಾರೂ ನೆನಪಿಗೆ ಬರಲಿಲ್ಲ. ಬೇರೆಯವರಿಗೋಸ್ಕರ ತಮ್ಮ ಜೀವನ ಸವೆಸಿ ಕೊನೆಗೆ ತಾವೇ ನಶಿಸಿ ಹೋಗುವ ಎರಡು ನಿರ್ಜೀವ ವಸ್ತುಗಳು ನೆನಪಿಗೆ ಬಂದವು.
ಒಂದು : ದೀಪದ ಬತ್ತಿ. ಎಂಣೆಯ ಸಹಕಾರದಿಂದ, ತಾನು ಹೊತ್ತಿ ಉರಿದು, ದೇವರಿಗೆ ಸಹ ಬೆಳಕು ಬೀರಿ, ಕಿರಿದು ಕಿರಿದು ಆಗುತ್ತಾ ಹೋಗಿ, ಕೊನೆಗೆ ಅತಿ ಕಿರಿದಾದಾಗ, ಇನ್ನು ಉರಿಯಲಾರದೆ ಕಸಕ್ಕೆ ಸೇರುತ್ತದೆ.
ಎರಡು: ಕಸಬರಿಕೆ. ಪ್ರತೀ ದಿನ ತಾನಿರುವ ಮನೆಯನ್ನು ಗುಡಿಸಿ, ಗುಡಿಸಿ, ಸ್ವಚ್ಛ ಮಾಡುತ್ತಾ ಮಾಡುತ್ತಾ, ತಾನೇ ಸವೆದು ಸವೆದು ಅತಿ ಕಿರಿದಾಗಿ ಕೊನೆಗೊಂದು ದಿನ ತಾನೇ ಕಸದ ಬುಟ್ಟಿ ಸೇರುತ್ತದೆ.
ಇಂಥಹ ತ್ಯಾಗವೇ ನಿಜವಾದ ತ್ಯಾಗ ಅನ್ನಿಸೊಲ್ಲವೇ?.
***********