Friday 24 October 2014

ಅತ್ತೆಗೊಂದು ಕಾಲ - ಸೊಸೆಗೊಂದು ಕಾಲ

ಕಂಪೊಂಡ್ ಗೋಡೆಯ ಆಚೆ ಈಚೆ
ಇಬ್ರು ಅತ್ತೆಯರು ಮಾತನಾಡಿ ಕೊಳ್ಳುತ್ತಿದ್ದರು.
ಸಾರು, ಹುಳಿ, ಪಲ್ಯದ ಬಗ್ಗೆ ವಿಚಾರ ವಿನಿಮಯ
ಆದ ನಂತರ, ಒಬ್ಬಳು ಅತ್ತೆ, "ರಂಗಮ್ಮ, ನನ್ನ ಸೊಸೆ
ಮಹಾ ದುರಹಂಕಾರಿ ಆಗಿದ್ದಾಳೆ, ನೋಡಿ, ನನ್ನನ್ನು
ಏನೂ ಕೇರ್ ಮಾಡುವುದಿಲ್ಲ, ಮಗನಿಗೆ ಮದುವೆ ಮಾಡುವಾಗ ನಾವು ನೋಡಿ ಮಾಡಲಿಲ್ಲ, ತಪ್ಪು ಮಾಡಿದೆವು."
ಆಚೆ ಕಡೆ ಅತ್ತೆ "ನಮ್ಮ ಸೊಸೆ ಕತೇನೂ ಅಷ್ಟೆ. ನಾನು ಏನು ಹೇಳಿದರೂ ಕೇಳೊಲ್ಲ. ನಾವೂ ತಪ್ಪಿದ್ವಿ."
ಇವರಿಬ್ಬರ ಮಾತುಗಳನ್ನು, ಕಿಡಿಕಿಗಳ ಹತ್ತಿರ ರೂಮುಗಳಲ್ಲಿ ಕೂತು ಕೇಳಿಸಿಕೊಳ್ಳುತ್ತಿದ್ದ, ಈ ಅತ್ತೆಯರ ಅತ್ತೆಯಂದಿರು ಏಕ ಕಾಲದಲ್ಲಿ ಗೊಣಗಿಕೊಂಡರು. "ನಾವೂ ಅಷ್ಟೆ. ಸರಿಯಗಿ ವಿಚಾರ ಮಾಡಿ ಸೊಸೆಯನ್ನು ತಂದಿದ್ದಿದ್ದರೆ, ಈಗ ನಮಗೆ ಈ ಗತಿ ಬರುತ್ತಿರಲಿಲ್ಲ"
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. 'ಕಾಲಾಯ ತಸ್ಮೈ ನಮಹ'
***********
22.10.2014

No comments:

Post a Comment