Sunday 5 October 2014

ಸ್ವಚ್ಛ ಭಾರತ - ಒಂದು ಅನಿಸಿಕೆ 

ಈ ಶುಚಿತ್ವವನ್ನು ಪ್ರತಿಯೊಬ್ಬ ಮನುಷ್ಯನೂ ಸ್ವತಹ ಮಾಡಿಕೊಳ್ಳಬೇಕು.
ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳುವುದರ ಜತೆಗೆ
ನಾವಿರುವ ಪರಿಸರವನ್ನು ಸಹ ಸ್ವಚ್ಚವಾಗಿರಿಸಿಕೊಳ್ಳುವುದೂ ಅತೀ ಅಗತ್ಯ.
ಅದಕ್ಕೇನೇ, ಈ ಸ್ವಚ್ಛ ಭಾರತ ಆಂದೋಲನದ ಶುರು. ಇದು ಬರೆ ಒಂದು ದಿನದ
ಆಂದೋಲನವಾಗದೆ, ಜನ ಜಾಗೃತಿಯಾಗ ಬೇಕು. ಇದ್ದ ಕಸವನ್ನು ತೆಗೆದು ಸ್ವಚ್ಛ ಮಾಡುವುದಷ್ಟೇ ಮುಖ್ಯವಲ್ಲ. ಕಸವನ್ನು ಎಲ್ಲಿ ಹಾಕಬೇಕೋ ಅಲ್ಲೇ ಹಾಕುವ ಪ್ರಜ್ಞೆಯನ್ನು ಜನರಲ್ಲಿ ಹುಟ್ಟಿಸುವುದು ಬಹಳ ಮುಖ್ಯ. ಯಾವುದೇ ಸಿಟಿಯಲ್ಲಿ, ಅಕಸ್ಮಾತ್ ಧಾರಾಕಾರವಾಗಿ ಮಳೆ ಸುರಿದಾಗ, ಚರಂಡಿಯಲ್ಲಿ ಹರಿಯ ಬೇಕಾದ ನೀರು, ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಹರಿದು ಮನೆಗಳಿಗೆ ನುಗ್ಗಿ ಅವಾಂತರವಾಗುತ್ತದೆ.
ಜನರು ಇಂತಹ ಸಂಧರ್ಭದಲ್ಲಿ ಬೈಯ್ಯುವುದು. ಸರಕಾರವನ್ನು ಮತ್ತು ಸ್ಥಳೀಯ ಆಡಳಿತವನ್ನು. ಆದರೆ, ಇದಕ್ಕೆ ಜನರೇ ಕಾರಣ. ಎಲ್ಲ ಕಸವನ್ನು ಚರಂಡಿಯಲ್ಲಿ ಹಾಕಿ, ಚರಂಡಿಗಳನ್ನು ಬ್ಲಾಕ್ ಮಾಡಿ ಬಿಟ್ಟಿರುತ್ತಾರೆ. ಇದೊಂದು ಉದಾಹರಣೆ ಅಷ್ಟೇ. ಎಷ್ಟೋ ಮಂದಿ ನೀರು ಹೋಗುವ ದಾರಿಗೆ
ಅಡ್ಡವಾಗಿ ಮನೆ, ಕಾಂಪೌಂಡ್ ಸಹ ಕಟ್ಟಿ ಕೊಳ್ಳುತ್ತಾರೆ.. ನಿಜವಾಗಿ, ಈ ವಿಷಯದಲ್ಲಿ ಜನರಲ್ಲಿ ತಿಳುವಳಿಕೆ ಮೂಡಿಸುವ ಅಭಿಯಾನ ನಡೆಯ ಬೇಕು. ಸ್ಥಳೀಯ ಆಡಳಿತ ತ್ಯಾಜ್ಯ ವಿಲೇವಾರಿ
ಸರಿಯಾಗಿ ನಡೆಯುವಂತೆ ongoing basis ನಲ್ಲಿ ಕ್ರಮ ತೆಗೆದು ಕೊಳ್ಳಬೇಕು.

No comments:

Post a Comment