Sunday, 27 December 2015

ಕಂದಾ, ನೀನಿಲ್ಲಿ
ಅಡಗಿದರೇನು?
ನಿನ್ನ ಹೃದಯದ
ಮೃದು ಮಿಡಿತ ಕೇಳಿ
ನಮ್ಮೆದೆ ತುಡಿಯತಿದೆ,
ಹಿಗ್ಗು ಏರುತಿದೆ.
ಬಲ್ಲೆವು ನಾವು
ನೀ ಕೆಂದುಟಿಗಳ ಬಿರಿದು
ಕಿರು ನಗುವನರಳಿಸಿರುವಿಯೆಂದು,
ಖುಶಿಯೋ ಖುಶಿ ನಮಗೆ
ನಿನ್ನ ಮೃದು ಪಾದಗಳ
ಒದೆಯೇಟುಗಳ ತಿಂದು...
ಒಡಲ ಹಾಸಿಗೆಯಿಂದ
ಬೇಗನೇ ಬಂದು ಬಿಡು
ಈ ತೋಳ ತೆಕ್ಕೆಗಳಿಗೆ,
ನಿನ್ನ ನಳಿಲ್ದೋಳುಗಳು
ಅಪ್ಪಲೀ ನಮ್ಮೀ ಕೊರಳುಗಳ
ಸವರಲೀ ನಮ್ಮೀ ಕೆನ್ನೆಗಳ,
ಇನ್ನು ಕಾಯಿಸ ಬೇಡ,
ಬಂದು ಬಿಡು, ಬಂದು ಬಿಡು,
ಈ ಇಳೆಗಿಳಿದು ಬಿಡು....

No comments:

Post a Comment