Thursday, 31 December 2015

ಅಯೋಮಯ.
*****************
ಕತ್ತಲಾದಲ್ಲಿ ಬೆಳಕು ಮಾಯ
ಬೆಳಕಾದಲ್ಲಿ ಕತ್ತಲು ಮಾಯ
ಜಗವೆಲ್ಲಾ ಬರೇ ಅಯೋಮಯ,
ಬದುಕು ಕತ್ತಲು ಬೆಳಕಿನ
ಬಯಲು ಚದುರಂಗ,
ಯೋಚಿಸಿ ನಡೆಗಳನ್ನು,
ಎಣಿಸಿ ನಡೆಸ ಬೇಕು ಕಾಯಿಗಳನ್ನು
ಅಡ್ಡಕ್ಕೋ ಉದ್ದಕ್ಕೋ
ದಾರಿ ಇರುವುದು ನಿಶ್ಷಿತ,
ಆದರೆ,ಉದ್ದ, ಅಡ್ಡಗಳು ಬೇಕು
ತಿರುವು, ಮುರುವುಗಳೂ ಬೇಕು
ಗುರಿಯ ಮುಟ್ಟಲು ಬೇಕೇ ಬೇಕು....
ಚದುರಂಗದಾಟದ ಗುಟ್ಟು
ಗೊತ್ತಾಗಲೇ ಬೇಕು....

No comments:

Post a Comment