Saturday, 26 December 2015

ವಿಪರ್ಯಾಸದ (ಮೂಢ) ನಂಬಿಕೆ.
ನಿದ್ರೆಯಲ್ಲಿ ದಿನಾ ಬೆಚ್ಚಿ ಬಿದ್ದು " ನನಗೆ
ದೆವ್ವ ಬಂದಂತೆ ಹೆದರಿಕೆಯಾಗುತ್ತದೆ" ಎಂದು
ಅಳುವ ಮಗುವಿಗೆ ತಾಯಿ ಕುತ್ತಿಗೆಗೊಂದು
'ತಾಯಿತ' ಕಟ್ಟಿ, "ಮಗೂ, ಈ ದೇವರ ತಾಯಿತ
ಕಟ್ಟದ್ದೇನೆ, ಈಗ ಯಾವ ದೆವ್ವ, ದುಷ್ಟ ಶಕ್ತಿಗಳೂ
ನಿನ್ನನ್ನು ಹೆದರಿಸುವುದಿಲ್ಲ", ಎಂದು ಹೇಳುತ್ತಾಳೆಯೇ
ಹೊರತು, "ಮಗೂ, ಈ ದೆವ್ವ, ಭೂತ ಎಲ್ಲಾ ಸುಳ್ಳು,
ಮನಸ್ಸಿನ ಭ್ರಮೆ, ನೀನು ಎಚ್ಚರವಿರುವಾಗ ನೋಡಿದ
ಚಿತ್ರ ವಿಚಿತ್ರ TV cartoon ಗಳೇ ಕನಸನಲ್ಲಿ ದೆವ್ವಗಳಂತೆ
ಬಂದು, ನಿನ್ನನ್ನು ಹೆದರಿಸಿದ ಹಾಗೆ ಆಗುತ್ತದೆ. ಅದಕ್ಕೆಲ್ಲ
ಹೆದರುವ ಬಾರದು" ಎಂದು ತಿಳುವಳಿಕೆ ಹೇಳುವ
ಪ್ರಯತ್ನ ಮಾಡುವುದಿಲ್ಲ.
*******ದಾರ್ಶನಿಕ

No comments:

Post a Comment