Sunday, 27 December 2015

ಅಮ್ಮಾ..........
ಅಮ್ಮಾ, ನಿನ್ನ ಮಡಿಲಲ್ಲಿ
ಮತ್ತೊಮ್ಮೆ ಆಡುವಾಸೆ,
ನಿನ್ನ ಮೃದು ತಾಡನವ
ಮತ್ತೊಮ್ಮೆ ಸವಿದೇ
ನಿದ್ರಿಸುವಾಸೆ......
ನಿನ್ನ ಹೂ ಚುಂಬನಕೆ
ನನ್ನ ನೊಸಲು ತವಕಿಸಿದೆ,
ನಿನ್ನ ನೀಳ ತೋಳುಗಳ
ಜೋಕಾಲಿಯಲಿ ಇನ್ನೊಮ್ಮೆ
ಜೀಕಿ ನಲಿಯವ ಆಸೆ......
ಕುಳಿರ್ಗಾಳಿ ಸೋಕದೆ
ನಿನ್ನ ಬೆಚ್ಚನೆಯ ಸೆರಗಿನಡಿ
ಮೈ ಮರೆತು ಮಲಗುವಾಸೆ..
ನಿನ್ನ ಜೋಗುಳದ ಇನಿದನಿ
ಕಿವಿಯ ತವಕದ ಆಸೆ......
ಆಗ, ಭೂ ತಾಯಿ ಕರೆದಳು
ಬಾ ಮಗು, ಏರು ನನ್ನ ತೇರು,
ನಿನ್ನಮ್ಮನೆಡೆಗೊಯ್ಯವೆ ಬಾ ಬೇಗ,
ಬೆಚ್ಚಿ ಬಿದ್ದು ರಥವೇರಿ ಕುಳಿತೆ,
ಕಣ್ಣು ಮುಚ್ಚಿ ಅಮ್ಮನ ಕನಸು ಕಂಡೆ.
ಕಣ್ಣು ತೆರೆದಾಗ ನಾನಿದ್ದೆ
ನನ್ನಮ್ಮನ ಮಡಿಲಲ್ಲಿ,
ಅವಳ ಬೆರಳುಗಳು ಆಡುತ್ತಿದ್ದವು
ನನ್ನ ಅರೆ ನೆರೆತ ಕೇಶದಲ್ಲಿ,
ನನ್ನಾಸೆ ಸಾಕಾರವಾಗಿತ್ತು ಕೊನೆಗೆ,
ನನ್ನ ಕೊನೆಯ ಉಸಿರಿನಲ್ಲಿ...
06.12.2015

No comments:

Post a Comment