Sunday, 27 December 2015

(ಹೀಗೊಂದು ಮಕ್ಕಳ ಕನ್ನಡ ಪದ್ಯ)
*********************************
ಅಮ್ಮ ಕಲಿಸಿದ ಕನ್ನಡ ಬಾಷೆ
ಕನ್ನಡವೆಂದರೆ ನನಗಾಸೆ!
ಮನೆಯಲಿ ಕನ್ನಡ
ಮನದಲಿ ಕನ್ನಡ
ಕನ್ನಡ ನೆಲದಲೆ ಹಾಡುವೆನು
ಕನ್ನಡ ನೆಲದಲೆ ಆಡುವೆನು!
ಅಮ್ಮ ಕಲಿಸಿದ ಕನ್ನಡ ಭಾಷೆ
ಕನ್ನಡವೆಂದರೆ ನನಗಾಸೆ!
ನಾ ಕುಡಿಯುವ ನೀರು ಕಾವೇರಿ
ನಾ ಹಾಡುವ ರಾಗವು ಸಾವೇರಿ!
ಕನ್ನಡವೆಂದರೆ ಹೊನ್ನುಡಿಯು
ಕನ್ನಡವೆಂದರೆ ಮುನ್ನಡೆಯು!
ಅಮ್ಮ ಕಲಿಸಿದ ಕನ್ನಡ ಬಾಷೆ
ಕನ್ನಡವೆಂದರೆ ನನಗಾಸೆ!
ಗೆಳೆಯರೆ ಬನ್ನಿರಿ ನಲಿಯೋಣ
ಕನ್ನಡ ಪಾಠವ ಕಲಿಯೋಣ
ಕನ್ನಡವನ್ನೆ ನುಡಿಯೋಣ
ಕನ್ನಡ ನಾಡನು ಬೆಳಗೋಣ
ಅಮ್ಮ ಕಲಿಸಿದ ಕನ್ನಡ ಬಾಷೆ
ಕನ್ನಡವೆಂದರೆ ನನಗಾಸೆ!
ಕನ್ನಡದಲೆ ನಾ ಬರೆಯುವೆನು
ಕನ್ನಡ ಗೆಳೆಯರ ಪಡೆಯುವೆನು
ಹಗಲು ಇರುಳು ದುಡಿಯುವೆನು
ಮುಗಿಲನು ಮೀರಿ ಬೆಳೆಯುವೆನು
ಅಮ್ಮ ಕಲಿಸಿದ ಕನ್ನಡ ಬಾಷೆ
ಕನ್ನಡವೆಂದರೆ ನನಗಾಸೆ!
*******************************
(ಗೆಳೆಯ, Krishna Prasad, ಅವರು ಪೋಷ್ಟ್ ಮಾಡಿದ, ಸರಳ ಸುಂದರ ಕನ್ನಡದ
ಹಿರಿಮೆ ಸಾರುವ ಪದ್ಯ, ಚಿಕ್ಕ ಮಕ್ಕಳಿಗಾಗಿ....... ತುಂಬಾ ಚೆನ್ನಾಗಿದೆ ಅನ್ನಿಸಿದ್ದರಿಂದ
ಅವರ ಅನುಮತಿ ಇಲ್ಲದೆ ಇಲ್ಲಿ copy & paste ಮಾಡಿದ್ದೇನೆ. Share ಮಾಡಿದರೆ desktop ನಲ್ಲಿ ಓದಲು ಅಷ್ಟು ಕ್ಲಿಯರ್ ಇರುವುದಿಲ್ಲ)

No comments:

Post a Comment