ಅಂತ್ಯ.
**********
ಹಾಳು ಭಾವಿಯಲ್ಲಿ
ನೀರು ಹುಡುಕಿದ,
ಬರಡು ಭೂಮಿಯಲ್ಲಿ
ಹಸಿರು ಹುಡುಕಿದ,
ಕಡು ಕತ್ತಲಲ್ಲಿ
ಬೆಳಕು ಹುಡುಕಿದ,
ಬಿಗುಮಾನದಲ್ಲಿ
ನಗು ಹುಡುಕಿದ,
ದ್ವೇಷದ ಉರಿಯಲ್ಲಿ
ಪ್ರೇಮ ಅರಸಿದ,
ಕನಿಕರವೂ ಇಲ್ಲದಲ್ಲಿ
ಅನುಕಂಪ ಬಯಸಿದ,
ಯಾವುದೂ ಸಿಗಲಿಲ್ಲ
ಹುಡುಕಿ ಬಳಲಿದ,
ಕೊನೆಗೆ ಜೀವನದಲ್ಲಿ
ಅಂತ್ಯ ಹುಡುಕಿದ,
ನಾನಿಲ್ಲಿದ್ದೇನೆ ಎಂದು
ಅದು ಕೂಡಲೇ ಬಂತು.
**********************
No comments:
Post a Comment