Thursday, 31 December 2015

ಒಂದು ಸಲಹೆ...
+++++++++++

ನಾವು ಅಧಿಕಾರಿಗಳ/ಮಾಲಕರ ಸ್ಥಾನದಲ್ಲಿ
ಕುಳಿತವರು, ನಮ್ಮ ಕೈಕೆಳಗಿನ
ನೌಕರರನ್ನು ತೀವ್ರವಾಗಿ ಗದರಿಸಿ
ಶಿಕ್ಷಿಸುವಾಗ, ಅವರು ನಮ್ಮಷ್ಟು
ಬುದ್ಧಿವಂತರಲ್ಲ ಎಂಬುದನ್ನು
ನೆನಪಿಟ್ಟು ಕೊಂಡಿರ ಬೇಕು.
ಅಲ್ಲದೆ, ಅವರಲ್ಲಿ ಅಪ್ರಾಮಾಣಿಕತೆ
ಅಥವಾ ಕಪಟತನ ಇದೆಯೆ ಇಲ್ಲವೇ,
ಅವರು ಮಾಡಿದ ತಪ್ಪು ಅಕಸ್ಮಾತ್ತಾಗಿ
ಅದು ತಪ್ಪು ಎಂದು ಅವರಿಗೆ ತಿಳಿಯದೇ
ಆದುದೇ, ಎಂಬುದನ್ನೂ ಅರಿತಿರ ಬೇಕು.
ಹೀಗಿಲ್ಲದೆ, ಭಾವಾವೇಶಕ್ಕೆ ಒಳಗಾಗಿ
ಕ್ರಮ ತೆಗೆದು ಕೊಂಡರೆ, ಪ್ರಾಮಾಣಿಕ
ನೌಕರರನ್ನು ಕಳೆದು ಕೊಳ್ಳುವ
ಪ್ರಸಂಗ ಬರ ಬಹುದು,
ಅಥವಾ, ನಾವು ಶಿಕ್ಷಿಸುವ ವರೆಗೆ ಪ್ರಾಮಾಣಿಕ
ನಾಗಿದ್ದ ನೌಕರ, ನಾವು ವಿನಾ ಕಾರಣ ಶಿಕ್ಷಿಸಿದಾಗ ಸುಮ್ಮನಿದ್ದು,
ನಂತರ ಅಪ್ರಾಮಾಣಿಕನಾಗಿ, ನಮ್ಮಲ್ಲೇ ಮುಂದುವರಿದು
ನಮ್ಮನ್ನೇ ತೊಂದರೆಯಲ್ಲಿ ಸಿಲುಕಿಸಿ
ಸೇಡು ತೀರಿಸಿ ಕೊಳ್ಳ ಬಹುದು.
*****ದಾರ್ಶನಿಕ.

No comments:

Post a Comment