Sunday, 27 December 2015

ವಾಟ್ಸಾಪಲ್ಲಿ ಬಂದ ಜೋಕ್..
ತಗೊಳ್ಳಿ ನಿಮಗಾಗಿ :-
*****************************
ಅವತ್ತು ಸಾಯಂಕಾಲ ಲೈಟಾಗಿ ಮಳೆ ಬರ್ತಿತ್ತು . ಅಶೋಕ ಹೋಟೆಲ್ ಪಕ್ಕದಲ್ಲಿರೋ ಮನೆ ಹೊರಗಡೆ ಪಾರ್ಕಲ್ಲಿ ಇಬ್ಬರು ಕೂತು ಮಾತಾಡ್ತಾ ಇದ್ರು... ಒಬ್ರು ಪೊಲಿಟಿಶಿನ್ ಸಿ.ಎಂ. ರಾಮಸಿದ್ಧಯ್ಯ ಅಂತ ,ಮತ್ತೊಬ್ರು ಕಾರ್ಮೋಡ ಗಿರೀಶ್ ಅಂತ ಜ್ಞಾನದ ಪೀಠ ಹೊತ್ತ ಸಾಹಿತಿ..!
ಕಾರ್ಮೋಡ : ರೀ ರಾಮಸಿದ್ಧಯ್ಯ...ಏನ್ ನಿಮ್ ಪಾರ್ಟಿ ಹನುಮಂತು ಅವ್ರ ಹೆಂಡತಿ ಲಂಚ ತಗೊಂಡ್ ಸಿಕ್ಕಾಕ್ಕೊಂಡ್ರಂತೆ..! ವಿರೋಧ ಪಕ್ಷದವ್ರು ಗಲಾಟೆ ಮಾಡ್ತಾವ್ರೆ. ಏನ್ ಮಾಸ್ಟರ್ ಪ್ಲ್ಯಾನ್ ಮಾಡಿದಿರಿ..?
ರಾಮಸಿದ್ದಯ್ಯ : ಅದೆಲ್ಲಾ ಇರುತ್ತೆ ಬುಡ್ರಿ ಸಾಹಿತಿಗಳೇ. ಐಡಿಯಾ ಮಾಡಿದೀನಿ. ಹತ್ತನೇ ತಾರೀಕು ಟಿಪ್ಪು ಜಯಂತಿ ಮಾಡ್ತೀನಿ. ಹೆಂಗಿದ್ರೂ ಅವತ್ತೇ ಹಬ್ಬ.. ಪಕ್ಕಾ ಬೆಂಕಿ ಹತ್ಕೊಳುತ್ತೆ. ಹನುಮಂತನ ಕೇಸೂ ಮರ್ತೋಗ್ತಾರೆ ಜನ..!
ಕಾರ್ಮೋಡ : ಆದ್ರೆ ಟಿಪ್ಪು ಹುಟ್ಟಿದ್ದು ಇಪ್ಪತ್ತನೆಯ ತಾರೀಖಲ್ವಾ..? ಅದೆಂಗೆ ಹತ್ತನೇ ತಾರೀಖು ಮಾಡ್ತೀರಿ..?
ರಾಮಸಿದ್ದಯ್ಯ : ಅದುಕ್ಕೆ ತಲೆ ಇಲ್ಲ ಅನ್ನೋದು ನಿಮ್ಗೆ. ಅದುನ್ನೆಲ್ಲಾ ಯಾವನ್ ಕೇಳ್ತಾನೆ..? ನಾನ್ ಮಾಡಿದ್ದೇ ಹಬ್ಬ, ನಾನ್ ಹೇಳಿದ್ ದಿನಾನೇ ಜಯಂತಿ..!
ಕಾರ್ಮೋಡ: ಈ ಸತ್ಕಾರ್ಯದಲ್ಲಿ ನಮ್ಗೂ ಏನಾದ್ರೂ ಕೆಲಸ ಕೊಡಿ.. ಟಿವಿ ಪೇಪರ್ರಲ್ಲಿ ಬಂದು ತುಂಬಾ ದಿನ ಆಗಿದೆ..!
ರಾಮಸಿದ್ದಯ್ಯ : ನೀವೇ ಚೀಫ್ ಗೆಸ್ಟ್.. ಏನಾದ್ರೂ ಬೆಂಕಿ ಹಚ್ಚಿ. ನಿಮಗೆ ಏನು ತಲುಪಬೇಕೊ ಅದು ತಲುಪುತ್ತೆ .. ಇಲ್ಲಾಂದ್ರೆ ಮುಂದಿನ ವರ್ಷ ಯಾವ ಅವಾರ್ಡ್ ಬೇಕು ಅಂತ ಹೇಳಿ ಕೊಟ್ಟುಬಿಡ್ತೀನಿ..!
ಕಾರ್ಮೋಡ : ಅಷ್ಟು ಹೇಳಿದ್ರಲ್ಲಾ... ನೋಡ್ತಾ ಇರಿ ಎಂಥಾ ಬೆಂಕಿ ಹಚ್ತೀನಿ ಅಂತ..! ಹತ್ಕೊಂಡ್ ಉರೀಬೇಕು..!
ರಾಮಸಿದ್ದಯ್ಯ : ನಂಗೊತ್ತು ನಿಮ್ ತಾಕತ್ತು... ಹೋದಸಲ ನಾನು ಹೇಳಿದ ಒಂದೇ ಮಾತಿಗೆ ದನ ತಿಂದೋರಲ್ವಾ ನೀವು..! ಮಜಾ ಮಾಡಿ... ನೀವು ಹೇಳೋ ಮಾತಿಗೆ ಹನುಮಂತು ವಿಷಯ ನೆನಪೇ ಇರಬಾರದು... ಸದ್ಯಕ್ಕೆ ಟಿಪ್ಪು ನಮ್ಮ ಅಸ್ತ್ರ..!
ಇದಾಗಿ ವಾರಕ್ಕೆ ಮತ್ತೆ ಇಬ್ಬರೂ ಅದೇ ಜಾಗದಲ್ಲಿ ಕೂತು ಮಾತಾಡ್ತಾ ಇದ್ರು...
ರಾಮಸಿದ್ದಯ್ಯ : ಏನ್ರೀ ಕಾರ್ಮೋಡ, ಪ್ಲ್ಯಾನ್ ಸಕ್ಸಸ್ ತಾನೇ..! ಲಾ ಅಂಡ್ ಆರ್ಡರ್ ಢಮಾರ್ ಆಗೋಯ್ತು..! ಜನ ಹೊಡ್ಕೊಂಡ್ ಸಾಯ್ತಾ ಇದ್ದಾರೆ..!
ಕಾರ್ಮೋಡ : ಅದೇನೋ ಸರಿ, ಆದ್ರೆ ಇದ್ರಿಂದ ನಿಮಗೇನ್ ಲಾಭ ಆಯ್ತು..? ಅದೇ ಅರ್ಥ ಆಗ್ತಿಲ್ಲ..!
ರಾಮಸಿದ್ದಯ್ಯ : ಅಯ್ಯೋ ನಿಮ್ಮ.. ಏನೋ ದಬಾಕ್ತೀನಿ ಅಂಥ ಪರಮಶಿವಯ್ಯ ಹೋಂ ಮಿನಿಸ್ಟರ್ ಆದ. ಹೆಂಗಿಟ್ಟೆ ಬಾಂಬ್. ಅವನು ಬಂದ ಒಂದೇ ವಾರಕ್ಕೆ ಲಾ ಅಂಡ್ ಆರ್ಡರ್ ಸತ್ತೋಯ್ತು ..! ಅವನು ಯಾವತ್ತಿದ್ರೂ ನಂಗೆ ಮುಳ್ಳೇ .. ಅದುಕ್ಕೆ ಒಂದೇ ಕಲ್ಲಲ್ಲಿ ಸಖತ್ ಹಕ್ಕಿ ಹೊಡೆದೆ.. ಮೇಡಂಗೆ ಲೆಟರ್ ಬರೀತೀನಿ. ಪರಮಶಿವಯ್ಯ ವೇಸ್ಟು ಅಂತ..! ಒಟ್ನಲ್ಲಿ ಟಿಪ್ಪು ಹೆಸರಲ್ಲಿ ಸಖತ್ ಲಾಭ ಗುರುವೇ..!
ಅಷ್ಟರಲ್ಲಿ ಯಾರೋ ಕುದುರೆಯಲ್ಲಿ ಬರ್ತಾ ಇರೋ ತರ ಸೌಂಡ್ ಬಂತು. ತಿರುಗಿ ನೋಡಿದ್ರೆ ಟಿಪ್ಪು ಸುಲ್ತಾನ್..! ಕತ್ತಿ ಎತ್ತಿ ರಾಮಸಿದ್ದಯ್ಯನ ಕತ್ತು ಎಗರಿಸಿ ಬಿಟ್ರು ..! ಕಾರ್ಮೋಡ ಫುಲ್ ಶಾಕ್..!
ಕಾರ್ಮೋಡ : ಯಾಕೆ ಟಿಪ್ಪು ಹಿಂಗ್ ಮಾಢ್ಬಿಟ್ರಿ..? ಅವ್ರ್ ನಿಮ್ಗೋಸ್ಕರ ಎಷ್ಟ್ ಒದ್ದಾಡಿದ್ದಾರೆ ಗೊತ್ತಾ..?
ಟಿಪ್ಪು ಸುಲ್ತಾನ್ : ನಾಚಿಕೆ ಆಗ್ಬೇಕು... ಸತ್ತು ನೆಮ್ಮದಿಯಾಗಿದ್ದೆ ಇಷ್ಟ್ ವರ್ಷ.. ಯಾವತ್ತೂ ಇಲ್ದಿರೋ ಜಯಂತಿ ಮಾಡೋಕೆ ಹೋಗಿ ನನ್ನ ಹೆಸರಿಗೆ ಮಸಿ ಬಳೀತೀರಾ..? ಜನಕ್ಕೆ ನನ್ನ ನೆನಪೂ ಇರ್ಲಿಲ್ಲ...ನಿಮ್ಮ ಸ್ವಾರ್ಥಕ್ಕೆ ನಮ್ಮ ಹೆಸರು ಬಳಸ್ಕೋತೀರಾ..? ಇದೇ ಸರಿ ಈ ರಾಮಸಿದ್ದಯ್ಯಂಗೆ..! ನಾನು ಹೋಗ್ತಾ ಇದೀನಿ ... ಹಿಂದೆ ಕೆಂಪೇಗೌಡ್ರು ಬರ್ತಾ ಇದ್ದಾರೆ. ಮೊದ್ಲು ಜಾಗ ಖಾಲಿ ಮಾಡು. ಇಲ್ಲಾಂದ್ರೆ ನಿನ್ ಕತೇನೂ ಇದೆ ಆಗುತ್ತೆ' ಅಂತ ಹೇಳಿ ಟಿಪ್ಪು ಬಂದ ಸ್ಪೀಡಲ್ಲೇ ಹೋದ್ರು..! ಭಯದಲ್ಲಿ ಓಡೋಕೆ ಶುರು ಮಾಡಿದ ಕಾರ್ಮೋಡ ಇನ್ನೂ ಓಡ್ತಾನೇ ಇದ್ದಾರೆ..!

No comments:

Post a Comment