ಯಾರೋ ವಾಟ್ಸಪ್ ನಲ್ಲಿ ಹರಿ ಬಿಟ್ಟ ಅಣಕು ಪದ್ಯ....ಚೆನ್ನಾಗಿದೆಯಲ್ಲವೇ...?
************************************************************************

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ನಿತ್ಯದ ಹಾಗೆ ಊರಿಗೆ ಊರೇ ಕರೆಂಟು ಹೋಗಿತ್ತು|ಎಲ್ಲೆಡೆ ಕತ್ತಲೆ ತುಂಬಿತ್ತು

ಮಾವನ ಮನೆಯಲಿ ಸಣ್ಣಗೆ ಉರಿಯುವ ಚಿಮಣಿಯ ಬೆಳಕಿತ್ತು
ದೀಪದ ಹೊಗೆ ಘಮಘಮ ಬೀರುತ ಮೂಗಿಗೆ ಅಡರಿತ್ತು|ರಾಯರ ಸ್ವಾಗತ ಕೋರಿತ್ತು

ಟೊಯ್ಯೆನ್ನುತ ಮೊಬೈಲಿನ ಬಾಟರಿ ಚಾರ್ಜನು ಬಯಸಿತ್ತು
ತನ್ನಯ ಅಂತಿಮ ಕ್ಷಣಗಳ ಎಣಿಸುತ ರಾಯರ ಕರೆದಿತ್ತು|ನಾಲ್ಕೇ ಪರ್ಸೆಂಟ್ ಉಳಿದಿತ್ತು

ಯುಪಿಯಸ್ಸಿರೊ ಪಕ್ಕದ ಮನೆಯು ಜಗಮಗ ಎನುತಿತ್ತು
ಹಿಂದಿನ ಬೀದಿಯ ದೊಡ್ಮನೆಯಲ್ಲಿ ಸೋಲಾರ್ ಉರಿದಿತ್ತು|ಗಾಯಕೆ ಉಪ್ಪನು ಸವರಿತ್ತು

ಹತ್ತಕೆ ಕರೆಂಟು ಬರುವುದು ಎಂದರು ಮಾವನು ಗೊಣಗುತಲಿ
ಹತ್ತರ ಮೇಲೊಂದ್ಹೊಡೆದರು ಕೊನೆಗೂ ಕರೆಂಟು ಬರಲಿಲ್ಲ|ಕತ್ತಲೆ ಭಾಗ್ಯವು ತಪ್ಪಿಲ್ಲ

ಹಾಸಿಗೆಯಲಿ ಹೊರಳಾಡುತ ರಾಯರು ಸಿದ್ಧನ ಶಪಿಸುತ್ತಾ
ಫ್ಯಾನು ಇಲ್ಲದೆ ನಿದ್ದೆಯು ಬಾರದು ಸೆಕೆಯೋ ವಿಪರೀತ|ಜೊತೆಯಲಿ ಸೊಳ್ಳೆಯ ಸಂಗೀತ

ಅಂತೂ ಇಂತೂ ಕರೆಂಟು ಬಂತು ಬೆಳಗಿನ ಜಾವದಲಿ
ಮಿಕ್ಸಿಯು ಕೂಗಿತು ಟಿವಿಯು ಹಾಡಿತು ಮಾವನ ಮನೆಯಲ್ಲಿ|ನಕ್ಕರು ರಾಯರು ಹರುಷದಲಿ
ಕತ್ತಲೆ ಭಾಗ್ಯವ ಕೊನೆಮಾಡೆಂದರು ನಮಿಸುತ ದೇವರಲಿ|
ವಿದ್ಯೂತ್ ದ್ವೀಪವ ಬೆಳಗುತಲಿ

# ವಾಟ್ಸಪ್
No comments:
Post a Comment