Thursday 31 December 2015

ಹೀಗೊಂದು ಅಭ್ಯಾಸ ಬಲದ ಕತೆ..........
********************************
ಹಿಂದೆ ಒಬ್ಬ ಭಾಷಣಕಾರ ಯಾವುದೇ ವಿಷಯದ ಬಗ್ಗೆ ಗಂಟೆ ಗಟ್ಟಲೆ ಭಾಷಣ ಮಾಡುತ್ತಿದ್ದನಂತೆ. ಅದನ್ನು ನೋಡಿ, ನೋಡಿ, ನನ್ನಂತಹ ಒಬ್ಬ ಕುಹಕಿಗೆ, ಏನಿದರ ರಹಸ್ಯ ಎಂದು ಆಶ್ಚರ್ಯವಾಯಿತಂತೆ.
ಓಮ್ಮೆ ಆತ ನಿರರ್ಗಳವಾಗಿ ಭಾಷಣ ಮಾಡುತ್ತಿರುವಾಗ ತನ್ನ ಶರ್ಟಿನ ಒಂದು ಗುಂಡಿಯನ್ನು (button) ಭಾಷಣ ಮುಗಿಯುವ ವರೆಗೆ ಬೆರಳುಗಳಿಂದ ತಿರುಗಿಸುತ್ತಲೇ ಇರುವುದನ್ನು ಗಮನಿಸಿದನಂತೆ. (ಆಗಿನ ಕಾಲದಲ್ಲಿ ಶರ್ಟಿನ ಗುಂಡಿಗಳು ಈಗಿನಂತೆ ಒಂದು ಸೈಡಿಗೆ fix ಇರುತ್ತಿರಲಿಲ್ಲ, ಎರಡೂ ಬದಿಗೆ holes ಇರುತ್ತದ್ದವು, ಒಂದು ಸೈಡ್ ಚಪ್ಪಟೆ ಇನ್ನೊಂದು ಸೈಡ್ ಗುಂಡಗೆ ಇರುವ ಗುಂಡಿಗಳನ್ನು ಎರಡೂ holes ಗಳಲ್ಲಿ ಹಾಯಿಸಿ ಅಂಗಿಯ ಮುಂಬಾಗವನ್ನು ಮುಚ್ಚಿ ಕೊಳ್ಳುತ್ತಿದ್ದರು)
ಆಗ ಈತ, ಭಾಷಣಕಾರನ assistant ನ್ನು ಒಳಗೆ ಹಾಕಿಕೊಂಡು, ಭಾಷಣಕಾರ ಮುಂದಿನ ಭಾಷಣಕ್ಕೆ ಹೋಗುವ ಮೊದಲು, ಅವನು ತಿರುಗಿಸುತ್ತಿದ್ದ ಗುಂಡಿಯನ್ನು ತೆಗೆಸಿ ಬಿಟ್ಟನಂತೆ. ...ಭಾಷಣಕಾರ ಸ್ಟೇಜ್ ಮೇಲೆ ಹೋಗಿ ಭಾಷಣ ಶುರು ಮಾಡುತ್ತಾ, ಅಂಗಿ ಗುಂಡಿಗೆ ಕೈ ಹಾಕಿದಾಗ ಅಲ್ಲಿ ಗುಂಡಿ ಇಲ್ಲ ಎಂದು ತಿಳಿದು ಗಾಬರಿಯಾರಿ, ತಡಬಡಾಯಿಸಿ, ನಾಲ್ಕು ಶಬ್ದನೂ ಮಾತನಾಡಲಾಗದೆ.....ಈ ದಿನ ನನ್ನ ಆರೋಗ್ಯ ಸರಿಯಿಲ್ಲ, ಸಭಿಕರಿಗೆ ನಮಸ್ಕಾರ ಎಂದು ಹೇಳಿ ಹೊರಟೇ ಹೋದನಂತೆ........
 (ಕೆಲವೊಮ್ಮೆ ನೈಪುಣ್ಯವು ಒಂದು ಚಿಕ್ಕ ಅಭ್ಯಾಸದ ಮೇಲೂ ಅವಲಂಬಿತವಿರುತ್ತದೆ. ಹೀಗೇ ಕೆಲವರು ಒಂದು ದುಂಡನೆಯ paper weight ನ್ನು table ಮೇಲೆ ಕೈಯಲ್ಲಿ ತಿರುಗಿಸುತ್ತಾ ಗಂಟೆ ಗಟ್ಟಲೆ ಮಾತನಾಡುತ್ತಾರೆ. ಅದನ್ನು ಅಲ್ಲಿಂದ ಎತ್ತಿಟ್ಟರೆ ಅವರ ಬಾಯಿಂದ ಮಾತೇ ಹೊರಡೋಲ್ಲ)

+++++++++++

No comments:

Post a Comment