Thursday 31 December 2015

ನನ್ನಂತೆ ವಯಸ್ಸಾದವರಿಗೆ...... smile emoticon ಇದೊಂದು ಸಹೃದಯಿಯ ಸಲಹೆ ಅಷ್ಟೇ, ಉಪದೇಶವಲ್ಲ. ಹಾಗೇನೇ, ಇದು ಪದ್ಯವಲ್ಲ, ಗದ್ಯ. ಸ್ವಲ್ಪ eye catching ಆಗಿರಲಿ ಎಂದು ಹೀಗೆ ಪೋಷ್ಟ್ ಮಾಡಿದ್ದೇನೆ......
***********************************
ನಿಮ್ಮ ಹೆಂಡತಿ ನಿಮ್ಮೊಡನೆ
ನಗು ನಗುತ್ತಾ ಮಾತಾಡದಿದ್ದರೆ
ಚಿಂತಿಸಿ ಕೊರಗ ಬೇಡಿ,
ಅವಳಿಗೆ ಹೆದರಿಕೆ, ಅವಳಿಗಿಂತ
ನೀವು ಬೇಗ ಸತ್ತರೆ ಅಂತ,
ಅದಕ್ಕೇ, ಅವಳ ನಗು ಮಕ್ಕಳ ಕಡೆ.
ನಿಮ್ಮ ಮಗ ಸೊಸೆ ನಿಮ್ಮೊಡನೆ
ನಗುತ್ತಾ ದಿನಕ್ಕೆ ಹತ್ತು ನಿಮಿಷವೂ
ಮಾತಾಡೋಲ್ಲ ಎಂದು ಯೋಚಿಸದಿರಿ,
ಅವರು ನಿಮಗಿಂತ ಎಂದೊ
ಬಹಳ ಬುದ್ಧಿವಂತರಾಗಿದ್ದಾರೆ,
ಅಲ್ಲದೆ ಹಣ ಮಾಡುವುದರಲ್ಲಿ
ಅವರು ಬಹಳ ಬೀಜಿ, ಬಹಳ ಬಿಸಿ.
ಇನ್ನು ಮೊಮ್ಮಕ್ಕಳೋ, ಪಾಪ
ಅವುಗಳು ಸ್ಕೂಲ್, ಹೋಮ್ ವರ್ಕ್,
ಟ್ಯೂಶನ್ ಮುಗಿಯೋದೇ ಇಲ್ಲ,
ಅವರಿಗೆಲ್ಲಿ ಟೈಮ್ ಇದೆ ಈ
ಮುದುಕರೊಡನೆ ಆಟ ಆಡಲು.
ಆದರೆ, ಸಿಡುಕಿ ಸಂಬಂಧಗಳನ್ನು
ಹಾಳು ಮಾಡಿಕೊಳ್ಳ ಬೇಡಿ,
ಅವರವರ ಸಮಯಗಳನ್ನು ಗೌರವಿಸಿ.
ಬೆಳದ ಮಕ್ಕಳ ವೈಯುಕ್ತಿಕ
ವಿಷಯಗಳಲ್ಲಿ ತಲೆ ಹಾಕ ಬೇಡಿ,
ಸಲಹೆಗಳನ್ನು ಕೇಳಿದರಷ್ಟೇ ಕೊಡಿ.
ತಪ್ಪು ದಾರಿಯಲ್ಲಿ ಮಕ್ಕಳು
ನಡೆಯುತ್ತಿದ್ದಾರೆ ಎಂದು ನಿಮಗನಿಸಿದರೆ,
ಎಚ್ಚರಿಸಿ, ಮತ್ತೆ ಸುಮ್ಮನಿರಿ, ಅಷ್ಟೆ.
ನಿಮ್ಮಂತ ನಾಲ್ಕು ಜನ ಸಮ ವಯಸ್ಕರ,
ಸಮ ಮನಸ್ಕರ, ಹತ್ತಿರದಲ್ಲೇ ವಾಸಿಸುವವರ
ಪರಿಚಯ, ಸ್ನೇಹ ಮಾಡಿ ಕೊಳ್ಳಿ.
ವಾಕಿಂಗ್ ಮಾಡಿ, ಹತ್ತಿರದ ಪಾರ್ಕಿನಲ್ಲಿ
ಸೇರಿ ಲೋಕಾಭಿರಾಮ ಶ್ರೀ ರಾಮ
ಮಾತನಾಡಿ, ನಕ್ಕು ನಲಿಯಿರಿ.
ಮತ್ತೊಂದು ಮುಖ್ಯವಾದ ವಿಷಯ.
ನಿಮ್ಮ ದೇಹಾರೋಗ್ಯ ಮತ್ತು
ಮಾನಸಿಕ ಸಂತುಲನವನ್ನು ಕಾದು ಕೊಳ್ಳಿ.
ಹಣಕಾಸಿನ ಸ್ವಾವಲಂಬನೆಯನ್ನು
ಕೊನೆಯವರೆಗೆ ಉಳಿಸಿ ಕೊಳ್ಳಿ.
ಆದರೊಂದು ಕಿವಿ ಮಾತು,
ತಮ್ಮ ತಮ್ಮ ಮನೆಯ ದೋಸೆಗಳ
ತೂತುಗಳನ್ನು ಲೆಕ್ಕ ಮಾಡಬೇಡಿ.
ಅದರಿಂದ ಮಾನಸಿಕ ಹಿಂಸೆ
ಮತ್ತಷ್ಟು ಹೆಚ್ಚಾಗುತ್ತದೆ, ಮರೆಯ ಬೇಡಿ.
ಹೀಗಿದ್ದರೆ, ಮುದುಕರ ಜೀವನವೂ
ಸುಖಮಯವಾಗಿರುತ್ತದೆ,
ಮನೆಯವರಲ್ಲಿ ಗೌರವವೂ ಹೆಚ್ಚುತ್ತದೆ.
ಕಾಲನ ಕರೆ ಬಂದಾಗ ಶಾಂತಿಯಿಂದ
ನಾಲ್ಕು ಮಂದಿಯ ಹೆಗಲೇರುವ
ಮನಸ್ಥೈರ್ಯ ಉಳಿದು ಬೆಳೆದಿರುತ್ತದೆ.
************************

No comments:

Post a Comment