Saturday 26 December 2015

ಈ ಆಧುನಿಕ ಕವಿತೆ/ಕವನಗಳಲ್ಲಿ ಮುಖ್ಯವಾಗಿ
ಎರಡು ವಿಧವಿದೆ ಎಂದು ನನ್ನ ಅನಿಸಿಕೆ.
ಒಂದು ಯಾರಿಗೇ ಆದರೂ ಬರೆದದ್ದು
ನೇರವಾಗಿ ಅರ್ಥವಾಗುವಂಥವು.
ಎರಡನೇ ವಿಧ, ಗೂಢಾರ್ಥ ತುಂಬಿದ ಕವನ/ಕವಿತೆಗಳು.
ಈ ಗೂಢಾರ್ಥಗಳು ಕೆಲವಿರಬಹುದು, ಬರೆದ ಕವಿಯ
ಗೂಢಾರ್ಥ ಬೇರೆ, ಓದುಗರಿಗೆ ಆಗುವ ಅರ್ಥಗಳು,
ಬೇರೆ ಬೇರೆ ಓದುಗರಿಗೆ ಬೇರೆ ಬೇರೆ ಆಗ ಬಹುದು.
ಹೀಗೇ, ಒಬ್ಬ ನವ್ಯ ಕವಿಗಳಿಗೆ ಒಮ್ಮೆ ಕೇಳಿದೆ, "ಸ್ವಾಮೀ,
ಈ ನಿಮ್ಮ ಕವಿತೆಯ ಅರ್ಥವೇನು, ಸ್ವಲ್ಪ ಹೇಳ್ತೀರಾ?"
ಅವರ ಉತ್ತರ ಹೀಗಿತ್ತು, "ಪದೇ ಪದೇ, ಕೆಲವು ಸಲ
ಓದಿ. ಓದಿ, ಓದಿ ತಾನಾಗಿಯೆ ಅದರ ಅರ್ಥ ನಿಮಗೇ
ತಿಳಿಯುತ್ತದೆ"
ತಲೆ ಕೆರೆದು ಕೊಂಡು ಸುಮ್ಮನಾದೆ.

No comments:

Post a Comment