Thursday 31 December 2015

ಕೋಪಕ್ಕೆ ಕಡಿವಾಣ ಹಾಕುವುದು ಹೇಗೆ?
ಸಿಂಪಲ್ ಟಿಪ್ಸ್.......
**************************************
ಬೆಳಿಗ್ಗೆ ತಿಂಡಿ ಲೇಟಾಯ್ತು, ಟ್ರಾಫಿಕ್ ನಲ್ಲಿ ಕಿರಿಕಿರಿ, ಮಕ್ಕಳು
ಹೇಳಿದಂತೆ ಕೇಳುತ್ತಿಲ್ಲ.....ಹೀಗೆ ಕೋಪಕ್ಕೆ ಹಲವು
ಕಾರಣಗಳಿರುತ್ತವೆ. ಸಿಟ್ಟು ಎನ್ನುವುದು ಮಾನವ ಸಹಜ
ಗುಣ. ಆದರೆ, ಅದನ್ನು ನಿಯಂತ್ರಿಸಿಕೊಳ್ಳದಿದ್ದರೆ, ನಿಮ್ಮ
ಆರೋಗ್ಯ, ಸಂಬಂಧ ಎರಡೂ ಹಾಳಾಗುತ್ತವೆ. ಕೋಪಕ್ಕೆ
ಕಡಿವಾಣ ಹಾಕುವ ಕೆಲವು ಟಿಪ್ಸ್ ಇಲ್ಲಿವೆ....
1) ಮಾತನಾಡುವ ಮುನ್ನ ಯೋಚಿಸಿ.
===================
ಸಿಟ್ಟಿನ ಸಂದರ್ಭದಲ್ಲಿ ಹೊಳೆದದ್ದನ್ನೆಲ್ಲಾ ಮಾತನಾಡಲು
ಹೋದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.
ಹಾಗಾಗಿ, ಮಾತಾಡುವ ಮೊದಲು ಒಂದು ಕ್ಷಣ
ಯೋಚಿಸಿ. ಆಗ ಅನಪೇಕ್ಷಿತ ಪದಗಳು ನಿಯಂತ್ರಣಕ್ಕೆ
ಬರುತ್ತವೆ.
2) ದೈಹಿಕ ಚಟುವಟಿಕೆ
=============
ಕೋಪ ತಡೆದುಕೊಳ್ಳಲಾಗುತ್ತಿಲ್ಲ ಎಂಬ ಭಾವನೆ ಬಂದಾಗ
ಇತರೆ ಚಟುವಟಿಕೆಗಳತ್ತ ಮುಖಮಾಡಿ.
ದೀರ್ಘ ಉಸಿರಾಟ, ಕೈಕಾಲು ಮುಖ
ತೊಳೆದುಕೊಳ್ಳುವುದು, ಸಣ್ಣದಾಗಿ ವಾಕಿಂಗ್
ಹೋಗುವುದು, ಒಂದರಿಂದ ಹತ್ತರವರೆಗೆ ಎಣಿಸುವುದು
ಇತ್ಯಾದಿಗಳನ್ನು ಮಾಡಿ, ಮನಸ್ಸು ಶಾಂತವಾಗುತ್ತದೆ.
3) ಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳಿ
===============
ಸಕಾರಾತ್ಮಕ ಆಲೋಚನೆಗಳು ನಿಮ್ಮಲ್ಲಿ ಹೆಚ್ಚು ಸಹನೆ
ಬೆಳೆಸುತ್ತವೆ. ಹಾಗಾಗಿ, ಎಲ್ಲ ಪರಿಸ್ಥಿತಿಯನ್ನೂ ಪಾಸಿಟಿವ್
ಆಗಿ ತೆಗೆದುಕೊಳ್ಳಿ. ಕೋಪ ಬಂದರೂ ಹಾಸ್ಯ ಮಾಡುತ್ತಾ
ಅದರ ಬಿಸಿಯನ್ನು ತಗ್ಗಿಸಿ.
4) ಪರಿಹಾರದತ್ತ ಗಮನಕೊಡಿ.
=================
ಕೋಪಕ್ಕೆ ಕಾರಣವೇನು ಎಂಬುದನ್ನಷ್ಟೇ ಯೋಚಿಸುವ
ಬದಲು, ಸಮಸ್ಯೆಯನ್ನು ಪರಿಹರಿಸುವ ಬಗೆಯನ್ನು
ಯೋಚಿಸಿ. ಕೋಪದಿಂದ ಯಾವುದೂ
ಸರಿ ಹೋಗುವುದಿಲ್ಲ ಎಂಬುದನ್ನು ನೆನಪಿಡಿ.
5) ಕ್ಷಮಿಸಿ
======
ಸಿಟ್ಟಿನ ಕೈಗೆ ಮನಸ್ಸು ಕೊಟ್ಟು ಸಂಬಂಧವನ್ನು ಹಾಳು
ಮಾಡಬೇಡಿ. ಕ್ಷಮೆ ಅತ್ಯಂತ ಪರಿಣಾಮಕಾರಿಯಾದುದು.
ತಪ್ಪು ಎಲ್ಲರಿಂದ ಆಗುತ್ತದೆ. ಹಾಗಾಗಿ, ಕ್ಷಮಿಸುವ
ಗುಣವನ್ನು ಬೆಳೆಸಿಕೊಳ್ಳಿ..
+++++++++++++++++++++++++++++++++
(ಇದು ಒಂದು ಮೊಬೈಲ್ ನ್ಯೂಸ್ ಅಪ್ಲಿಕೇಶನ್ ನಲ್ಲಿ
ಸಿಕ್ಕಿದ, ಯಾರೋ ಅನಾಮಿಕರು ಬರೆದ ಒಂದು
ಕಿರು ಲೇಖನ. ಕೋಪ ಶಮನಕ್ಕೆ ತುಂಬಾ ಸರಳ
ಹಾಗೂ ಪರಿಣಾಮಕಾರಿಯಾಗ ಬಹುದಾದ ವಿಧಾನಗಳು
ಅನಿಸಿತು. ಇವುಗಳನ್ನು ಆಚರಿಸಲು ಪ್ರಯತ್ನ ಪಟ್ಟರೆ,
ಕೋಪದಿಂದ ಪಾರಾಗಿ, ಬಂಧುತ್ವ ಹಾಗೂ ಸ್ನೇಹ
ಸಂಬಂಧಗಳನ್ನು ಉಳಿಸಿ ಬೆಳೆಸಿಕೊಳ್ಳ ಬಹುದು
ಅನ್ನಿಸಿತು. ಅದಕ್ಕೇ ಇಲ್ಲಿ ಪೋಷ್ಟ್ ಮಾಡಿದ್ದೇನೆ)

No comments:

Post a Comment