Thursday 12 June 2014

ಒಂದು ನೀತಿ ಕತೆ 

ಒಮ್ಮೆ ಇರುವೆಗೆ ದೇವರನ್ನು ಮೆಚ್ಚಿಸಿ
ವರ ಪಡೆಯಬೇಕೆಂದು ಆಸೆಯಾಯ್ತಂತೆ.
ಇರುವೆ ದೇವರನ್ನು ಕುರಿತು ಕಠಿಣ ತಪಸ್ಸು
ಮಾಡಿತು. ದೇವರು ಪ್ರತ್ಯಕ್ಷನಾಗಿ, ನಿನಗೇನು
ವರ ಬೇಕು ಬೇಡು ಎಂದ.
ಇರುವೆ ಉತ್ಸಾಹದಲ್ಲಿ, " ನಾನು ಕಚ್ಚಿದ
ಕೂಡಲೇ ಸಾಯ ಬೇಕು" ಎಂದು ವರ ಬೇಡಿತು.
ದೇವರು " ತಥಾಸ್ತು" ಎಂದು ಮಾಯವಾದ.
ಅಂದಿನಿಂದ ಇರುವೆ ಜನರನ್ನು ಕಚ್ಚಲಾರಂಭಿಸಿತು
ಕೂಡಲೇ ಜನ ಕಚ್ಚಿದ ಇರುವೆಗಳನ್ನು
ಹೊಸಕಿ ಹಾಕಿ ಸಾಯಿಸಲಾರಂಭಿಸಿದರು.

(ಒಂದು ನೀತಿ ಕತೆ - ಬುದ್ಧಿಶೂನ್ಯತೆಯ ಜತೆ
ದುರಾಸೆಯೂ ಸೇರಿದರೆ ಸರ್ವನಾಶ ಖಂಡಿತ )


೦೯. ೦೪. ೨೦೧೪

No comments:

Post a Comment