Friday, 6 June 2014


ಹೂ ಬಾಡಿತು 

ಎಲೆ ಮರೆಯಲ್ಲಿಯ ಮೊಗ್ಗನ್ನೇ
ಅಲೆದಾಡುವ ದುಂಬಿಗಳು
ಓರೆ ನೋಟದಿಂದ ನೋಡುತ್ತಿದ್ದವು.

ಕಾಲ ಸರಿಯಿತು, ಮೊಗ್ಗು ಬಿರಿಯಿತು
ಮರೆ ಮಾಡುತ್ತಿದ್ದ ಎಲೆಗಳು
ಉದುರಿ ಬಿದ್ದು ಹೋದವು,

ಕಾಯುತ್ತಿದ್ದ ದುಂಬಿಗಳು
ದಾಳಿ ಇಟ್ಟವು ಒಟ್ಟಾಗಿ,
ಪಾಪ, ಆಗ ತಾನೇ ಬಿರಿದ
ಹೂವು ಕಮರಿ ಬಾಡಿ
ಬಿದ್ದು ಹೋಯಿತು....

***********************

No comments:

Post a Comment