Sunday, 12 March 2017

ಸಂಪಿಗೆ ನಾಸಿಕಕೆ
ಮೂಗುತಿ ಚೆಂದ,
ಅಂದದ ವದನಕೆ
ಬಿರಿದ ನಗು ಚೆಂದ,
ಚೆಲುವೆ ನಿನ್ನ ಅರೆ ಬಿರಿದ
ಬಾಯಲ್ಲಿ ಮುತ್ತಿನ ಸಾಲು ಚೆಂದ,
ಮುದ್ದು ಸುರಿಯುವ ನುಣಪು
ಗಲ್ಲಗಳ ಗೋದಿ ಬಣ್ಣ ಚೆಂದ
ಕೆಂಪು ಪೇಟ ಮರೆಯಾಗಿಸಿದೆ
ನಿನ್ನ ಮುಂಗುರುಳುಗಳ ಚೆಂದ
ಸಂತೋಷದ ಈ ನೋಟ,
ತುಂಬಲೆಲ್ಲರೆದೆಯಲ್ಲಿ ಆನಂದ.