Sunday 12 March 2017

ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ
ಅಂತ ಒಂದು ಗಾದೆ ಇದೆ.
ಯಾರದೋ ಮೇಲಿನ ಸಿಟ್ಟು, ಅಸಹನೆಯನ್ನು
ಮತ್ಯಾರದ್ದೋ ಮೇಲೆ ತೋರಿಸುವುದು
ಕೆಲವರ ಸ್ವಭಾವ.
ಇದಕ್ಕೆ ಕಾರಣ ಏನೆಂದರೆ
ಅವರಿಗೆ ನಿಜವಾಗಿ ಸಿಟ್ಟು ಬೇಸರ ಪಡಿಸಿದವರನ್ನು
ಎದುರಿಸುವ ಶಕ್ತಿ ಇರುವುದಿಲ್ಲ, ಅಥವಾ ಪರಿಸ್ಥಿತಿಯ
ಒತ್ತಡದಿಂದ ಹಾಗೆ ಮಾಡಲು ಆಗುವುದಿಲ್ಲ.
ಅದಕ್ಕೇ ಬೇರೆಯವರ ಮೇಲೆ, ಅದೂ ದುರ್ಬಲರು,
ಹೆಚ್ಚಾಗಿ ಚಿಕ್ಕ ಮಕ್ಕಳ ಮೇಲೆ ಹರಿ ಹಾಯುತ್ತಾರೆ.
ಇದು ಒಳ್ಳೆಯ ನಡವಳಿಕೆ ಅಲ್ಲ. ನಾವು ನಮ್ಮ
ಸಮಸ್ಯೆಗಳನ್ನು ಅದಕ್ಕೆ ಸಂಬಂಧ ಪಟ್ಟವರೊಡನೆಯೇ
ಬಗೆ ಹರಿಸಿಕೊಳ್ಳಬೇಕು, ಅದು ಬಿಟ್ಟು ಬೇರೆಯವರ
ಮೇಲೆ ಆ ಸಿಟ್ಟು, ಆಸಮಾಧಾನ ತೋರಿಸ ಬಾರದು.
ಹಾಗೆ ಮಾಡುವುದರಿಂದ ನಮ್ಮ ಮನಸ್ಸು ಸಹ ಒತ್ತಡಕ್ಕೆ ಒಳಗಾಗುತ್ತದೆ ಹಾಗೂ ಇದುವರೆಗಿನ ಒಳ್ಳೆಯದಾಗಿದ್ದ ಸಂಬಂಧಗಳು ಕೆಡುತ್ತವೆ.
*****ದಾರ್ಶನಿಕನ ಒಂದು ಹಳೆಯ ಪೋಷ್ಟ್..
LikeShow more reactions
Comment

No comments:

Post a Comment