ಮರೀಚಿಕೆ
ಅಂಕು ಡೊಂಕಿನ ರಸ್ತೆ
ಕವಿತ್ತಿರುವ ಮಬ್ಬುಗತ್ತಲು
ಆದರೂ ಛಲ ಅವನಿಗೆ
ಗುರಿ ಮುಟ್ಟಲೇ ಬೇಕೆಂದು
ದೂರದಲ್ಲಿ ಕಾಣುತಿದ್ದ
ಮಿಣುಕು ಬೆಳಕು ಕರೆಯುತಿತ್ತು
ನಡೆದೇ ನಡೆದ ನಡೆದೇ ನಡೆದ
ದಾರಿ ಸವೆದೇ ಸವೆಯಿತು
ಬೆವರಷ್ಟೇ ಇಳಿಯಿತು
ಗುರಿ ತಲುಪಲೇ ಇಲ್ಲ,
ದಾರಿ ಮುಗಿಯಲೇ ಇಲ್ಲ
ಭುವಿಗೆ ಮುತ್ತಿಟ್ಟ ಬಾನು
ಸನಿಹವೇ ಇದೆ ಎನಿಸಿತು,
ಆದರೆ ಕೈಗೆಟುಕಲಿಲ್ಲ,
ಬರೇ ಮರೀಚಿಕೆಯಾಯಿತು.
**********************
೨೪. ೧೨. ೩೦೧೩
ಅಂಕು ಡೊಂಕಿನ ರಸ್ತೆ
ಕವಿತ್ತಿರುವ ಮಬ್ಬುಗತ್ತಲು
ಆದರೂ ಛಲ ಅವನಿಗೆ
ಗುರಿ ಮುಟ್ಟಲೇ ಬೇಕೆಂದು
ದೂರದಲ್ಲಿ ಕಾಣುತಿದ್ದ
ಮಿಣುಕು ಬೆಳಕು ಕರೆಯುತಿತ್ತು
ನಡೆದೇ ನಡೆದ ನಡೆದೇ ನಡೆದ
ದಾರಿ ಸವೆದೇ ಸವೆಯಿತು
ಬೆವರಷ್ಟೇ ಇಳಿಯಿತು
ಗುರಿ ತಲುಪಲೇ ಇಲ್ಲ,
ದಾರಿ ಮುಗಿಯಲೇ ಇಲ್ಲ
ಭುವಿಗೆ ಮುತ್ತಿಟ್ಟ ಬಾನು
ಸನಿಹವೇ ಇದೆ ಎನಿಸಿತು,
ಆದರೆ ಕೈಗೆಟುಕಲಿಲ್ಲ,
ಬರೇ ಮರೀಚಿಕೆಯಾಯಿತು.
**********************
೨೪. ೧೨. ೩೦೧೩
No comments:
Post a Comment