Friday, 6 June 2014

ಚಂಚಲ ಮನ 

ಮನಸೇ, ನೀನು ಚಂಚಲೆಯೆಂಬುದು 
ನಿಜವೇ.
ಕೆಲವೊಮ್ಮೆ ಸರಿಹೊಂದುವೆ ನೀರಿನಂತೆ 
ಪಾತ್ರೆಯ ಅಳತೆಗೆ ಸರಿಯಾಗಿ,
ಮಗುದೊಮ್ಮೆ ಹರಡಿ ಹೋಗುವೆ ಗಾಳಿಯಂತೆ
ದಿಕ್ಕಾಪಾಲಾಗಿ. 
ನಿನ್ನ ಹಿಡಿದಿಡಲು ಧ್ಯಾನ ಮಾಡುವೆ,
ಇರು ನನ್ನ ಎದೆಯಂಗಳದಲ್ಲಿ
ನನ್ನವಳೇ ಆಗಿ.

೧೩. ೧೨. ೨೦೧೩

No comments:

Post a Comment