Friday, 6 June 2014

ವಯಸ್ಸು ಮತ್ತು ಬದುಕು 

ವಯಸ್ಸಾದಂತೆ ಜೀವನ
ಪಕ್ವವಾಗುತ್ತಾ ಹೋಗ ಬೇಕು,
ಕೊಳೆತು ಹೋಗಬಾರದು.

ಬದುಕನ್ನು ಸುಖ ಹುಡುಕಿ
ಬಂದಂತೆ ಬಾಳಬೇಕು, ಕೊನೆಗೊಮ್ಮೆ
ಮಾಗಿ ಉದುರಿ ಹೋಗ ಬೇಕು.

ಇರುವಾಗ ಸುಖ ಪಡದೆ, ಬರೇ
ಪರಕ್ಕಾಗಿ ಪರರಿಗಾಗಿ ಕೂಡಿಡುವ
ಬದುಕು ಭ್ರಮೆ, ಬದುಕಲ್ಲ.

೦೫. ೦೪. ೨೦೧೪

No comments:

Post a Comment