"ನನ್ನ ಒಂದೇ ಕಣ್ಣಿನ
ಓರೆ ನೋಟವೆ ಸಾಕು,
ನನ್ನೊಲವಿನ ಸರದಾರ,
ನಿನ್ನ ನನ್ನೆದೆಯಲ್ಲಿ ಬೀಳಿಸಲು....
:-)"
ಓರೆ ನೋಟವೆ ಸಾಕು,
ನನ್ನೊಲವಿನ ಸರದಾರ,
ನಿನ್ನ ನನ್ನೆದೆಯಲ್ಲಿ ಬೀಳಿಸಲು....

"ನನ್ನರಗಿಣಿಯೇ ನೀನು,
ನಿನ್ನ ಗದ್ದ ಹಿಡಿದು, ಕೆನ್ನೆ ಹಿಂಡುವೆ,
ನೀಳ ನಾಸಿಕವ ಸವರಿ
ಮುಂದಲೆಯ ಮೇಲೇರಿಸಿ
ನಿನ್ನೆರಡೂ ಕಣ್ಣುಗಳಲ್ಲಿ
ನಾನೇ ನಾನಾಗಿ ಮಿಂಚುವೆ..
:-)"
ನಿನ್ನ ಗದ್ದ ಹಿಡಿದು, ಕೆನ್ನೆ ಹಿಂಡುವೆ,
ನೀಳ ನಾಸಿಕವ ಸವರಿ
ಮುಂದಲೆಯ ಮೇಲೇರಿಸಿ
ನಿನ್ನೆರಡೂ ಕಣ್ಣುಗಳಲ್ಲಿ
ನಾನೇ ನಾನಾಗಿ ಮಿಂಚುವೆ..

"ಓಹ್, ನನ್ನರಸ, ನನ್ನೀ
ಮೈ ಮನ ಪುಳಕಿಸಿದೆ,
ನನ್ನ ಮುಗುಳು ನಗು ಕಾದಿದೆ
ನಿನ್ನಧರಗಳ ಮಧುಪಾನಕೆ...
:-)"
ಮೈ ಮನ ಪುಳಕಿಸಿದೆ,
ನನ್ನ ಮುಗುಳು ನಗು ಕಾದಿದೆ
ನಿನ್ನಧರಗಳ ಮಧುಪಾನಕೆ...

" ನನ್ನೆದೆಯಲ್ಲಿ ನೀನು ನನ್ನವಳೇ,
ನಿನ್ನೆದೆಯಲ್ಲಿ ನಾನು ನಿನ್ನವನೇ
ಇದು ಮೋಹವಲ್ಲ, ಇನಿ ಪ್ರೇಮವು,
ತೆರೆದಿವೆ ಈ ಬಾಹುಗಳು,
ಬಾ..ಹುದುಗಿ ಹೋಗೋಣ
ಚಿರ ಪ್ರೇಮ ಶಾಂತಿಯಲಿ..
ಚಿರ ಪ್ರೇಮ ಶಾಂತಿಯಲಿ....
:-) "
ನಿನ್ನೆದೆಯಲ್ಲಿ ನಾನು ನಿನ್ನವನೇ
ಇದು ಮೋಹವಲ್ಲ, ಇನಿ ಪ್ರೇಮವು,
ತೆರೆದಿವೆ ಈ ಬಾಹುಗಳು,
ಬಾ..ಹುದುಗಿ ಹೋಗೋಣ
ಚಿರ ಪ್ರೇಮ ಶಾಂತಿಯಲಿ..
ಚಿರ ಪ್ರೇಮ ಶಾಂತಿಯಲಿ....

No comments:
Post a Comment